Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ದೇಹದಲ್ಲಿ ಈ ಬದಲಾವಣೆಗಳಾದರೆ ಅವು ಥೈರಾಯ್ಡ್‌ನ ಸೂಚನೆಗಳಾಗಿವೆ
ಥೈರಾಯ್ಡ್ ಎಂಬುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ ಸಾಕಷ್ಟು ಜನರು ತಮಗೆ ಥೈರಾಯ್ಡ್ ಬಂದಾಗ ಪ್ರಾರಂಭದ ಹಂತದಲ್ಲಿ ನಿರ್ಲಕ್ಷ್ಯ ಮಾಡಿರುತ್ತಾರೆ. ಇದರಿಂದಾಗಿ ಥೈರಾಯ್ಡ್‌ನಿಂದಾಗುವ ತೊಂದರೆ ಮತ್ತಷ್ಟು ಹೆಚ್ಚಾಗುವುದು. ಈಗೀಗ ಚಿಕ್ಕ ಪ್ರಾಯದಲ್ಲಿಯೇ ಥೈರಾಯ್ಡ್ ಸಮಸ್ಯೆ ಕಂಡು ಬರುತ್ತಿದೆ. ಇದರ ಬಗ್ಗೆ ಅರಿಯದೇ ಹೋದರೆ ಗರ್ಭಧಾರಣೆ ಕಷ್ಟವಾಗಬಹುದು ಅಥವಾ ಮಗು ನ್ಯೂನತೆಯಿಂದ ಜನಿಸಬಹುದು.
ನಮ್ಮ ಗಂಟಲಿನ ಬಳಿ ಬರುವ ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುವುದು. ಈ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾದರೆ ಆಗ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಥೈರಾಯ್ಡ್ ಹಾರ್ಮೋನ್ ಕಡಿಮೆ ಉಂಟಾದರೆ ಹೈಪೋಥೈರಾಯ್ಡ್ ಉಂಟಾಗುವುದು. ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾದಾಗ ಹೈಪರ್ ಥೈರಾಯ್ಡ್ ಉಂಟಾಗುವುದು.
ನಮ್ಮ ದೇಹದ ತೂಕ ಸಮತೋಲನದಲ್ಲಿರಲು, ಮೈ ಉಷ್ಣತೆ, ಹಾರ್ಟ್ ರೇಟ್ ಇವೆಲ್ಲ ಸರಿಯಾಗಿಡುವಲ್ಲಿ ಥೈರಾಯ್ಡ್ ಹಾರ್ಮೋನ್ ಪಾತ್ರ ತುಂಬಾನೇ ಮುಖ್ಯ. ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದರೆ ನಮ್ಮ ದೇಹದ ಎಲ್ಲಾ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಬಂಜೆತನ , ತೂಕ ಹೆಚ್ಚಾಗುವುದು/ ಇಳಿಕೆ, ಶಕ್ತಿ ಕುಂದುವುದು, ಕೂದಲು ಉದುರುವುದು, ಮೂಡ್ ಸ್ವಿಂಗ್, ಮಲಬದ್ಧತೆ ಈ ರೀತಿಯ ಸಮಸ್ಯೆಗಳು ಉಂಟಾಗುವುದು.
ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ನಮ್ಮ ದೇಹದಲ್ಲಿ ಅದರ ಲಕ್ಷಣಗಳು ಕಂಡು ಬರುವುದು ಆದರೆ ನಿರ್ಲಕ್ಷ್ಯ ಮಾಡುತ್ತೇವೆ.
ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ ಕೂಡಲೇ ಥೈರಾಯ್ಡ್ ಪರೀಕ್ಷೆ ಮಾಡಿಸಿ ಖಚಿತಪಡಿಸಿಕೊಳ್ಳಿ:

