Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
ಬೆಂಗಳೂರಿನಲ್ಲಿ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ವಿಟಮಿನ್ ಡಿ ಕೊರತೆ ಕಾಣಿಸುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ವಿಟಮಿನ್ ಡಿ ನಮಗೆ ಸೂರ್ಯನ ಬೆಳಕಿನಲ್ಲಿ ಸಿಗುತ್ತದೆ, ಹಾಗಾದರೆ ಬೆಂಗಳೂರಿನಲ್ಲಿ ಬಿಸಿಲು ಬೀಳುತ್ತಿಲ್ಲವೇ? ಸೂರ್ಯನ ಬೆಳಕಿಗೆ ಕೊರತೆಯಿಲ್ಲ, ಆದರೆ ಜನರ ಜೀವನಶೈಲಿಯಿಂದಾಗಿ ಈ ಬಗೆಯ ಸಮಸ್ಯೆ ಕಾಣಿಸುತ್ತಿದೆ

ಬಹುತೇಕ ಜನರು ಮನೆಯೊಳಗಡೆ ಹಾಗೂ ಆಫೀಸ್ ಒಳಗಡೆ ಕಾಲ ಕಳೆಯುತ್ತಿದ್ದಾರೆ ಇದರಿಂದ ಸೂರ್ಯನ ಬಿಸಿಲು ಮೈ ಮೇಲೆ ಬೀಳುತ್ತಿಲ್ಲ ಹೀಗಾಗಿ ವಿಟಮಿನ್ ಡಿ ಕೊರತೆ ಉಂಟಾಗುತ್ತಿದೆ.
ತಮಗೆ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗೆ ವಿಟಮಿನ್ ಡಿ ಕೊರತೆ ಅಂತ ಹೆಚ್ಚಿನವರಿಗೆ ಗೊತ್ತಾಗುತ್ತಿಲ್ಲ. ನಿಮಗೆ ತುಂಬಾ ಸುಸ್ತಾಗುತ್ತಿದೆ, ಮೂಳೆಗಳು, ಸ್ನಾಯುಗಳು ಬಲಹೀನವಾಗಿವೆ, ಮೂಡ್ ಬದಲಾಗುತ್ತಿರುತ್ತದೆ ಎಂದಾದರೆ ಇವೆಲ್ಲಾ ವಿಟಮಿನ್ ಡಿ ಕೊರತೆಯ ಲಕ್ಷಣಗಳಾಗಿವೆ.

ವಿಟಮಿನ್ ಡಿ ಕೊರತೆ
ವಿಟಮಿನ್ ಡಿ ಕೊರತೆ ಉಂಟಾದರೆ ಈ ಬಗೆಯ ತೊಂದರೆಗಳು ಕಾಣಿಸಿಕೊಳ್ಳುವುದು
* ತಲೆಸುತ್ತು
* ಸರಿಯಾಗಿ ನಿದ್ದೆ ಬಾರದೇ ಇರುವುದು
* ಮೂಳೆಗಳಲ್ಲಿ ನೋವು
* ಖಿನ್ನತೆ, ದುಃಖ
* ಕೂದಲು ಉದುರುವುದು
* ಹೊಟ್ಟೆ ಹಾಳಾಗುವುದು
* ಬಿಳುಚಿಕೊಂಡ ತ್ವಚೆ
* ಆಗಾಗ ಕಾಯಿಲೆ ಬೀಳುವುದು ಇವೆಲ್ಲಾ ವಿಟಮಿನ್ ಡಿ ಕೊರತೆಯ ಲಕ್ಷಣಗಳಾಗಿವೆ.

ವಿಟಮಿನ್ ಡಿಯನ್ನು ಸೂರ್ಯನಿಂದ ಪಡೆದುಕೊಳ್ಳಿ
ದಿನಾ ಬೆಳಗ್ಗೆ ಒಂದು 9 ಗಂಟೆಯ ಒಳಗಡೆ ಒಂದು 15 ನಿಮಿಷ ಬಿಸಿಲಿನಲ್ಲಿ ನಿಂತುಕೊಳ್ಳಿ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ತ್ವಚೆ ವಿಟಮಿನ್ ಉತ್ಪತ್ತಿ ಮಾಡುತ್ತದೆ. ತನ್ನಷ್ಟಕ್ಕೆ ಉತ್ಪತ್ತಿ ಮಾಡುವುದಿಲ್ಲ. ಆದ್ದರಿಂದ ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಹೊತ್ತು ನಿಲ್ಲಿ, ಜೊತೆಗೆ ಸಂಜೆ ಹೊತ್ತು ಕೂಡ ಸ್ವಲ್ಪ ಹೊತ್ತು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದು ಒಳ್ಳೆಯದು.

ವಿಟಮಿನ್ ಡಿ ಸಪ್ಲಿಮೆಂಟ್
ವಿಟಮಿನ್ ಡಿ ಕೊರತೆ ಇರುವವರಿಗೆ ವೈದ್ಯರು ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.
ವಿಟಮಿನ್ ಡಿ ಸಪ್ಲಿಮೆಂಟ್ ಅಡ್ಡಪರಿಣಾಮ ಬೀರುವುದೇ?
ವಿಟಮಿನ್ ಡಿ ಸಪ್ಲಿಮೆಂಟ್ ದೊಡ್ಡ ತೊಂದರೆಯೇನು ಬೀರುವುದಿಲ್ಲ. ಆದರೆ ನೀವು ತುಂಬಾ ಓವರ್ ಡೋಸ್ ತೆಗೆದುಕೊಂಡರೆ ವಾಂತಿ, ಅತಿಯಾದ ಬಾಯಾರಿಕೆ, ಕಿಡ್ನಿ ಸ್ಟೋನ್ ಈ ಬಗೆಯ ಸಮಸ್ಯೆ ಕಂಡು ಬರುವುದು.

ಯಾರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದು?
ಬಿಳಿ ಬಣ್ಣದವರಿಗಿಂತ ಕಪ್ಪು ಮೈ ಬಣ್ಣದವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಮೈ ಬಣ್ಣ ಕಪ್ಪಾಗಿದ್ದರೆ ತ್ವಚೆ ಬೇಗನೆ ವಿಟಮಿನ್ ಡಿ ಉತ್ಪತ್ತಿ ಮಾಡಲ್ಲ. ಆದ್ದರಿಂದ ಸ್ವಲ್ಪ ಅಧಿಕ ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ನಾವು ಭಾರತೀಯರು ನಮ್ಮ ಮೈ ಬಣ್ಣಕ್ಕೆ ಕನಿಷ್ಠ 15 ನಿಮಿಷ ಬಿಸಿಲಿನಲ್ಲಿ ನಿಂತರೆ ವಿಟಮಿನ್ ಡಿ ಉತ್ಪತ್ತಿಯಾಗುವುದು.



Click it and Unblock the Notifications
