Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನಾನೊಬ್ಬಳು ಸೈಕೋಪಾತ್ ಎಂದ ಮಾಜಿ ವಿಶ್ವ ಸುಂದರಿ ಸ್ಪರ್ಧೆ ಫೈನಲಿಸ್ಟ್.! ಅವರ ವರ್ತನೆ ಹೇಗಿರುತ್ತೆ..?
ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಮನೋ ವೈಕಲ್ಯದಿಂದ ಬಳಲುವವರನ್ನು ನಾವು ನೋಡಿರುತ್ತೇವೆ. ದೈಹಿಕ ಅನಾರೋಗ್ಯಕ್ಕಿಂತಲೂ ಮಾನಸಿಕ ಸಮಸ್ಯೆಗಳು ಬಹಳ ಅಪಾಯಕಾರಿಯಾಗಲಿದೆ. ಹಾಗೆ ಈ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ನಮ್ಮ ಮನಸ್ಸು ಎಷ್ಟು ಆರೋಗ್ಯವಾಗಿರುತ್ತೋ ನಾವು ಸಹ ಅಷ್ಟೇ ಆರೋಗ್ಯಕರ ದಿನವನ್ನು ನೋಡಲಿದ್ದೇವೆ. ಆದ್ರೆ ದೈಹಿಕ ಅನಾರೋಗ್ಯದಂತೆ ಮಾನಸಿಕ ಅನಾರೋಗ್ಯವನ್ನು ನಾವು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.
ನಾವು ಸೈಕೋಪಾತ್ ಎಂಬ ಮಾನಸಿಕ ಅನಾರೋಗ್ಯ ಕುರಿತು ಕೇಳಿರಬಹುದು. ಹೊರಗೆ ಭೂಮಿ ಮೇಲಿನ ಸುಂದರ ಪ್ರವಾಸಿ ತಾಣದಂತೆ ಕಾಣುವ ಮಂದಿ ಒಳಗೆ ಲಾವಾರಸ ಕುದಿಯುತ್ತಿರುವಂತೆ ಮನಸ್ಸಿನೊಳಗೂ ಬೆಂಕಿ ಇಟ್ಟುಕೊಂಡಿರುವ ಮಂದಿ ಆಗಿರುತ್ತಾರೆ. ಅದರಲ್ಲೂ ಸೈಕೋಪಾತ್‌ಗಳ ಕುರಿತು ಕೇಳಿದರೆ ಒಮ್ಮೆ ಮೈನಡುಗುತ್ತದೆ. ಆದ್ರೆ ಎಲ್ಲಾ ಸೈಕೋಪಾತ್‌ಗಳು ಜೀವ ತೆಗೆಯುವ ಮಂದಿ ಆಗಿರುವುದಿಲ್ಲ ಇದೊಂದು ಮಾನಸಿಕ ಕಾಯಿಲೆ ಆಗಿರುತ್ತದೆ.

ಆದ್ರೆ ಈಗ ಇಲ್ಲೊಬ್ಬ ಯುವತಿ ನಾನೊಬ್ಬಳು ಸೈಕೋಪಾತ್ ಎಂದು ಹೇಳಿಕೊಡಿದ್ದು ಆಕೆ ವಿಚಿತ್ರ ಮಾನಸಿಕ ಕಾಯಿಲೆ ಕುರಿತಂತೆ ಬಹುರಂಗಪಡಿಸಿದ್ದಾಳೆ. ಆಕೆ ಮಾಜಿ ವಿಶ್ವ ಸುಂದರಿ ಸ್ಪರ್ಧೆಯ ಫೈನಲಿಸ್ಟ್. ಆಸ್ಟ್ರೇಲಿಯಾದ ಮಾಡೆಲ್ ಆಗಿರುವ ಕನಿಕಾ ಬಾತ್ರಾ ಮ್ಯಾಥೆಸನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾನಸಿಕ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ.
ಹಾಗೆ ನನ್ನಂತೆ ಸಮಾಜದಲ್ಲಿರುವ ಸೈಕೋಪಾತ್‌ಗಳನ್ನು ಹೇಗೆ ಗುರುತಿಸಬೇಕು. ಅವರು ವರ್ತನೆ ಹೇಗಿರುತ್ತೆ, ಅವರು ಯಾವ ರೀತಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಎಂಬುದನ್ನು ಆಕೆ ಹೇಳಿಕೊಂಡಿದ್ದಾಳೆ. ಆಕೆ ತನ್ನ ಸ್ವಂತ ಕಣ್ಣಿಗೆ ಮಿಟುಕಿಸುವುದನ್ನು ಪ್ರತಿ ಬಾರಿಯೂ ಜ್ಞಾಪಿಸಬೇಕಿತ್ತಂತೆ. ಇಂತಹದೊಂದು ವಿಚಿತ್ರ ಸಮಸ್ಯೆಗೆ ಆಕೆ ಒಳಗಾಗಿದ್ದಳಂತೆ.
