Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದ 17 ಆಹಾರಗಳಿವು
ನಮ್ಮ ದೇಹದ ಕಾರ್ಯ ವೈಖರಿಯಲ್ಲಿ ಕಿಡ್ನಿ ಪಾತ್ರ ಮುಖ್ಯವಾಗಿದ್ದು. ರಕ್ತ ಶುದ್ಧ ಮಾಡುವುದರಿಂದ ಹಿಡಿದು ಮೂತ್ರ ವಿರ್ಸಜನೆ, ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ, ಖನಿಜಾಂಶಗಳ ಸಮತೋಲನ ಕಾಪಾಡುವಲ್ಲಿ, ದೇಹದಲ್ಲಿ ನೀರಿನಂಶ ಕಾಪಾಡುವಲ್ಲಿ ಕಿಡ್ನಿ ಆರೋಗ್ಯ ಬಹು ಮುಖ್ಯವಾದದ್ದು.
ಕಿಡ್ನಿ ದೇಹದ ಒಂದು ಅಂಗವೇ ಆಗಿದ್ದರೂ ಅದರ ಆರೋಗ್ಯ ಹಾಳಾದರೆ ದೇಹದ ಇತರ ಅಂಗಾಂಗಗಳಿಗೂ ತೊಂದರೆ ಉಂಟಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇದೆ.

ಮದ್ಯಪಾನ, ಹೃದಯದ ಸಮಸ್ಯೆ, ಹೆಪಟೈಟಿಸ್ ಸಿ ವೈರಸ್, ಹೆಚ್‌ಐವಿ ಸೋಂಕು ಇವೆಲ್ಲಾ ಕಿಡ್ನಿ ಆರೋಗ್ಯ ಹಾಳು ಮಾಡುತ್ತವೆ.
ಕಿಡ್ನಿ ತೊಂದರೆ ಇರುವವರು ಸೋಡಿಯಂ ಮತ್ತು ಪೊಟಾಷ್ಯಿಯಂ ಇವುಗಳನ್ನು ಮಿತಿಯಲ್ಲಿ ಸೇವಿಸಬೇಕು. ಇನ್ನು ತುಂಬಾ ಗಂಭೀರ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಪ್ರೊಟೀನ್ ಪ್ರಮಾಣವನ್ನು ಕೂಡ ಕಡಿಮೆ ಸೇವಿಸಬೇಕು.
ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಆಹಾರಕ್ರಮದ ಕಡೆ ತುಂಬಾ ಗಮನ ಕೊಡಬೇಕು, ಇಲ್ಲಿ ನಾವು ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದ ಆಹಾರಗಳ ಬಗ್ಗೆ ಹೇಳಿದ್ದೇವೆ ನೋಡಿ:

1.ಕಡು ಬಣ್ಣದ ಕೋಲಾ
ಕೋಲಾದಲ್ಲಿ ಸಕ್ಕರೆಯಂಶ, ಕ್ಯಾಲೋರಿ ಇದ್ದು ಇದರಲ್ಲಿ ರಂಜಕದ ಅಂಶವಿರುತ್ತದೆ. ಅನೇಕ ಆಹಾರ ಉತ್ಪಾದನಾ ಕಂಪನಿಗಳು ತಮ್ಮ ಆಹಾರದ ರುಚಿ ಹೆಚ್ಚಿಸಲು ಹಾಗೂ ಆಹಾರ ತುಂಬಾ ಕಾಲ ಬಾಳಿಕೆ ಬರಲು ಹಾಗೂ ಆಹಾರದ ಬಣ್ಣದ ಹಾಳಾಗದಿರಲು ನಿಗದಿತ ಪ್ರಮಾಣದ ರಂಜಕ ಸೇರಿಸುತ್ತಾರೆ. ಇದನ್ನು ನಮ್ಮ ದೇಹವು ಇತರ ಸಸ್ಯಗಳು ಹಾಗೂ ಮಾಂಸಾಹಾರಗಳಿಂದ ದೊರೆಯುವ ರಂಜಕದಂಶಕ್ಕಿಂತ ಹೆಚ್ಚಾಗಿ ಹೀರಿಕೊಳ್ಳುವುದು.
ಇನ್ನು ಕೋಲಾ ಹಾಗೂ ಕಡು ಬಣ್ಣದ ಪಾನೀಯಗಳಲ್ಲಿ ರಂಜಕದ ಅಂಶವಿರುತ್ತವೆ. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಹೊರಗಿನ ಆಹಾರ ಸೇವಿಸದಿದ್ದರೆ ಒಳ್ಳೆಯದು.

