Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ನಿಂಬೆ, ಕಾಳುಮೆಣಸು, ಉಪ್ಪು ಮಿಶ್ರಣ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ?
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಕೆಲವೊಂದು ಮನೆಮದ್ದುಗಳನ್ನು ಮಾಡುವುದರಿಂದ ಅಡ್ಡಪರಿಣಾಮ ಉಂಟಾಗುವುದು ಕಡಿಮೆ ಹಾಗೂ ಪಾಕೆಟ್‌ನಲ್ಲಿ ಹಣವೂ ಉಳಿತಾಯವಾಗುತ್ತದೆ.
ಈ ಮನೆಮದ್ದುಗಳು ಸಾಮಾನ್ಯವಾಗಿ ಮನೆಯ ಅಡುಗೆ ಮನೆಯಲ್ಲಿಯೆ ಇರುತ್ತದೆ. ಇಲ್ಲಿ ನಾವು ನಾವು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಗಂಟಲು ಕೆರೆತ ಹಾಗೂ ಗಂಟಲಿನ ನೋವಿಗೆ ಮನೆಮದ್ದು ನೀಡಿದ್ದೇವೆ. ಕೆಲವೊಮ್ಮೆ ಸಾಮಾನ್ಯ ನಿಂಬೆ, ಕಾಳು ಮೆಣಸು, ಉಪ್ಪು ಮಿಶ್ರಣದ ಮನೆಮದ್ದಿನಲ್ಲಿದೆ ಈ ಅದ್ಭುತ ಆರೋಗ್ಯಕರ ಗುಣಗಳು
ತಲೆನೋವು, ಗಂಟಲು ಕೆರೆತ ಇಂಥ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಅಲೋಪತಿ ಔಷಧಿಗಳು ಅಡ್ಡಪರಿಣಾಮ ಉಂಟಾಗುತ್ತದೆ. ಆದರೆ ಇಲ್ಲಿ ನೀಡಿರುವ ಮನೆಮದ್ದುಗಳಿಂದ ಶರೀರಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಇಲ್ಲಿ ನಾವು ನಿಂಬೆಹಣ್ಣು, ಕಾಳು ಮೆಣಸು, ಉಪ್ಪು ಬಳಸಿ ಮಾಡುವ ಮನೆಮದ್ದು ಬಗ್ಗೆ ಹೇಳಲಾಗಿದೆ. ನಿಂಬೆಹಣ್ಣಿನಲ್ಲಿ ಸಿಟ್ರಸ್ ಅಂಶ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಬಯೋಫ್ಲೇವೋನಾಯ್ಡ್, ಪೆಕ್ಟಿನ್, ಲೈನೋನೆನೆ, ಸಿಟ್ರಿಕ್ ಆಮ್ಲ, ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ, ವಿಮಟಿನ್ಸ್ ಇವೆ. ಕಾಳು ಮೆಣಸಿನಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ, ಆ್ಯಂಟಿಆಕ್ಸಿಡೆಂಟ್, ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಜ್ವರ ಕಡಿಮೆ ಮಾಡುವ ಗುಣವಿದೆ. ನಿಂಬೆರಸ, ಕಾಳುಮೆಣಸು, ಉಪ್ಪು ಮಿಶ್ರ ಮಾಡಿ ಸೇವಿಸುವುದರಿಂದ ಈ ಕೆಳಗಿನ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಬಳಸುವುದು ಹೇಗೆ?
ಒಂದು ಚಮಚ ಉಪ್ಪು, ಅರ್ಧ ಚಮಚ ಕಾಳು ಮೆನಸಿನ ಪುಡಿ, ಅರ್ಧ ಚಮಚ ನಿಂಬೆರಸ ಮಿಶ್ರ ಮಾಡಿ ಸೇವಿಸಿ.
ಈ ಮನೆಮದ್ದು ಯಾವಾಗ ಪ್ರಯೋಜನಕಾರಿ?

ಜ್ವರ, ಶೀತಕ್ಕೆ ಮನೆಮದ್ದು
ಜ್ವರ, ಶೀತದ ಸಮಸ್ಯೆ ಕಾಡಿದಾಗ ಒಂದು ಲೋಟ ಬಿಸಿಯಾದ ನೀರಿಗೆ ಅರ್ಧ ನಿಂಬೆಹಣ್ಣು ಹಿಂಡಿ, ನಂತರ ನಿಂಬೆ ಹಣ್ಣಿನ ಸಿಪ್ಪೆ ಕೂಡ ಅದೆ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಅದರ ಸಿಪ್ಪೆ ತೆಗೆಯಿರಿ, ಈಗ ಆ ನೀರಿಗೆ ಒಂದು ಚಮಚ ಜೇನು, ಚಿಟಿಕೆಯಷ್ಟು ಕಾಳು ಮೆನಸಿನ ಪುಡಿ ಹಾಕಿ ಮಿಶ್ರ ಮಾಡಿ, ಈ ಮಿಶ್ರಣವನ್ನು ದಿನದಲ್ಲಿ 2-3 ಬಾರಿ ಕುಡಿಯಿರಿ.

