For Quick Alerts
ALLOW NOTIFICATIONS  
For Daily Alerts

ಶುದ್ಧ ಬೆಲ್ಲ ಅಂತ ಕಂಡು ಹಿಡಿಯುವುದು ಹೇಗೆ?

|

ಬೆಲ್ಲ ಇದರ ಆರೋಗ್ಯಕರ ಗುಣಗಳ ಬಗ್ಗೆ ಎರಡು ಮಾತೇ ಇಲ್ಲ, ಅಷ್ಟೊಂದು ಅದ್ಭುತ ಗುಣಗಳನ್ನು ಹೊಂದಿರುವಂಥ ಸಿಹಿ ವಸ್ತುವಾಗಿದೆ. ಯಾವುದೇ ಕಾಲವಾಗಿರಲಿ ಬೆಲ್ಲ ಬಳಸುವುದು ದೇಹಕ್ಕೆ ತುಂಬಾನೇ ಒಳ್ಳೆಯದು.

ಆರೋಗ್ಯಕ್ಕಾಗಿ ಸಕ್ಕರೆಯನ್ನು ದೂರವಿಟ್ಟು ಬೆಲ್ಲವನ್ನು ಸವಿಯುವಂತೆ ಆರೋಗ್ಯ ತಜ್ಞರು, ನ್ಯೂಟ್ರಿಷಿಯನಿಸ್ಟ್ ಸಲಹೆ ನೀಡುತ್ತಾರೆ. ಆರೋಗ್ಯದ ಬಗ್ಗೆ, ದೇಹದ ಫಿಟ್ನೆಸ್‌ ಬಗ್ಗೆ ಕಾಳಜಿ ಇರುವವರು ಕೂಡ ಬೆಲ್ಲವನ್ನೇ ಬಳಸುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಆರೋಗ್ಯವನ್ನು ಕಾಪಾಡುವ ಗುಣವಿರುವ ಬೆಲ್ಲವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅದರ ಗುಣಮಟ್ಟ ಕಳಪೆ ಮಾಡುತ್ತಿದ್ದಾರೆ.

ಬೆಲ್ಲ ಮಾಡುವಾಗ ರಾಸಾಯನಿಕ ಬಣ್ಣಗಳನ್ನು ಸೇರಿಸಲಾಗುತ್ತದೆ ಎಂಬ ಆರೋಪವು ಕೇಳಿ ಬರುತ್ತಿರುವುದರಿಂದ ನಾವು ಬಳಸುವ ಬೆಲ್ಲ ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂಬ ಸಂಶಯ ಬಾರದೇ ಇರಲ್ಲ.

ಬೆಲ್ಲ ತಯಾರಿಸುವ ವಿಧಾನ

ಬೆಲ್ಲ ತಯಾರಿಸುವ ವಿಧಾನ

ಬೆಲ್ಲವನ್ನು ಕಬ್ಬಿನ ರಸದಿಂದ ಮಾಡಲಾಗುವುದು. ಇದರಲ್ಲಿ ನ್ಯೂಟ್ರಿಷಿಯನ್‌ ಅಂಶ ಇರುವುದರಿಂದ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಕಬ್ಬಿನ ರಸವನ್ನು ಕುದಿಸಿ ಅದನ್ನು ಬೆಲ್ಲದ ಮೌಲ್ಡ್‌ನಲ್ಲಿ ಹಾಕಿ, ಅದು ತಣ್ಣಗಾದಾಗ ಬೆಲ್ಲದ ಹಚ್ಚು ತಯಾರಾಗುತ್ತದೆ ಈ ರೀತಿ ಬೆಲ್ಲ ತಯಾರಿಸಲಾಗುವುದು.

ಆದರೆ ಬೆಲ್ಲವನ್ನು ಹೀಗೆ ತಯಾರಿಸುವಾಗ ಕೆಲವರು ಗುಣಮಟ್ಟದ ಕಬ್ಬಿನ ರಸ ಬಳಸದೆ, ಅದಕ್ಕೆ ಉತ್ತಮ ಬಣ್ಣ ಸಿಗಲು ರಾಸಾಯನಿಕಗಳನ್ನು ಬಳಸುವುದುಂಟು. ಆದ್ದರಿಂದ ನಾವು ಬಳಸುವ ಬೆಲ್ಲದ ಗುಣ ಮಟ್ಟ ಪರೀಕ್ಷಿಸಿ ಬಳಸುವುದು ಒಳ್ಳೆಯದು.

ಬೆಲ್ಲದ ಗುಣಮಟ್ಟ ಪರೀಕ್ಷಿಸುವುದು ಹೇಗೆ?

ಬೆಲ್ಲದ ಗುಣಮಟ್ಟ ಪರೀಕ್ಷಿಸುವುದು ಹೇಗೆ?

ಸಾಮಾನ್ಯವಾಗಿ ಗುಣಮಟ್ಟದ ಬೆಲ್ಲ ಅದರ ಬಣ್ಣ ಹಾಗೂ ಗಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಜೊತೆಗೆ ಈ ಕೆಳಗಿನ ಅಂಶಗಳಿಂದಲೂ ತಿಳಿಯಬಹುದು.

