Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೋವಿಡ್ 19 ಈ ಸಮಯದಲ್ಲಿ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಹೀಗೆ ಮಾಡಿ
ಕೊರೊನಾವೈರಸ್‌ಗಿಂತ ವೇಗವಾಗಿ ಹರಡುತ್ತಿರುವ ಅಪಾಯಕಾರಿ ರೋಗ ಯಾವುದು ಗೊತ್ತೇ? ಭಯ! ಹೌದು ಕೊರೊನಾ ಬಂದಾಗಿನಿಂದ ಇಡೀ ಜಗತ್ತಿನಲ್ಲಿ ಆ ಭಯ ಆವರಿಸಿದೆ. ಸ್ನೇಹಿತರ ಜೊತೆ ಕೂತು ಹರಟೆ ಹೊಡೆಯುವುದು, ಮದುವೆ, ಸಮಾರಂಭಗಳಲ್ಲಿ ನಕ್ಕು ನಲಿಯುವುದು ಇವೆಲ್ಲಾ ಕಣ್ಮರೆಯಾಗಿದೆ.
ಈಗ ಎತ್ತ ನೋಡಿದರೂ ಒಂದು ರೀತಿಯ ಭಯ. ಮನೆಯಿಂದ ಹೊರಗಡೆ ಕಾಲಿಡಲು ಭಯ, ಮನೆಗೆ ಪರಿಚಯಸ್ಥರು ಬಂದ್ರೆ ಅವರನ್ನು ಒಳ ಕರೆದು ಒಂದು ಕಾಫಿಯೋ, ಟೀ ಕೊಡಲು ಭಯ... ಒಂದು ಸೀನು ಬಂದ್ರೂ ಭಯ... ಭಯ.. ಭಯ.. ಒಟ್ಟಿನಲ್ಲಿ ಬಯವೇ ನಮ್ಮನ್ನೆಲ್ಲಾ ಆವರಿಸಿದೆ.

ಈ ರೀತಿ ಭಯ ಪಡುತ್ತಿದ್ದರೆ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಕುಂದುವುದು ಮಾತ್ರವಲ್ಲ ಹಲವು ಕಾಯಿಲೆಗಳು ಬರುವುದು.
ಅದರ ಬದಲಿಗೆ ಕೋವಿಡ್ ಗೆಲ್ಲಬೇಕು, ಮನಸ್ಸಿನಲ್ಲಿರುವ ಭಯ ಹೋಗಲಾಡಿಸಬೇಕು, ಆರೋಗ್ಯವಾಗಿರಬೇಕು. ಇವೆಲ್ಲಾ ಆಗಲು ಏನು ಮಾಡಬೇಕೆಂದು ಪ್ರಸಿದ್ಧ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಲುಕೆ ಕೌಂಟಿನೋ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ನೋಡಿ:
ನೀವು ಮಾಡಬೇಕಾಗಿರುವ ಕೆಲವು ಕಾರ್ಯಗಳು

1. ಮನೆಯಲ್ಲಿರಿ
ಅನಗ್ಯತವಾಗಿ ಸುತ್ತಾಡ ಬೇಡಿ, ಕೊರೊನಾ ಕಡಿಮೆಯಾಗುವವರೆಗೆ ಮನೆಯಲ್ಲಿರಿ. ಇದು ಕೋವಿಡ್ 19 ಮುರಿಯಲು ಸಹಕಾರಿಯಾಗುವುದು.

2. ಒಳ್ಳೆಯ ನಿದ್ರೆ ಹಾಗೂ ವಿಶ್ರಾಂತಿ
ನೀವು ಎಷ್ಟು ಕಷಾಯ ತೆಗೆದುಕೊಳ್ಳುತ್ತೀರಿ, ಇಮ್ಯೂನಿಟಿ ಬೂಸ್ಟಿಂಗ್ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಇವೆಲ್ಲಾ ನೀವು ಒಳ್ಳೆಯ ನಿದ್ದೆ ಮಾಡದಿದ್ದರೆ, ವಿಶ್ರಾಮತಿ ತೆಗೆದುಕೊಳ್ಳದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ.
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ, ಸುಸ್ತು ಅನಿಸಿದಾಗ ಸ್ವಲ್ಪ ವಿಶ್ರಾಂತಿ ತೆಗೆಯಿರಿ, ಇವು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ.

