Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
New Year 2023: ಫಿಟ್ನೆಸ್ ಪ್ರಿಯರು ಹೊಸ ವರ್ಷದ ಸಂಕಲ್ಪ ಹೀಗೆ ಮಾಡಿ
ಜನರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ತುಂಬಾ ಹೆಚ್ಚಾಗಿದೆ, ಈ ಆರೋಗ್ಯಕ್ಕಾಗಿಯೇ ನಾವು ಮೊದಲು ದೈಹಿಕವಾಗಿ ಸಧೃಢರಾಗಿರಬೇಕು ಎಂದು ಬಹುತೇಕರು ಬೆಳಗಿನ ವಾಕ್, ಜಿಮ್, ವ್ಯಾಯಾಮ ಮುಂತಾದ ಕಸರತ್ತುಗಳನ್ನು ನಿತ್ಯ ಮಾಡುತ್ತಾರೆ. ಆದರೆ ಯಾವುದೇ ಆದರೂ ವರ್ಷಾನಿಗಟ್ಟಲೆ ಒಂದೇ ರೀತಿಯ ಅಭ್ಯಾಸ ಇದ್ದರೆ ನೀರಸ ಎನಿಸುತ್ತದೆ.
ಇದೀಗ ಹೊಸ ವರ್ಷದ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ಆಲೋಚನೆ, ಯೋಜನೆ, ಹೊಸ ಕೆಲಸದ ಆರಂಭಕ್ಕೆ ಹೊಸ ವರ್ಷವನ್ನು ಆಗಮಿಸಲು ಎಲ್ಲರೂ ಕಾಯುತ್ತಿದ್ದಾರೆ.
ನಾವಿಂದು ಈ ಲೇಖನದಲ್ಲಿ ಫಿಟ್‌ನೆಸ್ ಪ್ರಿಯರು ಹೊಸ ವರ್ಷದ ಆಗಮನಕ್ಕೆ ಹೇಗೆ ಹೊಸ ಯೋಜನೆ ರೂಪಿಸಬಹುದು ಎಂಬುದರ ಬಗ್ಗೆ ಇಲ್ಲಿ ಹೇಳಲಿದ್ದೇವೆ:

ವಿಭಿನ್ನ ಕ್ರೀಡೆಯನ್ನು ಪ್ರಯತ್ನಿಸಿ
ನೀವು ಹಿಂದಿನ ವರ್ಷದ ಅದೇ ಕ್ರೀಡಾ ಚಟುವಟಿಕೆಗಳಿಂದ ಆಯಾಸಗೊಂಡಿದ್ದರೆ, ಅತಿಯಾದ ಕ್ರೀಡೆಯನ್ನು ಅಭ್ಯಾಸ ಮಾಡುವ ಮೊದಲು ಸ್ವಲ್ಪ ವಿಭಿನ್ನವಾದದ್ದನ್ನು ಪ್ರಯತ್ನಿಸಿ. ಸ್ಕೈಡೈವಿಂಗ್, ವಾಟರ್ ರಾಫ್ಟಿಂಗ್ ಅಥವಾ ಮರುಭೂಮಿಯ ಮ್ಯಾರಥಾನ್ ಪ್ರಯತ್ನಿಸಿ, ಇಂಥಾ ಕ್ರೀಡೆಗಳು ನಿಮ್ಮ ಜೀವನವನ್ನು ರೋಮಾಂಚನಕಾರಿ ಮತ್ತು ಸಾಹಸಮಯವಾಗಿಸುತ್ತದೆ, ನಿಮ್ಮ ಫಿಟ್‌ನೆಸ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಫಿಟ್‌ನೆಸ್ ಜತೆಗೆ ಬದುಕು ಇನ್ನಷ್ಟು ಥ್ರಿಲ್ ಆಗಿರುತ್ತದೆ.

ಪೂರ್ವಾಭ್ಯಾಸ ಎಂದಿಗೂ ತಪ್ಪಿಸಬೇಡಿ
ಬಹುತೇಕ ಫಿಟ್‌ನೆಸ್ ಪ್ರಿಯರು ಯಾವುದೇ ತಾಲೀಮು, ಪೂರ್ವಾಭ್ಯಾಸ ಇಲ್ಲದೆ ನೇರವಾಗಿ ವ್ಯಾಯಾಮ ಮಾಡಲು ಆರಂಭಿಸುತ್ತಾರೆ. ಆದರೆ ಗಂಭೀರವಾದ ಗಾಯ, ಅಪಘಾತವನ್ನು ತಡೆಗಟ್ಟಲು ಕ್ರೀಡೆ ಅಥವಾ ಜಿಮ್ ಮಾಡುವ ಮುನ್ನ ತಾಲೀಮು ಅತ್ಯಗತ್ಯ, ಆದ್ದರಿಂದ ದೈಹಿಕ ಪರಿಶ್ರಮಕ್ಕಾಗಿ ನಿಮ್ಮ ಎಲ್ಲಾ ಸ್ನಾಯುಗಳನ್ನು ಮುನ್ನವೇ ತಯಾರಿಸಿ. ಇಷ್ಟು ದಿನ ಮಾಡಿದ ತಪ್ಪುಗಳನ್ನು ಮುಂದೆ ಮಾಡಬೇಡಿ.