2. ಗಂಟಲು ಕೆರೆತ ಕಡಿಮೆ ಮಾಡುತ್ತದೆ
ಒಂದು ಲೋಟದಲ್ಲಿ ಅರ್ಧ ಚಮಚ ನಿಂಬೆರಸಕ್ಕೆ ಅರ್ಧ ಚಮಚ ಕಾಳು ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿ. ಅದಕ್ಕೆ ಒಂದು ಚಮಚ ಜೇನು ಹಾಕಿ, ಬಿಸಿ ನೀರನ್ನು ಸುರಿಯಿರಿ. ಈ ನೀರಿನಿಂದ ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಗಂಟಲು ಕೆರೆತ ಕಡಿಮೆಯಾಗು ಕೆಮ್ಮು ಕಡಿಮೆಯಾಗುವುದು.

3. ಮೂಗು ಕಟ್ಟಿದ್ದರೆ
ಆಗಾಗ ಸೀನು ಬರುವುದು, ಮೂಗು ಕಟ್ಟಿ ಉಸಿರಾಡಲು ತೊಂದರೆ ಉಂಟಾಗಿದ್ದರೆ ಈ ಮನೆಮದ್ದು ಬಳಸಿ. ಚಕ್ಕೆ , ಕಾಳು ಮೆಣಸು, ಏಲಕ್ಕಿ , ಜೀರಿಗೆ ಇವುಗಳನ್ನು ಸಮ ಪ್ರಮಾಣದಲ್ಲಿ ಹಾಕಿ ಪುಡಿ ಮಾಡಿ, ಅದರ ವಾಸನೆ ತೆಗೆದುಕೊಂಡರೆ ಕಟ್ಟಿದ ಮೂಗು ಸರಿಯಾಗುವುದು ಹಾಗೂ ಸೀನು ಬರುವುದು ಕೂಡ ಕಡಿಮೆಯಾಗುವುದು.

4. ವಾಂತಿ
ಕೆಲವೊಮ್ಮೆ ಆಹಾರ ತಿಂದಾಗ ಹೊಟ್ಟೆ ಹಾಳಾಗುತ್ತದೆ, ಇದರಿಂದ ಬಾಯಲ್ಲಿ ನೀರು ಬರುವುದು, ವಾಕರಿಕೆ ಬಂದಂತೆ ಅನಿಸುವುದು. ಇದನ್ನು ಹೋಗಲಾಡಿಸಲು ಒಂದು ಚಮಚ ನಿಂಬೆರಸಕ್ಕೆ, ಒಂದು ಚಮಚ ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಮಿಶ್ರ ಮಾಡಿ, ಈ ಮಿಶ್ರಣಕ್ಕೆ ಒಂದು ಲೋಟ ನೀರು ಹಾಕಿ ಕುಡಿಯಿರಿ. ಇದರಿಂದ ಸಮಧಾನವಾಗುವುದು.

5. ತೂಕ ಇಳಿಕೆಗೆ ಸಹಕಾರಿ
ನಿಂಬೆಹಣ್ಣಿನಲ್ಲಿ ಪಾಲಿಪಿನೋಲ್ ಅಂಶವಿದ್ದು ತೂಕ ಇಳಿಕೆಗೆ ಸಹಕಾರಿ. ಇದು ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿ ಹಾಗೂ ಚಯಾಪಚಯ ಕ್ರಿಯೆ ಕೂಡ ಉತ್ತಮ ಪಡಿಸುತ್ತದೆ. ತೂಕ ಇಳಿಕೆ ಮಾಡಲು ಒಂದು ಲೋಟಕ್ಕೆ 1/4 ಚಮಚ ಕಾಳು ಮೆಣಸಿನ ಪುಡಿ, ಒಂದು ಚಮಚ ಜೇನು, 2 ಚಮಚ ನಿಂಬೆರಸ ಮಿಶ್ರ ಮಾಡಿ ಅದಕ್ಕೆ ಬಿಸಿ ನೀರು ಹಾಕಿ, ಉಪ್ಪು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

