Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸಕ್ಕರೆ, ಬೆಲ್ಲ, ಜೇನುತುಪ್ಪ ಇವುಗಳಲ್ಲಿ ಯಾವುದು ಬೆಸ್ಟ್ ಎಂಬ ಗೊಂದಲವೇ?
ಆರೋಗ್ಯ, ಫಿಟ್ನೆಸ್ ಎಂದಾಕ್ಷಣ ಎಲ್ಲರಿಗೂ ಯಾವ ಆಹಾರ ಉತ್ತಮ? ಯಾವುದನ್ನು ಸೇವಿಸಬೇಕು ಬಿಡಬೇಕು ಎಂಬುದೇ ಒಂದು ಯಕ್ಷಪ್ರಶ್ನೆಯಾಗಿ ಬಿಡುತ್ತದೆ. ಪ್ರತಿಯೊಂದು ಆಹಾರ ಪದಾರ್ಥಗಳ ಆಯ್ಕೆಗಳು ಅದೆಷ್ಟು ಇವೆಯೋ ಲೆಕ್ಕವಿಲ್ಲ. ಫಿಟ್ನೆಸ್ ಲೋಕದ ವರ್ತಮಾನಗಳಂತೂ ಕೆಲವು ಬಾರಿ ಸಹಾಯ ಮಾಡುವುದಕ್ಕಿಂತ ಗೊಂದಲವನ್ನು ಸೃಷ್ಟಿಸುವುದೇ ಹೆಚ್ಚಾಗಿ ಬಿಟ್ಟಿದೆ.

ಸಕಾರಾತ್ಮಕ,ನಕಾರಾತ್ಮಕ ಎರಡೂ ದೃಷ್ಟಿಕೋನಗಳ ಸುದ್ದಿಗಳ ಮಧ್ಯೆ ಸಿಲುಕಬೇಡಿ. ಒಬ್ಬ ವ್ಯಕ್ತಿಗೆ ಅಥವಾ ಒಬ್ಬ ವ್ಯಕ್ತಿಯ ದೇಹಕ್ಕೆ ಒಗ್ಗುವ ಲಾಭದಾಯಕವಾದ ಆಹಾರ ಪದಾರ್ಥ ಇನ್ನೊಬ್ಬರಿಗೂ ಲಾಭದಾಯಕವೇ ಆಗಿರುತ್ತದೆ ಎಂಬ ತೀರ್ಮಾನಕ್ಕೆ ಎಂದಿಗೂ ಬರಬೇಡಿ. ಈ ಆಹಾರ ಆರೋಗ್ಯಕ್ಕೆ ಒಳ್ಳೆಯದೆಂದು ಪ್ರಚಲಿತದಲ್ಲಿರುವ ಆಹಾರ ವಸ್ತುಗಳಿಂದ ಉತ್ತೇಜನಗೊಳ್ಳುವುದಕ್ಕೆಂತ ನಿಮ್ಮ ದೇಹಕ್ಕೆ ಇದು ಸೂಕ್ತವೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.
ಇದಕ್ಕೆ ಸಂಬಂಧಪಟ್ಟಂತೆ, ಪ್ರತಿಯೊಬ್ಬರಿಗೂ ದಿನನಿತ್ಯದಲ್ಲಿ ಹೆಚ್ಚಾಗಿ ಗೊಂದಲ ಉಂಟಾಗುತ್ತಿರುವುದು ಸಕ್ಕರೆಯ ಸೇವನೆಯ ಬಗ್ಗೆ. ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ ನಾವೇ ರೋಗಗಳನ್ನು ಬರಮಾಡಿಕೊಂಡಂತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸಕ್ಕರೆಯ ಬದಲಾಗಿ ಬೆಲ್ಲ ಅಥವಾ ಜೇನುತುಪ್ಪವನ್ನು ಸೇವಿಸುವುದು ಉತ್ತಮ ಎಂದು ಈಗ ಎಲ್ಲೆಡೆ ಕೇಳಿ ಬರುತ್ತಿರುವ ವಿಚಾರ.
ಇದು ಎಷ್ಟರಮಟ್ಟಿಗೆ ಸತ್ಯವೆಂದು ನೋಡೋಣ.ಇದನ್ನು ಸುಲಭವಾಗಿ ನಿರ್ಧರಿಸಲು ಮೂರು ಅಂಶಗಳ ಮಾನದಂಡವನ್ನು ಪರಿಗಣಿಸೋಣ. ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದಲ್ಲಿ, ಸಕ್ಕರೆ, ಜೇನುತುಪ್ಪ ,ಬೆಲ್ಲ ಇವುಗಳ ಕ್ಯಾಲರಿ, ಪೌಷ್ಟಿಕಾಂಶ ಮತ್ತು ಲಾಭಗಳ ಬಗ್ಗೆ ಗಮನಹರಿಸೋಣ:

ಸಕ್ಕರೆ
ಆರೋಗ್ಯಕರವೆಂದು ಹೇಳಲಾಗುವ ಬೇರೆಯ ಸಿಹಿಗೆ ಸಕ್ಕರೆಯಲ್ಲಿರುವ ಕ್ಯಾಲರಿಯನ್ನು ಹೋಲಿಸಿ ನೋಡುವುದಾದರೆ ಅಂತಹ ಗಮನಾರ್ಹ ವ್ಯತ್ಯಾಸವೇನು ಕಂಡು ಬರುವುದಿಲ್ಲ. 100 ಗ್ರಾಂ ಕಂದು ಬಣ್ಣದ ಸಕ್ಕರೆಯಲ್ಲಿ 375 ಕ್ಯಾಲೋರಿಗಳಿದ್ದರೆ,ಸಕ್ಕರೆಯಲ್ಲಿ 390 ಕ್ಯಾಲರಿಗಳಿರುತ್ತದೆ. ಲಾಭದಾಯಕ ಅಂಶಗಳು ಮತ್ತು ಪೌಷ್ಟಿಕಾಂಶ ದ ಬಗ್ಗೆ ನೋಡಿದಾಗ ಸಕ್ಕರೆಯು ಒಳ್ಳೆಯ ಆಯ್ಕೆಯಂತೂ ಖಂಡಿತ ಅಲ್ಲ. ಸಕ್ಕರೆಯು ರಕ್ತದಲ್ಲಿನ ಸಕ್ಕರೆಯನ್ನು ತಟ್ಟನೆ ಮೇಲೆರಿಸಿಬಿಡುತ್ತದೆ ಈ ಪ್ರಮುಖ ಕಾರಣದಿಂದ ಸಕ್ಕರೆಯು ಕೆಟ್ಟ ಆಯ್ಕೆ. ಅದರಲ್ಲೂ ಮಧುಮೇಹಿಗಳಿಗೆ ಇದು ಸೂಕ್ತ ಆಯ್ಕೆಯಲ್ಲ.

ಜೇನುತುಪ್ಪ
ಜೇನುತುಪ್ಪ ಸೇವಿಸಿದ ನಂತರ ದೇಹ ಹೀರಿಕೊಳ್ಳಲು ಸಮಯ ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣವೇ ಮೇಲೇರುವುದಿಲ್ಲ.ಇದು ಸಕ್ಕರೆಗಿಂತ ಸ್ವಾಭಾವಿಕವಾದದ್ದು. ಅದರ ಅರ್ಥ ಜೇನುತುಪ್ಪವೇ ಉತ್ತಮವೆಂದಲ್ಲ. ಕ್ಯಾಲೋರಿಯ ವಿಷಯಕ್ಕೆ ಬಂದಾಗ ಜೇನುತುಪ್ಪವೂ ಹೆಚ್ಚು ಕಡಿಮೆ ಸಕ್ಕರೆಯಷ್ಟೇ ಕ್ಯಾಲೋರಿಗಳನ್ನು ಹೊಂದಿದೆ. ಜೇನುತುಪ್ಪದಿಂದ ತೂಕ ಇಳಿಸಬಹುದೆಂದು ಯೋಚಿಸಿದ್ದಲ್ಲಿ, ಅದು ಖಂಡಿತ ನಿಮ್ಮ ಉದ್ದೇಶವನ್ನು ಈಡೇರಿಸುವುದಿಲ್ಲ. ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಮಾತ್ರ ಜೇನುತುಪ್ಪ ಉತ್ತಮ ಆಯ್ಕೆ.

ಬೆಲ್ಲ
ಸಾಂದ್ರಿಕರಿಸಿದ ಕಬ್ಬಿನ ಸಾರವನ್ನು ಗಟ್ಟಿಯಾಗುವವರೆಗೆ ಕುದಿಸಿ ಬೆಲ್ಲವನ್ನು ತಯಾರಿಸುತ್ತಾರೆ. ಬೆಲ್ಲವನ್ನು ತಯಾರಿಸುವ ಕಾರ್ಯ ವಿಧಾನ ಸಂಸ್ಕರಿಸಿದ ಸಕ್ಕರೆಗಿಂತ ಬೆಲ್ಲವನ್ನು ಉತ್ತಮ ಆಯ್ಕೆಯನ್ನಾಗಿ ಮಾಡಿದೆ. ಈ ಸ್ವಾಭಾವಿಕ ಸಕ್ಕರೆ ನೂರು ಗ್ರಾಂ ಗೆ 380 ಕ್ಯಾಲೋರಿಗಳನ್ನು ಹೊಂದಿದ್ದು ಹೆಚ್ಚು ಕಡಿಮೆ ಸಕ್ಕರೆಯಷ್ಟೇ ಕ್ಯಾಲೋರಿಗಳನ್ನು ಹೊಂದಿದೆ. ಇನ್ಸುಲಿನ್ ಮಟ್ಟದ ಏರಿಕೆಯೂ ಕೂಡ ಸಕ್ಕರೆಯಷ್ಟೇ ಬೇಗ ಏರಿಸುತ್ತದೆ. ಆರೋಗ್ಯಕ್ಕೆ ಲಾಭದಾಯಕವಾದ ಅಂಶಗಳನ್ನು ಗಮನಿಸಿದಾಗ ಬೆಲ್ಲ ಸೂಕ್ತವಾದದ್ದು. ಪ್ರೋಟೀನ್ ಕೊಬ್ಬಿನಾಂಶ ಕಬ್ಬಿನಾಂಶ ಮೆಗ್ನೀಷಿಯಂ ಪೊಟ್ಯಾಶಿಯಂ ಮ್ಯಾಂಗನೀಸ್ ಹೇರಳವಾಗಿರುವುದರಿಂದ ಪೌಷ್ಟಿಕಾಂಶದ ವಿಷಯದಲ್ಲಿ ಬೆಲ್ಲಕ್ಕೆ ಸರಿಸಾಟಿ ಇನ್ನೊಂದಿಲ್ಲ
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ,ಈಗ ನೀವೇ ಪರಿಶೀಲಿಸಿ ನೋಡಿ.ಪ್ರತಿಯೊಬ್ಬರ ಅವಶ್ಯಕತೆಗಳು, ದೇಹ ರಚನೆಯು ಭಿನ್ನವಾಗಿರುವುದರಿಂದ, ನೀವು ಪ್ರಸ್ತುತ ಪ್ರಚಾರದಲ್ಲಿರುವ ಯಾವುದೇ ರೀತಿಯ ಸುದ್ದಿಗಳಿಗೆ ಕಿವಿಗೊಡುವ ಅವಶ್ಯಕತೆಯೇ ಇಲ್ಲ.ನಿಮ್ಮ ವೈಯಕ್ತಿಕ ಅವಶ್ಯಕತೆಗೆ ತಕ್ಕಂತೆ ನೀವೇ ಇವುಗಳಲ್ಲಿ ಯಾವುದು ಉತ್ತಮ ಎಂದು ಆಯ್ಕೆ ಮಾಡಿಕೊಳ್ಳಿ.



Click it and Unblock the Notifications
