Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ICMR: ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿದೆಯೇ?
ಕೊರೊನಾ ಬಳಿಕ ಹೃದಯಾಘಾತ ಹೆಚ್ಚಾಗುತ್ತಿರುವುದರಿಂದ ಹೃದಯಾಘಾತಕ್ಕೂ ಕೊರೊನಾ ಲಸಿಕೆಗೆ ಸಂಬಂಧವಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಯಾವುದೇ ಹೃದಯ ಸಮಸ್ಯೆಯಿಲ್ಲದ ಯೌವನ ಪ್ರಾಯದ, ಫಿಟ್ ಆಗಿರುವ ಎಷ್ಟೋ ಜನರಿಗೆ ಹೃದಯಾಘಾತ ಉಂಟಾಗುತ್ತಿರುವುದು ನೋಡಿದಾಗ ಜನರಿಗೆ ಆಘಾತ ಉಂಟಾಗುತ್ತಿದೆ. ಫಿಟ್ನೆಸ್ ಮೈಕಟ್ಟು ಹೊಂದಿದ್ದು, ಆರೋಗ್ಯಕರ ಆಹಾರಕ್ರಮ ಪಾಲಿಸುತ್ತಿದ್ದರಿಗೂ ಹೃದಯಾಘಾತ ಉಂಟಾಗಿದೆ. ಉದಾಹರಣೆಗೆ ನಮ್ಮ ಪುನೀತ್ ರಾಜ್‌ಕುಮಾರ್.
ಎರಡು ವರ್ಷ ಕೊರೊನಾ ರಣಕೇಕೆ ಹಾಕಿತು, ಈ ಕೊರೊನಾ ಮಹಾಮಾರಿ ನಿಯಂತ್ರಿಸಲು ಕೊರೊನಾ ಲಸಿಕೆ ನೀಡಲಾಯಿತು. ಎಲ್ಲಾ ಬಗೆಯ ಪರೀಕ್ಷೆ ಮಾಡಿ, ಕೊರೊನಾ ಲಸಿಕೆ ಸುರಕ್ಷಿತ ಎಂಬ ವರದಿ ಬಂದ ಬಳಿಕ ಜನರಿಗೆ ಕೊರೊನಾ ಲಸಿಕೆ ನೀಡಲಾಯಿತು. ಕೊರೊನಾವೂ ನಿಯಂತ್ರಣಕ್ಕೆ ಬಂತು. ಆದರೆ ಹೃದಯಾಘಾತ ವ್ಯಕ್ತಿಗಳು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಹೀಗಾಗಿ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಏನಾದರೂ ಸಂಬಂಧವಿರಬಹುದೇ ಎಂಬ ಸಂಶಯ ಜನರಲ್ಲಿ ಕಾಡತೊಡಗಿತು. ಇದೀಗ ಐಸಿಎಂಆರ್( Indian Council of Medical Research's) ಕೂಡ ಈ ಬಗ್ಗೆ ಪರೀಕ್ಷೆ ಅಧ್ಯಯನ ಮಾಡುತ್ತಿದ್ದು ಇನ್ನೆರಡು ವಾರಗಳಲ್ಲಿ ಈ ಕುರಿತ ಅಧ್ಯಯನ ವರದಿ ಕೂಡ ಬರಲಿದೆ ಎಂದು ICMR ಜನರಲ್ ರಾಜೀವ್ ಬಹಲ್ ಹೇಳಿದ್ದಾರೆ.
ವರದಿ ಪ್ರಕಾರ ಈ ಅಧ್ಯಯನದಲ್ಲಿ ಈಗಾಗಲೇ ಕೆಲವೊಂದು ಅಂಶಗಳು ತಿಳಿದು ಬಂದಿದ್ದು ಜನರ ಮುಂದೆ ತಮ್ಮ ರಿಪೋರ್ಟ್ ವರದಿ ಇಡುವ ಮುನ್ನ ತಮ್ಮ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ತನ್ನ ವರದಿಯನ್ನು ಪ್ರಕಟ ಮಾಡಲಿದೆ.
ಯುವ ಪೀಳಿಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರಲು ಕಾರಣವೇನು?
ಇತ್ತೀಚೆಗೆ ಯುವ ಜನತೆಗೆ ಹೃದಯಾಘಾತ ಉಂಟಾಗುತ್ತಿದೆ. ಶಾಲಾ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿಯೇ ನಡೆದ ಘಟನೆ ನೋಡಿ, ಚಿಕ್ಕ ಬಾಲಕ, ಜಾತ್ರೆಯಲ್ಲಿ ಆಟವಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಇಂಥ ಹಲವು ಪ್ರಕರಣಗಳು ಕೇಳಿ ಬರುತ್ತಿದೆ. ಮದುವೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ವರ/ವಧು ಹೀಗೆ ಕಳೆದ ಎರಡು ವರ್ಷಗಳಿಂದ ಈ ಬಗೆಯ ಪ್ರಕರಣಗಳು ತುಂಬಾನೇ ಕೇಳಿ ಬರುತ್ತಿದೆ. ಹೃದಯಾಘಾತಕ್ಕೆ ಒಳಗಾದವರು ಕೂಡ ತುಂಬಾ ದೈಹಿಕ ತೂಕ ಹೊಂದಿರುವುದಾಗಲೇ, ಈ ಹಿಂದೆ ಹೃದಯ ಸಮಸ್ಯೆ ಉಂಟಾದವರಾಗಲಿ ಆಗಿರಲಿಲ್ಲ, ಬಹುತೇಕ ಜನರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಉಂಟಾಗಿ ಸಾವು ಸಂಭವಿಸುತ್ತಿದೆ. ಇದರ ಹಿಂದಿನ ನಿಜವಾದ ಕಾರಣಗಳು ತಿಳಿಯಲು ಇದೀಗ ಐಸಿಎಂಆರ್ ಬಂದಿದೆ. ಸುಮಾರು 40 ಆಸ್ಪತ್ರೆಗಳನ್ನು ಅಧ್ಯಯನಕ್ಕೆ ಒಳಪಡಿಸಲಿದೆ.
ಯುವ ಜನತೆಯಲ್ಲಿ ಹೃದಯಾಘಾತ, ನಿರ್ಲಕ್ಷ್ಯ ಮಾಡುವಂಥದ್ದಲ್ಲ
ಕೆಲವು ವರ್ಷಗಳ ಹಿಂದೆ ಒಬ್ಬ ಯುವಕ/ಯುವತಿಗೆ ಹೃದಯಾಘಾತ ಸಂಭವಿಸಿದರೆ ಇಡೀ ಆಸ್ಪತ್ರೆಯ ತಜ್ಞರು ಬಂದು ಇಷ್ಟು ಚಿಕ್ಕ ಪ್ರಾಯದಲ್ಲಿ ಹೃದಯಾಘಾತ ಉಂಟಾಗಲು ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು, ಆದರೆ ಇತ್ತೀಚೆಗೆ ಯುವಕ, ಯುವತಿಯರಿಗೆ ಹೃದಯಾಘಾತ ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಈ ಬೆಳವಣಿಗೆ ದೇಶದ ಆರೋಗ್ಯಕರ ಸಮಾಜದ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡುವಂಥದ್ದಲ್ಲ.
ಕೋವಿಡ್ ಸೋಂಕು ಹೃದಯಾಘಾತಕ್ಕೆ ಕಾರಣವಾಗುತ್ತಿರಬಹುದೇ?
ಕೋವಿಡ್ ದೇಶದ ಬಹುಪಾಲು ಜನತೆಯನ್ನು ಬಾಧಿಸಿತ್ತು. ಈ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡರೂ ಇದರ ಅಡ್ಡಪರಿಣಾಮದಿಂದ ಹೃದಯಾಘಾತ ಸಂಭವಿಸುತ್ತಿರಬಹುದು, ಇದಕ್ಕೆ ಲಸಿಕೆ ಕಾರಣವಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಏನೇ ಆಗಲಿ ಇನ್ನೆರಡು ವಾರಗಳಲ್ಲಿ ಐಸಿಎಂಆರ್ ವರದಿ ನಮ್ಮ ಸಂಶಯಗಳಿಗೆ ಉತ್ತರ ನೀಡಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications