Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಈ 8 ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನಿಮಗೆ ಖಂಡಿತವಾಗ್ಲು ಚಟ ಇದೆ ಎಂದರ್ಥ: ಹಾಗಾದರೆ ಏನದು?
ಚಟ ಅಥವಾ ವ್ಯಸನ... ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಚಟ ಮತ್ತು ವ್ಯಸನ ಎಂದು ಇದೆ. ಚಟದಲಿ ಎರಡು ವಿಧ ಇದೆ. ಒಂದು ಒಳ್ಳೆಯ ಚಟ ಮತ್ತೊಂದು ಕೆಟ್ಟ ಚಟ. ಕೆಲವರಿಗೆ ಓದುತ್ತಲೇ ಇರಬೇಕು, ಏನಾದ್ರೂ ಮಾಹಿತಿ ಸಂಗ್ರಹಿಸುತ್ತಲೇ ಇರಬೇಕು ಎನ್ನುವ ಚಟ ಇರುತ್ತದೆ. ಇದನ್ನು ಒಳ್ಳೆಯ ಚಟ ಎಂದು ಕರೆಯುತ್ತಾರೆ. ಈ ರೀತಿಯ ಚಟ ಯಾವುತ್ತು ಮನುಷ್ಯನನ್ನು ಹಾಳು ಮಾಡುವುದಿಲ್ಲ.

ಆದರೆ ಕೆಟ್ಟ ಚಟ ಮನುಷ್ಯನ ಜೀವನವನ್ನೆ ನಾಶ ಮಾಡಬಹುದು. ಹೌದು, ಇನ್ನೊಂದು ವಿಧದ ಕೆಟ್ಟ ಚಟ ಎಂದರೆ ಕೆಟ್ಟದರ ಆಚೆ ಮನಸು ಹೊರಳುವುದು. ಅಂದರೆ ಕುಡಿಯುವ ಚಟ, ಕೆಟ್ಟ ಕೆಲಸ ಮಾಡುವ ಚಟ, ಬ್ಲೂ ಫೀಲ್ಮ್ ನೋಡುವ ಚಟ ಇರುತ್ತದೆ. ಸುಲಭವಾಗಿ ಹೇಳಬೆಕಂದ್ರೆ ಚಟ ಎಂದರೆ ಮತ್ತೆ ಮತ್ತೆ ಆ ಕೆಟ್ಟ ಕೆಲಸವನ್ನು ಮಾಡಲು ಪ್ರೇರಿಪಿಸುವುದೇ ಚಟವಾಗಿದೆ.
ಆ ಕೆಟ್ಟ ಕೆಲಸದಿಂದ ಸಿಗುವ ಸುಖವನ್ನು ಎಂಜಾಯ್ ಮಾಡುವುದಾಗಿದೆ. ಆದರೆ ಇಂತಹ ಚಟಗಳನ್ನು ಮನುಷ್ಯನ ಜೀವನವನ್ನೇ ನಾಶ ಮಾಡಬಹುದು ಆತನ ವ್ಯಕ್ತಿತ್ವಕ್ಕೆ ಘಾಸಿಗೊಳಿಸಬಹುದು. ಹಾಗಾದರೆ ನನಗೆ ಕೆಟ್ಟದಾದ ಚಟ ತನ್ನನ್ನು ಹಿಡಿದುಕೊಂಡಿದೆ ಎನ್ನುವುದನ್ನು ತಿಳಿಯುವುದು ಹೇಗೆ? ಅದರಿಂದ ಹೊರಗೆ ಬರುವುದು ಹೇಗೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಚಟವನ್ನು ಗುರುತಿಸುವುದು ಹೇಗೆ?
ಚಟವನ್ನು ಗುರುತಿಸುವುದು ಹೇಗೆ ಎನ್ನುವುದನ್ನು ನೋಡಬೇಕಾದರೆ ನೀವು ಮೊದಲನೆಯದಾಗಿ, ನಿಮಗೆ ಆಗುತ್ತಿರುವ ಸಮಸ್ಯೆ ಬಗ್ಗೆ ನೀವು ತಿಳಿದುಕೊಳ್ಳಬೇಕು. ಹಾಗಾದರೆ ಆ ಸಮಸ್ಯೆ ಚಟವಾ ಎನ್ನುವುದ್ನನು ನೀವು ತಿಳಿದುಕೊಳ್ಳಬೇಕು.
