Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗಿನ ಹೊತ್ತು ನಿಮಗೂ ಈ ಕೆಟ್ಟ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ...!
ಪ್ರತಿ ಬೆಳಗುಗಳೂ ಹೊಸದೇ. ಹೊಸತನ, ಸಕಾರಾತ್ಮಕತೆ, ಹೊಸ ಯೋಚನೆ, ಗುರಿ, ಸಾಧನೆ, ತಾಜಾತನ ಹೀಗೆ ಮುಂಜಾನೆ ಆರಂಭವಾಗಲಿ ಎಂಬುದು ಎಲ್ಲರ ಅಪೇಕ್ಷೆ. ಆದರೆ ನಮಗೆ ಗೊತ್ತಿಲ್ಲದ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಇಡೀ ದಿನವನ್ನೇ ಹಾಳು ಮಾಡುತ್ತಿರುತ್ತದೆ, ಇನ್ನೂ ವಿಚಿತ್ರ ಎಂದರೆ ಯಾವುದೋ ಒಳ್ಳೆಯದು ಎಂದು ಅಂದುಕೊಂಡಿರುತ್ತೇವೋ ಅದೇ ಅಭ್ಯಾಸ ಕೆಟ್ಟದ್ದು ಎಂದಾದರೆ.....!
ಬೆಳಗ್ಗೆ ಎದ್ದ್ ತಕ್ಷಣ ಮಾಡುವ ಈ ಕೆಲವು ಕೆಟ್ಟ ಅಭ್ಯಾಸಗಳು ನಮ್ಮನ್ನು ನಿಧಾನಗೊಳಿಸುತ್ತದೆ, ನಕಾರಾತ್ಮಕವಾಗಿ ಮಾಡುತ್ತದೆ, ಸಿಟ್ಟು ತರಿಸಬಹುದು ಅಥವಾ ನಮ್ಮ ಇಡೀ ದಿನವನ್ನೇ ಹಾಳು ಮಾಡಬಹುದು. ನಿಮ್ಮಲ್ಲೂ ಈ ಕೆಟ್ಟ್ ಬೆಳಗಿನ ಅಭ್ಯಾಸಗಳಿದ್ದರೆ ಇಂದೇ ಬಿಟ್ಟು ಬಿಡಿ:

ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದು
ಇತ್ತೀಚಿನ ದಿನಗಳಲ್ಲಿ, ನಾವು ಎದ್ದಾಗ ನಾವು ಮಾಡುವ ಮೊದಲ ಕೆಲಸವೆಂದರೆ ಮೊಬೈಲ್ ಕೈಗೆ ಎತ್ತಿಕೊಂಡು ಫೋನ್ ಪರದೆಗಳನ್ನು ನೋಡುವುದು. ಇದು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುವ ಅತ್ಯಂತ ವಿಷಕಾರಿ ಅಭ್ಯಾಸವಾಗಿದೆ. ಇದು ನಮ್ಮನ್ನು ಕಡಿಮೆ ಉತ್ಪಾದಕವಾಗಿಸುತ್ತದೆ. ಆದ್ದರಿಂದ, ಬದಲಾಗಿ ಬೆಳಗ್ಗೆ ಎದ್ದೇಳಿ, ಸ್ವಲ್ಪ ಬೆಚ್ಚಗಿನ ನೀರನ್ನು ಸೇವಿಸಿ, ನಿಮ್ಮ ಮುಖವನ್ನು ತೊಳೆಯಿರಿ, ನಿಂತುಕೊಳ್ಳಿ, ಬಾಲ್ಕನಿ ಅಥವಾ ಕಿಟಕಿಯ ಬಳಿ ಕುಳಿತು ಸ್ವಲ್ಪ ತಾಜಾ ಗಾಳಿಯನ್ನು ಉಸಿರಾಡಿ. ನಿಮಗಾಗಿ ಒಂದು ಅಥವಾ ಎರಡು ಗಂಟೆಗಳನ್ನು ಇಟ್ಟುಕೊಳ್ಳಿ ಮತ್ತು ನಂತರ ಫೋನ್, ಸಾಮಾಜಿಕ ಮಾಧ್ಯಮ ಬಳಸುವುದು ಉತ್ತಮ ಅಭ್ಯಾಸ.

ಬೆಳಗಿನ ಉಪಾಹಾರ ಸೇವಿಸದೇ ಇರುವುದು
ಅನೇಕ ಜನರು ಈ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಬೆಳಗ್ಗೆ ತಡವಾಗಿ ಏಳುವುದು ಅಲ್ಲದೆ ಉಪಾಹಾರದ ಸಮಯಕ್ಕೆ ಕಾಫಿ ಅಥವಾ ಚಹಾವನ್ನು ಸೇವಿಸುತ್ತಾರೆ. ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಉಪಹಾರವನ್ನು ತಿನ್ನುವುದು ಮುಖ್ಯ. ಮೊಟ್ಟೆ, ಪೌಷ್ಟಿಕಯುಕ್ತ ತಿಂಡಿಗಳು, ತರಕಾರಿ, ತಾಜಾ ಹಣ್ಣುಗಳು ಇತ್ಯಾದಿಗಳನ್ನು ಸೇವಿಸಿ.ನಮ್ಮ ಆರೋಗ್ಯದಲ್ಲಿ ಬೆಳಗಿನ ಉಪಹಾರದ ಮಹತ್ವವಿದೆ, ಅದನ್ನು ಎಂದಿಗೂ ತಪ್ಪಿಸಬೇಡಿ.

ದಿನವನ್ನು ಯೋಜಿಸಿ
ನೀವು ಬೆಳಿಗ್ಗೆ ಎದ್ದ ನಂತರ ಸಮಾಧಾನವಾಗಿ ಕುಳಿತು ನಿಮ್ಮ ದಿನವನ್ನು ಯೋಜಿಸುವುದು ಮುಖ್ಯವಾಗಿದೆ, ಕೆಲಸದ ದಿನವಾಗಲಿ ಅಥವಾ ಭಾನುವಾರ, ರಜೆ ದಿನವೇ ಆಗಿರಲ. ನೀವು ಶಾಪಿಂಗ್ ಮಾಡಲು ಬಯಸಿದರೆ ಅದಕ್ಕೆ ಅನುಗುಣವಾಗಿ ಕೆಲಸ ಮಾಡಿ. ನಿಮ್ಮ ಯೋಜನೆಗಳನ್ನು ವಿಳಂಬ ಮಾಡಬೇಡಿ, ಅದು ಎಂದಿಗೂ ಫಲಪ್ರದವಾಗುವುದಿಲ್ಲ. ಹೊರಗೆ ಹೋಗುವ ಮೊದಲು ಬಿಡುವಿನ ವೇಳೆ ಗಿಡಗಳಿಗೆ ನೀರು ಹಾಕಿ ಅಥವಾ ಮನೆ, ಫ್ರಿಡ್ಜ್ ಸ್ವಚ್ಛಗೊಳಿಸಿ ಹೀಗೆ ದಿನವನ್ನು ಯೋಜಿಸಿದಷ್ಟು ನಿಮ್ಮ ಮನೆ, ಬದುಕು ಹಾಗೂ ಮಾನಸಿಕ ಆರೋಗ್ಯವೂ ಯೋಜಿತವಾಗಿರುತ್ತದೆ.

ನಕಾರಾತ್ಮಕ ಆಲೋಚನೆಗಳು
ನೀವು ಎದ್ದ ತಕ್ಷಣ ಜೀವನದಲ್ಲಿ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಲೇಬೇಡಿ. ಧ್ಯಾನ, ಯೋಜ, ವ್ಯಾಯಾಮದ ಮೂಲಕ ದಿನವನ್ನು ಆರಂಭಿಸಿ. ಅದು ಕನಿಷ್ಠ 10 ನಿಮಿಷ ಆದರೂ ಸರಿಯೇ ವ್ಯಾಯಾಮ ಮಾಡಿ. ನಿಮಗೆ ದೇವರು ಇಂದಿನ ದಿನವನ್ನು ನೀಡಿರುವುದಕ್ಕೆ ಕೃತಜ್ಞರಾಗಿರಿ, ನಿನ್ನೆ ಸಾರ್ಥಕತೆ ಹಾಗೂ ಇಂದು ಏನೆಲ್ಲಾ ಉತ್ತಮ ವಿಷಯಗಳನ್ನು ನೀವು ಮಾಡಬಹುದು ಎಂಬುದನ್ನು ನೆನೆಯಿರಿ. ಆಶಾವಾದಿಯಾಗಿರಿ, ಬೆಳಿಗಿನ ಋಣಾತ್ಮಕ ಆಲೋಚನೆಯು ಯಾವಾಗಲೂ ನಿರಾಶಾದಾಯಕವಾಗಿರುತ್ತದೆ.

ಸ್ನಾನ ಮಾಡದೇ ಇರುವುದು
ಜನರು ತಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಬೆಳಿಗ್ಗೆ ಸ್ನಾನ ಮಾಡುವ ಕಾರಣವೆಂದರೆ ಅದು ಅವರಿಗೆ ತಾಜಾತನವನ್ನು ನೀಡುತ್ತದೆ ಮತ್ತು ದಿನಕ್ಕೆ ಉತ್ತೇಜನ ನೀಡುತ್ತದೆ. ಸ್ನಾನದ ಕ್ರಿಯೆಯು ನಮ್ಮ ದೇಹವು ಉತ್ತಮ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಶಕ್ತಿಯನ್ನು ನಮಗೆ ಸಿದ್ಧಪಡಿಸುತ್ತದೆ. ಆದರೆ ನೀವು ನಿತ್ಯ ಸ್ನಾನ ಮಾಡದೇ ನಿಮಗೆ ತಾಜಾತನ ಭಾವನೆ ಇರುವುದಿಲ್ಲ, ಅಲಸ್ಯ ಭಾವನೆ ಇಡೀ ದಿನ ನಿಮ್ಮಲ್ಲಿರುತ್ತದೆ.



Click it and Unblock the Notifications