Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮನೆಯಿಂದಲೇ ಕಚೇರಿ ಕೆಲಸ ಮಾಡುವವರು ಸದಾ ಚುರುಕಾಗಿರಲು ಇಂಥಾ ಆಹಾರಗಳನ್ನು ಸೇವಿಸಿ
ಎಲ್ಲರೂ ಮನೆಯಿಂದ ಕೆಲಸ ಮಾಡುವುದು ಈಗ ಅನಿವಾರ್ಯವಾಗಿದೆ. ಕಚೇರಿಗೆ ಹೋಗುವ ಮನಸಿದ್ದರೂ ನಮಗೆ ಆಯ್ಕೆಯೇ ಇಲ್ಲದೆ ಮನೆಯಿಂದಲೇ ಕೆಲಸ ಮಾಡಬೇಕಾಗಿದೆ. ಮನೆಯಿಂದಲೇ ಕೆಲಸ ಆಗಿರುವುದರಿಂದ ಮನೆಯ ಕೆಲಸ, ಕಚೇರಿ ಕೆಲಸ ಎರಡನ್ನೂ ನಿಭಾಯಿಸಬೇಕಿದೆ. ಅದರಲ್ಲೂ ಮಹಿಳೆಯರಿಗೆ ಇದು ಇದು ಕಿರಿಕಿರಿ ಎನಿಸದೇ ಇರದು.
ಮನೆ ಕೆಲಸ, ಕಚೇರಿ ಕೆಲಸ, ಅಡುಗೆ ಮತ್ತು ಮಕ್ಕಳ ಶಿಕ್ಷಣ ಎಲ್ಲವನ್ನು ನಿಭಾಯಿಸಬೇಕಿದೆ. ಎಲ್ಲವನ್ನೂ ನಿಭಾಯಿಸಿಕೊಂಡು ಕಚೇರಿ ಕೆಲಸಕ್ಕೆಂದು ಒಮ್ಮೆ ಕೂತರೆ ಅಲಸ್ಯ, ಸುಸ್ತು, ಕೆಲಸ ಮಾಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರಾಮ ಎನಿಸದೇ ಇರಬಹುದು. ಇಂಥಾ ಸಮಸ್ಯೆಗಳಿಂದ ದೂರಾಗಲು ನಾವಿಂದು ಕೆಲವು ಸಲಹೆಗಳನ್ನು ನೀಡಲಿದ್ದೇವೆ.
ಈ ಕೆಳಗೆ ಹೇಳಲಾದ ಆಹಾರಗಳನ್ನು ನೀವು ನಿತ್ಯ ಬಿಡುವಿನ ಸಮಸಯದಲ್ಲಿ ಸೇವಿಸಿದ್ದೇ ಆದರೆ ಅಲಲಸ್ಯ, ಸುಸ್ತು ನಿಮ್ಮನ್ನು ಕಾಡುವುದಿಲ್ಲ. ಆರಾಮವಾಗಿ ಕಚೇರಿ ಕೆಲಸಗಳನ್ನು ತ್ವರಿತವಾಗಿ ನಿಮ್ಮನ್ನು ಪ್ರೇರೇಪಿಸುವಂಥ ಆಹಾರ ಪದಾರ್ಥಗಳಿವು ಎಂದರೆ ತಪ್ಪಾಗಲಾರದು. ಈ ಆರೋಗ್ಯಕರ ಆಹಾರಗಳನ್ನು ನೀವು ಸೇವಿಸಿ ಶಕ್ತಿಯುತರಾಗಿ.

ಡ್ರೈಫ್ರೂಟ್ಸ್‌ಗಳು
ಪೌಷ್ಠಿಕಾಂಶದ ಶಕ್ತಿಕೇಂದ್ರಗಳಾದ ಡ್ರೈಫ್ರೂಟ್ಸ್ ಪ್ರೋಟೀನ್ ಮತ್ತು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಇದು ದೀರ್ಘಕಾಲೀನ ಶಕ್ತಿಯ ಬಿಡುಗಡೆಗೆ ಒಟ್ಟಿಗೆ ಕೆಲಸ ಮಾಡುತ್ತದೆ. ಡ್ರೈಫ್ರೂಟ್ಸ್ ಹೃದಯದ ಆರೋಗ್ಯ ಕಾಪಾಡುವ ಪಾಲಿಅನ್ಸಾಚುರೇಟೆಡ್ ಕೊಬ್ಬುಗಳು, ಮೊನೊಸಾಚುರೇಟೆಡ್ ಕೊಬ್ಬುಗಳು, ವಿಟಮಿನ್ ಮತ್ತು ಖನಿಜಗಳಿಂದ ತುಂಬಿದೆ. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಬಾದಾಮಿ, ವಾಲ್್ನಟ್ಸ್ ಮತ್ತು ಪಿಸ್ತಾ ಕೂಡ ಮೆಗ್ನೀಶಿಯಂ ಅನ್ನು ಹೊಂದಿರುತ್ತದೆ, ಇದು ರಕ್ತ ಕಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರಮುಖ ಪೋಷಕಾಂಶವಾಗಿದೆ.