ಇತರರು ಫಿಟ್‌ನೆಸ್ ಕಾಪಾಡಲು ಬೆಂಬಲಿಸಿ
ಮೊದಲು ನೀವು ಆರೋಗ್ಯವಂತ ಕ್ರೀಡಾಪಟುವಿನ ಪ್ರಮುಖ ಉದಾಹರಣೆಯಾಗಲು ಪ್ರಯತ್ನಿಸಿ. ಹಾಗೆಯೇ ಫಿಟ್ ಆಗಿರಲು ಬಯಸುವವರಿಗೂ ನೀವು ರೋಲೆಎ ಮಾಡೆಲ್ ಆಗಿ, ಫಿಟ್‌ನೆಸ್ ಪ್ರಯೋಜನಗಳನ್ನು ಇತರರಿಗೆ ತಿಳಿಸಿಹೇಳಿ. ಆರೋಗ್ಯಕರ ಜೀವನಶೈಲಿಯನ್ನು ಪ್ರಾರಂಭಿಸುತ್ತಿರುವ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಸಲಹೆ ನೀಡಲು ನಿಮ್ಮ ಫಿಟ್‌ನೆಸ್ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಇದು ನಿಮಗೆ ಫಿಟ್‌ನೆಸ್ ಬಗೆಗಿನ ಅರಿವಿನ ಜತೆ, ಪ್ರೇರಣೆ ನೀಡಿದ್ದಕ್ಕಾಗಿ ಸಕಾರಾತ್ಮಕ ಭಾವನೆ ಉಂಟಾಗುತ್ತದೆ.

ನಿಯಮಿತ ಸ್ಪಾ ಥೆರಪಿಗಳನ್ನು ಆನಂದಿಸಿ
ಜಿಮ್‌ನಲ್ಲಿ ಕಠಿಣ ದಿನದ ನಂತರ ನಿಮ್ಮ ದೇಹದ ವಿಶ್ರಾಂತಿಗಾಗಿ ಹಿತವಾದ ಸ್ಪಾ ಸೆಷನ್ ಅಥವಾ ಮಸಾಜ್‌ಗಳ ಮೂಲಕ ರಿಲಾಕ್ಸ್ ಆಗಿ. ನೀವು ಗಾಯಗಳನ್ನು ತಡೆಗಟ್ಟಲು ಮತ್ತು ಬೆಳಿಗ್ಗೆ ತಾಜಾತನವನ್ನು ಅನುಭವಿಸಲು ಬಯಸಿದರೆ ವ್ಯಾಯಾಮದ ನಂತರ ನಿಮ್ಮ ದೇಹಕ್ಕೆ ಚಿಕಿತ್ಸೆ ನೀಡುವುದು ಅತ್ಯಗತ್ಯ. ಆದ್ದರಿಂದ ನಿಮ್ಮ ಡೌನ್-ಟೈಮ್ ಅನ್ನು ಕಡಿಮೆ ಮಾಡಬೇಡಿ, ಈ ವರ್ಷ ಸ್ಪಾ ಚಿಕಿತ್ಸೆಯನ್ನು ನಿಯಮಿತ ಅಭ್ಯಾಸವಾಗಿಸಿಕೊಳ್ಳಿ.

ವಿಶ್ರಾಂತಿಗಾಗಿ ಹೆಚ್ಚಿನ ಸಮಯ ಮಾಡಿಕೊಳ್ಳಿ
ಫಿಟ್ನೆಸ್ ಪ್ರೇಮಿಗಳು ಯಾವಾಗಲು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ದೀರ್ಘಕಾಲದವರೆಗೆ ವ್ಯಾಯಾಮ ಮಾಡುತ್ತಾರೆ. ಆದರೂ, ನೀವು ನಿಜವಾಗಿಯೂ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸಿದರೆ, ನೀವು ನಿಮ್ಮ ವಿಸ್ರಾಂತಿಯ ಸಮಯವನ್ನು ಕಡಿಮೆ ಮಾಡಿಕೊಳ್ಳಬೇಡಿ. ಪ್ರತಿ ದಿನ ಹೆಚ್ಚಿನ ಫಿಟ್‌ನೆಸ್ ಕಾಪಾಡಲು ನೀವು ಜಿಮ್‌ನಲ್ಲಿ ಹೆಚ್ಚುವರಿ ಗಂಟೆ ಕಳೆಯುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನಾರೋಗ್ಯವನ್ನು ತಪ್ಪಿಸಲು ಬಯಸಿದರೆ ವ್ಯಾಯಾಮ ಜತೆಗೆ ಅದಕ್ಕೆ ಅನುಗುಣವಾಗಿ ವಿಶ್ರಾಂತಿ ಪಡೆಯುವುದು ಅತ್ಯಗತ್ಯ.



Click it and Unblock the Notifications