2, ಬೆಣ್ಣೆಹಣ್ಣು
ಬೆಣ್ಣೆ ಪೋಷಕಾಂಶವಿರುವ ಅತ್ಯುತ್ತಮವಾದ ಆಹಾರವಾಗಿದ್ದರೂ ಕಿಡ್ನಿ ಸಮಸ್ಯೆ ಇರುವವರು ಇದನ್ನು ತಿನ್ನುವಂತಿಲ್ಲ. ಏಕೆಂದರೆ ಇದರಲ್ಲಿ ಪೊಟಾಷ್ಯಿಯಂ ಅಧಿಕವಿದೆ. ಒಂದು ಕಪ್ ಬೆಣ್ಣೆಹಣ್ಣಿನಲ್ಲಿ 727 ಮಿಗ್ರಾಂ ಪೊಟಾಷ್ಯಿಯಂ ಇದೆ. ಇದರಲ್ಲಿ ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ ಅಧಿಕ ಪೊಟಾಷ್ಯಿಯಂ ಇದೆ. ಆದ್ದರಿಂದ ಇದನ್ನು ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದು.

3. ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರ, ಸೂಪ್, ತರಕಾರಿ, ಕಾಳುಗಳು ಹೀಗೆ ಡಬ್ಬದಲ್ಲಿರುವ ರೆಡಿಮೇಡ್ ಆಹಾರಗಳಲ್ಲಿ ಸೋಡಿಯಂ ಅಂಶ ಅಧಿಕವಿರುತ್ತದೆ. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಈ ರೀತಿಯ ರೆಡಿಮೇಡ್ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಉಪ್ಪಿನಂಶವಿಲ್ಲದ ಅಥವಾ ಅತೀ ಕಡಿಮೆ ಉಪ್ಪು ಇರುವ ಆಹಾರ ವಸ್ತುಗಳನ್ನು ಸೇವಿಸಿ.

4. ಧಾನ್ಯಗಳಿಂದ ಮಾಡಿದ ಬ್ರೆಡ್
ಸಾಮಾನ್ಯವಾಗಿ ಬಿಳಿ ಬ್ರೆಡ್ ಬದಲು ವ್ಹೀಟ್ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕಿಡ್ನಿ ರೋಗಿಗಳಿಗೆ ಧಾನ್ಯ ಬ್ರೆಡ್‌ಗಳಿಗಿಂತ ಬಿಳಿ ಬ್ರೆಡ್ ಬೆಸ್ಟ್. ಏಕೆಂದರೆ ವ್ಹೀಟ್ ಬ್ರೆಡ್‌ನಲ್ಲಿ ಪೊಟಾಷ್ಯಿಯಂ ಹಾಗೂ ಸೋಡಿಯಂ ಅಂಶ ಅಧಿಕವಿರುತ್ತದೆ. ಕಿಡ್ನಿ ಸಮಸ್ಯೆವಿದ್ದರೆ ಅದರ ಮೇಲಿರುವ ಲೇಬಲ್‌ನಲ್ಲಿ ಸೋಡಿಯಂ ಹಾಗೂ ಪೊಟಾಷ್ಯಿಯಂ ಅಂಶ ಗಮನಿಸಿ ಬಳಸುವುದು ಒಳ್ಳೆಯದು.

5. ಕೆಂಪಕ್ಕಿ
ಧಾನ್ಯದ ಬ್ರೆಡ್‌ನಂತೆಯೇ ಕೆಂಪಕ್ಕಿ ಅನ್ನ ಕೂಡ ಕಿಡ್ನಿ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿ ಪೊಟಾಷ್ಯಿಯಂ ಹಾಗೂ ರಂಜಕದಂಶ ಬೆಳ್ತಕ್ಕಿಯಲ್ಲಿರುವುದಕ್ಕಿಂತ ಅಧಿಕವಿರುತ್ತದೆ. ಕೆಂಪಕ್ಕಿ ಅನ್ನ ತಿನ್ನುವುದಾದರೆ ತುಂಬಾ ಕಡಿಮೆ ಪ್ರಮಾಣದಲ್ಲಿ ಬಲಸಬೇಕು. ಕೆಂಪಕ್ಕಿ ಬದಲಿಗೆ ನುಚ್ಚುಗೋಧಿ, ಬಾರ್ಲಿ ಇವುಗಳನ್ನು ಸೇವಿಸಬಹುದು.

