Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರಂಜಾನ್ ಉಪವಾಸ ಮಾಡುವಾಗ ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಬಾಯಾರಿಕೆ ಉಂಟಾಗದಿರಲು ಹೀಗೆ ಮಾಡಿ
ಇದೀಗ ಮುಸ್ಲಿಂರಿಗೆ ರಂಜಾನ್ ತಿಂಗಳು. ಈ ತಿಂಗಳಿನಲ್ಲಿ ರೋಜಾ ಅಂದರೆ ಉಪವಾಸ ಮಾಡುವುದು ನಿಯಮ. ಸೂರ್ಯೋದಯಕ್ಕೆ ಮುನ್ನವೇ ಆಹಾರ ಸೇವಿಸಿ, ದಿನವಿಡೀ ಒಂದು ಹನಿ ನೀರನ್ನೂ ಬಾಯಿಗೆ ಹಾಕದೆ ಉಪವಾಸ ಮಾಡುತ್ತಾರೆ. ಸಂಜೆ ಸೂರ್ಯಾಸ್ತದ ಬಳಿಕವಷ್ಟೇ ಮತ್ತೆ ಆಹಾರ ಸೇವಿಸುವುದು.
ಆದ್ದರಿಂದ ರಂಜಾನ್ ಸಮಯದಲ್ಲಿ ಅವರು ಸೇವಿಸುವ ಆಹಾರದಲ್ಲೂ ಇತರ ಸಮಯಕ್ಕಿಂತ ತಂಬಾನೇ ವ್ಯತ್ಯಾಸವಿರುತ್ತೆ. ಡ್ರೈ ಫ್ರೂಟ್ಸ್, ಹಣ್ಣುಗಳು, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರಗಳು, ಆರೋಗ್ಯಕರ ಪಾನೀಯಗಳನ್ನು ಸೇವಿಸುತ್ತಾರೆ.
ಉಪವಾಸ ಮಾಡುವಾಗ ಕೆಲವರಿಗೆ ಹೊಟ್ಟೆ ಉಬ್ಬುವುದು, ಹಗಲಿನಲ್ಲಿ ತುಂಬಾ ಬಾಯಾರಿಕೆ ಅನಿಸುವುದು. ಪ್ರಸಿದ್ಧ ಸೆಲೆಬ್ರಿಟಿ ಡಯಟಿಷಿಯನ್ ಆಗಿರುವ ರುಜುತಾ ದ್ವಿವೇಕರ್ ಉಪವಾಸದ ಸಮಯದಲ್ಲಿ ಈ ಸಮಸ್ಯೆ ತಡೆಗಟ್ಟಲು 3 ಅದ್ಭುತ ಟಿಪ್ಸ್ ನೀಡಿದ್ದಾರೆ ನೋಡಿ:
ರಂಜಾನ್‌ಗೆ 3 ಆಹಾರ ಟಿಪ್ಸ್....

1. ಬೆಳಗ್ಗೆ ಮಿಲ್ಕ್ ಶೇಕ್ ತೆಗೆದುಕೊಳ್ಳಿ
ಸೂರ್ಯೋದಯಕ್ಕೆ ಮುನ್ನ ಆಹಾರ ಸೇವಿಸುವಾಗ ಹಣ್ಣುಗಳಿದ ತಯಾರಿಸಿದ ಮಿಲ್ಕ್ ಶೇಕ್ ಕುಡಿಯಿರಿ. ಇದರಿಂದ ದಿನವಿಡೀ ದೇಹದಲ್ಲಿ ನೀರಿನಂಶ ಕಾಪಾಡಬಹುದು ಜೊತೆಗೆ ಬಾಯಾರಿಕೆ ಕೂಡ ಉಂಟಾಗುವುದಿಲ್ಲ, ಹೊಟ್ಟೆಯೂ ತುಂಬಿರುತ್ತದೆ. ಜೊತೆಗೆ ಹೊಟ್ಟೆ ಹುಬ್ಬುವುದು ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

2. ಮೊಸರು ಹಾಗೂ ಖರ್ಜೂರ ಜೊತೆಗೆ ಉಪವಾಸ ಮುರಿಯಿರಿ
ಇದು ಉಪವಾಸ ಮುರಿಯವ ಸಂಪ್ರದಾಯವೂ ಹೌದು. ಇವೆರಡರ ಕಾಂಬಿನೇಷನ್ ದೇಹವನ್ನು ತಂಪಾಗಿ ಇಡುವುದು ಜೊತೆಗೆ ರಾತ್ರಿ ತುಂಬಾ ತಿನ್ನುವುದನ್ನೂ ತೆಗಟ್ಟಬಹುದು. ಮೊದಲಿಗೆ ಖರ್ಜೂರ ತಿಂದು ನಂತರ ಬೇಕಾದರೆ ಮೊಸರು ಸೇವಿಸಬಹುದು. ಇಲ್ಲಾ ಎರಡನ್ನೂ ಒಟ್ಟಿಗೆ ಸೇವಿಸಬಹುದು.

3. ಉಪವಾಸ ಪ್ರಾರಂಭಿಸಿ ಎರಡು ವಾರದ ಬಳಿಕ ಸುಸ್ತು ಹೆಚ್ಚಿದರೆ
ಉಪವಾಸ ಪ್ರಾರಂಭಿಸಿದಾಗ ಅಷ್ಟೇನು ಸುಸ್ತೇನು ಅನಿಸುವುದಿಲ್ಲ, ಆದರೆ ಒಂದೆರಡು ವಾರಗಳು ಕಳೆಯುತ್ತಿದ್ದಂತೆ ಕೆಲವರಿಗೆ ನಿಶ್ಯಕ್ತಿ ಅನಿಸುವುದು ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು. ಈ ರೀತಿ ಅನಿಸುತ್ತಿದ್ದರೆ ರಾತ್ರಿ ಆಹಾರ ಸೇವಿಸಿದ ಬಳಿಕ ಆಲೀವ್ ಲಡ್ಡು ಅಥವಾ ಬೆಲ್ಲಮತ್ತು ತುಪ್ಪ ಅಥವಾ ಬಾಳೆಹಣ್ಣು ಸೇವಿಸಿ.



Click it and Unblock the Notifications
