Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತೀಯರಲ್ಲಿ ಈ 2 ವರ್ಷದಲ್ಲಿ ಹೆಚ್ಚಾಗುತ್ತಿದೆ ಅತ್ಯಧಿಕ ರಕ್ತದೊತ್ತಡ ಸಮಸ್ಯೆ(ಬಿಪಿ) ಕಾರಣವೇನು?
NPCDCS ಒಂದು ಅಚ್ಚರಿಯ ಸಂಗತಿ ಹೇಳಿದೆ. ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ಶೇ. 8ರಷ್ಟು ಜನರಲ್ಲಿದೆಯಂತೆ, ಅಲ್ಲದೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂಬ ಮಾಹಿತಿಯನ್ನು ಹೇಳಿದೆ.
NPCDCS(Under the National Programme for Prevention and Control of Cancer, Diabetes, Cardiovascular Diseases and Strok) 2016-18ರ ಅಧ್ಯಯನದಲ್ಲು ಶೇ. 28ರಷ್ಟು ಉಸಿರಾಟದ ಸಮಸ್ಯೆ ಹೊಂದಿರುವುದಾಗಿ ಹೇಳಿದೆ,ಆದರೆ ಈ ಬಗೆಯ ಆರೋಗ್ಯ ಸಮಸ್ಯೆಗೆ ಪ್ರಮುಖವಾಗಿರುವುದು ಜೀವನಶೈಲಿ ಎಂಬುವುದಾಗಿ ಹೇಳಿದೆ.

ತುಂಬಾ ಚಿಕ್ಕ ಪ್ರಾಯದವರಲ್ಲಿ ಕಾಡುತ್ತಿದೆ ರಕ್ತದೊತ್ತಡ
ದಶಕಗಳ ಹಿಂದೆ ಮಧ್ಯವಯಸ್ಸು ದಾಟಿದವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಂಡು ಬರುತ್ತಿತ್ತು, ಆದರೆ ಇತ್ತೀಚೆಗೆ ಯುವಕ-ಯುವತಿಯರಲ್ಲೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಂಡು ಬರುತ್ತಿದೆ. ಜೀವನಶೈಲಿಯಿಂದಾಗಿ ಈ ಬಗೆಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜೀವನಶೈಲಿ, ಆಹಾರ ಶೈಲಿಯಿಂದಾಗಿ ಚಿಕ್ಕ ಪ್ರಾಯದವರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಅಧಿಕರಕ್ತದೊತ್ತಡ ಹಲವಾರು ಆರೋಗ್ಯ ಸಮಸ್ಯೆ ತರುತ್ತದೆ'
ಅಧಿಕ ರಕ್ತದೊತ್ತಡ ಹಲವಾರು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಅಧಿಕ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಉಂಟಾಗುತ್ತದೆ. ರಕ್ತದೊತ್ತಡ ಹೆಚ್ಚಾದಾಗ ಹೃದಯಾಘಾತ ಉಂಟಾಗುವುದು. ಪಾರ್ಶ್ವವಾಯು ಉಂಟಾಗಿ ಕೈ-ಕಾಲುಗಳಿಗೆ ಸ್ವಾದೀನ ಇಲ್ಲವಾಗುವುದು.
ಯಾವ ಬಗೆಯ ಜೀವನಶೈಲಿ ರಕ್ತದೊತ್ತಡ ಹೆಚ್ಚಾಗಲು ಕಾರಣ:
* ಅತಿಯಾದ ಮಾನಸಿಕ ಒತ್ತಡ: ಕೆಲಸ ಅಥವಾ ಮತ್ತಿತರ ಕಾರಣಕ್ಕೆ ಅತ್ಯಧಿಕ ಮಾನಸಿಕ ಒತ್ತಡ ತೆಗೆದುಕೊಳ್ಳುವುದು ರಕ್ತದೊತ್ತಡ ಹೆಚ್ಚಾಗಲು ಒಂದು ಕಾರಣವಾಗಿದೆ.
* ಯಾವುದೇ ದೈಹಿಕ ವ್ಯಾಯಾಮ ಮಾಡದಿರುವುದು: ಕೂತು ಮಾಡುವ ಕೆಲಸ, ದೈಹಿಕ ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಅತ್ಯಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ. ನೀವು ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ಇನ್ನು ಕೂತು ಕೆಲಸ ಮಾಡುವವರು ಪ್ರತಿದಿನ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಲೇಬೇಕು.
* ಅನಾರೋಗ್ಯಕರ ಆಹಾರ ಅಭ್ಯಾಸ: ಇದು ಕೂಡ ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳಿಗೆ ಕಾರಣವಾಗಿದೆ.
ಅತ್ಯಧಿಕ ಮೈ ತೂಕ ಕಡಿಮೆ ಮಾಡಲು ಈ ಅಂಶಗಳತ್ತ ಗಮನಹರಿಸಿ:
ಅತ್ಯಧಿಕ ಮೈ ತೂಕ ಕಡಿಮೆ ಮಾಡಿ: ನೀವು ಅತ್ಯಧಿಕ ಮೈ ತೂಕ ಹೊಂದಿದ್ದರೆ ಮೈ ತೂಕ ಕಡಿಮೆ ಮಾಡಿ. ಮೈ ತೂಕ ನಿಯಂತ್ರಣದಲ್ಲಿ ಇಡುವುದರಿಂದ ಅನೇಕ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಆಹಾರಕ್ರಮ ಹಾಗೂ ವ್ಯಾಯಾಮ ಮೂಲಕ ಮೈ ತೂಕ ಕಡಿಮೆಮಾಡಿ, ಪೌಡರ್ , ಮಾತ್ರೆ ಮೂಲಕ ಪ್ರಯತ್ನಿಸಬೇಡಿ.
ಪ್ರತಿದಿನ ವ್ಯಾಯಾಮ ಮಾಡಿ
ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ. ನೀವು ನಡೆಯುವ ವ್ಯಾಯಾಮ ಮಾಡಿದರೂ ಸಾಕು, ಆದರೆ ವ್ಯಾಯಾಮ ಮಾಡದೆ ಇರಬೇಡಿ.
ಆರೋಗ್ಯಕರ ಆಹಾರಕ್ರಮ ಸೇವಿಸಿ
ನಿಮ್ಮ ಆಹಾರಕ್ರಮ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುವುದು, ಆದ್ದರಿಂದ ಆಹಾರಕ್ರಮದ ಕಡೆಗೆ ಗಮನಹರಿಸಿ.
ಸಂಸ್ಕರಿಸಿದ ಆಹಾರ ಸೇವಿಸಬೇಡಿ
ಉಪ್ಪಿನಂಶ ಅಧಿಕವಿರುವ ಆಹಾರ ಸೇವನೆ ಕಮ್ಮಿ ಮಾಡಿ
ಚೆನ್ನಾಗಿ ನಿದ್ದೆ ಮಾಡಿ
ಆರೋಗ್ಯಕ್ಕೆ ನಿದ್ದೆ ತುಂಬಾನೇ ಅವಶ್ಯಕ, ಮನುಷ್ಯನಿಗೆ 8 ಗಂಟೆ ನಿದ್ದೆ ಅವಶ್ಯಕ, ತುಂಬಾ ತಡವಾಗಿ ಮಲಗುವುದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ದಿನಾ ಒಂದೇ ಸಮಯದಲ್ಲಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
ಇದರತ್ತ ತುಂಬಾನೇ ಗಮನಹರಿಸಿ, ವ್ಯಾಯಾಮ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವುದು. ನಿಮಗೆ ಇಷ್ಟವಾದ ಕಾರ್ಯಗಳನ್ನು ಮಾಡಿ, ಓದುವುದು, ಮ್ಯೂಸಿಕ್ ಕೇಳುವುದು ಹೀಗೆ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications