Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ನಿಮ್ಮ ನಾಲಿಗೆಯ ಬಣ್ಣ ಹೇಳುತ್ತದೆ ನೀವೆಷ್ಟು ಆರೋಗ್ಯವಂತರೆಂದು?
ನಮ್ಮ ನಾಲಿಗೆ ಬಣ್ಣ ನಮ್ಮ ಆರೋಗ್ಯದ ಮುನ್ಸೂಚನೆಯನ್ನು ನೀಡುತ್ತದೆ ಎಂದರೆ ನೀವು ನಂಬುತ್ತೀರಾ, ಹೌದು ನೀವು ನಂಬಲೇಬೇಕು. ನೀವು ಗಮನಿಸಿರಬಹುದು ಹಲವರ ನಾಲಿಗೆ ಬಣ್ಣ ಭಿನ್ನವಾಗಿರುತ್ತದೆ, ಇದಕ್ಕೆ ಕಾರಣ ಅವರ ಆರೋಗ್ಯ ಸ್ಥಿತಿ. ನಾಲಿಗೆ ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ನಮ್ಮ ನಾಲಿಗೆ ಯಾವಾಗಲೂ ಗುಲಾಬಿ ಬಣ್ಣದಲ್ಲೇ ಇರುವುದಿಲ್ಲ. ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ನಿಮ್ಮ ನಾಲಿಗೆಯ ಬಣ್ಣದಲ್ಲಿ ಸ್ವಲ್ಪ ಬದಲಾವಣೆಗಳನ್ನು ನೀವು ಗಮನಿಸಬಹುದು.

ನೀವು ಗಮನಿಸಿರಬಹುದು ನಿಮಗೆ ಜ್ವರ ಬಂದು ಅಥವಾ ಯಾವುದೇ ಸಮಸ್ಯೆಯಿಂದ ವೈದ್ಯರ ಬಳಿ ಹೋದರೆ ಅವರು ಮೊದಲು ನಿಮ್ಮ ನಾಲಿಗೆಯನ್ನು ಫ್ಲ್ಯಾಷ್‌ಲೈಟ್‌ನೊಂದಿಗೆ ಪರೀಕ್ಷಿಸಲು ನಾಲಿಗೆಯನ್ನು ಹೊರಹಾಕಲು ಹೇಳುತ್ತಾರೆ. ಏಕೆಂದರೆ ನಾಲಿಗೆಯನ್ನು ಪರೀಕ್ಷಿಸುವ ಮೂಲಕ ರೋಗಿಗಳ ಸಾಮಾನ್ಯ ಆರೋಗ್ಯವನ್ನು ನಿರ್ಧರಿಸುವುದು ವೈದ್ಯರಲ್ಲಿ ಸಾಂಪ್ರದಾಯಿಕ ಅಭ್ಯಾಸವಾಗಿದೆ.
ಹಾಗಿದ್ದರೆ ನಾಲಿಗೆಯು ಯಾವೆಲ್ಲಾ ಬಣ್ಣಕ್ಕೆ ಬದಲಾಗುತ್ತದೆ, ಅದರ ಅರ್ಥವೇನು, ನಾವು ಯಾವಾಗ ಎಚ್ಚರದಿಂದಿರಬೇಕು ಮುಂದೆ ನೋಡೋಣ:
ನಿಮ್ಮ ನಾಲಿಗೆಯ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?

1. ಗುಲಾಬಿ
ಸ್ವಲ್ಪ ಬಿಳಿ ಲೇಪನದೊಂದಿಗೆ ಇರುವ ಗುಲಾಬಿ ಬಣ್ಣವು ನಿಮ್ಮ ನಾಲಿಗೆಯ ನೈಸರ್ಗಿಕ ಬಣ್ಣವಾಗಿದೆ. ಇದರರ್ಥ ನೀವು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದೀರಿ ಮತ್ತು ನಿಮ್ಮ ದೇಹವು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯಕರ ನಾಲಿಗೆಯು ಅಲ್ಲಿ ಇಲ್ಲಿ ಸಣ್ಣ ತಿರುಳಿರುವ ಉಬ್ಬುಗಳನ್ನು ಹೊಂದಿರುತ್ತದೆ ಅದು ನಿಮ್ಮ ನಾಲಿಗೆಗೆ ಒರಟಾದ ವಿನ್ಯಾಸವನ್ನು ನೀಡುತ್ತದೆ.

2. ಹಳದಿ
ಹಳದಿ ನಾಲಿಗೆ ಹೆಚ್ಚಾಗಿ ಹೊಟ್ಟೆಯ ಸಮಸ್ಯೆಗಳಿಗೆ ಸಂಬಂಧಿಸಿದೆ. ನೀವು ಜೀರ್ಣಕಾರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಂದಿದ್ದರೆ ನಿಮ್ಮ ನಾಲಿಗೆ ಹಳದಿ ಬಣ್ಣದಲ್ಲಿ ಇರುತ್ತದೆ. US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಹಳದಿ ನಾಲಿಗೆಯು ಟೈಪ್ 2 ಮಧುಮೇಹದ ಸಂಕೇತವಾಗಿದೆ ಎಂದು ಹೇಳುತ್ತದೆ. ಹಳದಿ ನಾಲಿಗೆಯು ಕಾಮಾಲೆಯ ಅಡ್ಡ ಪರಿಣಾಮವೂ ಆಗಿರಬಹುದು ಅಥವಾ ನಿಮ್ಮ ನಾಲಿಗೆಯನ್ನು ನೀವು ಸರಿಯಾಗಿ ಸ್ವಚ್ಛಗೊಳಿಸದೇ ನೈರ್ಮಲ್ಯ ಕಾಪಾಡದೇ ಇರುವುದು ಸಹ ಬ್ಯಾಕ್ಟೀರಿಯಾದ ಶೇಖರಣೆಗೆ ಕಾರಣವಾಗಿರಬಹುದು.

3. ಬಿಳಿ ಅಥವಾ ಬೂದು
ನಮ್ಮ ನಾಲಿಗೆಯು ಸಾಮಾನ್ಯವಾಗಿ ಬಿಳಿ ಲೇಪನವನ್ನು ಹೊಂದಿರುತ್ತದೆ ಆದರೆ ಕೆಲವು ಬೂದು ಪ್ರದೇಶಗಳೊಂದಿಗೆ ಸಾಮಾನ್ಯಕ್ಕಿಂತ ಬಿಳಿಯಾಗಿದ್ದರೆ, ಅದು ನಿಮ್ಮ ದೇಹದಲ್ಲಿ ಯೀಸ್ಟ್ ಸೋಂಕಿನ ಸಂಕೇತವಾಗಿರಬಹುದು. ನೀವು ಲ್ಯುಕೋಪ್ಲಾಕಿಯಾದಿಂದ ಬಳಲುತ್ತಿದ್ದರೆ ನಾಲಿಗೆಯ ಮೇಲೆ ಬಿಳಿ ತೇಪೆಗಳನ್ನು ಸಹ ಗಮನಿಸಬಹುದು, ಇದು ಸಾಮಾನ್ಯವಾಗಿ ಧೂಮಪಾನದಿಂದ ಅಥವಾ ಇತರ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುತ್ತದೆ.

4. ನೇರಳೆ
ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾದಾಗ ನಿಮ್ಮ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಅಸಮರ್ಪಕ ರಕ್ತ ಪರಿಚಲನೆ ಉಂಟಾಗಬಹುದು. ನೀವು ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರೆ, ನೀವು ದೀರ್ಘಕಾಲದವರೆಗೆ ನೇರಳೆ ಬಣ್ಣದ ನಾಲಿಗೆಯನ್ನು ಹೊಂದಿರಬಹುದು ಎಚ್ಚರ.

5. ಕೆಂಪು
ಗಾಢ ಕೆಂಪು ನಾಲಿಗೆಯು ಸಾಮಾನ್ಯವಾಗಿ ಊದಿಕೊಂಡಿರುತ್ತದೆ. ಇದನ್ನು ವೈದ್ಯರು "ಸ್ಟ್ರಾಬೆರಿ ನಾಲಿಗೆ" ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ರಕ್ತದ ಅಸ್ವಸ್ಥತೆಗಳು ಅಥವಾ ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ವಿಟಮಿನ್ ಬಿ ಕೊರತೆ ಅಥವಾ ಸ್ಕಾರ್ಲೆಟ್ ಜ್ವರದ ಸೂಚನೆಯಾಗಿರಬಹುದು.



Click it and Unblock the Notifications