Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕೊಲೆಸ್ಟ್ರಾಲ್ 190 mg/dL ಅಧಿಕವಾದರೆ ದೇಹಕ್ಕೆ ಏನಾಗುತ್ತೆ ಗೊತ್ತಾ?
ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಮಾಡುವಂತಿಯೇ ಇಲ್ಲ, ಏಕೆಂದರೆ ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಕೊಲೆಸ್ಟ್ರಾಲ್ ರಕ್ತದಲ್ಲಿ ಹೆಚ್ಚಾಗಿರುತ್ತದೆ, ಇದನ್ನು ಲಿವರ್ ಉತ್ಪತ್ತಿ ಮಾಡುತ್ತದೆ, ಇನ್ನು ಕೆಲವು ಕೊಲೆಸ್ಟ್ರಾಲ್ ಆಹಾರದ ಮೂಲಕ ದೇಹವನ್ನು ಸೇರುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳಿಗೆ ಹಾನಿಯುಂಟಾಗಿ ಹೃದಯಾಘಾತ, ಸ್ಟ್ರೋಕ್ ಈ ಬಗೆಯ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕೊಲೆಸ್ಟ್ರಾಲ್ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗುವುದು, ಆದ್ದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದು ಅವಶ್ಯಕ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಆಹಾರಕ್ರಮ ಹಾಗೂ ವ್ಯಾಯಾಮದ ಕಡೆ ಗಮನಹಿಸಬೇಕು.

ನಾರ್ಮಲ್ ಕೊಲೆಸ್ಟ್ರಾಲ್ ಎಷ್ಟಿರಬೇಕು?
100 mg/dL (ಹೃದಯದ ಸಮಸ್ಯೆ, ಮಧುಮೇಹ ಸಮಸ್ಯೆ ಇರುವವರು ಕೊಲೆಸ್ಟ್ರಾಲ್ ಅನ್ನು ಈ ಪ್ರಮಾಣದ ಒಳಗಿಡಬೇಕು)
ಇತರರಿಗೆ ಸಾಮನ್ಯವಾಗಿ ಕೊಲೆಸ್ಟ್ರಾಲ್ ಎಷ್ಟಿದ್ದರೆ ತೊಂದರೆಯಿಲ್ಲ?
100 to 129 mg/dL ಒಳಗಡೆ ಇದ್ದರೆ ತೊಂದರೆಯಿಲ್ಲ
130 to 159 mg/dL ಅಧಿಕ ಕೊಲೆಸ್ಟ್ರಾಲ್, ಇದರಿಂದ ಅಪಾಯ ಹೆಚ್ಚು
160 to 189 mg/dL ಇದ್ದರೆ ಕೊಲೆಸ್ಟ್ರಾಲ್ ಪ್ರಮಾಣ ತುಂಬಾನೇ ಹೆಚ್ಚಾಗಿದೆ ಎಂದರ್ಥ
190 mg/dLಗಿಂತ ಅಧಿಕವಿದ್ದರೆ ಕೊಲೆಸ್ಟ್ರಾಲ್ ಅತ್ಯಧಿಕವಾಗಿದೆ ಎಂದರ್ಥ.
190 mg/dL ಅಧಿಕ ಕೊಲೆಸ್ಟ್ರಾಲ್ ಪ್ರಮಾಣ ಇದ್ದರೆ ಏನಾಗುತ್ತದೆ?
ಕೆಟ್ಟ ಕೊಲೆಸ್ಟ್ರಾ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳ ಫ್ಲೆಕ್ಸಿಬಿಲಿಟಿ ಕಡಿಮೆಯಾಗುವುದು. ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿದರೆ ರಕ್ತ ಸಂಚಾರಕ್ಕೆ ತೊಂದರೆಯಾಗುವುದು, ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ದೇಹಕ್ಕೆ ರಕ್ತಸಂಚಾರ ಕಡಿಮೆಯಾಗುವುದು, ಆವಾಗ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಹೃದಯಾಘಾತ ಉಂಟಾಗುವುದು.