6. ಬಾಳೆಹಣ್ಣು
ಬಾಲೆಹಣ್ಣಿನಲ್ಲಿ ಅತ್ಯಧಿಕ ಪೊಟಾಷ್ಯಿಯಂ ಇರುವುದರಿಂದ ಬಾಳೆಹಣ್ಣು ತಿನ್ನುವುದು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ಸಾಧಾರಣ ಗಾತ್ರದ ಬಾಳೆಹಣ್ಣಿನಲ್ಲಿ 422 ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ. ಕಿಡ್ನಿ ಸಮಸ್ಯೆ ಇರುವವರು 2000 ಮಿಗ್ರಾಂಕ್ಕಿಂತ ಅಧಿಕ ಪೊಟಾಷ್ಯಿಯಂ ಸೇವಿಸುವುದು ಆರೋಗ್ಯಕರವಲ್ಲ. ಬಾಳೆಹಣ್ಣು ಜೊತೆಗೆ ಇತರ ಆಹಾರ ದೇಹವನ್ನು ಸೇರಿದಾಗ ಪೊಟಾಷ್ಯಿಯಂ ಹೆಚ್ಚಾಗುವುದು.

7. ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್‌ಗಳು ಹಾಗೂ ಪೋಷಕಾಂಶಗಳು ಅಧಿಕವಿರುತ್ತದೆ, ಅಲ್ಲದೆ ಅವುಗಳಲ್ಲಿ ನೈಸರ್ಗಿಕವಾಗಿಯೇ ರಂಜಕದಂಶ ಹಾಗೂ ಪೊಟಾಷ್ಯಿಯಂ ಅಧಿಕವಿರುತ್ತದೆ. ಉದಾಹರಣೆಗೆ ಒಂದು ಕಪ್ ಹಾಲಿನಲ್ಲಿ 222 ಮಿಗ್ರಾಂ ರಂಜಕ ಹಾಗೂ 349 ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ.
ಮೂಳೆಗಳ ಆರೋಗ್ಯಕ್ಕೆ ಹಾಗೂ ಕ್ಯಾಲ್ಸಿಯಂ ಕೊರತೆ ಉಂಟಾಗದಿರಲು ಹಾಲು ಕುಡಿಯುವಂತೆ ವೈದ್ಯರು ಸೂಚಿಸುತ್ತಾರೆ, ಆದರೆ ಅಧಿಕ ರಂಜಕದಂಶವಿರುವ ಆಹಾರ ಕಿಡ್ನಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವುದು. ಆದ್ದರಿಂದ ಹಾಲಿನ ಉತ್ಪನ್ನಗಳನ್ನು ವೈದ್ಯರ ಸಲಹೆಯಂತೆ ಸೇವಿಸುವುದು ಒಳ್ಳೆಯದು.

8. ಕಿತ್ತಳೆ ಮತ್ತು ಕಿತ್ತಳೆ ಜ್ಯೂಸ್
ಕಿತ್ತಳೆಯಲ್ಲಿ ವಿಟಮಿನ್ ಸಿ ಆಧಿಕವಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಆದರೆ ಕಿಡ್ನಿ ರೋಗಿಗಳು ಇದನ್ನು ಕಿತ್ತಳೆ ತಿನ್ನುವುದು, ಜ್ಯೂಸ್ ಕುಡಿಯುವುದು ಮಾಡಬಾರದು. ಏಕೆಂದರೆ ಇದರಲ್ಲಿ ಪೊಟಾಷ್ಯಿಯಂ ಅಂಶ ಅಧಿಕವಿರುತ್ತದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 333 ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ. ಇದರ ಬದಲಿಗೆ ದ್ರಾಕ್ಷಿ, ಸೇಬು, ಕ್ರೇನ್‌ಬರ್ರಿ ಬಳಸಿ.

9. ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಆಹಾರ ಆರೋಗ್ಯಕರವಲ್ಲ, ಇದರಲ್ಲಿ ಸಂರಕ್ಷಣೆಗಾಗಿ ಅನಾರೋಗ್ಯಕರ ಪ್ರಿಸರ್ವೇಟಿವ್ ಬಳಸಿರುತ್ತಾರೆ. ಇದರಲ್ಲಿ ಉಪ್ಪಿನಂಶ ಅಧಿಕವಿರುತ್ತದೆ. ಇನ್ನು ಹಾಟ್ ಡಾಗ್ಸ್, ಜೆರ್ಕಿ, ಸಾಸ್ ಇವುಗಳು ಕೂಡ ಒಳ್ಳೆಯದಲ್ಲ. ಇದನ್ನು ಸೇವಿಸಿದರೆ ದೇಹದಲ್ಲಿ ಸೋಡಿಯಂ ಅಂಶ ಅಧಿಕವಾಗುವುದು. ಆದ್ದರಿಂದ ಕಿಡ್ನಿ ರೋಗಿಗಳು ಸಂಸ್ಕರಿಸಿದ ಮಾಂಸ ಬದಲಿಗೆ ತಾಜಾ ಮಾಂಸವಷ್ಟೇ ಬಳಸಬೇಕು.

10. ಉಪ್ಪಿನಕಾಯಿ, ಆಲೀವ್
ಉಪ್ಪಿನಕಾಯಿ ಬಾಯಿ ರುಚಿ, ಆದರೆ ಕಿಡ್ನಿ ಆರೊಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಸೋಡಿಯಂ ಅಂಶ ಅಧಿಕವಿರುತ್ತದೆ. 2 ಚಮಚ ಉಪ್ಪಿನಕಾಯಿಯಲ್ಲಿ 2444 ಮಿಗ್ರಾಂನಷ್ಟು ಸೋಡಿಯಂ ಇರುತ್ತದೆ. ಇನ್ನು ಸಂಸ್ಕರಿಸಿದ ಆಲೀವ್ ಕಾಯಿಗಳನ್ನು ಕಿಡ್ನಿ ಸಮಸ್ಯೆ ಇರುವವರು ಸೇವಿಸಬಾರದು.

11. ಏಪ್ರಿಕಾಟ್
ಏಪ್ರಿಕಾಟ್ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ ಹಾಗೂ ನಾರಿನಂಶ ಅಧಿಕವಿದೆ, ಇವುಗಳ ಜೊತೆಗೆ ಪೊಟಾಷ್ಯಿಯಂ ಅಂಶ ಕೂಡ ಅಧಿಕವಿದೆ. ಒಂದು ಕಪ್ ಏಪ್ರಿಕಾಟ್‌ನಲ್ಲಿ 1500 ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ. ಏಪ್ರಿಕಾಟ್ ಅದರಲ್ಲೂ ಒಣ ಏಪ್ರಿಕಾಟ್ ಬಳಸಬೇಡಿ.

12. ಆಲೂಗಡ್ಡೆ ಮತ್ತು ಸಿಹಿಗೆಣಸು
ಆಲೂಗಡ್ಡೆ ಹಾಗೂ ಸಿಹಿಗೆಣಸು ಶಕ್ತಿವರ್ಧಕ ಆಹಾರವಾಗಿದ್ದರೂ ಕಿಡ್ನಿ ಸಮಸ್ಯೆ ಇರುವವರು ಇವುಗಳನ್ನು ತಿನ್ನಬಾರದು. ಒಂದು ಬೇಯಿಸಿದ ಆಲೂಗಡ್ಡೆಯಲ್ಲಿ 610 ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ. ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ ಬೇಯಿಸಿದರೆ ಅದರಲ್ಲಿರುವ ಪೊಟಾಷ್ಯಿಯಂ ಅಂಶ ಶೇ.50ರಷ್ಟು ಕಡಿಮೆಯಾಗುತ್ತದೆ. ಆಹಾರದಲ್ಲಿ ಇದನ್ನು ಸೇವಿಸುವುದಾದರೆ ಇದರ ಪ್ರಮಾಣದ ಬಗ್ಗೆ ಗಮನ ನೀಡಿ.

13. ಟೊಮೆಟೊ
ಕಿಡ್ನಿ ಸಮಸ್ಯೆ ಇರುವವರು , ಕಿಡ್ನಿ ಆರೋಗ್ಯ ಕಾಪಾಡಲು ಟೊಮೆಟೊ ಕೂಡ ಬಳಸುವಂತಿಲ್ಲ. ಟೊಮೆಟೊದಲ್ಲಿ ರೋಗ ನಿರೋಧಕ ಶಕ್ತಿಯಿದೆ ಹಾಗೂ ಇದನ್ನು ಬಳಸಿ ಅನೇಕ ಆಹಾರ ತಯಾರಿಸಲಾಗುವುದು. ಇದರಲ್ಲಿ ಪೊಟಾಷ್ಯಿಯಂ ಅಧಿಕವಿರುವ ಕಾರಣ ಕಿಡ್ನಿ ರೋಗಿಗಳು ಬಳಸುವಂತಿಲ್ಲ.

14. ರೆಡಿಮೇಡ್ ಆಹಾರ
ರೆಡಿ ಟು ಕುಕ್ ಫುಡ್ಸ್, ರೆಡಿ ಮೇಡ್ ಆಹಾರಗಳು ಕಿಡ್ನಿ ಸಮಸ್ಯೆ ಇರುವವರಿಗೆ ಅಂತಲ್ಲ ಯಾರಿಗೂ ಒಳ್ಳೆಯದಲ್ಲ. ಪಿಜ್ಜಾ, ಮೈಕ್ರೋವೇವ್‌ನಲ್ಲಿ ತಯಾರಿಸಿದ ಆಹಾರ, ಇನ್ಸ್ಟಾಂಟ್ ನೂಡಲ್ಸ್ ಇವುಗಳಲ್ಲಿ ಸೋಡಿಯಂ ಅಧಿಕವಿರುತ್ತದೆ. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಇವುಗಳನ್ನು ಮುಟ್ಟಲೇಬಾರದು.

15. ಪಾಲಾಕ್, ಬೀಟ್‌ರೂಟ್
ಇವುಗಳು ಆರೋಗ್ಯಕರ ಆಹಾರವಾಗಿದ್ದರೂ ಕಿಡ್ನಿ ಸಮಸ್ಯೆ ಇರುವವರು ತಿನ್ನುವಂತಿಲ್ಲ. ಸೊಪ್ಪನ್ನು ಬೇಯಿಸಿದಾಗ ಅದರ ಪ್ರಮಾಣದಲ್ಲಿ ಕಡಿಮೆಯಾದರೂ ಅದರಲ್ಲಿರುವ ಪೋಷಕಾಂಶ ಹಾಗೂ ಖನಿಜಾಂಶಗಳು ಕಡಿಮೆಯಾಗುವುದಿಲ್ಲ. ಆದ್ದರಿಂದ ಪಾಲಾಕ್ ಬೀಟ್‌ರೂಟ್ ದೂರವಿಡಿ.

16. ಖರ್ಜೂರ, ಒಣದ್ರಾಕ್ಷಿ, ಒಣ ಪ್ಲಮ್
ಇವುಗಳನ್ನು ಒಣಗಿಸದಾಗ ಪೊಟಾಷ್ಯಿಯಂ ಅಂಶ ಕೂಡ ಹೆಚ್ಚಾಗುವುದು. ಒಂದು ಕಪ್ ಪ್ಲಮ್ ಹಣ್ಣಿನಲ್ಲಿ 40-41 ಮಿಗ್ರಾಂ ಪೊಟಾಷ್ಯಿಯಂ ಇದ್ದರೆ ಅದೇ ಒಣಗಿಸಿದ ಒಂದು ಕಪ್ ಪ್ಲಮ್‌ನಲ್ಲಿ 1274ಮಿಗ್ರಾಂ ಪೊಟಾಷ್ಯಿಯಂ ಇರುತ್ತದೆ.

17. ಚಿಪ್ಸ್, ಕುರುಕುಲು ತಿಂಡಿ
ಇವುಗಳಲ್ಲಿ ಸೋಡಿಯಂ ಅಂಶ ಅಧಿಕವಿರುತ್ತೆ ಇನ್ನು ಯಾವುದೇ ನ್ಯೂಟ್ರಿಷಿಯನ್ ಅಂಶ ಕೂಡ ಇರುವುದಿಲ್ಲ. ಆದ್ದರಿಂದ ಇವುಗಳನ್ನು ತಿನ್ನಬಾರದು. ಇನ್ನು ಆಲೂಗಡ್ಡೆ ಚಿಪ್ಸ್‌ನಲ್ಲಿ ಪೊಟಾಷ್ಯಿಯಂ ಕೂಡ ಅಧಿಕವಿರುತ್ತದೆ, ಇವುಗಳು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications











