Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಾಯಿ ಹುಣ್ಣು ಸಮಸ್ಯೆಗೆ 10 ಅತ್ಯುತ್ತಮ ಮನೆಮದ್ದು
ದೇಹದ ಉಷ್ಣತೆ ಹೆಚ್ಚಾದಾಗ ಬಾಯಿ ಹುಣ್ಣು ಸಮಸ್ಯೆ ಕಂಡು ಬರುತ್ತದೆ, ಇದನ್ನು ಮೌತ್ ಅಲ್ಸರ್ ಎಂದು ಕೂಡ ಕರೆಯುತ್ತಾರೆ. ಇದು ನಾಲಗೆ ಹಾಗೂ ಬಾಯಿ ಒಳಗಡೆ ಕಂಡು ಬರುವುದು. ಚಿಕ್ಕ-ಚಿಕ್ಕದಾಗಿ ಏಳುವ ಈ ಹುಣ್ಣುಗಳು ತುಂಬಾ ನೋವು ಉಂಟು ಮಾಡುವುದರ ಜೊತೆಗೆ ತಿನ್ನಲು ಕೂಡ ಕಷ್ಟವಾಗುವುದು. ಕೆಲವರಿಗೆ ನೀರು ಕುಡಿಯಲು ಕೂಡ ಕಷ್ಟವಾಗುವುದು.

ಬ್ಯಾಕ್ಟಿರಿಯಾ, ವೈರಾಣು, ಶಿಲೀಂಧ್ರ ಸೋಂಕಯ, ಕೆಲವೊಂದು ಟೂತ್‌ಪೇಸ್ಟ್, ಸೋಡಿಯಂ ಲೌರಿಯಲ್ ಸಲ್ಪೇಟ್ ಇರುವ ಮೌತ್ ವಾಶ್, ವಿಟಮಿನ್ ಬಿ12 ಕೊರತೆ, ಸತು, ಕಬ್ಬಿಣ ಹಾಗೂ ವಿಟಮಿನ್‌ಗಳ ಕೊರತೆಯಿಂದ ಕೂಡ ಬಾಯಿ ಹುಣ್ಣು ಉಂಟಾಗುವುದು.
ಬಾಯಿ ಹುಣ್ಣಿನ ಸಮಸ್ಯೆ ಎಲ್ಲಾ ಸಮಯದಲ್ಲಿ ಕಂಡು ಬರುವುದಾದರೂ ಬೇಸಿಗೆಯಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಕಂಡು ಬರುತ್ತದೆ. ಬಾಯಿ ಹುಣ್ಣು ಬಂದಾಗ ಕೆಲವೊಂದು ಮನೆಮದ್ದು ಮಾಡಿದರೆ ಹೋಗಲಾಡಿಸಬಹುದು.
ಇಲ್ಲಿ ನಾವು ಬಾಯಿ ಹುಣ್ಣು ಉಂಟಾದಾಗ ನೋವು ಕಡಿಮೆ ಮಾಡಿ ಹುಣ್ಣು ಒಣಗುವಂತೆ ಮಾಡುವ ಕೆಲವೊಂದು ಮನೆಮದ್ದು ನೀಡಿದ್ದೇವೆ ನೋಡಿ:

1. ಐಸ್
ಹುಣ್ಣು ಇರುವ ಕಡೆ ಐಸ್ ಕ್ಯೂಬ್ಸ್ ಇಡಿ, ಇಲ್ಲ ಐಸ್‌ಕ್ಯಾಂಡಿ ಚೀಪುವುದು ಕೂಡ ಒಳ್ಳೆಯದು. ಐಸ್ ಇಟ್ಟಾಗ ಆ ಭಾಗದ ನೋವು ತಕ್ಷಭ ಕಡಿಮೆಯಾಗುವುದು, ಆದರೆ ಇದು ತಾತ್ಕಲಿಕವಾಗಿ ನೋವು ಕಡಿಮೆ ಮಾಡುವುದು. ಆಗಾಗ ಐಸ್ ಇಡುತ್ತಾ ಬಂದರೆ ನೋವು ನಿಧಾನಕ್ಕೆ ಮಾಯವಾಗುವುದು.

2. ಆಲುಮ್ ಪುಡಿ
ಆಲುಮ್ ಪುಡಿಯನ್ನು ಪೊಟಾಷ್ಯಿಯಂ ಸಲ್ಪೇಟ್‌ನಿಂದ ಮಾಡಲಾಗುತ್ತದೆ. ಇದನ್ನು ಬಾಯಿ ಹುಣ್ಣು ಚಿಕಿತ್ಸೆಯಲ್ಲಿ ಬಳಸಲಾಗುವುದು. ಇದನ್ನು ಬಳಸುವ ವಿಧಾನ ಇಲ್ಲಿ ನೀಡಲಾಗಿದೆ ನೋಡಿ:
- ಆಲೂಮ್ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಕಲೆಸಿ ಪೇಸ್ಟ್ ರೀತಿ ಮಾಡಿ.
- ಈಗ ಆ ಪೇಸ್ಟ್ ಅನ್ನು ಹುಣ್ಣು ಇರುವ ಕಡೆ ಇಡಿ.
- ಸ್ವಲ್ಪ ಹೊತ್ತು ಇಟ್ಟು ನಂತರ ಉಪ್ಪು ನೀರಿನಿಂದ ತೊಳೆಯಿರಿ, ಒಂದೆರಡು ದಿನದಲ್ಲಿ ನೋವು ಇಲ್ಲವಾಗುವುದು.

3. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಬಾಯಿ ಹುಣ್ಣು ಉಂಟಾದಾಗ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಹುಣ್ಣು ಬೇಗನೆ ಒಣಗುವುದು. ಇನ್ನು ಹುಣ್ಣು ಇರುವ ಕಡೆ ಸ್ವಲ್ಪ ಕಲ್ಲುಪ್ಪು ಇಡಿ. ಇಟ್ಟಾಗ ಸ್ವಲ್ಪ ಉರಿ ಅನಿಸಿದರೂ ಹುಣ್ಣು ಬೇಗನೆ ಒಣಗುವುದು. ಉಪ್ಪನ್ನು ಹುಣ್ಣು ಒಣಗುವವರೆಗೆ ಆಗಾಗ ಇಡಿ.

4. ಜೇನು
ಇನ್ನು ಬಾಯಿ ಹುಣ್ಣು ಹೋಗಲಾಡಿಸಲು ಜೇನನ್ನು ಕೂಡ ಮನೆಮದ್ದಾಗಿ ಬಳಸಬಹುದು. ಇದು ಹುಣ್ಣಿನ ಗಾತ್ರ ಕಡಿಮೆ ಮಾಡುತ್ತದೆ, ನೋವು ಕಡಿಮೆ ಮಾಡುತ್ತದೆ ಎಂದು 2014ರಲ್ಲಿ ನಡೆಸಿದ ಅಧ್ಯಯನ ಹೇಳಿದೆ.
ಜೇನನ್ನು ಹುಣ್ಣು ಇರುವ ಕಡೆ ಹಚ್ಚುತ್ತಾ ಇರಿ, ಒಂದೆರಡು ದಿನದಲ್ಲಿ ನೋವು ಕಡಿಮೆಯಾಗುವುದು.

5. ಅಡುಗೆ ಸೋಡಾ
ಬಾಯಿ ಹುಣ್ಣಿನ ಸಮಸ್ಯೆಯಿಂದ ಬೇಗನೆ ಗುಣಮುಖರಾಗಲು ಅಡುಗೆ ಸೋಡಾ ಕೂಡ ಬಳಸಬಹುದು. ಇದು ಬಾಯಿ ಹುಣ್ಣಿಗೆ ಕಾರಣವಾದ ಬ್ಯಾಕ್ಟಿರಿಯಾ ಕೊಲ್ಲುತ್ತದೆ. ಅರ್ಧ ಕಪ್ ಬಿಸಿ ನೀರಿನಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ ಬಾಯಿ ತೊಳೆಯಿರಿ.

6. ಲೋಳೆಸರ
ಬಾಯಿಹುಣ್ಣು ಗಾತ್ರ ಹೆಚ್ಚಾಗದಿರಲು ಲೋಳೆಸರ ಬಳಸುವುದು ಒಳ್ಳೆಯದು. ಅಲ್ಲದೆ ಉರಿ, ನೋವು ಕಡಿಮೆ ಮಾಡುತ್ತದೆ. ತಾಜಾ ಲೋಳೆಸರ ತೆಗೆದು ಹುಣ್ಣು ಇರುವ ಕಡೆ ಹಚ್ಚುತ್ತಾ ಇರಿ. ಈ ರೀತಿ ಮಾಡುವುದರಿಂದ ಹುಣ್ಣು ಬೇಗನೆ ಒಣಗುವುದು.

7. ತೆಂಗಿನೆಣ್ಣೆ
ಇದರಲ್ಲಿರುವ ಲೌರಿಕ್ ಆಮ್ಲ ಬಾಯಿ ಸ್ವಾಸ್ಥ್ಯ ಕಾಪಾಡಲು ಸಹಕಾರಿ. ತೆಂಗಿನೆಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡಿ. ಇನ್ನು ಸ್ವಲ್ಪ ಹತ್ತಿ ತೆಗೆದು ಉಂಡೆ ಮಾಡಿ ಅದನ್ನು ತೆಂಗಿನೆಣ್ಣೆಯಲ್ಲಿ ಅದ್ದಿ, ಅದನ್ನು ಹುಣ್ಣು ಇರುವ ಕಡೆ ಇಡಿ.

8. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟಿರಿಯಾ ನಾಶ ಮಾಡುವ ಗುಣ ಬಾಯಿ ಹುಣ್ಣಿಗೆ ಕಾರಣವಾದ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ. ಆದರೆ ಈ ವಿಧಾನದಲ್ಲಿ ತುಂಬಾ ಉರಿ ಅನಿಸಿದರೂ ಬೇಗನೆ ಹುಣ್ಣು ಒಣಗುವುದು. ಬೆಳ್ಳುಳ್ಳಿ ಜಜ್ಜಿ, ಹುಣ್ಣು ಇರುವ ಕಡೆ ಹಚ್ಚಿ. ಈ ವಿಧಾನ ನೋವು ಸಹಿಸುವ ಶಕ್ತಿ ಇರುವವರು ಮಾತ್ರ ಮಾಡಿ. ಬೇಗನೆ ಬಾಯಿಹುಣ್ಣು ಸಮಸ್ಯೆಯಿಂದ ಪಾರಾಗಬಹುದು.

9.ಚಮೊಯಿಲ್ ಟೀ'
ಚಮೊಯಿಲ್ ಟೀ ಬ್ಯಾಗ್ ಅನ್ನು ಒಂದು ಕಪ್ ನೀರಿನಲ್ಲಿ ಅದ್ದಿ, ನಂತರ ಆ ಬ್ಯಾಗ್ಅನ್ನು ಹುಣ್ಣು ಇರುವ ಕಡೆ ಇಡಿ. ಅಲ್ಲದೆ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಒಳ್ಳೆಯದು.

10. ವಿಟಮಿನ್ ಬಿ 12
ಇನ್ನು ಈ ಬಾಯಿ ಹುಣ್ಣು ಸಮಸ್ಯೆ ವಿಟಮಿನ್ ಬಿ12 ಕೊರತೆಯಿಂದ ಉಂಟಾಗುತ್ತದೆ. ಕೋಳಿ, ಮೊಟ್ಟೆ, ಮೀನು, ಮಾಂಸ, ಹಾಲಿನ ಉತ್ಪನ್ನಗಳಲ್ಲಿ ಬಿ12 ಇರುತ್ತದೆ. ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಆಗಾಗ ಬಾಯಿ ಹುಣ್ಣು ಸಮಸ್ಯೆ ಬಾರದಂತೆ ತಡೆಗಟ್ಟಬಹುದು.



Click it and Unblock the Notifications