ಚಯಪಚಯ ಕ್ರಿಯೆ ನಿಧಾನವಾಗುವುದು, ತುಂಬಾ ಸುಸ್ತು
ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಅವಶ್ಯಕ. ಚಯಪಚಯ ಕ್ರಿಯೆಯ ಮೂಲಕ ನಾವು ತಿಂದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವುದು. ಆದರೆ ಥೈರಾಯ್ಡ್ ಗ್ರಂಥಿ ಸರಿಯಾದ ರೀತಿಯಲ್ಲಿ T4 and T3 ಹಾರ್ಮೋನ್‌ಗಳನ್ನು ಉತ್ಪಾದಿಸದೇ ಇದ್ದರೆ ದೇಹದಲ್ಲಿ ಶಕ್ತಿ ಉತ್ಪಾದನೆ ಕಡಿಮೆಯಾಗುವುದು. ಇದರಿಂದ ಸುಸ್ತು, ಆಗಾಗ ತಲೆಸುತ್ತು ಉಂಟಾಗುವುದು.

ಮಲಬದ್ಧತೆ ಸಮಸ್ಯೆ ಉಂಟಾಗುವುದು
ಥೈರಾಯ್ಡ್ ಸಮಸ್ಯೆ ಉಂಟಾದಾಗ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಮಲಬದ್ಧತೆ. ಥೈರಾಯ್ಡ್ ಹಾರ್ಮೋನ್‌ಗಳು ಸರಿಯಾದ ಉತ್ಪತ್ತಿಯಾಗದೇ ಇದ್ದಾಗ ಜೀರ್ಣಕ್ರಿಯೆಯ ಶಕ್ತಿ ಕುಂದುವುದು. ಇದರಿಂದಾಗಿ ಮಲಬದ್ಧತೆ ಉಂಟಾಗುವುದು.

ಮೈತೂಕದಲ್ಲಿ ವ್ಯತ್ಯಾಸ
ಹೈಪೋಥೈರಾಯ್ಡ್ ಉಂಟಾದರೆ ಮೈ ತೂಕ ತುಂಬಾನೇ ಹೆಚ್ಚಾಗುವುದು. ಒಂದು ರೀತಿ ಬೊಜ್ಜು ಮೈ ಬರುವುದು. ಹೈಪರ್ ಥೈರಾಯ್ಡ್ ಸಮಸ್ಯೆಯಿದ್ದರೆ ಮೈ ತೂಕ ತುಂಬಾನೇ ಕಡಿಮೆಯಾಗುವುದು. ಈ ರೀತಿ ದೇಹದ ತೂಕದಲ್ಲಿ ವ್ಯತ್ಯಾಸ ಉಂಟಾದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿ.

ಕೂದಲು ಉದುರುವುದು
ಥೈರಾಯ್ಡ್ ಸಮಸ್ಯೆಯ ಮತ್ತೊಂದು ಲಕ್ಷಣವೆಂದರೆ ವಿಪರೀತ ಕೂದಲು ಉದುರುವುದು. ಥೈರಾಯ್ಡ್ ಗ್ರಂಥಿ ಕಬ್ಬಿಣದಂಶ, ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯಕಾರಿ. ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದರೆ ದೇಹದಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ ಕೊರತೆ ಉಂಟಾಗಿ ಕೂದಲು ಉದುರಲಾರಂಭಿಸುವುದು.

ಅನಿಯಮಿತ ಮುಟ್ಟಿನ ಸಮಸ್ಯೆ
ತಿಂಗಳಿಗೆ ಸರಿಯಾಗಿ ಮುಟ್ಟಾಗದಿದ್ದರೆ ಅದು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ. ಇನ್ನು ಮುಟ್ಟಿನ ಸಮಯದಲ್ಲಿ ತುಂಬಾ ಕಡಿಮೆ ರಕ್ತಸ್ರಾವ, ತುಂಬಾ ಅಧಿಕ ರಕ್ತಸ್ರಾವ ಇವೆಲ್ಲಾ ಥೈರಾಯ್ಡ್ ಸಮಸ್ಯೆಯ ಲಕ್ಷಣಗಳಾಗಿವೆ.

ಗರ್ಭಧಾರಣೆಯಾಗದಿರುವುದು ಅಥವಾ ಗರ್ಭಪಾತವಾಗುವುದು
ಥೈರಾಯ್ಡ್ ಸಮಸ್ಯೆಯಿದ್ದ ಮಹಿಳೆಯರಿಗೆ ಗರ್ಭಧಾರಣೆಗೆ ತೊಂದರೆಯಾಗುವುದು. ಒಂದು ವೇಳೆ ಗರ್ಭಿಣಿಯಾದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಈ ರೀತಿ ಸಮಸ್ಯೆ ಇರುವವರು ಥೈರಾಯ್ಡ್ ಪರೀಕ್ಷೆ ಮಾಡಿಸಬೇಕು.

ಹೃದಯ ಬಡಿತದಲ್ಲಿ ವ್ಯತ್ಯಾಸ
ಥೈರಾಯ್ಡ್ ಸಮಸ್ಯೆಯಿದ್ದರೆ ಹೃದಯ ಬಡಿತ ತುಂಬಾ ವೇಗವಾಗಿರುತ್ತದೆ ಅಥವಾ ತುಂಬಾ ಕಡಿಮೆ ಇರುತ್ತದೆ. ಹೃದಯ ಬಡಿತದಲ್ಲಿ ಅಸಹಜತೆ ಕೂಡ ಥೈರಾಯ್ಡ್‌ನ ಲಕ್ಷಣಗಳಾಗಿವೆ.

ಮಾನಸಿಕ ಒತ್ತಡ
ಥೈರಾಯ್ಡ್ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾದಾಗ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಮೂಡ್ ಸ್ವಿಂಗ್ ಈ ರೀತಿಯೆಲ್ಲಾ ಕಂಡು ಬರುವುದು. ನಿದ್ದೆಗೆ ಕೂಡ ಭಂಗ ಉಂಟಾಗಬಹುದು.
ಈ ರೀತಿಯ ಲಜ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡುತ್ತಾ ಕೂರುವ ಬದಲಿಗೆ ಪರೀಕ್ಷೆ ಮಾಡಿಸಬೇಕು.
ಕ್ಯಾಬೇಜ್, ಸೋಯಾ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಗೋಧಿ, ಕೆಫೀನ್ ಅಧಿಕವಿರುವ ಆಹಾರ, ಸಕ್ಕರೆ, ಫ್ಲೂರೈಡ್, ಅಯೋಡಿಯನ್ ಅಧಿಕವಿರುವ ಆಹಾರಗಳು ಒಳ್ಳೆಯದಲ್ಲ.
* ಪ್ರತಿದಿನ 5 ಬಗೆಯ ಹಣ್ಣುಗಳನ್ನು ಸೇವಿಸಿ
* ಅಧಿಕ ನಾರಿನಂಶವಿರುವ ಆಹಾರ ಸೇವಿಸಿ
* ಸ್ವಲ್ಪ ಹಾಲಿನ ಉತ್ಪನ್ನಗಳನ್ನು ಸೇವಿಸಿ.
* ಧಾನ್ಯಗಳು, ಮೀನು, ಮೊಟ್ಟೆ, ಮಾಂಸ, ಪ್ರೊಟೀನ್ ಇವುಗಳ ಸೇವನೆ ಒಳ್ಳೆಯದು
* ಸಾಕಷ್ಟು ನೀರು ಕುಡಿಯಿರಿ
* ಸೂರ್ಯ ಬೆಳಕಿನಲ್ಲಿ ಪ್ರತಿದಿನ ಬೆಳಗ್ಗೆ ನಿಂತು ವಿಟಮಿನ್ ಡಿ ಪಡೆಯಿರಿ.



Click it and Unblock the Notifications











