Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಏನಿದು ಅಡೆನೋ ವೈರಸ್? ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?
ಕೊರೋನಾ ವೈರಸ್ ಹಾವಳಿ ಇನ್ನೇನು ಮುಗುಯಿತು ಅನ್ನೋವಾಗ್ಲೇ ಮತ್ತೊಂದು ಮಹಾಮಾರಿ ಬರಸಿಡಿಲಿನಂತೆ ಬಂದಪ್ಪಳಿಸಿದೆ. ಅದರ ಹೆಸರು ಅಡೇನೋ ವೈರಸ್ ಪಶ್ಚಿಮ ಬಂಗಾಳದಲ್ಲಿ ದಾಂಗುಡಿ ಇಟ್ಟಿರೋ ಅಡೆನೋ ವೈರಸ್ ನೋಡ ನೋಡುತ್ತಿದ್ದಂತೆ ವ್ಯಾಪಕವಾಗಿ ಹಬ್ಬುತ್ತಿದೆ.

ಅಷ್ಟಕ್ಕು ಏನಿದು ಅಡೆನೋ ವೈರಸ್? ಅಡೆನೋ ವೈರಸ್ ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡ್ತಿರೋದ್ಯಾಕೆ? ಅಡೆನೋವೈರಸ್ ಹರಡುವ ವಿಧಾನ ಹೇಗೆ? ಇದರ ಲಕ್ಷಣಗಳು ಯಾವುದು? ಅಡೆನೋ ವೈರಸ್ ಬಾರದಂತೆ ತಡೆಗಟ್ಟೋದು ಹೇಗೆ? ಎಲ್ಲವನ್ನೂ ಡಿಟೇಲ್ ಆಗಿ ಹೇಳ್ತೀವಿ.
ಅಡೆನೋ ವೈರಸ್ ಎಂದರೇನು?
ಅಡೆನೊವೈರಸ್‌ಗಳು ವೈರಾಣುಗಳ ಗುಂಪಾಗಿದ್ದು, ಈ ವೈರಸ್ ದೇಹವನ್ನು ಹೊಕ್ಕಿದರೆ ಸಾಮಾನ್ಯವಾಗಿ ಜ್ವರ, ನೆಗಡಿ, ನ್ಯುಮೋನಿಯಾ, ಶ್ವಾಸಕೋಶದ ತೊಂದರೆ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಅಡೆನೊ ವೈರಸ್‌ಗಳು ದೇಹದ ಮೇಲೆ ಪರಿಣಾಮ ಬೀರಿದಾಗ ಉಸಿರಾಟದ ಪ್ರದೇಶ ಅಥವಾ ಕರುಳಿನಲ್ಲಿ ಸೋಂಕನ್ನು ಉಂಟುಮಾಡುತ್ತವೆ. ಅಡೆನೊವೈರಸ್‌ನಿಂದಾಗಿ ಉಂಟಾದ ಉಸಿರಾಟದ ಸೋಂಕುಗಳು ಚಳಿಗಾಲದ ಕೊನೆಯಲ್ಲಿ, ವಸಂತಕಾಲ ಮತ್ತು ಬೇಸಿಗೆಯ ಆರಂಭದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಅವು ವರ್ಷದುದ್ದಕ್ಕೂ ಯಾವ ಸಮಯದಲ್ಲೂ ಬೇಕಾದರೂ ಸಂಭವಿಸಬಹುದು.
ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯು ವರದಿ ಮಾಡಿದ ಪ್ರಕಾರ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಜೀರ್ಣಾಂಗವ್ಯೂಹದ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಂಡಿದ್ಯಂತೆ. ಇನ್ನೂ 10 ವರ್ಷ ವಯಸ್ಸಿದೊಳಗಿನ ಮಕ್ಕಳಿಗೆ ಮತ್ತೊಂದು ರೀತಿಯ ಸೋಂಕು ಭಾದಿಸದ್ಯಂತೆ.
ಅಡೆನೋ ವೈರಸ್ ಹರಡುವ ವಿಧಾನ
ಅಡೆನೋ ವೈರಸ್ ಹರಡುವ ವಿಧಾನ ಕೊಂಚ ಕೊರೋನಾ ವೈರಸ್ ಅನ್ನು ಹೋಲುತ್ತದೆ. ಅಡೆನೋವೈರಸ್ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ, ಆತನನ್ನು ಮುಟ್ಟುವುದು, ಶೇಕ್‌ಹ್ಯಾಂಡ್ ಮಾಡುವುದು, ಆತ ಮುಟ್ಟಿದ ವಸ್ತುಗಳನ್ನು ಮುಟ್ಟುವುದನ್ನ ಮಾಡಬಾರದು. ಇನ್ನೂ ಈ ವೈರಸ್ ಗಾಳಿಯ ಮೂಲಕ, ಸೀನಿನ ಮೂಲಕವು ಬರಬಹುದು. ಆದ್ದರಿಂದ ಕಣ್ಣು, ಬಾಯಿ, ಮೂಗನ್ನು ಮುಟ್ಟುವ ಮೊದಲು ಕೈ ತೊಳೆದುಕೊಳ್ಳುವುದನ್ನು ಮರೆಯಬೇಡಿ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ (CDC) ಅಡೆನೋ ವೈರಸ್‌ಗಳು ದೀರ್ಘಕಾಲದವರೆಗೆ ವಾತಾವರಣದಲ್ಲಿ ಉಳಿಯಲಿದ್ಯಂತೆ. ಮತ್ತು ಇದು ಭಯಾನಕ ಸಾಂಕ್ರಾಮಿಕ ರೋಗವಾಗುವ ಸಾಧ್ಯತೆಯು ಹೆಚ್ಚಾಗಿದೆ. ಅಡೆನೋ ವೈರಸ್‌ಗಳು ಡೋರ್ ಲಾಕ್, ಗಟ್ಟಿಯಾದ ವಸ್ತುವಿನ ಮೇಲ್ಮೈ, ಆಟಿಕೆಯಂತಹ ನಿರ್ಜೀವ ವಸ್ತುಗಳ ಮೇಲೆ ದೀರ್ಘಕಾಲಗಳ ಕಾಲ ಬದುಕಿರುತ್ತಂತೆ.
ಅಡೆನೋ ವೈರಸ್ ಲಕ್ಷಣಗಳು
ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯ ವರದಿಯ ಪ್ರಕಾರ ಅಡೆನೊವೈರಸ್ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಮುಖ್ಯವಾಗಿ ಉಸಿರಾಟದ ಸೋಂಕುಗಳು ಅಥವಾ ಕರುಳಿನ ಸೋಂಕಿನಿಂದ ರೋಗಲಕ್ಷಣಗಳು ಸಂಭವಿಸಬಹುದು.
ಉಸಿರಾಟದ ಸೋಂಕಿನಿಂದ ಉಂಟಾಗುವ ರೋಗಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ 14 ದಿನಗಳ ನಂತರ ಗೋಚರವಾಗುತ್ತದೆ. ಆದರೆ ಕರುಳಿನ ಸೋಂಕಿನಿಂದ ಉಂಟಾಗುವ ರೋಗಲಕ್ಷಣಗಳು ದೇಹಕ್ಕೆ ತಗುಲಿದ ಒಂದರಿಂದ ಎರಡು ದಿನಗಳ ನಂತರ ಗೋಚರವಾಗುತ್ತದೆ. ಕರುಳಿನ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತವೆ ಮತ್ತು ಒಂದರಿಂದ ಎರಡು ವಾರಗಳವರೆಗೆ ಇರುತ್ತದೆ.
ಉಸಿರಾಟದ ಸೋಂಕು ಉಂಟಾದರೆ ಸಾಮಾನ್ಯ ಶೀತದಂತಹ ಲಕ್ಷಣಗಳು, ಗಂಟಲು ನೋಯುವುದು, ಮೂಗಿನಲ್ಲಿ ಸ್ರವಿಕೆ, ಜ್ವರ, ಊದಿಕೊಂಡ ದುಗ್ಧರಸ ಗ್ರಂಥಿಗಳು, ಕೆಮ್ಮು, ಅಸ್ವಸ್ಥತೆ, ತಲೆನೋವು, ಕಣ್ಣು ಕೆಂಪಗಾಗುವುದು, ತೀವ್ರ ಶ್ವಾಸನಾಳದ ಮತ್ತು ಶ್ವಾಸಕೋಶಗಳ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದನ್ನು ನ್ಯುಮೋನಿಯಾ ಅಂತಲೂ ಕರೆಯಲಾಗುತ್ತದೆ.
ಒಂದುವೇಳೆ ಕರುಳಿನ ಸೋಂಕು ಉಂಟಾದರೆ ಈ ಎಲ್ಲಾ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ ಮತ್ತು ಜ್ವರ, ಮತ್ತು ಇದು ಕರುಳಿನ ಉರಿಯೂತ, ಅತಿಸಾರ, ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವಿಗೂ ಕಾರಣವಾಗುತ್ತದೆ.
ಅಡೆನೋ ವೈರಸ್ ಬಾರದಂತೆ ತಡೆಗಟ್ಟೋದ್ಹೇಗೆ?
ಅಡೆನೊವೈರಸ್ ಸೋಂಕನ್ನು ಎರಡು ರೀತಿಯಲ್ಲಿ ತಡೆಗಟ್ಟಬಹುದು. ಮೊದಲನೇಯದ್ದು ಅನಾರೋಗ್ಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ಎರಡನೇಯದ್ದು ಅನಾರೋಗ್ಯದಿಂದ ಬಳಲುತ್ತಿರುವಾಗ ಇತರರನ್ನು ರಕ್ಷಿಸುವುದು. ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ರೋಗಗಸ್ಥರ ಸಂಪರ್ಕ ಮಾಡಬಾರದು. ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಅದೇ ರೀತಿ ಮಾಡಲು ಸಹಾಯ ಮಾಡಬೇಕು ಮತ್ತು ಅವರನ್ನು ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಲು ಬಿಡಬಾರದು.
ಒಬ್ಬ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾದಾಗ ಆ ವ್ಯಕ್ತಿ ಮನೆಯನ್ನು ಬಿಟ್ಟು ಎಲ್ಲಿಯೂ ಹೋಗಬಾರದು. ಹೀಗೆ ಮಾಡುವುದರಿಂದ ಇತರರನ್ನು ರಕ್ಷಿಸಬಹುದು. ಮನೆಯಲ್ಲಿದ್ದರು ಮನೆಯವರೊಂದಿಗೆ ಸಂಪರ್ಕದಲ್ಲಿ ಇರಬಾರದು. ಆಗಾಗ್ಗೆ ಕೈಗಳನ್ನು ತೊಳೆಯುವುದು ಮತ್ತು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.
ಈ ವೈರಸ್ ಮಕ್ಕಳಿಗೆ ಹೆಚ್ಚಾಗಿ ಹರಡುತ್ತಿರುವುದರಿಂದ ಆದಷ್ಟು ಮಕ್ಕಳನ್ನು ಜಾಗರೂಕರಾಗಿ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯ. ಆದಷ್ಟು ಮನೆಯಲ್ಲಿ ನೈರ್ಮಲ್ಯವನ್ನು ಕಾಪಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


