Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವರ್ಕ್ ಫ್ರಂ ಹೋಂ ಮಾನಸಿಕ ಆರೋಗ್ಯದ ಮೇಲೆ ಬೀರುವ 5 ಕೆಟ್ಟ ಪರಿಣಾಮಗಳಿವು
ಕೋವಿಡ್ 19 ಸಾಂಕ್ರಾಮಿಕ ಬಳಿಕ ವರ್ಕ್ ಫ್ರಂ ಹೋಂ ಎಂಬುವುದು ತುಂಬಾನೇ ಸಾಮಾನ್ಯವಾಗಿದೆ. ಎರಡು ವರ್ಷ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡಿದ್ದರು, ಅದಾದ ಬಳಿಕ ಈಗಲೂ ಬಹುತೇಕ ಕಂಒನಿಗಳು ತಮ್ಮ ಉದ್ಯೋಗಿಗಳು ವರ್ಕ್ ಫ್ರಂ ಮಾಡಲು ಅನುಮತಿ ನೀಡಿದೆ, ಕೆಲವರು ಆಫೀಸ್‌ಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದಾರೆ.
ನಮ್ಮ ಸ್ನೇಹಿತರಲ್ಲಿ ಯಾರಾದರೂ ನಾನು ವರ್ಕ್ ಫ್ರಂ ಹೋಂ ಮಾಡುತ್ತಿದ್ದೀನಿ ಎಂದು ಹೇಳಿದರೆ ಓಹೋ ಸೂಪರ್ ... ನಿಂದೇ ಅದೃಷ್ಟ ಕಣಪ್ಪ, ಏನು ಆರಾಮವಾಗು ಇದ್ದೀಯ ಅಲ್ವಾ ಎಂದು ಕೇಳುತ್ತಾರೆ. ಆದರೆ ಆಫೀಸ್‌ಗೆ ಹೋಗಿ ಕೆಲಸ ಮಾಡುವ ಉದ್ಯೋಗಿಗಿಂತ ವರ್ಕ್ ಫ್ರಂ ಮಾಡುವ ಉದ್ಯೋಗಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಾರೆ. ವರ್ಕ್ ಫ್ರಂ ಹೋಂನಿಂದ ಈ ಕೆಟ್ಟ ಪರಿಣಾಮಗಳೂ ಇವೆ...

ಒಂಟಿತನ ಕಾಡುವುದು: ಆಫೀಸ್‌ನಲ್ಲಿ ಹೋಗಿ ಕೆಲಸ ಮಾಡುವಾಗ ಅಲ್ಲಿ ಸಹದ್ಯೋಗಿಗಳಿರುತ್ತಾರೆ, ಅವರ ಜೊತೆ ಮಾತನಾಡುತ್ತೇವೆ, ಟೀ, ಕಾಫಿ ಅಂತ ಬ್ರೇಕ್ ತೆಗೆದುಕೊಳ್ಳುತ್ತೇವೆ, ಆದರೆ ವರ್ಕ್ ಫ್ರಂ ಹೋಂ ಮಾಡಿದರೆ ಯಾರ ಜೊತೆ ಮಾತನಾಡದೆ ಒಂದೇ ಕಡೆ ಕೂತು ಕೆಲಸ ಮಾಡುತ್ತೇವೆ, ಇದರಿಂದ ಒಂಟಿತನ ಕಾಡುವುದು, ಬೇಸರ ಅನಿಸುವುದು.
ಸ್ವಲ್ಪ ರಿಲ್ಯಾಕ್ಸ್ ಆಗಲು ಸಾಧ್ಯವಿಲ್ಲ: ಆಫೀಸ್‌ನಲ್ಲಿ ಆದರೆ ಟಿ, ಕಾಫಿ ಬ್ರೇಕ್ ಅಂತ ರಾಜಾರೋಷವಾಗಿ ಎದ್ದು ಹೋಗುತ್ತೇವೆ, ಮೇಲಾಧಿಕಾರಿ ಇಂಥ ವಿಷಯಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ, ಅದೇ ವರ್ಕ್ ಫ್ರಂ ಹೋಂನಲ್ಲಿ ಇದ್ದರೆ ಮೀಟಿಂಗ್ ಕಾಲ್‌ನಲ್ಲಿದ್ದರೆ ಊಟ ಬಿಟ್ಟು ಕಾಲ್ ಸ್ವೀಕರಿಸುತ್ತೇವೆ. ಹೀಗಾಗಿ ವರ್ಕ್ ಫ್ರಂ ನಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ.
ಹೊಸದು ಕಲಿಯುವ ಅವಕಾಶ ಕಡಿಮೆಯಾಗುವುದು
ಆಫೀಸ್‌ಗೆ ಹೋಗಿ ಕೆಲಸ ಮಾಡುವಾಗ ನಮ್ಮ ಕೆಲಸದ ಬಗ್ಗೆ ಮಾತ್ರವಲ್ಲ ಇತರ ಕೆಲವು ವಿಷಯಗಳ ಬಗ್ಗೆ ಮಾಹಿತಿ ಸಿಗುವುದು, ಅದೇ ಮನೆಯಲ್ಲಿಯೇ ಕೆಲಸ ಮಾಡಿದರೆ ಸಹೋದ್ಯೋಗಿಗಳ ಜೊತೆ ಬೆರೆಯುವುದು ಕಡಿಮೆಯಾಗುವುದು, ಈ ಕಾರಣದಿಂದಾಗಿ ಹೊಸ ವಿಷಯಗಳ ಬಗ್ಗೆ ಮಾಹಿತಿ ಕಡಿಮೆಯಾಗುವುದು. ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾತ್ರ ಮಾಡಿ ಸುಮ್ಮನಾಗುತ್ತೇವೆ.
ತಾರತಮ್ಯ ಮಾಡಲಾಗುವುದು
ವರ್ಕ್ ಫ್ರಂ ಆಫೀಸ್‌ನಲ್ಲಿ ಮಾಡಿದಷ್ಟೇ ಅಷ್ಟೇ ಏಕೆ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿದರು, ಕಂಪನಿಯವರು ವರ್ಕ್ ಫ್ರಂ ಹೋಂ ಉದ್ಯೋಗಿಗಿಂತ ವರ್ಕ್ ಫ್ರಂ ಆಫೀಸ್ ಉದ್ಯೋಗಿಗಳಿಗೆ ಹೆಚ್ಚಿನ ಬಡ್ತಿ ನೀಡುವುದು ಅಥವಾ ಅವರಿಗೆ ಪ್ರಾಮುಖ್ಯತೆ ನೀಡುವುದು ಮಾಡುತ್ತಾರೆ. ಈ ಕಾರಣದಿಂದಾಗಿ ವರ್ಕ್ ಫ್ರಂ ಹೋಂಗಿಂತ ಅಫೀಸ್ ಬೆಸ್ಟ್ ಎಂದು ಅನಿಸಲಾರಂಭಿಸುವುದು.
ವೈಯಕ್ತಿಕ ಹಾಗೂ ವೃತ್ತಿ ಜೀವನ ಬ್ಯಾಲೆನ್ಸ್ ಮಾಡುವುದು ಕೂಡ ಕಷ್ಟವಾಗುವುದು
ವರ್ಕ್ ಫ್ರಂ ಹೋಂ ಮಾಡುವಾಗ ಕೆಲವೊಮ್ಮೆ ಮನೆಯ ಅವಶ್ಯಕತೆಗಳ ಕಡೆಗೆ ಗಮನ ನೀಡಬೇಕಾಗುತ್ತದೆ, ಇದರಿಂದ ಕೆಲಸಕ್ಕೆ ತೊಂದರೆಯಾಗುವುದು ಅಲ್ಲದೆ ಚಿಕ್ಕ ಮಕ್ಕಳಿದ್ದರೆ ಸಂಪೂರ್ಣ ಕೆಲಸದ ಕಡೆ ಗಮನಹರಿಸಲು ಅವರು ಕೂಡ ಬಿಡುವುದಿಲ್ಲ, ಹೀಗಾಗಿ ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ.
ವರ್ಕ್ ಫ್ರಂ ಹೋಂ ಇದ್ದರೆ ಮಾನಸಿಕ ಆರೋಗ್ಯಕ್ಕೆ ಏನು ಮಾಡಬೇಕು?
ಕೆಲವು ಕಾರಣಗಳಿಂದಾಗಿ ಕೆಲವರಿಗೆ ಆಫೀಸ್‌ಗೆ ಹೋಗಿ ಕೆಲಸ ಮಾಡಲು ಕಷ್ಟವಾಗುವುದು. ಅಂಥವರು ಮನೆಯಲ್ಲಿಯೇ ಕೆಲಸಕ್ಕಾಗಿ ಒಂದು ಕೋಣೆಯಲ್ಲಿ ಸಕಲ ವ್ಯವಸ್ಥೆ ಮಾಡಬೇಕು. ಕೂರುವ ಚೇರ್, ಟೆಬಲ್, ಗಾಳಿ -ಬೆಳಕು ಚೆನ್ನಾಗಿ ಬೀಳುವಂತಿರಬೇಕು. ಸರಿಯಾದ ಸಮಯದಲ್ಲಿ ಕೂತು ಕೆಲಸ ಮಾಡಿ ಸರಿಯಾದ ಸಮಯಕ್ಕೆ ಕೆಲಸ ಮುಗಿಸಬೇಕು. ಹೀಗೆ ಮಾಡುವುದರಿಂದ ಮನೆಯಿಂದ ಮಾಡಿದರೂ ಆಫೀಸ್ ಕೆಲಸದ ಫೀಲ್ ಇರುತ್ತೆ, ಹೆಚ್ಚಿನ ಒತ್ತಡ ಉಂಟಾಗುವುದು ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
