Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮೈ ತೂಕ ಹೆಚ್ಚಾಗಬಾರದು, ಆರೋಗ್ಯ ಸೂಪರ್ ಆಗಿರಬೇಕೆಂದರೆ ರಾತ್ರಿ ಈ 6 ಆಹಾರ ಸೇವಿಸಲೇಬಾರದು
ನಮ್ಮ ಆಹಾರಕ್ರಮ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ, ಆರೋಗ್ಯ ಹೇಗೆ ತಿನ್ನಬೇಕು ಎಂದು ಗೊತ್ತಿದ್ದರೆ ಸಾಕು ನಮ್ಮ ಅರ್ಧ ಕಾಯಿಲೆ ದೂರಾಗುವುದು, ಅದರಲ್ಲಿ ರಾತ್ರಿಯ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು.
ಫಿಟ್ನೆಸ್ ಕಡೆ ತುಂಬಾ ಗಮನ ನೀಡುವವರು ಸಂಜೆ ಏಳು ಗಂಟೆಯ ಮೇಲೆ ಆಹಾರ ಮುಟ್ಟುವುದೇ ಇಲ್ಲ, ಉತ್ತಮ ಆರೋಗ್ಯಕ್ಕಾಗಿ ಇದು ತುಂಬಾ ಒಳ್ಳೆಯದು. ಆದರೆ ಇದನ್ನು ತುಂಬಾ ಜನ ಪಾಲಿಸುವುದಿಲ್ಲ, ನೀವು ರಾತ್ರಿ ಆಹಾರ ಸೇವಿಸುವುದೇ ಆದರೆ ಈ ಬಗೆಯ ಆಹಾರಗಳನ್ನಂತೂ ರಾತ್ರಿ ಹೊತ್ತು ತಿನ್ನಲೇಬೇಡಿ, ಅದರಲ್ಲಿಯೂ ಮಲಗುವ ಹೊತ್ತಿನಲ್ಲಿ ಸೇವಿಸಲೇಬೇಡಿ.

ಕೊಬ್ಬಿನಂಶವಿರುವ ಆಹಾರ
ರಾತ್ರಿ ಹೊತ್ತಿನಲ್ಲಿ ಕೊಬ್ಬಿನಂಶವಿರುವ ಆಹಾರ ತಿನ್ನುವುದರಿಂದ ಸುಲಭದಲ್ಲಿ ಜೀರ್ಣವಾಗುವುದಿಲ್ಲ, ಇದರಿಂದ ಮೈ ಕೊಬ್ಬು ಹೆಚ್ಚಾಗುವುದು, ಯಾರು ರಾತ್ರಿ ಹೊತ್ತಿನಲ್ಲಿ ಎಣ್ಣೆಯಲ್ಲಿ ಕರಿದ ಅಥವಾ ಅಧಿಕ ಕ್ಯಾಲೋರಿಯ, ಅಧಿಕ ಕೊಬ್ಬಿನಂಶವಿರುವ ಆಹಾರ ಸೇವಿಸುತ್ತಾರೋ ಅವರಿಗೆ ಒಬೆಸಿಟಿ ಸಮಸ್ಯೆ ಉಂಟಾಗುವುದು.
ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರ ಯಾವಾಗ ತಿಂದರೂ ಒಳ್ಳೆಯದಲ್ಲ, ಅದರಲ್ಲಿಯೂ ರಾತ್ರಿ ಹೊತ್ತಿನಲ್ಲಿ ಸೇವಿಸಲೇಬೇಡಿ, ಸಂಸ್ಕರಿಸಿದ ಆಹಾರದಿಂದ ಮೈಯಲ್ಲಿ ಬೇಡ ಕೊಬ್ಬಿನಂಶ ಹೆಚ್ಚು ಸಂಗ್ರಹವಾಗುತ್ತಾ ಹೋಗುತ್ತದೆ, ಅಲ್ಲದೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಕಾಫಿ, ಟೀ ಹೀರುವುದು
ತುಂಬಾ ಜನರಿಗೆ ಮಲಗುವ ಮುಂಚೆ ಅಥವಾ ರಾತ್ರಿ ಹೊತ್ತಿನಲ್ಲಿ ಟೀ-ಕಾಫಿ ಕುಡಿಯುವ ಅಭ್ಯಾಸವಿರುತ್ತದೆ ಇಂಥ ಅಭ್ಯಾಸವಿದ್ದರೆ ಬಿಡುವುದು ಒಳ್ಳೆಯದು. ಟೀ-ಕಾಫಿ ಕುಡಿದರೆ ಇದರಲ್ಲಿರುವ ಕೆಫೀನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮದ್ಯ
ಹೆಚ್ಚಿನವರು ರಾತ್ರಿ ಹೊತ್ತಿನಲ್ಲಿ ಮದ್ಯ ಸೇವಿಸುತ್ತಾರೆ, ರಾತ್ರಿ ಮದ್ಯ ಸೇವಿಸುವುದರಿಂದ ಚೆನ್ನಾಗಿ ಇದ್ದೆ ಬರುತ್ತದೆ ಎಂಬ ಕಾರಣ ಕೆಲವರು ನೀಡುತ್ತಾರೆ,. ಮಲಗುವ ಮುನ್ನ ಮದ್ಯ ಕುಡಿಯುವುದರಿಂದ ನಿದ್ದೆ ಭಂಗ ಉಂಟಾಗುತ್ತದೆ.
ಬೊಂಬಾಟ್ ಭೋಜನ
ರಾತ್ರಿ ಹೊತ್ತಿನಲ್ಲಿ ಲಘು ಆಹಾರ ಸೇವನೆ ಒಳ್ಳೆಯದು. ನಾವು ಭೂರಿ ಭೋಜನವನ್ನು ರಾತ್ರಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು, ಅಲ್ಲದೆ ಈ ಬಗೆಯ ಆಹಾರ ಶೈಲಿ ಮೈ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ, ಹಾಗಾಗಿ ರಾತ್ರಿ ಮಲಗುವಾಗ ಯಾವಾಗಲೂ ಲೈಟ್ ಆಹಾರ ಸೇವಿಸಿ.
ತಂಪು ಪಾನೀಯಗಳು
ನೀವು ರಾತ್ರಿ ಹೊತ್ತಿನಲ್ಲಿ ತಂಪು ಪಾನೀಯ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವದು,ಇದರಿಂದ ಮಧುಮೇಹದ ಅಪಾಯ ಉಂಟಾಗುವುದು, ಅಲ್ಲದೆ ಈ ಬಗೆಯ ಪಾನೀಯ ಹೊಟ್ಟೆ ಸೇರಿದರೆ ಹೊಟ್ಟೆನೋವು ಮುಂತಾದ ಸಮಸ್ಯೆ ಕೂಡ ಉಂಟು ಮಾಡುವುದು, ಹಾಗಾಗಿ ಈ ಬಗೆಯ ಆಹಾರಗಳನ್ನು ಮಲಗುವ ಮುಂಚೆ ಸೇವಿಸಲೇಬೇಡಿ.
ರಾತ್ರಿ ಯಾವ ಆಹಾರ ಒಳ್ಳೆಯದು?
ರಾತ್ರಿ ಹೊತ್ತಿನಲ್ಲಿ ನೀವು ಆಹಾರವನ್ನು 7 ಅಥವಾ 8 ಗಂಟೆಯೇ ಮುಂಚೆಯೇ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ, ಅದಾದ ಬಳಿಕ ಮತ್ತೆ ಯಾವುದೇ ಆಹಾರ ಸೇವಿಸಬೇಡಿ. ಈ ರೀತಿಯ ಆಹಾರಕ್ರಮದ ಆರೋಗ್ಯ ವೃದ್ಧಿಗೆ, ಫಿಟ್ನೆಸ್ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ.
ಇನ್ನು ರಾತ್ರಿ ಹೊತ್ತಿನಲ್ಲಿ ಲಘು ಆಹಾರ ಸೇವನೆ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