ಕಾಫಿ ವಿರಾಮ ತೆಗೆದುಕೊಳ್ಳಿ (ಕೆಫೀನ್)
ಕೆಲಸದ ನಡುವೆ ಆಗಾಗ್ಗೆ ಮಾನಸಿಕ ಶಕ್ತಿಗಾಗಿ ಕಾಫಿಯನ್ನು ಬೇಡ ಅನ್ನುವಂತಿಲ್ಲ. ಕಾಫಿ ಬೇಡ ಎನ್ನುವವರು ಒಂದು ಕಪ್ ಗ್ರೀನ್ ಟೀ ಕುಡಿಯಿರಿ. ಕೆಫೀನ್‌ನ ಈ ಪರ್ಯಾಯ ಮೂಲವು ಎಲ್-ಥಾನೈನ್ ಎಂಬ ಅಮೈನೊ ಆಸಿಡ್‌ನಲ್ಲಿ ಸಮೃದ್ಧವಾಗಿದೆ, ಇದು ಮಾನಸಿಕ ಜಾಗರೂಕತೆಯನ್ನು ಸುಧಾರಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಚಾಕೊಲೇಟ್ಸ್
ಚಾಕೋಲೆಟ್ ಪ್ರೇಮಿಗಳಿಗೆ ಇದು ನಿಜವಾಗಿಯೂ ಇಷ್ಟವಾದ ವಿಷಯ ಎನಿಸಬಹುದು. ಹೌದು ನೀವು ಕೆಲಸದ ನಡುವೆ ಚಾಕೋಲೆಟ್ ಸೇವನೆ ನಿಮ್ಮಲ್ಲಿ ಇನ್ನಷ್ಟು ಶಕ್ತಿ ನೀಡುತ್ತದೆ. ಆದರೆ ನೆನಪಿರಲಿ ಡಾರ್ಕ್ ಚಾಕೋಲೇಟ್ ಸೇವನೆ ಒಳ್ಳೆಯದು. ಚಾಕೋಲೆಟ್ ಸೇವನೆ ಒಳ್ಳೆಯದಲ್ಲ ಎನ್ನುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬಹುದು. ಉತ್ಕರ್ಷಣ ನಿರೋಧಕ ಹೆಚ್ಚಿರುವ ಡಾರ್ಕ್ ಚಾಕೊಲೇಟ್‌ನ ಗಮನ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಪಾಪ್‌ಕಾರ್ನ್
ಕೆಲಸದ ನಡುವೆ ವಿರಾಮದ ವೇಳೆ ಪಾಪ್‌ಕಾರ್ನ್ ಸೇವನೆ ಉತ್ತಮ ಆಯ್ಕೆ ಎನಿಸಬಹುದು. ಕಾರಣ ಇದರಲ್ಲಿ ಹೆಚ್ಚಿನ ಕೊಬ್ಬು ಇರುವುದಿಲ್ಲ, ಎಣ್ಣೆಯಂಶ ಹಸ ಕಡಿಮೆ ಇರುತ್ತದೆ. ಇದನ್ನು ಬೆಣ್ಣೆ ಮತ್ತು ಉಪ್ಪಿನ ಅಂಶ ಇನ್ನಷ್ಟು ರುಚಿಯನ್ನು ಹೆಚ್ಚಿಸುತ್ತದೆ. ಕಡಿಮೆ ಕ್ಯಾಲೋರಿ ಮತ್ತು ಟ್ರಾನ್ಸ್-ಕೊಬ್ಬುಗಳು ಮತ್ತು ಜಿಎಂಒಗಳಿರುವುದಿಲ್ಲ.

ಹಣ್ಣುಗಳು
ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯುವುದರ ಜೊತೆಗೆ, ಕಲ್ಲಂಗಡಿ, ಬೆರಿ ಮತ್ತು ಸೇಬುಗಳಂತಹ ಸಾಕಷ್ಟು H2O ಇರುವ ಆಹಾರವನ್ನು ಸೇವಿಸುವುದು ಜಾಣತನ. ತಾಜಾ ಹಣ್ಣು ಇಲ್ಲದಿದ್ದರೆ, ನೀವು ಅಂಜೂರದ ಹಣ್ಣುಗಳು, ಖರ್ಜೂರಗಳು ಮತ್ತು ಏಪ್ರಿಕಾಟ್‌ಗಳಂತಹ ಸಿಹಿಗೊಳಿಸದ ಒಣಗಿದ ಹಣ್ಣುಗಳನ್ನು ಸಹ ಸೇವಿಸಬಹುದು.

ಡೈರಿ ಪದಾರ್ಥ
ಚೀಸ್, ಮೊಸರು ಮತ್ತು ಅಮೈನೋ ಆಸಿಡ್‌ಗಳಿಂದ ತುಂಬಿರುವ ಆಹಾರಗಳು ಇದು ಹಸಿವನ್ನು ಕಡಿಮೆ ಮಾಡುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳನ್ನು ಉತ್ತಮಗೊಳಿತ್ತದೆ. ಅವುಗಳು ಕಡಿಮೆ-ಗ್ಲೈಸೆಮಿಕ್ ಸೂಚ್ಯಂಕ (ಜಿಐ) ಕಾರ್ಬೋಹೈಡ್ರೇಟ್‌ಗಳು, ಅಂದರೆ ಸಕ್ಕರೆಯು ನಿಧಾನವಾಗಿ ಹರಿದು ಶಕ್ತಿಯನ್ನು ಹರಿಯುವಂತೆ ಮಾಡುತ್ತದೆ. ನಿಮ್ಮ ಕರುಳಿಗೆ ಉತ್ತಮವಾದ ಬ್ಯಾಕ್ಟೀರಿಯಾ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಿಂದ ತುಂಬಿದ ಮೊಸರು ಉತ್ತಮ ಆಯ್ಕೆಯಾಗಿದೆ.



Click it and Unblock the Notifications