Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಇದು ಮಾನಸಿಕ ಅಸ್ವಸ್ಥತೆಯ ಸೂಚನೆ!
ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆಆರೋಗ್ಯವು ಅಷ್ಟೇ ಮುಖ್ಯ. ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ಹಲವು ಸಮಸ್ಯೆಗಳು ಮಾನವನು ಎದುರಿಸಬಹುದು. ಹೌದು, ಸಾಮಾನ್ಯವಾಗಿ ಎಲ್ಲ ಮನುಷ್ಯರು ಒಂದಲ್ಲ ಒಂದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತಾರೆ. ಮಾನಸಿಕ ಕಾಯಿಲೆ ಎಂದರೆ ನಮ್ಮ ಭಾವನೆಯಾಗಿದೆ. ನಮ್ಮ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಅಸಮತೋಲನವಾದಾಗ ಖಿನ್ನತೆಯು ಕಾಣಿಸಿಕೊಳ್ಳುತ್ತದೆ. ಮತ್ತು ನಮ್ಮ ಮಿದುಳಿನಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆ. ಅಂದರೆ ನರವಾಹಕಗಳಾದ ಡೊಪೆಮಿನ್, ಸೆರೋಟೊನಿನ್ ಪ್ರಮಾಣ ಕಡಿಮೆ ಆದಾಗ ಖಿನ್ನತೆಯು ಉಂಟಾಗುತ್ತದೆ. ಇದು ನಕಾರಾತ್ಮಕ ಭಾವನೆಯನ್ನು ಹೆಚ್ಚಾಗಿ ಹೊಂದಿರುತ್ತದೆ.

ಸುಲಭವಾಗಿ ಹೇಳಬೇಕಾಂದರೆ ಮಿದುಳಿನಲ್ಲಿ ಆಗುವಂಥ ರಾಸಾಯನಿಕ ರಸದೂತಗಳ ಏರುಪೇರಿನಿಂದ ಮಾನಸಿಕ ಕಾಯಿಲೆ ಕಂಡು ಬರುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಅನುವಂಶೀಯತೆ, ಸುತ್ತಮುತ್ತಲಿನ ವಾತಾವರಣ, ಉದ್ಯೋಗ ಸ್ಥಳದಲ್ಲಿಯ ಕಾರ್ಯದ ಒತ್ತಡ, ಸಹೋದ್ಯೋಗಿಗಳ ಅಸಹಕಾರ ಕೂಡ ವ್ಯಕ್ತಿಯನ್ನು ಮಾನಸಿಕ ವ್ಯಾಕುಲತೆಯಲ್ಲಿ ಸಿಲುಕಿಸುತ್ತದೆ. ಇವುಗಳ ಕಾರಣದಿಂದಲೂ ಮಾನಸಿಕ ಅಸ್ವಸ್ಥತೆ ಉಂಟು ಮಾಡುತ್ತದೆ. ಸ್ಕಿಜೋಫ್ರೇನಿಯಾ ಅಥವಾ ಬೈಪೋಲಾರ್ ಡಿಸಾರ್ಡರ್ ನಂತಹ ಪ್ರಮುಖ ಮಾನಸಿಕ ಕಾಯಿಲೆಗಳಾಗಿವೆ. ಹಲವಾರು ಕಾರಣಗಳಿಂದ ಈ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ.
ಹಾಗಾದರೆ ನಮಗೆ ಮಾನಸಿಕ ಅಸ್ವಸ್ಥತೆ ಉಂಟಾಗುವುದನ್ನು ನಾವು ಅರಿಯುವುದು ಹೇಗೆ..? ಇದಕ್ಕಿರುವ ಲಕ್ಷಣಗಳು ಏನು..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಯಾವುವು..?

ನಿದ್ರೆ ಅಥವಾ ಹಸಿವಿನಲ್ಲಿ ಬದಲಾವಣೆ!
ಮಾನಸಿಕ ಅಸ್ವಸ್ಥತೆಯ ಪ್ರಮುಖ ಲಕ್ಷಣವೆಂದರೆ ಅದುವೇ ಹಸಿವು ಮತ್ತು ನಿದ್ರೆಯಲ್ಲಿನ ಬದಲಾವಣೆ. ಹೌದು, ನಿಮಗೆ ಹಸಿವು ಮತ್ತು ನಿದ್ದೆಯ ಸಮಸ್ಯೆ ಕಾಡುತ್ತಿದ್ಯಾ..? ಹಾಗಾದರೆ ಅದು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಾಗಿದೆ. ರಾತ್ರಿ ಮಲಗಿದರೆ ನಿದ್ದೆಯೇ ಬರುವುದಿಲ್ಲ. ಹಸಿವು ಇಲ್ಲದರಿಂದ ಖಿನ್ನತೆಯು ಉಂಟಾಗುತ್ತದೆ. ಹೀಗಾಗಿ ಈ ರೀತಿಯ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ನೀವು ಭೇಟಿ ಮಾಡಿ.

ಮೂಡ್ ಬದಲಾವಣೆ ಆಗುವುದು!
ನಿಮ್ಮ ಭಾವನೆಗಳು ಏಕಾಏಕಿ ಬದಲಾಗುತ್ತಿದ್ಯಾ..? ಅಥವಾ ಖಿನ್ನತೆಯ ಭಾವನೆಗಳು ಕಾಡುತ್ತಿದ್ಯಾ..? ತ್ವರಿತವಾಗಿ ಕೋಪ ಬರುವುದು, ಕಿರಿಕಿರಿ ಉಂಟಾಗುವುದು ಇವೆಲ್ಲಾವು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಾಗಿದೆ. ಈ ರೀತಿಯ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗುವುದುಮ್ ಒಳ್ಳೆಯದು.

ಸಾಮಾಜಿಕವಾಗಿ ದೂರ ಉಳಿಯುವುದು!
ಇತ್ತೀಚೆಗೆ ನೀವು ಸಾಮಾಜಿಕವಾಗಿ ದೂರ ಉಳಿಯುತ್ತಿದ್ದೀರಾ..? ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿದಿದ್ದೀರಾ..? ಯಾರ ಜೊತೆಯು ಮಾತನಾಡಲು ಇಷ್ಟಪಡುವುದಿಲ್ವಾ..? ಇವುಗಳೆಲ್ಲ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಾಗಿವೆ.

ಕಾರ್ಯದಲ್ಲಿ ಕುಸಿತ!
ಕ್ರೀಡೆಯಲ್ಲಿ ಆಸಕ್ತಿ ದೂರ, ಶಾಲೆ, ಕೆಲಸ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಅಸಾಮಾನ್ಯ ಕುಸಿತ. ಈ ರೀತಿಯ ಬೆಳವಣಿಗೆ ನಿಮ್ಮಲ್ಲಿ ಅಥವಾ ನಿಮಗೆ ತಿಳಿದಿರುವವರಲ್ಲಿ ಕಂಡು ಬಂದರೆ ಇದು ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ. ಈ ರೀತಿಯ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ನೆನಪಿನ ಶಕ್ತಿ ಕಡಿಮೆ ಆಗುವುದು!
ಎಲ್ಲರಿಗೂ ನೆನಪಿನ ಶಕ್ತಿ ಸಾಮಾನ್ಯವಾಗಿ ಇರುತ್ತದೆ. ನಿಮ್ಮಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತಿದ್ದರೆ ಅದು ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ. ಈಗ ನಡೆದ ಘಟನೆ ಮರು ಕ್ಷಣಕ್ಕೆ ಮರೆಯುವುದು ಆಗಿದೆ. ಹಳೆಯದು ಮರೆಯುವುದು ಆಗಿದೆ. ಈ ರೀತಿಯ ಮರೆವಿನ ಸಮಸ್ಯೆ ಇದ್ದರೆ ಅದು ಕೂಡ ಒಂದು ಮಾನಸ್ಕ ಅಸ್ವಸ್ಥತೆಯ ಲಕ್ಷಣವಾಗಿದೆ.

ಸೆನ್ಸಿಟಿವ್ ಆಗಿ ಬದಲಾಗುವುದು!
ಸಾಮಾನ್ಯವಾಗಿರುವ ವ್ಯಕ್ತಿಯಲ್ಲಿ ಏಕಾಏಕಿ ಸಂವೇದನೆ ಉಂಟಾಗುವುದು. ಎಲ್ಲಾದಕ್ಕೂ ಸೆನ್ಸಿಟಿವ್ ಆಗುವುದು. ಈ ರೀತಿಯ ಲಕ್ಷಣಗಳು ಇದ್ದರೆ ನೀವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದೀರಿ ಎಂದು ಅರ್ಥ.

ಅತಿಯಾದ ಭಯ, ಆತಂಕ!
ಸಣ್ಣ ಸಣ್ಣ ವಿಚಾರಕ್ಕೂ ಭಯ ಪಡುವುದು, ಆತಂಕಗೊಳ್ಳುವುದು ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ. ಸಣ್ಣ ವಿಚಾರಕ್ಕೂ ಭಯ ಪಡುವುದು, ಸುಮ್ಮನೆ ಆತಂಕಕ್ಕೊಳಪಡುವುದು, ತಪ್ಪಿತಸ್ಥ ಭಾವನೆ ಮೂಡುವುದು ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣ.

ಆರೋಗ್ಯದಲ್ಲಿ ಏರುಪೇರು!
ಆರೋಗ್ಯದಲ್ಲಿ ಏರುಪೇರಾಗುವುದು ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ. ಅಂದರೆ ತೀವ್ರ ತರದ ಸುಸ್ತು ಉಂಟಾಗುವುದು, ದೇಹದಲ್ಲಿ ಶಕ್ತಿಯೇ ಇಲ್ಲ ಎಂದು ಅನಿಸುವುದು. ದೇಹಕ್ಕೆ ಅನಾರೋಗ್ಯವಾಗಿದೆ ಎಂದು ಭಾವಿಸುವುದು ಕೂಡ ಸಮಸ್ಯೆಯ ಭಾಗವಾಗಿದೆ.

ಯೋಚನೆ ಬದಲಾವಣೆ!
ವಾಸ್ತವದಿಂದ ಬೇರ್ಪಟ್ಟು ಭ್ರಮೆಗಳ ಲೋಕದಲ್ಲಿ ವಿಹಾರಿಸುವುದು, ಮತಿವಿಕಲ್ಪ ತೆ ಉಂಟಾಗುವುದು. ಏನೇನೋ ಯೋಚನೆಗಳನ್ನು ಮಾಡುವುದು. ಇವೆಲ್ಲ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ.
ಜೀವನದಲ್ಲಿ ಬದಲಾವಣೆ!
ಜೀವನದ ಬಗ್ಗೆಗ್ಗಿನ ಆಸಕ್ತಿಯನ್ನು ಕಳೆದುಕೊಳ್ಳುವುದು. ಅಂದರೆ ಸೆಕ್ಸ್ ಬಗ್ಗೆ ನಿರಾಸಕ್ತಿ, ಕೆಲವರು ಮದ್ಯಪಾನ ಜಾಸ್ತಿ ಮಾಡುವುದು, ಧೂಮಪಾನ ಮಾಡುವುದು ಇವೆಲ್ಲ ಬದಲಾವಣೆ ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದೆ.



Click it and Unblock the Notifications











