Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮಳೆಗಾಲದಲ್ಲಿ ಈ 5 ಹರ್ಬಲ್ ಟೀ ಬೆಸ್ಟ್: ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ನಾವು ಆರೋಗ್ಯವಾಗಿರಲು ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಈಗ ಮಳೆಗಾಲ, ಮಳೆಗಾಲದಲ್ಲಿ ಬೇಸಿಗೆಕಾಲಕ್ಕಿಂತ ಸಂಪೂರ್ಣ ಭಿನ್ನವಾದ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಚಕ್ಕೆ, ಲವಂಗ, ಕರಿಮೆಣಸು, ಏಲಕ್ಕಿ ಹಾಕಿ ಮಾಡಿರುವ ಮಸಾಲೆ ಆಹಾರ ಪದಾರ್ಥ ಒಳ್ಳೆಯದು. ಟೀ ಕೂಡ ಅಷ್ಟೇ ಮಾಮೂಲಿ ಟೀಗಿಂತ ಮಳೆಗಾಲದಲ್ಲಿ ಹರ್ಬಲ್ ಟೀ ಕುಡಿಯುವುದು ಬೆಸ್ಟ್.
ಏಕೆಂದರೆ ಮಳೆಗಾಲದಲ್ಲಿ ಜೀರ್ಣವಾಗುವುದು ಸ್ವಲ್ಪ ನಿಧಾನ, ಅಲ್ಲದೆ ಶೀತ-ಕೆಮ್ಮು ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ ಹರ್ಬಲ್ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಸಾಮಾನ್ಯವಾಗಿ ಕಾಡುವ ಶೀತ-ಕೆಮ್ಮು ಈ ಬಗೆಯ ಸಮಸ್ಯೆಗಳು ಕಡಿಮೆಯಾಗುವುದು. ಆದ್ದರಿಂದ ಮಳೆಗಾಲದಲ್ಲಿ ಹರ್ಬಲ್ ಟೀ ಕುಡಿಯುವುದು ಬೆಸ್ಟ್.
ಮಳೆಗಾಲದಲ್ಲಿ ಈ ಹರ್ಬಲ್ ಟೀಗಳು ಬೆಸ್ಟ್:

1. ತುಳಸಿ ಟೀ
ಒಂದು ಕಪ್ ನೀರು ತೆಗೆದು ಅದಕ್ಕೆ 5 ಎಸಳು ತುಳಸಿ ಹಾಕಿ ಕುದಿಸಿ, ನಂತರ ಅದಕ್ಕೆ ಸ್ವಲ್ಪ ಜೇನು ಸೇರಿಸಿ, ಕುಡಿಯಿರಿ.

2. ಶುಂಠಿ ಟೀ
ಮಳೆಗಾಲದಲ್ಲಿ, ಚಳಿಗಾಲದಲ್ಲಿ ಶುಂಠಿ ಟೀ ತುಂಬಾನೇ ಒಳ್ಳೆಯದು. ಇದು ಮೈಯನ್ನು ಬೆಚ್ಚಗಿಡುತ್ತದೆ. ಹಾಲಿಗೆ ಸ್ವಲ್ಪ ಶುಂಠಿ ಜಜ್ಜಿ ಹಾಕಿ ಅದಕ್ಕೆ ಟೀ ಪುಡಿ ಸೇರಿಸಿ ಕುದಿಸಿ ಕುಡಿಯಿರಿ. ಸಕ್ಕರೆ ಬೇಕಿದ್ದರೆ ಸೇರಿಸಬಹುದು, ಆದರೆ ಸಕ್ಕರೆ ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

3. ಪುದೀನಾ ಟೀ
3 ಕಪ್ ನೀರಿಗೆ 2-3 ಮೂರು ಪುದೀನಾ ಎಲೆ ತೆಗೆದು ಕೈಯಿಂದ ತುಂಡು-ತುಂಡು ಮಾಡಿ ನೀರಿಗೆ 10 ನಿಮಿಷ ಕುದಿಸಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯಿರಿ.

4. ಗ್ರೀನ್ ಟೀ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ತೆಗೆದುಕೊಂಡರೆ ತುಂಬಾ ಒಳ್ಳೆಯದು, ಇದು ಹೊಟ್ಟೆ ಬೊಜ್ಜು ಕರಗಿಸುತ್ತೆ.

5. ಲೆಮನ್ ಗ್ರಾಸ್
ಎರಡು ಲೆಮನ್ ಗ್ರಾಸ್ ತುಂಡು ತೆಗೆದುಕೊಂಡು ಅದನ್ನು ಮುರಿದು 2 ಕಪ್ ನೀರಿನಲ್ಲಿ ಹಾಕಿ ಕುದಿಸಿ, ಕುದಿಸುವಾಗ ಸ್ವಲ್ಪ ಚಕ್ಕೆ ಪುಡಿ ಸೆರಿಸಿ, ನಂತರ ಸೊಸಿ ಜೇನು ಸೇರಿಸಿ ಕುಡಿಯಿರಿ.



Click it and Unblock the Notifications
