Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತೀಯ ವೈದ್ಯರ ಸಾಧನೆ..! ಕೀಮೋಥೆರಪಿಯಿಲ್ಲದೆ ಕ್ಯಾನ್ಸರ್ ಚಿಕಿತ್ಸೆ ಪತ್ತೆ..!
ಕ್ಯಾನ್ಸರ್ ಇತ್ತೀಚಿಗೆ ಜಗತ್ತನ್ನೇ ಕಾಡುತ್ತಿರುವ ಮಾರಕ ಕಾಯಿಲೆಯಾಗಿದೆ. ಅಮೆರಿಕ, ಭಾರತ, ಇಂಗ್ಲೆಂಡ್ ಸೇರಿ ವಿಶ್ವದ ಹಲವು ದೇಶಗಳು ಈ ಕ್ಯಾನ್ಸರ್ ರೋಗದಿಂದ ನರಳುತ್ತಿವೆ. ನಿತ್ಯವೂ ಜನರಲ್ಲಿ ಜಾಗೃತಿ ಮೂಡಿಲಸು ಮುಂದಾಗುತ್ತಲೇ ಇವೆ. ಆದರೆ ಕ್ಯಾನ್ಸರ್‌ನಿಂದಲೇ ಅತೀ ಹೆಚ್ಚು ಸಾವು ನೋವು ವರದಿಯಾಗುತ್ತಲೇ ಇವೆ.
ಇದಲ್ಲದೆ ಕ್ಯಾನ್ಸರ್‌ಗೆ ಸೂಕ್ತ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಸಹ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಇದ್ದರೂ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಆದರೆ ಕೀಮೋಥೆರಪಿ ಒಂದಿಷ್ಟು ಭರವಸೆ ನೀಡಿದರು ದುಬಾರಿ ಹಾಗೂ ಅದರಿಂದ ಉಂಟಾಗುವ ಪರಿಣಾಮವೇ ಹೆಚ್ಚು ಎಂಬುದು ತಿಳಿದ ವಿಚಾರವಾಗಿದೆ.

ಆದರೆ ಇದೀಗ ಭಾರತೀಯ ವೈದ್ಯರು ಕೀಮೋಥೆರಪಿಯ ಅಗತ್ಯವೇ ಇಲ್ಲದೆ ರಕ್ತ ಕ್ಯಾನ್ಸರ್ ವಿಧದ ಕ್ಯಾನ್ಸರ್‌ಗೆ ಔಷಧ ಕಂಡುಹಿಡಿದಿದ್ದಾರೆ. ಕೀಮೋಥೆರಪಿಯನ್ನು ಬಳಸದೆಯೇ ರಕ್ತ ಕ್ಯಾನ್ಸರ್‌ನ ಒಂದು ಮಾದರಿಗೆ ಭಾರತೀಯ ವೈದ್ಯರು ಚಿಕಿತ್ಸೆಯನ್ನು ಕಂಡುಕೊಂಡಿದ್ದಾರೆ ಎಂದು ಅಧ್ಯಯನವೊಂದು ಹೇಳಿಕೊಂಡಿದೆ.
ತೀವ್ರವಾದ ಪ್ರೋಮಿಲೋಸೈಟಿಕ್ ಲ್ಯುಕೇಮಿಯಾ (ಎಪಿಎಲ್) ಹೊಂದಿರುವ ರೋಗಿಗಳು ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
15 ವರ್ಷಗಳ ಸಂಶೋಧನೆಯ ನಂತರ ಈ ಸಾಧನೆ ಸಾಧ್ಯವಾಗಿದೆಯಂತೆ.ಯಾವುದೇ ಕೀಮೋಥೆರಪಿಯ ಅಗತ್ಯವಿಲ್ಲದೇ ಈ ರೀತಿಯ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅವರು ಬ್ರಿಟಿಷ್ ಜರ್ನಲ್ ಆಫ್ ಹೆಮಟಾಲಜಿಯಲ್ಲಿ ತಮ್ಮ ಅಧ್ಯಯನದಲ್ಲಿ ಹೇಳಿಕೊಂಡಿದ್ದಾರೆ.
"ಎಟಿಒ (ಆರ್ಸೆನಿಕ್ ಟ್ರೈಆಕ್ಸೈಡ್) + ಎಟಿಆರ್ಎ (ಆರ್ಸೆನಿಕ್ ಟ್ರೈಆಕ್ಸೈಡ್) ಸಂಯೋಜನೆಯನ್ನು ಹೆಚ್ಚುವರಿ ಕಿಮೊಥೆರಪಿ ಇಲ್ಲದೆ ಎಪಿಎಲ್‌ನ ಎಲ್ಲಾ ಅಪಾಯದ ವರ್ಗಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿ ಬಳಸಬಹುದು ಎಂದು ನಮ್ಮ ಅಧ್ಯಯನವು ತೋರಿಸುತ್ತದೆ" ಎಂದು ಅವರ ಅಧ್ಯಯನವು ಹೇಳಿದೆ. ಆದರೆ ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳು ಈ ಚಿಕಿತ್ಸೆಯ ಜೊತೆಗೆ ಕೀಮೋಥೆರಪಿಯನ್ನು ಸೇರಿಸಬಹುದು ಎಂದು ಅವರು ಹೇಳಿದರು.
ಎಪಿಎಲ್ ರೋಗಿಗಳಿಗೆ ಪ್ರಸ್ತುತ ಕೀಮೋಥೆರಪಿಯನ್ನು ಮಾತ್ರ ಬಳಸಿ ಚಿಕಿತ್ಸೆ ನೀಡಲಾಗುತ್ತದೆ, ಆದರೆ ಇದು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೆಲವರು ಚಿಕಿತ್ಸೆಯ ಮಧ್ಯದಲ್ಲಿಯೇ ಮೃತಪಡುತ್ತಾರೆ.
ಈ ಪ್ರಯೋಗದಲ್ಲಿ ಒಟ್ಟು 256 ರೋಗಿಗಳು ಚಿಕಿತ್ಸೆಯ ಭಾಗವಾಗಿದ್ದರು, ಆದರೆ 25 ಮಂದಿ ಏಳು ದಿನಗಳಲ್ಲಿ ಸಾವನ್ನಪ್ಪಿದರು ಮತ್ತು ವಿಶ್ಲೇಷಣೆಯಿಂದ ಹೊರಗಿಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಕ್ಯಾನ್ಸರ್ ಕೋಶಗಳು ಬೆಳೆಯುತ್ತಿರುವಂತೆ ಅದು ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯಕ್ಕಿಂತ ಕಡಿಮೆ ರಕ್ತ ಕಣಗಳನ್ನು ಹೊಂದಿರುವುದು ರಕ್ತ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದೆ.
ಲ್ಯುಕೇಮಿಯಾ ಎಂದರೇನು? ಲ್ಯುಕೇಮಿಯಾ ಎಂಬುದು ನಿಮ್ಮ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ರಕ್ತದ ಕ್ಯಾನ್ಸರ್ ಆಗಿದೆ. ಆ ಬಿಳಿ ರಕ್ತ ಕಣಗಳು ನಿಮ್ಮ ದೇಹವು ಆರೋಗ್ಯಕರವಾಗಿರಬೇಕಾದ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳನ್ನು ಹೊರಹಾಕುತ್ತದೆ. ಜೊತೆಗೆ ಹೆಚ್ಚುವರಿ ಬಿಳಿ ರಕ್ತ ಕಣಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.
ರಕ್ತದ ಕ್ಯಾನ್ಸರ್ ಅಥವಾ ಲ್ಯುಕೇಮಿಯಾದ ಲಕ್ಷಣವೇನು?
ತೂಕ ಇಳಿಕೆ, ಒಸಡುಗಳ ರಕ್ತಸ್ರಾವ, ಆಯಾಸ, ಬೆನ್ನು ನೋವು, ಹೊಟ್ಟೆ ನೋವು, ಮೂಳೆ ನೋವು, ತಲೆ ನೋವು, ತಲೆ ಭಾರ, ಜ್ವರ, ಕಪ್ಪು ಕಲೆಗಳು, ರಕ್ತಹೀನತೆ, ಕೆಮ್ಮಿದಾಗ ಇಲ್ಲವೆ ಮೂತ್ರ ವಿಸರ್ಜನೆ ವೇಳೆ ಕೆಲವರಿಗೆ ರಕ್ತ ಕಾಣಿಸಿಕೊಳ್ಳುವುದು ರಕ್ತ ಕ್ಯಾನ್ಸರ್‌ನ ಲಕ್ಷಣವಾಗಿದೆ.
ಲ್ಯುಕೇಮಿಯಾ ಹೇಗೆ ಸಂಭವಿಸುತ್ತದೆ?
ರಕ್ತವು ಮೂರು ವಿಧದ ಜೀವಕೋಶಗಳನ್ನು ಹೊಂದಿದೆ: ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳು, ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳು ಮತ್ತು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಪ್ಲೇಟ್ಲೆಟ್ಗಳು. ಪ್ರತಿದಿನ, ನಿಮ್ಮ ಮೂಳೆ ಮಜ್ಜೆಯು ಶತಕೋಟಿ ಹೊಸ ರಕ್ತ ಕಣಗಳನ್ನು ಉತ್ಪತ್ತಿ ಮಾಡುತ್ತವೆ, ಅವುಗಳಲ್ಲಿ ಹೆಚ್ಚಿನವು ಕೆಂಪು ರಕ್ತ ಕಣಗಳಾಗಿವೆ. ನೀವು ಲ್ಯುಕೇಮಿಯಾವನ್ನು ಹೊಂದಿರುವಾಗ, ನಿಮ್ಮ ದೇಹವು ಅಗತ್ಯಕ್ಕಿಂತ ಹೆಚ್ಚು ಬಿಳಿ ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತವೆ.
ಈ ಲ್ಯುಕೇಮಿಯಾ ಜೀವಕೋಶಗಳು ಸಾಮಾನ್ಯ ಬಿಳಿ ರಕ್ತ ಕಣಗಳ ರೀತಿ ಸೋಂಕಿನ ವಿರುದ್ಧ ಹೋರಾಡವುದಿಲ್ಲ. ಬದಲಾಗಿ ನಿಮ್ಮ ಅಂಗಗಳ ಕೆಲಸದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತಾರೆ. ಕಾಲಾನಂತರದಲ್ಲಿ, ನೀವು ಆಮ್ಲಜನಕವನ್ನು ಪೂರೈಸಲು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಕೊರತೆಯುಂಟಾಗಬಹುದು. ನಿಮ್ಮ ರಕ್ತವನ್ನು ಹೆಪ್ಪುಗಟ್ಟಲು ಸಾಕಷ್ಟು ಪ್ಲೇಟ್ಲೆಟ್ಗಳು ಅಥವಾ ಸೋಂಕಿನ ವಿರುದ್ಧ ಹೋರಾಡಲು ಸಾಕಷ್ಟು ಸಾಮಾನ್ಯ ಬಿಳಿ ರಕ್ತ ಕಣಗಳು ಇರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
