Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಇಷ್ಟದ ಫುಡ್ ತಿಂದು ತೂಕ ಇಳಿಸಿದ ಯುವತಿ.! ಈ ಟ್ರಿಕ್ಸ್ ನೀವು ಕೂಡ ಮಾಡಿ ನೋಡಿ..!!
ತೂಕ ಹೆಚ್ಚಳ ಈಗ ಕಾಮನ್ ಆಗಿರುವ ಸಮಸ್ಯೆ. ಏಕಾಏಕಿ ದಪ್ಪ ಆಗುವುದು, ದಪ್ಪ ಆದ ಬಳಿಕ ಮತ್ತೆ ಡಯೆಟ್ ಆರಂಭಿಸಿ ಸಣ್ಣ ಆಗಲು ಹರಸಾಹಸ ಮಾಡುವುದು ಈಗಿನ ಯುವ ಸಮುದಾದಯದ ಬಹುದೊಡ್ಡ ಸಮಸ್ಯೆ. ಆದ್ರೆ ಇತ್ತೀಚಿಗೆ ತೂಕ ಇಳಿಸಲು ಜನರು ಏನೆಲ್ಲಾ ಮಾಡುತ್ತಾರೆ ಅನ್ನೋದನ್ನು ನೋಡಿದ್ದೇವೆ. ಈ ತೂಕ ಇಳಿಸುವ ಹಠದಲ್ಲಿ ಕೆಲವರು ಅನಾರೋಗ್ಯಕ್ಕೂ ತುತ್ತಾಗೋದು ನಡೆಯುತ್ತೆ.
ಇನ್ನು ತೂಕ ಇಳಿಸಲು ಊಟ ಬಿಡುವುದು, ಇನ್ನಿಲ್ಲದ ವ್ಯಾಯಾಮಯಗಳು ಹೆಚ್ಚು ಮಾಡುವುದು ಇದೆಲ್ಲ ಮಾಡುತ್ತಾರೆ. ಹಾಗೆ ದಪ್ಪವಾಗಲು ಕೂಡ ನಮ್ಮ ಜೀವನ ಶೈಲಿ ಆಹಾರಗಳು ಸೇರಿ ಹಲವು ಅಂಶಗಳು ಕಾರಣವಾಗುತ್ತವೆ. ಕೆಟ್ಟ ಕೊಬ್ಬು ಅಧಿಕವಾಗಿ ದೇಹದಲ್ಲಿ ಸೇರುವುದು ತೂಕ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ ಈ ತೂಕ ಇಳಿಸಲು ವರ್ಷಗಳ ಕಾಲ ಕೆಲವರು ಪರದಾಡುತ್ತಾರೆ, ಆದರೆ ಅಷ್ಟು ಮಾಡಿದ್ರೂ ಕೂಡ ತೂಕ ಇಳಿಸಲು ಸಾಧ್ಯವಾಗದೆ ಇರುವ ಪ್ರಕರಣಗಳು ಸಹ ಇವೆ.

ಆದ್ರೆ ಇಲ್ಲೊಬ್ಬ ಯುವತಿ ತನ್ನ ಇಷ್ಟದ ಜೀವನ ನಡೆಸುತ್ತಲೇ ಬರೋಬ್ಬರಿ 29 ಕೆ.ಜಿ ತೂಕ ಇಳಿಸಿಕೊಂಡಿದ್ದಾಳೆ. ಅರೆ ಡಯೆಟ್ ಇಲ್ಲದೆಯೇ ಇಷ್ಟೊಂದು ತೂಕ ಇಳಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗಾದ್ರೆ ಆಕೆ ತೂಕ ಇಳಿಸಲು ನೆರವಾಗಿದ್ದು ಏನು? ಆಕೆ ತೂಕ ಇಳಿಸಲು ಮಾಡಿದ ಕಸರತ್ತು ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಿಯಲೆಸ್ಟಿಕ್ ಫಿಸ್ಟ್‌ನೆಸ್ ಕೋಚ್ ಆಗಿರುವ ಕೋಲ್ಸ್ ಎಂಬಾತ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವೊಂದನ್ನು ಹಂಚಿಕೊಂಡಿದ್ದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಹಾಗೆ ಆಕೆ ತನ್ನಿಷ್ಟದ ಆಹಾರಗಳ ಸೇವಿಸುತ್ತಲೇ ತೂಕ ಇಳಿಸಿದ್ದಾಳೆ ಎಂದು ಹೇಳಲಾಗಿದೆ. ನೀವು ನಿಮ್ಮ ಇಷ್ಟದ ಆಹಾರ ಸೇವಿಸುವುದನ್ನು ಬಿಟ್ಟು ತೂಕ ಇಳಿಸುತ್ತೇನೆ ಎಂದು ಹೇಳುವುದನ್ನು ಬಿಡುವವರೆಗೂ ತೂಕ ಇಳಿಸುವಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
'ನೀವು ನನ್ನಂತೆ ಸಾಮಾನ್ಯ ವ್ಯಕ್ತಿಯಾಗಿದ್ದರೆ ಹಾಗೂ ತೂಕ ಇಳಿಸಲು ಇಚ್ಛಿಸಿದ್ದರೆ ಕೀಟೋ ಮಾದರಿ ಸಹಾಯ ಮಾಡಲಿದೆ. ವೀಗನ್ ಆಹಾರ ನಿಮಗೆ ಸೂಕ್ತ ಪರಿಹಾರ ನೀಡಲಿದೆ. ನೀವು ನಿಮ್ಮಿಷ್ಟದ ಆಹಾರ ಸವಿದು ತೂಕ ಇಳಿಸಲು ಮಾರ್ಗವಿದೆ'' ಎಂದು ಹೇಳಲಾಗಿದೆ.
ಆಕೆಯ ಪ್ರಕಾರ ಆಕೆಗೆ ಡೋನಟ್ ಅಂದರೆ ಬಹಳ ಇಷ್ಟವಂತೆ. ಆಕೆ ತೂಕ ಇಳಿಸುವ ಡಯೆಟ್ ಜೊತೆಗೆ ಪ್ರತಿ ಶನಿವಾರ ಒಂದೊಂದು ಡೋನಟ್ ಸವಿಯುತ್ತಿದ್ದಳಂತೆ. ಹೀಗೆ ತನ್ನ ಇಷ್ಟದ ಆಹಾರ ಸವಿಯುತ್ತಲೇ ಬರೋಬ್ಬರಿ 29 ಕೆಜಿ ಇಳಿಸಿರುವುದಾಗಿ ಹೇಳಿದ್ದಾಳೆ. ಆಕೆಯ ಕ್ಯಾಲೋರಿ ಕೊರತೆ ಮಾರ್ಗದ ಮೂಲಕ ತೂಕ ಇಳಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ. ಹಾಗಾದ್ರೆ ಏನಿದು ಕಡಿಮೆ ಕ್ಯಾಲೋರಿ ಇರುವ ಆಹಾರದ ಡಯೆಟ್ ಅಂದರೆ ಏನು?
ತೂಕ ಇಳಿಸಲು ಕಡಿಮೆ ಕ್ಯಾಲೋರಿ ಆಹಾರ ಸೇವನೆ
ನಮ್ಮ ದೇಹಕ್ಕೆ ನಿತ್ಯ ಒಂದಿಷ್ಟು ಪ್ರಮಾಣದ ಕ್ಯಾಲೋರಿ ಅಗತ್ಯವಾಗಿ ಬೇಕಾಗುತ್ತದೆ. ಕ್ಯಾಲೋರಿ ದೇಹ ಸೇರದಿದ್ದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಕೂಡ ಸಂಭವಿಸಬಹುದು. ಆದ್ರೆ ಈ ಕ್ಯಾಲೋರಿ ಕೊರತೆ ಆಹಾರದ ಡಯೆಟ್‌ನಲ್ಲಿ ನಮ್ಮ ದೇಹಕ್ಕೆ ಬೇಕಾದ ಕ್ಯಾಲೋರಿಗಿಂತ ಕಡಿಮೆ ಕ್ಯಾಲೋರಿ ಆಆಹಾರಗಳ ಸೇವಿಸುವುದಾಗಿದೆ. ಹೀಗಾಗಿ ನಮ್ಮ ದೇಹ ಈ ಸಮಯದಲ್ಲಿ ಅಧಿಕವಾಗಿರುವ ಕೊಬ್ಬನ್ನು ಕರಗಿಸಿಕೊಂಡು ದೇಹಕ್ಕೆ ಬೇಕಾದ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತದೆ. ಕ್ರಮೇಣ ಇದು ತೂಕ ಇಳಿಕೆಗೆ ಕಾರಣವಾಗುತ್ತಾ ಹೋಗುತ್ತದೆ.
ಅಂದ್ರೆ ಈ ಪ್ರಕರಣದಲ್ಲಿ ನಾವು ತೂಕ ಇಳಿಸಲು ನಮ್ಮ ನೆಚ್ಚಿನ ಆಹಾರ ಸೇವಿಸುವುದನ್ನು ಬಿಡಬೇಕು ಎಂಬ ನಿಯಮವಿಲ್ಲ ಎಂಬುದನ್ನು ಸಾಬೀತು ಮಾಡಿದಂತಿದೆ. ನಾವು ಕಡಿಕೆ ಕ್ಯಾಲೋರಿ ಆಹಾರ ಸೇವಿಸಿದರೆ ಸಾಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
