Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ ಹವ್ಯಾಸಗಳು ನಿಮ್ಮದಾದರೆ ನೀವು ಜೀವನಪೂರ್ತಿ ಸಂತೋಷವಾಗಿರಬಹುದು
ಸಂತೋಷ ಮತ್ತು ದುಃಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ ಎಲ್ಲರಿಗೂ ಬೇಕಿರುವುದು, ಎಲ್ಲರೂ ಬಯಸುವುದು ಸಂತೋಷವನ್ನು ಮಾತ್ರ. ಸಂತೋಷ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯಾನ ನೀಡುವುದು ಕಷ್ಟ. ಪ್ರತಿಯೊಬ್ಬರಿಗೂ ಇದರ ವ್ಯಾಖ್ಯಾನ ಬೇರೆಯೇ ಇರುತ್ತದೆ. ಆದರೆ ಒಂದಂತೂ ಸತ್ಯ, ಅಂತಿಮವಾಗಿ ನಮ್ಮ ಮನಸ್ಸಿನ ಶಾಂತಿಯೇ ಸಂತೋಷ ಎನ್ನಬಹುದು.

ಈ ಸಂತೋಷ ಎಂಬುದು ಯಾರ ಜೀವನದಲ್ಲಿ ಹೆಚ್ಚಿರುತ್ತದೆಯೋ ಅವರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ, ಹೆಚ್ಚು ಕಾಲ ಬದುಕುತ್ತಾರೆ ಮತ್ತು ನೆಮ್ಮದಿಯ ಜೀವನ ನಡೆಸುತ್ತಾರೆ. ಸಂತೋಷವನ್ನು ಪಡೆಯುವುದು ಹೇಗೆ, ಸಂತೋಷದಿಂದ ಬದುಕುವುದು ಹೇಗೆ?, ಬದುಕಿನಲ್ಲಿ ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳುವುದು ಹೇಗೆ ಇಲ್ಲಿದೆ ಕೆಲವು ಸಲಹೆಗಳು:

ವ್ಯಾಯಾಮ ತಪ್ಪಿಸಬೇಡಿ
ವ್ಯಾಯಾಮವು ನಿಮ್ಮ ದೇಹಕ್ಕೆ ಮಾತ್ರವಲ್ಲ. ನಿತ್ಯದ ವ್ಯಾಯಾಮವು ಸಂತೋಷವನ್ನು ಹೆಚ್ಚಿಸುವ ಜೊತೆಗೇ ಒತ್ತಡ, ಆತಂಕದ ಭಾವನೆಗಳು ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮವನ್ನು ನಿಮಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನು, ಅದು ತಪ್ಪಾಗಿದ್ದರೂ ಸರಿ, ನಿತ್ಯವೂ ಒಂದೇ ಸಮಯದಲ್ಲಿ ನಿರ್ವಹಿಸಿ. ತಜ್ಞರ ಪ್ರಕಾರ ಮುಂಜಾನೆಯ ಹೊತ್ತಿನ ವ್ಯಾಯಾಮ ಅತ್ಯುತ್ತಮ.

ಸದಾ ಮುಗುಳುನಗೆ ನಿಮ್ಮದಾಗಿರಲಿ
ನಾವು ಸಂತೋಷವಾಗಿರುವುದರಿಂದ ನಾವು ನಗುತ್ತೇವೆ ಮತ್ತು ನಗುವುದರಿಂದ ಮೆದುಳು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ, ಅದು ನಮಗೆ ಸಂತೋಷವನ್ನು ನೀಡುತ್ತದೆ. ಇದರರ್ಥ ನೀವು ಯಾವಾಗಲೂ ನಿಮ್ಮ ಮುಖವನ್ನು ಗಂಟುಹಾಕಿಕೊಂಡಿದ್ದರೆ ಮತ್ತು ನಗಲೇಬೇಕಾದಾಗ ಕೃತಕ ನಗು ನಗಬೇಕೆಂದೇನಲ್ಲ. ಆದರೆ ಮುಂದಿನ ಬಾರಿ ನಿಮಗೆ ಸಂತೋಷವಾಗಿ ಇರದೇ ಇರುವ ಯಾವುದೇ ಕಾರಣವಿದ್ದರೂ ಸರಿ, ಪ್ರಯತ್ನಪೂರ್ವಕವಾಗಿ ನಿಮ್ಮ ಮೊಗದಲ್ಲಿ ನಗುವನ್ನು ಬರಿಸಿ.

ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ
ಆಹಾರದ ಆಯ್ಕೆಗಳೂ ನಿಮ್ಮ ಒಟ್ಟಾರೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಕೆಲವು ಆಹಾರಗಳು ನಿಮ್ಮ ಮನಸ್ಸಿನ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತವೆ. ಹೆಚ್ಚು ಸಂಸ್ಕರಿಸಿದ ಅಥವಾ ಆಳವಾಗಿ ಹುರಿದ ಆಹಾರಗಳು ನಿಮ್ಮ ಮನಸ್ಸನ್ನು ಕುಗ್ಗಿಸುವ ಗುಣ ಪಡೆದಿವೆ. ಹಾಗಾಗಿ ಆಹಾರಗಳನ್ನು ಸೇವಿಸುವ ಮನಸ್ಸಾದಾಗಲೆಲ್ಲಾ ಉತ್ತಮ ಆಹಾರ ಸೇವಿಸಿ. ಕೆಲವೇ ದಿನಗಳಲ್ಲಿ ನಿಮಗೆ ಹಿಂದಿನ ಆಹಾರಪದ್ದತಿಯೇ ಮರೆತು ಹೋಗುವಷ್ಟು ಹೊಸ ಆರೋಗ್ಯಕರ ಆಹಾರಗಳು ಲಭಿಸುತ್ತವೆ.

ನಿದ್ರೆ ಮಾಡಿ
ಉತ್ತಮ ಆರೋಗ್ಯ, ಮೆದುಳಿನ ಕಾರ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಾಕಷ್ಟು ನಿದ್ದೆಯ ಅಗತ್ಯವಿದೆ. ಹೆಚ್ಚಿನ ವಯಸ್ಕರಿಗೆ ಸುಮಾರು 7 ಅಥವಾ 8 ಗಂಟೆಗಳ ನಿದ್ದೆಯ ಅವಶ್ಯಕತೆ ಇದೆ. ಹಗಲಿನಲ್ಲಿಯೂ ನಿಮಗೆ ಕಿರು ನಿದ್ದೆ ಎದುರಾಗುತ್ತಿದ್ದರೆ ನಿಮ್ಮ ದೇಹ ನಿಮಗೆ ಹೆಚ್ಚಿನ ನಿದ್ದೆಯ ಅವಶ್ಯಕತೆಯ ಬಗ್ಗೆ ಸೂಚನೆ ನೀಡುತ್ತಿದ್ದಿರಬಹುದು. ಹಾಗಾಗಿ ನಿಮ್ಮ ನಿದ್ದೆ ಕಸಿಯುತ್ತಿರುವ ನಿಮ್ಮ ನಿತ್ಯದ ಅಭ್ಯಾಸಗಳ ಬಗ್ಗೆ ಗಮನ ಹರಿಸಿ.

ಕೃತಜ್ಞರಾಗಿರಿ
ಕೃತಜ್ಞತೆಯನ್ನು ಅಭ್ಯಾಸ ಮಾಡುವುದರಿಂದ ಭರವಸೆ ಮತ್ತು ಸಂತೋಷದ ಭಾವನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನೀವು ಕೃತಜ್ಞರಾಗಿರುವ ಒಂದು ವಿಷಯವನ್ನು ಅಂಗೀಕರಿಸುವ ಮೂಲಕ ಪ್ರತಿದಿನವನ್ನು ಪ್ರಾರಂಭಿಸಿ. ಬೆಳಗ್ಗಿನ ಹೊತ್ತಿನ ಪ್ರಥಮ ಕಿರಣಗಳ ಬೆಚ್ಚನೆಯ ಅನುಭವವೂ ನಿಮಗೆ ಅತೀವವಾದ ಸಂತೋಷವನ್ನು ನೀಡಬಹುದು. ಇದನ್ನೆಲ್ಲಾ ನೀಡಿದ ಆ ದೇವರಿಗೆ ನಾವು ಕೃತಜ್ಞರಾಗಿರುವ ಮೂಲಕ ಸಂತೋಷ ಅನುಭವಿಸಬಹುದು.

ಆಳವಾಗಿ ಉಸಿರಾಡಿ
ನಿಮ್ಮ ಮನಸ್ಸನ್ನು ಶಾಂತಗೊಳಿಸಲು ದೀರ್ಘವಾದ, ಆಳವಾದ ಉಸಿರನ್ನು ತೆಗೆದುಕೊಳ್ಳಿ. ಯಾವಾಗ ಮೆದುಳಿಗೆ ಹೆಚ್ಚಿನ ರಕ್ತ ಮತ್ತು ಆಮ್ಲಜನಕ ದೊರಕುವುದೋ ನಿಮ್ಮ ಯೋಚನಾ ಲಹರಿಯೂ ತರ್ಕಬದ್ದವಾಗಿ ನಡೆಯುತ್ತದೆ. ಈ ಪ್ರವೃತ್ತಿಯನ್ನು ಅಭ್ಯಾಸವಾಗಿ ರೂಢಿಸಿಕೊಂಡರೆ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿಯೂ ಸಂತೋಷದಿಂದಿರಲು ನಿಮಗೆ ಸಾಧ್ಯವಾಗುತ್ತದೆ.

ಧ್ಯಾನ ಮಾಡಿ
ಅನ್ವೇಷಿಸಲು ಧ್ಯಾನದ ಹಲವು ವಿಧಾನಗಳಿವೆ. 5 ನಿಮಿಷಗಳ ಕಾಲ ನಿಮ್ಮ ಸ್ವಂತ ಆಲೋಚನೆಗಳೊಂದಿಗೆ ಸದ್ದಿಲ್ಲದೆ ಕುಳಿತುಕೊಳ್ಳುವಷ್ಟು ಸಮಯ ಮಾಡಿಕೊಳ್ಳಿ. ಮೊದಲೇ ಹೇಳಿದ ಆಳವಾದ ಉಸಿರಾಟದ ವ್ಯಾಯಾಮವೂ ಧ್ಯಾನದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ.



Click it and Unblock the Notifications