Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ಸ್ಪಟಿಕಗಳಿಗೆ ರೋಗನಿರೋಧಕ ಗುಣಗಳಿವೆ
21ನೇ ಶತಮಾನದಲ್ಲಿ ಜನರನ್ನು ಹೆಚ್ಚಾಗಿ ಕಾಡಿರುವ ಭಯಾನಕ ಕಾಯಿಲೆ ಎಂದರೆ ಅದು ಕೊರೊನಾವೈರಸ್. ಅನೇಕ ಮಾರಕ ಕಾಯಿಲೆಗಳು ಕಾಣಿಸಿಕೊಂಡಿದ್ದೆವು, ಆದರೆ ಜನರ ಬದುಕನ್ನು ಇಷ್ಟೊಂದು ನರಕ ಮಾಡಿರಲಿಲ್ಲ. ಇದೀಗ ಕೊರೊನಾವೈರಸ್‌ನಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ.

ಕೊರೊನಾವೈರಸ್‌ನಿಂದ ಪಾರಾಗಲು ಮುಖ್ಯವಾಗಿ ಬೇಕಾಗಿರುವುದು ರೋಗ ನಿರೋಧಕ ಶಕ್ತಿ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು, ಯಾವುದೇ ಆತಂಕ, ಚಿಂತೆಗಳಿರಬಾರದು, ಸರಿಯಾಗಿ ನಿದ್ದೆ ಮಾಡಬೇಕು ಅಲ್ಲದೆ ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗಿರುತ್ತದೆ. ಆದ್ದರಿಂದ ನಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ಪಟಿಕ ಕೂಡ ಪರಿಣಾಮಕಾರಿಯಾಗಿದೆ.
ಕೆಲವೊಂದು ಸ್ಪಟಿಕಗಳು ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ ಆರೋಗ್ಯ ವೃದ್ಧಿಸುವಲ್ಲಿ ತುಂಬಾನೇ ಪ್ರಯೋಜನಕಾರಿ. ಈ ಸ್ಪಟಿಕಗಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡುವ, ಖಿನ್ನತೆಯನ್ನು ಹೋಗಲಾಡಿಸುವ, ನಮ್ಮಲ್ಲಿ ಏಕಾಗ್ರತೆ ಹೆಚ್ಚಿಸುವ, ನಮ್ಮ ಮಾನಸಿಕ ಆರೋಗ್ಯ ಹೆಚ್ಚು ಮಾಡುವ ಗುಣಗಳಿವೆ.
ಇಲ್ಲಿ ಯಾವ ಸ್ಪಟಿಕ ನಮ್ಮ ಆರೋಗ್ಯ ವೃದ್ಧಿಸುವಲ್ಲಿ ಹೇಗೆ ಪರಿಣಾಮಕಾರಿ ಎಂದು ಹೇಳಿದ್ದೇವೆ ನೋಡಿ:

ರಕ್ತ-ಕೆಂಪು ಬಣ್ಣದ ಸ್ಪಟಿಕ
ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಶೀತ, ಜ್ವರ, ಸೋಂಕು, ಉರಿಯೂತ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾನೇ ಪ್ರಯೋಜನಕಾರಿ. ಕಾಯಿಲೆ, ಗಾಯ, ಸುಸ್ತು ಇವುಗಳನ್ನು ಹೋಗಲಾಡಿಸುವ ಗುಣ ಕೂಡ ಈ ಸ್ಪಟಿಕದಲ್ಲಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚಿಂತನೆ ಶೀಲತೆ, ತಾಳ್ಮೆ, ಕರುಣೆ ಈ ಗುಣಗಳನ್ನು ಹೆಚ್ಚಿಸುತ್ತದೆ . ಈ ಸ್ಪಟಿಕ ಹೃದಯ ಭಾಗಕ್ಕೆ ತಾಗುವಂತೆ ಧರಿಸಿದರೆ ಒಳ್ಳೆಯದು, ಆದ್ದರಿಂದ ಇದನ್ನು ಪೆಂಡೆಂಟ್ ಆಗಿ ಬಳಸಬಹುದು.