3. ವಿಟಮಿನ್ಸ್ ಅಧಿಕ ಇರುವ ಆಹಾರ ಸೇವಿಸಿ
ಅನಾರೋಗ್ಯಕರ ಆಹಾರದ ಬದಲಿಗೆ ಆರೋಗ್ಯಕರ ಆಹಾರ ಸೇವಿಸಿ. ನಿಮ್ಮ ಆಹಾರದಲ್ಲಿ ವಿಟಮಿನ್ ಸಿ, ಸತು, ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸಿ.
ವಿಟಮಿನ್ ಸಿ ಇರುವ ಆಹಾರ: ನಿಂಬೆ ಹಣ್ಣು, ಕಿತ್ತಳೆ, ಅನಾನಸ್, ನೆಲ್ಲಿಕಾಯಿ, ಸೀಬೆಕಾಯಿ, ಪಪ್ಪಾಯಿ, ದುಂಡು ಮೆಣಸು
ಸತುವಿನಂಶವಿರುವ ಆಹಾರ: ಕುಂಬಳಕಾಯಿ ಬೀಜ, ಕಿಡ್ನಿ ಬೀನ್ಸ್, ಚೆನ್ನಾ ಕಡಲೆ, ಕುಂಬಳಕಾಯಿ ಬೀಜ, ಸೀಗಡಿ, ಮೃದ್ವಂಗಿ, ಏಡಿ, ಗೋಡಂಬಿ, ಬಾದಾಮಿ, ಮೊಟ್ಟೆ, ಮಾಂಸ, ಚಿಕನ್, ಹಾಲಿನ ಉತ್ಪನ್ನಗಳು
ಸೆಲೆನಿಯಮ್ ಇರುವ ಆಹಾರ: ಬ್ರೆಜಿಲ್ ನಟ್ಸ್, ಮೊಟ್ಟೆ, ಕಾಟೇಜ್ ಚೀಸ್, ಅಣಬೆ
ವಿಟಮಿನ್ ಡಿ 3: ಇದಕ್ಕೆ ಸಪ್ಲಿಮೆಂಟ್ ತೆಗೆದುಕೊಳ್ಳಿ. ಸೂರ್ಯನ ಬಿಸಿಲಿಗೆ ಮೈಯೊಡ್ಡಿ. ಅಣಬೆ, ಮೊಟ್ಟೆ ಇವುಗಳಲ್ಲಿ ವಿಟಮಿನ್ ಡಿ ಅಲ್ಪ ಪ್ರಮಾಣದಲ್ಲಿ ಇರುತ್ತದೆ.

ಪ್ರೊಟೀನ್ ಇರುವ ಆಹಾರ ಸೇವಿಸಿ
ವೆಜ್: ಹಸಿರು ಬಟಾಣಿ, ಧಾನ್ಯಗಳು, ಬೀನ್ಸ್, ಹುರಿ ಕಡಲೆ
ನಾನ್ ವೆಜ್: ಬೇಯಿಸಿದ ಮೊಟ್ಟೆ, ಚಿಕನ್, ಮೀನು, ಮಾಂಸ
ಇವುಗಳಲ್ಲಿ ಪ್ರೊಟೀನ್ ಅಂಶವಿರುತ್ತದೆ.

ಸ್ಟೀಮ್ ತೆಗೆದುಕೊಳ್ಳಿ
ನೀರಿಗೆ ಒಂದೆರಡು ಹನಿ ನೀಲಗಿರಿ ಎಣ್ಣೆ, ಅಜ್ವೈನ್, ಅರಿಶಿಣ ಪುಡಿ, ತುಳಸಿ ಇವುಗಳನ್ನು ಹಾಕಿ ಕುದಿಸಿ ಅದನ್ನು ಸ್ಟೀಮ್ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಕಫ ಇದ್ದರೆ ಕಡಿಮೆಯಾಗುವುದು.

ಕಷಾಯ, ಸೂಪ್ ಮಾಡಿ ಕುಡಿಯಿರಿ
ಈ ಸಮಯದಲ್ಲಿ ಕಷಾಯ, ಸೂಪ್ ಮಾಡಿ ಕುಡಿಯಿರಿ, ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಲ್ಲದೆ ಸಣ್ಣ ಜ್ವರ, ಸುಸ್ತು ಇವೆಲ್ಲಾ ಇದ್ದರೆ ದೂರವಾಗುವುದು.

ವ್ಯಾಯಾಮ ಮಾಡಿ
ದಿನಾ ಅರ್ಧ ಗಂಟೆ ದೈಹಿಕ ವ್ಯಾಯಾಮ ಮಾಡಿ. ಯೋಗ ಅಥವಾ ಇತರ ದೈಹಿಕ ವ್ಯಾಯಾಮ ಮಾಡಿ. ಇನ್ನು ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡಿ.

ಕೆಟ್ಟ ಸುದ್ದಿಗಳನ್ನು ದೂರವಿಡಿ
ಭಯ ಪಡಿಸುವ, ಕೆಟ್ಟ ಸುದ್ದಿಗಳ ಗಮನ ನೀಡಬೇಡಿ. ಅವುಗಳು ನಿಮ್ಮಲ್ಲಿ ಆತಂಕವನ್ನು ಹೆಚ್ಚಿಸುವುದು. ಆದ್ದರಿಂದ ಅಂಥ ಸುದ್ದಿಗಳನ್ನು ನೋಡುವುದು ಅಥವಾ ತುಂಬಾ ಹೊತ್ತು ಸೋಷಿಯಲ್ ಮೀಡಿಯಾದಲ್ಲಿ ಕಳೆಯುವುದು ಮಾಡುವುದಕ್ಕಿಂತ ಮ್ಯೂಸಿಕ್ ಕೇಳಿ, ಸಿನಿಮಾ ಕಾಣಿ. ಹೊಸ ಹವ್ಯಾಸವನ್ನು ರೂಢಿಸಿಕೊಳ್ಳಿ.
ಈ ಅಭ್ಯಾಸಗಳು ನಿಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿಸುವುದು, ಭಯ ಬಿಡಿ ಆರಾಮವಾಗಿರಿ.



Click it and Unblock the Notifications