6. ಗಾಲಾ ಸ್ಟೊನ್ ಸಮಸ್ಯೆ ನಿವಾರಿಸುತ್ತದೆ
ಗಾಲಾಸ್ಟೋನ್ ಸಮಸ್ಯೆ ಉಂಟಾದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಿ ಗುಣ ಪಡಿಸಬೇಕಾಗುತ್ತದೆ. ಅದರೆ ಪ್ರಾರಂಭದಲ್ಲಿಯೇ ಗುರುತಿಸಿದರೆ ಕೆಲವೊಂದು ಮನೆಮದ್ದು ಮಾಡಿ ಗಾಲಾಸ್ಟೋನ್ ಕರಗಿಸಬಹುದು. ಉಪ್ಪು, ಕಾಳು ಮೆಣಸು, ನಿಂಬೆರಸ ಹಾಗೂ ಆಲೀವ್ ಎಣ್ಣೆ ಮಿಶ್ರಣ ಗಾಲಾಸ್ಟೋನ್ ಕರಗಿಸುವಲ್ಲಿ ಸಹಕಾರಿ. ಈ ಮಿಶ್ರಣವನ್ನು ಪ್ರತಿನಿತ್ಯ ಸೇವಿಸುವುದರಿಮದ ಗಾಲಾಸ್ಟೋನ್ ಸಮಸ್ಯೆ ಇಲ್ಲವಾಗುವುದು.

7. ಹಲ್ಲು ನೋವು ಕಡಿಮೆಯಾಗುತ್ತದೆ
ಹಲ್ಲು ನೋವು ಬಂದರೆ ಸಹಿಸಲು ಅಸಾಧ್ಯವಾದ ನೋವುಂಟಾಗುವುದು. ಈ ಸಮಯದಲ್ಲಿ ನೋವು ತಕ್ಷಣ ಕಡಿಮೆಯಾಗಲು ಏನು ಮಾಡಬೇಕೆಂದು ಯೋಚಿಸುತ್ತೇವೆ. ಈ ಸಂದರ್ಭದಲ್ಲಿ ಮನೆಮದ್ದುಗಳು ಸಹಾಯಕ್ಕೆ ಬರುತ್ತವೆ. ಅರ್ಧ ಚಮಚ ಆಲೀವ್ ಎಣ್ಣೆಗೆ, ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆ ರಸ ಹಾಕಿ ಮಿಶ್ರ ಮಾಡಿ ಅದನ್ನು ನೋವು ಇರುವ ಕಡೆ ಹಚ್ಚಿ. ಹೀಗೆ ಮಾಡುವುದರಿಂದ ನೋವು ತಕ್ಷಣ ಕಡಿಮೆಯಾಗುವುದು.

8. ಅಸ್ತಮಾ ಸಮಸ್ಯೆ ದೂರವಿಡುತ್ತದೆ
ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ. ಅದಕ್ಕೆ 10 ಕಳು ಮೆಣಸು, 15 ತುಳಸಿ ಎಲೆ, 2 ಲವಂಗ ಹಾಕಿ ಕುದಿಸಿ. ಈ ನೀರನ್ನು ಒಂದು ಜಾರ್‌ಗೆ ಹಾಕಿ ಅದರ ಮುಚ್ಚಳ ಬಿಗಿಯಾಗಿ ಹಾಕಿರಿ. ಆ ನೀರಿನಲ್ಲಿ ಸ್ವಲ್ಪ ನೀರನ್ನು ಲೋಟಕ್ಕೆ ಹಾಕಿ ನಂತರ ಅದಕ್ಕೆ ಜೇನು, ನಿಂಬೆ ರಸ, ಉಪ್ಪು ಹಾಕಿ ಮಿಶ್ರ ಮಾಡಿ ಪ್ರತಿದಿನ ಕುಡಿಯಿರಿ. ಇದರಿಂದ ಅಸ್ತಮಾ ಕಡಿಮೆಯಾಗುವುದು.
ಸೂಚನೆ: ಈ ಮನೆಮದ್ದು ಮಾಡುವ ಮುಂಚೆ ವೈದ್ಯರ ಸಲಹೆ ಕಡ್ಡಾಯವಾಗಿ ಪಡೆದುಕೊಳ್ಳಿ.

9. ಮೈಗ್ರೇನ್ ತಲೆನೋವು
ಮೈಗ್ರೇನ್ ತಲೆನೋವು ಹೋಗಲಾಡಿಸಲು ನಿಂಬೆಹಣ್ಣು, ಉಪ್ಪು, ಕಾಳು ಮೆಣಸಿನ ಮಿಶ್ರಣ ಸಹಕಾರಿ. ಮೈಗ್ರೇನ್ ತಲೆನೋವು ಶುರುವಾದಾಗ ಒಂದು ಚಮಚ ನಿಂಬೆರಸ, ಎರಡು ಚಮಚ ಉಪ್ಪು, ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ, ಅದನ್ನು ಒಂದು ಲೋಟ ನೀರಿನಲ್ಲಿ ಮಿಶ್ರ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುವುದು.
ಸೂಚನೆ: ಇಲ್ಲಿ ನೀಡಿರುವ ಮೆನಮದ್ದು ಮಾಡುವಾಗ ನೀವು ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಅಥವಾ ಬೇರೆ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೆ ಈ ಮನೆಮದ್ದು ಮಾಡತಕ್ಕದ್ದು.



Click it and Unblock the Notifications