ಹಾಗಾದರೆ ಚಟ ಅಂದರೆ ಏನು ಎಂದು ನೋಡುವುದಾದರೆ ಇದೊಂದು ಅಭಿವೃದ್ಧಿ ಹೊಂದಿದ ಅಭ್ಯಾಸವಾಗಿದ್ದು, ಮಾದಕ ದ್ರವ್ಯ, ವಸ್ತು ಅಥವಾ ಚಟುವಟಿಕೆಯನ್ನು (ಅಶ್ಲೀಲತೆಯನ್ನು ವೀಕ್ಷಿಸುವುದು, ಜೂಜಾಟ, ಇತ್ಯಾದಿ) ಯನ್ನು ಸೇವಿಸುವುದು/ ನೋಡುವುದು ಅಥವಾ ಆಡಲು ಮನಸ್ಸು ಒತ್ತಾಯಿಸುತ್ತದೆ. ಇದನ್ನೇ ಚಟ ಎಂದು ವೈದ್ಯರು ಕರೆಯುತ್ತಾರೆ.
ಈ ಕ್ಷಣಿಕ ಖುಷಿ ನಿಮಗೆ ಮಾನಸಿಕ ಅಥವಾ ದೈಹಿಕ ಹಾನಿ ಉಂಟು ಮಾಡುತ್ತದೆ ಮತ್ತು ಅಥವಾ ಸಂತೋಷದ ನಿಮ್ಮ ವೈಯಕ್ತಿಕ ಅನ್ವೇಷಣೆಗೆ ಹಾನಿಯುಂಟಾಗಬಹುದು. ನಿಮ್ಮ ಮೆದುಳಿನ ಪ್ರತಿಫಲ, ಪ್ರೇರಣೆ ಮತ್ತು ಮೆಮೊರಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಕಾಯಿಲೆ ಉಂಟು ಮಾಡುತ್ತದೆ.
ಹಾಗಾದರೆ ನಿಮಗೆ ವ್ಯಸನವಿದೆಯೇ ಅಥವಾ ಇಲ್ಲವೇ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ನೀವು ಮೊದಲು ನಿಮ್ಮನ್ನು ಕೇಳಿಕೊಳ್ಳಬೇಕು? ನಿಮಗೆ ಹಾನಿಯಾಗುತ್ತಿದೆ ಎಂದು ನೀವು ಭಾವಿಸುವ ಎಲ್ಲವನ್ನೂ ನೀವು ಸುಲಭವಾಗಿ ನಿಲ್ಲಿಸಬಹುದೇ? ಅಲ್ಲದೆ, ಇದು ನಿಮಗೆ ಅಥವಾ ನಿಮ್ಮ ಜೀವನಕ್ಕೆ ಹೇಗೆ ಹಾನಿ ಉಂಟು ಮಾಡುತ್ತದೆಯೇ ಎನ್ನುವುದಕ್ಕೆ ಉತ್ತರ ಹಾಗೂ ಪ್ರಶ್ನೆಯನ್ನು ನೀವು ಕಂಡುಕೊಳ್ಳಬೇಕು.

ನಿಮಗೆ ಚಟವಿದ್ಯಾ ಎನ್ನುವುದಕ್ಕೆ ವ್ಯಸನದ ಈ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಗಮನಿಸಿ
ಈ ಎಂಟು ಹವ್ಯಾಸಗಳು ನಿಮಗೆ ಇದ್ದರೆ ನೀವು ಚಟ ಎಂಬ ನಿಮ್ಮ ಜೀವನವನ್ನು ನಾಶ ಮಾಡುವ ಲಕ್ಷಣಗಳನ್ನು ಹೊಂದಿದ್ದೀರಿ ಎಂದು ಅರ್ಥ.