 ಬೆಲ್ಲ ಕೊಳ್ಳುವಾಗ ಗಮನಿಸಬೇಕಾದ ಅಂಶಗಳು

ಬೆಲ್ಲ ಕೊಳ್ಳುವಾಗ ಗಮನಿಸಬೇಕಾದ ಅಂಶಗಳು

  • ನೀವು ಸ್ವಲ್ಪ ಬೆಲ್ಲ ತೆಗೆದು ಬಾಯಿಗೆ ಹಾಕಿ, ಬೆಲ್ಲದ ರುಚಿ ಸಿಹಿ ಮಾತ್ರವಲ್ಲ ಸ್ವಲ್ಪ ಉಪ್ಪು ಕೂಡ ಇರಬೇಕು. ಏಕೆಂದರೆ ಬೆಲ್ಲದಲ್ಲಿರುವ ಪೋಷಕಾಂಶ ಬೆಲ್ಲಕ್ಕೆ ಉಪ್ಪಿನ ರುಚಿ ನೀಡುತ್ತದೆ, ಅಲ್ಲದೆ ಆ ರುಚಿಯೇ ಅದು ಒಳ್ಳೆಯ ಬೆಲ್ಲ ಹೌದೇ ಇಲ್ಲವೇ ಎಂಬುವುದನ್ನು ಹೇಳುತ್ತೆ.
  • ಒಂದು ವೇಳೆ ಬೆಲ್ಲದಲ್ಲಿ ಏನಾದರೂ ಸ್ವಲ್ಪ ಕಹಿ ರುಚಿ ಇದ್ದರೆ ಅದು ಶುದ್ಧವಾದ ಬೆಲ್ಲ ಅಲ್ಲವೆಂದು ಹೇಳಬಹುದು.
  • ಬೆಲ್ಲದ ಮೇಲೆ ಹರಳು-ಹರಳು ರೀತಿ ಇದ್ದರೆ ತಯಾರಿಸುವಾಗ ಬೇರೆ ಏನೋ ಮಿಶ್ರ ಮಾಡಿದ್ದಾರೆ ಎಂದು ಹೇಳಬಹುದು.
  • ಬೆಲ್ಲದ ಬಣ್ಣ ಕೂಡ ಅದರ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತೆ. ಬೆಲ್ಲದ ಬಣ್ಣ ಕಪ್ಪು ಬಣ್ಣದಲ್ಲಿ ಇರುತ್ತದೆ, ಅದರಲ್ಲಿ ಸ್ವಲ್ಪ ಹಳದಿ ಬಣ್ಣ ಇದ್ದರೆ ಅದು ಶುದ್ಧವಾದ ಬೆಲ್ಲವಲ್ಲ.
  • ಬೆಲ್ಲ ಕೊಂಡ ಬಳಿಕ ಗಮನಿಸಬೇಕಾದ ಅಂಶಗಳು

    ಬೆಲ್ಲ ಕೊಂಡ ಬಳಿಕ ಗಮನಿಸಬೇಕಾದ ಅಂಶಗಳು

    • ನೀವು ಒಂದು ಪಾರದರ್ಶಕ ಬೌಲ್‌ ತೆಗೆದುಕೊಂದು ಅದರಲ್ಲಿ ನೀರು ಹಾಕಿ, ಬೆಲ್ಲವನ್ನು ಕರಗಿಸಿ, ಆಗ ತಳದಲ್ಲಿ ಪುಡಿ ನಿಂತರೆ ಅದು ಕಲಬೆರಿಕೆಯ ಬೆಲ್ಲವಾಗಿದೆ.
    • ಇನ್ನು ಬೆಲ್ಲಕ್ಕೆ ನೈಸರ್ಗಿಕ ಬೆಲ್ಲದ ಬಣ್ನದ ಸಿಗಲು ಕೆಲವರು ರಾಸಾಯನಿಕ ಸೇರಿಸುತ್ತಾರೆ. ಇದನ್ನುನೀವು ಲ್ಯಾಬ್ ಪರೀಕ್ಷೆ ಮನೆಯಲ್ಲಿಯೇ ಮಾಡಿ ತಿಳಿಯಬಹುದು. ಅರ್ಧ ಚಮಚ ಬೆಲ್ಲವನ್ನು ಕರಗಿಸಿ, ಅದಕ್ಕೆ 6 ಮಿ. ಲೀಟರ್ ಮದ್ಯ ಸೇರಿಸಿ, ನಂತರ 20 ಹನಿ ಹೈಡ್ರೋಕ್ಲೋರಿಕ್ ಆಮ್ಲ ಮಿಕ್ಸ್ ಮಾಡಿ. ಕೃತಕ ಬಣ್ಣ ಸೇರಿಸಿದರೆ ಅದು ಪಿಂಕ್ ಬಣ್ಣಕ್ಕೆ ತಿರುಗುತ್ತದೆ.
English summary

Easy Steps to Identify the Purity of the Gur/Jaggery in Kannada

Here are easy steps to identify the purity of the gur/jaggery, read on.
X
Desktop Bottom Promotion