Latest Updates
-
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್!
ಹಾಲಿಗಿಂತಲೂ ಬೀರ್ ಆರೋಗ್ಯಕರವೇ?
ಹಾಲು ಎಲ್ಲರಿಗೂ ಅಷ್ಟಾಗಿ ಇಷ್ಟವಾಗುತ್ತದೆಯೆಂದೇನಿಲ್ಲ. ಹಾಲಿನ ಕುರಿತು ಯೋಚಿಸಿದರೇ ಸಾಕು, ಬಾಲ್ಯದ ದಿನಗಳು ಕಣ್ಣಮುಂದೆ ಹಾದುಹೋಗುತ್ತವೆ. ಆ ದಿನಗಳಲ್ಲಿ ನಮ್ಮ ಅಮ್ಮಂದಿರು ಪ್ರತೀ ದಿನ ಬೆಳಗ್ಗೆ ಹೊಡೆದುಬಡಿದಾದರೂ ಒಂದು ಲೋಟದಷ್ಟು ಹಾಲನ್ನು ಕುಡಿಸದೇ ಬಿಡುತ್ತಿರಲಿಲ್ಲ. ಏಕೆಂದರೆ, ಸರ್ವೇಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಪ್ರಕಾರ, ಹಾಲು ಒಂದು "ಆರೋಗ್ಯದಾಯಕ" ಆಹಾರವಸ್ತು.
ಆದಾಗ್ಯೂ, ಇಸವಿ 2016 ರಲ್ಲಿ ಪೇಟಾ (ಪೀಪಲ್ ಫ಼ಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ಼್ ಅನಿಮಲ್ಸ್) ಸಂಸ್ಥೆಯು ಜಾಹಿರಾತೊಂದರಲ್ಲಿ ಕೊಟ್ಟಿರುವ ಹೇಳಿಕೆಯ ಪ್ರಕಾರ, ಹಾಲಿಗಿಂತಲೂ ಬಿಯರ್ ಹೆಚ್ಚು ಆರೋಗ್ಯದಾಯಕವಾಗಿದೆ. ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪೇಟಾ ಸಂಸ್ಥೆಯು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಅಧ್ಯಯನಗಳನ್ನು ಬಳಸಿಕೊಂಡಿತು.
ಹೌದು, ನೀವು ಸರಿಯಾಗಿಯೇ ಓದಿರುವಿರಿ. ಆರೋಗ್ಯದ ವಿಚಾರಕ್ಕೆ ಬಂದಾಗ ಹಾಲಿಗಿಂತಲೂ ಬಿಯರ್ ಒಂದು ಉತ್ತಮ ಆಯ್ಕೆಯಾಗಿದೆ.

ಹಾಲಿಗಿಂತ ಬೀರ್ ಹೇಗೆ ಉತ್ತಮ?
"ತೀರ್ಪು ಈಗಾಗಲೇ ಹೊರಬಿದ್ದಿದೆ ಹಾಗೂ ಹಾಲಿನ ವಿರುದ್ಧ ಬಿಯರ್ ಮೇಲುಗೈ ಸಾಧಿಸಿದೆ. ಹಿತಮಿತ ಪ್ರಮಾಣದಲ್ಲಿ ಸೇವಿಸುವ ಆಲ್ಕೋಹಾಲ್ ನಿಮ್ಮ ಆರೋಗ್ಯಕ್ಕೆ ಹಿತಕರ, ಆದರೆ ಹೈನುಗಾರಿಕಾ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆಯಾದ್ದರಿಂದ ಹಾಗೂ ಬಿಲಿಯಗಟ್ಟಲೇ ಹಸುಗಳು ನರಳುವಂತೆ ಮಾಡುವುದರಿಂದ ಹೈನುಗಾರಿಕಾ ಉತ್ಪನ್ನಗಳನ್ನು ನಾವು ಜವಾಬ್ದಾರಿಯುತವಾಗಿ ಸೇವಿಸುತ್ತೇವೆ ಎಂಬ ಮಾತಿನಲ್ಲಿ ಅರ್ಥವಿಲ್ಲ" ಎಂದು ಹೇಳುತ್ತಾರೆ ಪೇಟಾದ ಕಾರ್ಯಕಾರೀ ಉಪಾಧ್ಯಕ್ಷೆಯಾಗಿರುವ ಟ್ರೇಸೀ ರೀಮನ್ ಅವರು.

ಬೀರ್‌ನ ಪ್ರಯೋಜನಗಳು
"ಹೃದ್ರೋಗಗಳು, ಬೊಜ್ಜು, ಮಧುಮೇಹ, ಹಾಗೂ ಕ್ಯಾನ್ಸರ್ ನಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳೊಂದಿಗೆ ಇದು ನಂಟು ಹೊಂದಿದೆ" ಎಂದು ಹೈನುಗಾರಿಕಾ ಉತ್ಪನ್ನಗಳ ಮತ್ತಷ್ಟು ಅಡ್ಡಪರಿಣಾಮಗಳನ್ನು ಪರಿಗಣನೆಯಲ್ಲಿರಿಸಿಕೊಂಡು ಪೇಟಾ ಸಂಸ್ಥೆಯು ಹೇಳಿದೆ. ಹೈನುಗಾರಿಕಾ ಉತ್ಪನ್ನಗಳು ಮೊಡವೆ, ಕಫ಼, ಹಾಗೂ ವಾತದಂತಹ ಲ್ಯಾಕ್ಟೋಸ್ ಅಸಹಿಷ್ಣುತೆಯ ರೋಗಲಕ್ಷಣಗಳಿಗೂ ಕಾರಣವಾಗುತ್ತವೆ.

ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ವರದಿಯು ಅಷ್ಟಕ್ಕೇ ಮುಕ್ತಾಯವಾಗಲಿಲ್ಲ, ಜೊತೆಗೆ ಪೇಟಾ ಬರೆದುಕೊಂಡಿರುವುದೇನೆಂದರೆ, "ಹೈನುಗಾರಿಕಾ ಉತ್ಪನ್ನಗಳು ಆಸ್ಟಿಯೋಫೊರೋಸಿಸ್ ಅನ್ನು (ಮೂಳೆಗಳು ದುರ್ಬಲಗೊಳ್ಳುವ ಹಾಗೂ ಟೊಳ್ಳಾಗುವ ಒಂದು ರೋಗ) ತಡೆಗಟ್ಟುವುದಕ್ಕೆ ಬದಲಾಗಿ ಅದನ್ನು ಉಂಟಾಗುವಂತೆ ಮಾಡುತ್ತವೆ".
ಆದಾಗ್ಯೂ, ಮೂಳೆಗಳು ಟೊಳ್ಳಗಾಗುವುದನ್ನು ಬಿಯರ್ ತಡೆಯುತ್ತದೆ ಹಾಗೂ ಜೊತೆಗೆ ಇನ್ನಿತರ ಆರೋಗ್ಯ-ಸಂಬಂಧೀ ಪ್ರಯೋಜನಗಳನ್ನೂ ಹೊಂದಿದೆ.
ಬಿಯರ್ ನ ಕುರಿತಾದ ಈ ಸಂಗತಿಯಂತೂ ಅನೇಕರ ಪಾಲಿನ ವಾರಾಂತ್ಯದ ಯೋಜನೆಗಳ ಮೇಲೆ ಪರಿಣಾಮ ಬೀರುವುದಂತೂ ಖರೆ!



Click it and Unblock the Notifications