ಆಕೆಯ ಪ್ರಕಾರ ಸೈಕೋಪಾತ್‌ಗಳು ತಮ್ಮ ಸ್ವಂತ ಆನಂದಕ್ಕಾಗಿ, ಖುಷಿಗಾಗಿ ಯಾವ ಮಟ್ಟಕ್ಕೆ ಬೇಕಾದರು ಇಳಿಯುತ್ತಾರಂತೆ. ತಮಗಾಗಿ ಮಾತ್ರ ಎಷ್ಟು ಸುಳ್ಳು ಬೇಕಾದರು ಹೇಳುತ್ತಾರೆ. ಹಾಗೆ ಅವರು ಯಾರನ್ನು ಬೇಕಾದರು ಬಲಿಪಶುವನ್ನಾಗಿ ಮಾಡುತ್ತಾರೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ನಾನು ಪದೇ ಪದೇ ಕಣ್ಣು ಮಿಟುಕಿಸುವುದನ್ನು ನನಗೆ ನೆನೆಪಿಸಬೇಕಿತ್ತು. ಹೀಗಾಗಿ ಜನರ ಕುರಿತು ಯೋಚಿಸಲು ಸಹ ನನಗೆ ಸಮಯವಿರಲಿಲ್ಲ. ಸೈಕೋಪಾತ್‌ಗಳ ಕಣ್ಣು ಮೃತದೇಹದಂತೆ ಕಾಣುತ್ತೆ, ಅಲ್ಲಿ ಯಾವುದೇ ಭಾವನೆ ನೀವು ನೋಡಲು ಸಾಧ್ಯವಿಲ್ಲ ಎಂಬುದು ಆಕೆಯ ಮಾತಿನ ಅರ್ಥವಾಗಿದೆ. ಅವರು ದಯೆ ಎಂಬ ಮುಖವಾಡ ಧರಿಸಿರುತ್ತಾರಂತೆ, ನೋಡಲು ಶಾಂತಿಯುತವಾಗಿ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುತ್ತಾರೆ ಎಂದು ಆಕೆ ಹೇಳಿದ್ದಾಳೆ.
ಸೈಕೋಪಾತ್‌ಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಂತೆ. ಈ ಸುಳ್ಳುಗಳನ್ನು ಅವರು ಹೇಗೆ ಬೇಕಾದರು ರೂಪಿಸಿಕೊಳ್ಳುತ್ತಾರೆ. ಹಾಗೆ ಆಕರ್ಷಣೀಯ ಮನೋಭಾವ ಹೊಂದಿರುತ್ತಾರೆ, ಯಾರನ್ನಾದರು ಸುಲಭವಾಗಿ ತಮ್ಮ ಕಡೆ ಆಕರ್ಷಿಸಿಕೊಳ್ಳುತ್ತಾರೆ. ಆದಷ್ಟು ಒಬ್ಬಂಟಿಯಾಗಿರುತ್ತಾರೆ. ಯಾರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಹಾಗಾದ್ರೆ ಸೈಕೋಪಾತ್‌ಗಳೆಂದರೆ ಯಾರು?
ಸೈಕೋಪಾತ್ ಎಂದರೆ ಅವರಲ್ಲಿ ಎರಡೆರಡು ವ್ಯಕ್ತಿತ್ವ ಇರುವ ಮಂದಿ ಎಂದು ಹೇಳಬಹುದು. ತಮ್ಮ ಒಂದು ವ್ಯಕ್ತಿತ್ವವನ್ನು ಹೊರ ಜಗತ್ತಿಗೆ ತೋರಿಸುವಂತೆ ಇದ್ದು ಮತ್ತೊಂದು ವ್ಯಕ್ತಿತ್ವವನ್ನು ಮರೆಮಾಚುವುದಾಗಿದೆ. ಏಕೆಂದರೆ ಆ ವ್ಯಕ್ತಿತ್ವವನ್ನು ಸಮಾಜ ಸ್ವೀಕರಿಸುವುದಿಲ್ಲ. ಅದೊಂದು ಕೆಟ್ಟ, ವಿಚಿತ್ರ ವ್ಯಕ್ತಿತ್ವ ಆಗಿರಬಹುದು. ಕೆಲವು ಉದಾಹರಣೆ ನಾವು ನೋಡುವುದಾದರೆ. ಒಬ್ಬ ವ್ಯಕ್ತಿ ಹಗಲಿನಲ್ಲಿ ಎಲ್ಲರೊಂದಿಗೆ ಬೆರೆಯುವುದು, ಸಂತೋಷದಿಂದ ಕಾಲ ಕಳೆಯುವುದು, ಕುಟುಂಬ, ಮನೆ ಹೀಗೆ ಜವಾಬ್ದಾರಿಗಳ ನಿಭಾಯಿಸುವುದು, ಆದ್ರೆ ಕತ್ತಲಾದ ಬಳಿಕ ಆತ ಕಳ್ಳತನಕ್ಕಿಳಿಯುವುದು, ಹತ್ಯೆ, ದರೋಡೆ ಮಾಡುವುದು. ಇದು ಸಕಾರಾತ್ಮಕ ಕಾರಣವಿಲ್ಲದೆಯೇ ಮಾಡುವುದು ಈ ರೋಗದ ಲಕ್ಷಣ. ಯಾವುದೋ ಕಹಿ ಘಟನೆಯ ಹಿನ್ನೆಲೆಯಲ್ಲಿ ಈ ಕೆಲಸವನ್ನು ಆತ ನಿರಂತರವಾಗಿ ಮಾಡಿಕೊಂಡು ಬರುವುದು ಈ ಕಾಯಿಲೆಯ ಒಂದು ಲಕ್ಷಣ ಎನ್ನಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