ಸ್ಟ್ರೋಕ್ ಉಂಟಾಗುವುದು
ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅದು ಮೆದುಳಿನ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಸ್ಟ್ರೋಕ್ ಕೂಡ ಉಂಟಾಗುವುದು, ಅದೇ ಕಿಡ್ನಿಯಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಿಡ್ನಿಗೆ ಹಾನಿಯುಂಟಾಗುವುದು.
ಕೊಲೆಸ್ಟ್ರಾಲ್ ಹೆಚ್ಚಾದರೆ ಎಲ್ಲರಿಗೂ ಒಂದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ:
ಕೊಲೆಸ್ಟ್ರಾಲ್ ಹೆಚ್ಚಾಗುತ್ತಿರುವುದು ಬಹುತೇಕರ ಸಮಸ್ಯೆಯಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಎಲ್ಲರಿಗೆ ಒಂದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಉಂಟಾಗುವುದು.
ಕೊಲೆಸ್ಟ್ರಾಲ್ ಹೆಚ್ಚಾದಾಗ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವುದು
ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ಹಹಿಸಲು ಸ್ವಲ್ಪ ಕೊಲೆಸ್ಟ್ರಾಲ್ ಬೇಕು, ಅದೇ ಕೊಲೆಸ್ಟ್ರಾಲ್ ಹೆಚ್ಚಾದರೆ ತುಂಬಾನೇ ಆರೋಗ್ಯ ಸಮಸ್ಯೆ ಉಂಟಾಗುವುದು. ಮೆದುಳಿನ ರಕ್ತ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಸಂಭವಿಸುವುದು. ಇದರಿಂದ ನಡೆದಾಡಲು, ಮಾತನಾಡಲು, ಆಹಾರ ಸೇವಿಸಲು ತೊಂದರೆ ಉಂಟಾಗುವುದು.
ಕೊಲೆಸ್ಟ್ರಾಲ್ ಹೆಚ್ಚಾದರೆ ಜೀರ್ಣಕ್ರಿಯೆ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುವುದು
ಕೊಲೆಸ್ಟ್ರಾಲ್ ಹೆಚ್ಚಾದರೆ ಪಿತ್ತ ರಸದ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುವುದು. ಅಲ್ಲದೆ ಪೋಷಕಾಂಶಗಳನ್ನು ನಮ್ಮ ದೇಹವು ಹೀರಿಕೊಳ್ಳಲು ಅಸಮರ್ಥವಾಗುವುದು. ಪಿತ್ತರಸದ ಉತ್ಪತ್ತಿಯಲ್ಲಿ ವ್ಯತ್ಯಾಸವಾದರೆ ಕಿಡ್ನಿಯಲ್ಲಿ ಕಲ್ಲು,ಗಾಲ್‌ಬ್ಲೇಡರ್‌ನಲ್ಲಿ ಸ್ಟೋನ್ ಉಂಟಾಗುವುದು.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಏನು ಮಾಡಬೇಕು?
* ಸ್ಯಾಚುರೇಟಡ್ ಫ್ಯಾಟ್ ತಿನ್ನುವುದು ಕಡಿಮೆ ಮಾಡಿ
* ಟ್ರಾನ್ಸ್‌ಫ್ಯಾಟ್ ತಿನ್ನಲೇಬೇಡಿ
* ಒಮೆಗಾ 3ಕೊಬ್ಬಿನಂಶ ಇರುವ ಆಹಾರ ಸೇವಿಸಿ
* ನಾರಿನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ
* ಪ್ರತಿನಿತ್ಯ ವ್ಯಾಯಾಮ ಮಾಡಿ.
* ಧೂಮಪಾನ ಮಾಡಬೇಡಿ
* ಮದ್ಯಪಾನ ಮಿತಿಯಲ್ಲಿ ಮಾಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications