For Quick Alerts
ALLOW NOTIFICATIONS  
For Daily Alerts

ಮಕ್ಕಳ ಏಕಾಗ್ರತೆ ಹೆಚ್ಚಲು, ಅಧಿಕ ಅಂಕ ಗಳಿಸಲು ಈ ಅಂಶಗಳ ಕಡೆ ಗಮನ ನೀಡುವುದು ಅವಶ್ಯಕ

|

ಎಕ್ಸಾಂ ಹತ್ತಿರ ಬರುತ್ತಿದೆ ಒಂದು ಕಡೆ ಪೋಷಕರಿಗೆ ಆತಂಕ, ಮಕ್ಕಳಿಗೆ ಮಾರ್ಕ್ಸ್ ಒತ್ತಡ. ಪರೀಕ್ಷೆ ಮುಗಿಯುವರೆಗೆ ಮಕ್ಕಳು ಓದಿನ ಕಡೆ ಗಮನ ನೀಡಿದರೆ ಮಾತ್ರ ಒಂದು ವರ್ಷ ಕಷ್ಟಪಟ್ಟಿದ್ದಕ್ಕೆ ಶ್ರಮ ಸಿಗುವುದು. ಅದರಲ್ಲೂ ಮಕ್ಕಳು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಲ್ಲಿ ಇದ್ದರೆ ಅಂತೂ ಫೆಬ್ರವರಿ-ಮಾರ್ಚ್‌ ತಿಂಗಳು ತುಂಬಾನೇ ಮುಖ್ಯವಾದ ತಿಂಗಳಾಗಿರುತ್ತದೆ.

how to increase concentration

ನೀವು ಪರೀಕ್ಷೆ ತುಂಬಾ ಒತ್ತಡದಿಂದ ಸಿದ್ಧತೆ ಮಾಡಿದರೆ ಬಹುಶಃ ಬಯಸಿದ ಫಲಿತಾಂಶ ಸಿಗಲು ಸಾಧ್ಯವಿಲ್ಲ. ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ್‌ ಪಡೆಯಬೇಕೆಂದರೆ ನಿಮ್ಮ ಏಕಾಗ್ರತೆ ಹೆಚ್ಚಾಗಬೇಕು, ನಿಮ್ಮ ಏಕಾಗ್ರತೆ ಹೆಚ್ಚಾಗಲು ಈ ಟಿಪ್ಸ್ ಸಹಕಾರಿಯಾಗುವುದು ನೋಡಿ:

 ಕಷ್ಟವಿರುವ ಸಬ್ಜೆಕ್ಟ್ ಹಾಗೂ ಸುಲಭವಿರುವ ಸಬ್ಜೆಕ್ಟ್ ಯಾವುದೆಂದು ವಿಭಾಗ ಮಾಡಿ

ಕಷ್ಟವಿರುವ ಸಬ್ಜೆಕ್ಟ್ ಹಾಗೂ ಸುಲಭವಿರುವ ಸಬ್ಜೆಕ್ಟ್ ಯಾವುದೆಂದು ವಿಭಾಗ ಮಾಡಿ

ನಿಮ್ಮ ಸಮಯವನ್ನು ಕಷ್ಟವಿರುವ ವಿಷಯಕ್ಕೆ ಹೆಚ್ಚು ವಿನಿಯೋಗಿಸಿ, ಆದ್ದರಿಂದ ಸುಲಭದ ವಿಷಯ ಯಾವುದು, ಕಷ್ಟದ ವಿಷಯ ಯಾವುದು ಎಂಬುವುದಾಗಿ ವಿಭಾಗ ಮಾಡಿ. ಹಾಗಂತ ಸುಲಭದ ವಿಷಯ ಅಂತ ನಿರ್ಲಕ್ಷ್ಯ ಮಾಡಬಾರದು, ಅದಕ್ಕೆ ಒಂದಿಷ್ಟು ಸಯ ಮೀಸಲಿಡಬೇಕು. ಒಂದು ಟೈಂ ಟೇಬಲ್‌ ಸೆಟ್‌ ಮಾಡಿ ಅದರಂತೆ ಓದಿ.

ಪೋಷಕಾಂಶ

ಪೋಷಕಾಂಶ

ಮಕ್ಕಳಿಗೆ ಜಂಕ್ ಫುಡ್ಸ್‌ ಕೊಡಬೇಡಿ, ಈ ಸಮಯದಲ್ಲಿ ಪೋಷಕಾಂಶವಿರುವ ಆಹಾರ ನೀಡಿ. ಅವರಿಗೆ ತಿನ್ನಲು ನಟ್ಸ್ ನೀಡಿ, ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಬುದ್ಧಿಶಕ್ತಿ ಹೆಚ್ಚಿಸಲು ಸಹಕಾರಿ. ಪೋಷಕಾಂಶವಿರುವ ಆಹಾರ ಸೇವಿಸಿದಾಗ ಬೇಗ ಸುಸ್ತಾಗಲ್ಲ, ಹೆಚ್ಚು ಹೊತ್ತು ಚೈತ್ನಯದಿಂದ ಇರುವಿರಿ, ಇದರಿಂದ ಓದಿದ್ದು ತಲೆಯಲ್ಲಿ ಉಳಿಯುವುದು. ತುಂಬಾ ನಿದ್ದೆ ಬಂದಾಗ ಕಷ್ಟಪಟ್ಟು ಓದಿದರೂ ನೆನಪಿನಲ್ಲಿ ಉಳಿಯುವುದು ಕಷ್ಟ. ಅಲ್ಲದೆ ಪರೀಕ್ಷೆಯನ್ನು ಚೆನ್ನಾಗಿ ಮಾಡಿ ಮುಗಿಸಲು ಆರೋಗ್ಯ ಮುಕ್ಯ, ಪೋಷಕಾಂಶವಿರುವ ಆಹಾರಗಳು ಆರೋಗ್ಯವನ್ನು ವೃದ್ಧಿಸುತ್ತದೆ.

ನಿಮ್ಮ ಮಕ್ಕಳು ತುಂಬಾ ನೀರು ಕುಡಿಯುವಂತೆ ನೋಡಿಕೊಳ್ಳಿ, ಹಣ್ಣಿನ ಜ್ಯೂಸ್‌ ಮಾಡಿ ಕೊಡಿ. ಮಕ್ಕಳಿಗೆ ಎನರ್ಜಿ ಡ್ರಿಂಕ್‌ , ಸಾಫ್ಟ್‌ ಡ್ರಿಂಕ್ಸ್ ಕೊಡಬೇಡಿ. ಟೀ, ಕಾಫಿ ಮಿತಿಯಲ್ಲಿ ನೀಡಿ.

ಇನ್ನು ಮಕ್ಕಳು ಪರೀಕ್ಷೆ ಬರೆಯಲು ಹೋಗುವಾಗ ಸೊಪ್ಪು-ತರಕಾರಿಯ ಆಹಾರ ನೀಡುವುದು ಒಳ್ಳೆಯದು.

ಗ್ಯಾಡ್ಜೆಟ್‌

ಗ್ಯಾಡ್ಜೆಟ್‌

ಮಕ್ಕಳು ಓದುವಾಗ ಅವರು ಗ್ಯಾಡ್ಜೆಟ್‌ ಮುಟ್ಟದಂತೆ ನೋಡಿಕೊಳ್ಳಿ. ಈಗ ಅವರಿಗೆ ನೋಟ್ಸ್, ಪಠ್ಯಕ್ಕೆ ಸಂಬಂಧಿಸಿದ ವಿಷಯಗಳು ಮೊಬೈಲ್‌ಗೆ ಕಳುಹಿಸುವ ಪದ್ಧತಿ ಶುರುವಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್‌ ಸಿಕ್ಕರೆ ಅವರು ಗೇಮ್‌, ಸೋಷಿಯಲ್‌ ಮೀಡಿಯಾ ಅಂತ ಓದುವುದು ಮರೆತು ಬಿಡುತ್ತಾರೆ. ಗ್ಯಾಡ್ಜೆಟ್‌ ಸಂಪೂರ್ಣವಾಗಿ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಆದರೆ ನಿಮ್ಮೆ ಎದುರಿಗೆ ಗ್ಯಾಡ್ಜೆಟ್‌ ಬಳಸುವಂತೆ ಹೇಳಿ. ಹೀಗೆ ಮಾಡಿದಾಗ ಮಕ್ಕಳಿಗೆ ಕಿರಿಕಿರಿ ಅನಿಸಬಹುದು. ಆದರೂ ತೊಂದರೆಯಿಲ್ಲ ಇನ್ನೆರಡು ತಿಂಗಳು ಇದೇ ರೀತಿ ಸ್ಟ್ರಿಕ್ಟ್ ಆಗಿರುತ್ತೀನಿ ಅಂತ ಹೇಳಿ.

ಸ್ವಲ್ಪ ಹೊತ್ತು ಮನ ರಂಜನೆಯೂ ಇರಲಿ

ಸ್ವಲ್ಪ ಹೊತ್ತು ಮನ ರಂಜನೆಯೂ ಇರಲಿ

ಕೆಲವು ಪೋಷಕರು ಓದು ಓದು ಎಂದು ಮಕ್ಕಳ ಮೇಲೆ ತುಂಬಾ ಒತ್ತಡ ಹಾಕುತ್ತಾರೆ, ಹಾಗೆ ಮಾಡಬೇಡಿ, ಅವರು ಸ್ವಲ್ಪ ಆಡಿಕೊಂಡು ಬರುತ್ತೇನೆ ಎಂದಾಗ ಅನುಮತಿ ನೀಡಿ. ಮಕ್ಕಳಿಗೆ ಆಡಿದಾಗ ಮನಸ್ಸಿಗೆ ರಿಲ್ಯಾಕ್ಸ್ ಅನಿಸುವುದು. ಟಿವಿ ನೋಡುತ್ತೇನೆ, ಸ್ವಲ್ಪ ಹೊತ್ತು ಮೊಬೈಲ್ ನೋಡುತ್ತೇನೆ ಎಂದು ಕೇಳಿದರೆ ಅನುಮತಿ ನೀಡಿ. ಸ್ವಲ್ಪ ರಿಲ್ಯಾಕ್ಸ್ ಟೈಮ್ ಕೊಡುವುದು ಒಳ್ಳೆಯದು, ಆಗ ಅವರಿಗೆ ಓದುವುದು ಬೋರ್ ಅನಿಸಲ್ಲ.

ಸಾಕಷ್ಟು ನಿದ್ದೆ ಮಾಡಬೇಕು

ಕೆಲವರು ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಿದ್ದೆ ಬಿಟ್ಟು ಓದುತ್ತಾರೆ, ಈ ರೀತಿ ಮಾಡೇಡಿ, ಹಾಗೇ ಮಾಡಿದರೆ ಆರೋಗ್ಯ ಹಾಳಾಗುವುದು ಅಲ್ಲದೆ ಮರೆವು ಹೆಚ್ಚಾಗುವುದು. ಆದ್ದರಿಂದ ನಿಮ್ಮ ಆರೋಗ್ಯಕ್ಕೆ ಹಾಗೂ ನೀವು ಓದಿರುವುದು ನೆನಪಿನಲ್ಲಿ ಉಳಿಯಲು ನಿದ್ದೆ ಅವಶ್ಯಕವಾಗಿದ್ದು 8 ಗಂಟೆ ನಿದ್ದೆ ಮಾಡಿ.

ಇಷ್ಟು ಮಾಡಿದರೆ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಾಯವಾಗುತ್ತೆ.

English summary

Here are tips to increase kids concentration level, read on...ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಲು ಈ ಟಿಪ್ಸ್ ಅನುಸರಿಸಿ

Here are tips to increase kids concentration level, read on..
X
Desktop Bottom Promotion