1. ಇದರ ಬಳಕೆಯಿಂದಾಗಿ ನಿಮ್ಮ ವ್ಯಕ್ತಿತ್ವ ಬದಲಾಗಿದೆ ( ಸಬ್ ಸ್ಟ್ಯಾನ್ಸಸ್ ಅಥವಾ ನಡವಳಿಕೆ)
2. ಇದರ ಬಳಕೆಯಿಂದಾಗಿ ನಿಮ್ಮ ಆರೋಗ್ಯ ಬದಲಾಗಿದೆ
3. ಇದರಿಂದಾಗುವ ಋಣಾತ್ಮಕ ಪರಿಣಾಮಗಳ ಹೊರತಾಗಿಯೂ ನೀವು ಇದನ್ನು ಮಾಡುತ್ತಲೇ ಇರುತ್ತೀರಿ
4. ಇದರಿಂದಾಗಿ ನೀವು ಕಾರ್ಯಕ್ರಮಗಳನ್ನು ಕಳೆದುಕೊಳ್ಳುತ್ತೀರಿ
5. ನಿಲ್ಲಿಸಲು ಪ್ರಯತ್ನಿಸುವಾಗ ನೀವು ಖಿನ್ನತೆಗೆ ಒಳಗಾಗುತ್ತೀರಿ
6. ಇತರರಿಂದ ಮರೆಮಾಚಿ ಇದರ ಬಳಕೆ ಮಾಡುತ್ತೀರಿ
7. ನಿಮ್ಮ ಸಹನೆ ಬೆಳೆಯುತ್ತದೆ
8. ಇದರ ಬಗ್ಗೆ ಇತರರು ಮಧ್ಯಪ್ರವೇಶಿಸಿದಾಗ/ಪ್ರಶ್ನಿಸಿದಾಗ ನೀವು ಅದನ್ನು ಇಷ್ಟಪಡುವುದಿಲ್ಲ
ಈ ಎಂಟು ವ್ಯಸನದ ಎಚ್ಚರಿಕೆ ಚಿಹ್ನೆಗಳು ಅಥವಾ ಗುಣಲಕ್ಷಣಗಳು ಇದ್ದರೆ ನೀವು ಖಂಡಿತವಾಗ್ಲು ಚಟಕ್ಕೆ ಒಳಗಾಗಿದ್ದೀರಿ ಎಂದು ಅರ್ಥ. ಉದಾಹರಣೆಗೆ ಕುಡಿಯುವುದನ್ನು ಬಿಡು ಎಂದು ಯಾರಾದರೂ ಹೇಳಿದಾಗ ಅಥವಾ ಪ್ರಶ್ನಿಸಿದಾಗ ನಿಮಗೆ ಕೋಪ ಬರಬಹುದು.
ಕುಡಿತ ಅಥವಾ ಡ್ರಗ್ಸ್ ನಿಂದ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿರಬಹುದು. ಅದು ನಿಮ್ಮ ಅನುಭವಕ್ಕೆ ಬಂದಿದ್ದರೂ ನೀವು ಕೇರ್ ಮಾಡುವುದಿಲ್ಲ. ಬ್ಲೂ ಫಿಲ್ಮ್ ನೋಡುವುದು ಒಂದು ಚಟವಾದರೆ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
ಕುಡಿತದ ಚಟ ಅಥವಾ ಯಾವುದಾದರು ಚಟ ನೀವು ಕಾರ್ಯಕ್ರಮಗಳಿಗೆ ಹೋಗುವುದನ್ನೇ ತಡೆಯಬಹುದು. ಆ ಚಟವನ್ನು ಪಾಲಿಸಲು ಮನಸ್ಸು ಹೇಳಬಹುದು. ಹೀಗೆ ವಿವಿಧ ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಅದು ಚಟ ಎಂದು ನೀವು ಪರಿಗಣಿಸಬಹುದು.
ನೀವು ನಿಜಕ್ಕೂ ಇದರಿಂದ ಹೊರಗೆ ಬರಲು ಯೋಚಿಸುತ್ತಿದ್ದರೆ. ಕೆಲವೊಂದು ಬದಲಾವಣೆಯನ್ನು ನೀವು ತರುವ ಅಗತ್ಯತೆ ಖಂಡಿತವಾಗ್ಲು ಇದೆ.

ಚಟದಿಂದ ಹೊರಗೆ ಬರಲು ಹೀಗೆ ಮಾಡಿ!
ನಿಮಗೆ ಯಾವುದಾದರು ಒಂದು ಬಗ್ಗೆ ಚಟ ಅಥವಾ ವ್ಯಸನವಿದೆ ಎಂದು ನಿಮಗೆ ಅನಿಸಿದರೆ ನೀವು ಖಂಡಿತವಾಗ್ಲು ಅದರಿಂದ ಹೊರಗೆ ಬರಬೇಕು. ಯಾಕೆಂದರೆ ಅದು ತೀವ್ರ ತರದಲ್ಲಿ ಹೋದರೆ ಮುಂದಿನ ದಿನಗಳಲ್ಲಿ ಅದು ಭಯಂಕರ ಸಮಸ್ಯೆಯನ್ನು ಉಂಟು ಮಾಡಬಹುದು. ಹೀಗೆ ಈ ಚಟದಿಂದ ನೀವು ಹೊರಗೆ ಬರಲು ಪ್ರಯತನಿಸಿದರೆ ಖಂಡಿತವಾಗ್ಲು ಹೊರಕ್ಕೆ ಬರಬಹುದು.
ಯಾಕೆಂದರೆ ಮನುಷ್ಯನ ಮನಸ್ಸಿನಿಂದ ಎಲ್ಲವೂ ಸಾಧ್ಯವಾಗುತ್ತದೆ. ನಿಮಗೆ ಚಟ ಇದ್ದರೆ ಅದನ್ನು ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಕೌನ್ಸಿಲಿಂಗ್ ತೆಗೆದುಕೊಳ್ಳುವ ಮೂಲಕ ಚಟಕ್ಕೆ ವಿದಾಯ ಹೇಳಬಹುದು. ನೀವು ವೈದ್ಯರನ್ನು ಭೇಟಿಯಾಗುವಾಗ ಮುಕ್ತವಾಗಿ ಯಾವ ಚಟ ನಿಮ್ಮಲ್ಲಿ ಇದೆ, ಹೇಗೆ ಅದು ಚಟವಾಗಿ ಬದಲಾಯಿತು ಎನ್ನುವುದನ್ನು ಹೇಳಬೇಕು. ವೈದ್ಯರೊಂದಿಗೆ ನೀವು ಸಹಕರಿಸಬೇಕು.
ಇನ್ನು ನೀವು ಕೂಡ ನಿಮ್ಮ ಮೈಂದನ್ನು ಡೈವರ್ಟ್ ಮಾಡುವ ಮೂಲಕ ಈ ಚಟದಿಂದ ಹೊರಕ್ಕೆ ಬರಬಹುದು. ಅಂದರೆ ನಿಮಗೆ ಪೋರ್ನ್ ನೋಡುವ ಚಟವಿದ್ದರೆ ನೀವು ಪೋರ್ನ್ ನೋಡಲು ನಿಮ್ಮ ಮನಸ್ಸು ಪ್ರೇರೆಪಿಸಿದರೆ ಕೂಡಲೇ ನೀವು ಅದನ್ನು ಬದಲಿಸಿಕೊಳ್ಳಬೇಕು. ಅಂದರೆ ಆ ರೀತಿಯ ಪ್ರೇರಣೆ ಉಂಟಾಗುವಾಗ ನೀವು ಕೂಡಲೇ ಬೇರೆ ಕೆಲಸದ ಕಡೆ ನಿಮ್ಮ ಮನಸನ್ನು ವರ್ಗಾಯಿಸಬೇಕು.
ಹೊರಗಡೆ ಹೋಗಿ ಗೆಳಯರ ಜೊತೆ ಸಮಯ ಕಳೆಯಬೇಕು. ಹೀಗೆ ಮಾಡಿದರೆ ಆ ಯೋಚನೆಯಿಂದ ದೂರ ಉಳಿಯಬಹುದು. ಹೀಗೆ ನಿತ್ಯವೂ ಮಾಡುತ್ತಿದ್ದರೆ ನಂತರ ಪೋರ್ನ್ ನೋಡುವ ಬಗ್ಗೆಯೇ ನೀವು ಮರೆತು ಹೋಗುತ್ತೀರಿ. ಹೀಗೆ ಚಟದಿಂದ ದೂರ ಉಳಿದುಕೊಳ್ಳಬಹುದು.



Click it and Unblock the Notifications