ಅಮೆಥಿಸ್ಟ್ ಅಥವಾ ಪದ್ಮರಾಗ ಸ್ಪಟಿಕ
ಇದು ತುಂಬಾ ರಕ್ಷಣೆಯ ಗುಣವಿರುವ ಶಕ್ತಿಯುತವಾದ ಸ್ಪಟಿಕವಾಗಿದೆ. ಇದು ಋಣಾತ್ಮಕ ಶಕ್ತಿಯನ್ನು ತಡೆಗಟ್ಟುತ್ತದೆ ಅಲ್ಲದೆ ಅಂಗಾಂಗಗಳನ್ನು ಶುದ್ಧ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ, ನಂತರ ದೈಹಿಕ, ಮಾನಸಿಕ ನೋವು, ಒತ್ತಡ ಕಡಿಮೆ ಮಾಡುತ್ತದೆ. ಇದು ತಲೆನೋವು ಕಡಿಮೆ ಮಾಡುತ್ತದೆ, ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುತ್ತದೆ. ಇದನ್ನು ಮೂರನೇ ಕಣ್ಣಿನ ಹತ್ತಿರ ಇಡುವುದರಿಂದ ತುಂಬಾ ಪ್ರಯೋಜನಪಡೆಯಬಹುದು. ಹಾಗಾಗಿ ಮಲಗುವ ದಿಂಬು ಅಡಿಯಲ್ಲಿ ಇಡಿ.

ಪಿಂಕ್ ಸ್ಮಿತ್‌ಸೋನೈಟ್ ಸ್ಪಟಿಕ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಸ್ಪಟಿಕವನ್ನು ಗಂಟಲಿನ ಬಳಿ ಅಥವಾ ಎದೆ ಬಳಿ ಧರಿಸುವುದು ಒಳ್ಳೆಯದು. ಆದ್ದರಿಂದ ಇದನ್ನು ಪೆಂಡೆಂಟ್ ಆಗಿ ಬಳಬಹುದು. ಇದು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದನ್ನು ಬೆಡ್‌ನ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು.

ಅಮೆಟ್ರಿನ್
ಇದನ್ನು ಅಮೆಥಿಸ್ಟ್ ಮತ್ತು ಸಿಟ್ರೈನ್ ಸಂಯೋಜನೆಯಲ್ಲಿ ತಯಾರಾದ ಸ್ಪಟಿಕವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ ನರಗಳ ಆರೋಗ್ಯ ವೃದ್ಧಿಸುತ್ತದೆ. ಇದು ದೈಹಿಕ, ಮಾನಸಿಕ ನೋವು ಹಾಗೂ ದುಃಖ ಹೋಗಲಾಡಿಸುವ ಗುಣ ಹೊಂದಿದೆ. ಅಜೀರ್ಣ ಸಂಬಂಧಿಸಿದ ಸಮಸ್ಯೆ ಇಲ್ಲವಾಗುವುದು. ಇದು ಋಣಾತ್ಮಕ ಶಕ್ತಿ ಹೊರಗಿಟ್ಟು, ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಹಾಗೂ ತಲೆಸುತ್ತು ಸಮಸ್ಯೆ ನಿವಾರಿಸಲು ಸಹಕಾರಿ. ಇದನ್ನು ತಲೆದಿಂಬಿನ ಅಡಿಯಲ್ಲಿ ಇಟ್ಟರೆ ಒಳ್ಳೆಯದು.

ಹಳದಿ ಕ್ಯಾಲಸೈಟ್ ಸ್ಪಟಿಕ
ಇದು ದೇಹಕ್ಕೆ ಮಲ್ಟಿವಿಟಮಿನ್ ಗುಣ ನೀಡುತ್ತದೆ ಹಾಗೂ ಒಟ್ಟು ಮೊತ್ತ ಆರೋಗ್ಯ ವೃದ್ಧಿಯಾಗುವಂತೆ ಮಾಡುವುದು. ಇದು ನಿಮ್ಮ ಸುತ್ತಲಿರುವ ಹಾಗೂ ಪರಿಸರದಲ್ಲಿರುವ ಋಣಾತ್ಮಕ ಶಕ್ತಿ ತೊಡೆದು ಹಾಕುತ್ತದೆ. ಇದನ್ನು ಜೀರ್ಣಕ್ರಿಯೆ ಭಾಗದಲ್ಲಿಇಟ್ಟರೆ ಒಳ್ಳೆಯದು. ಅಂದರೆ ಹೊಟ್ಟೆಗೆ ಕಟ್ಟಬಹುದು, ಇಲ್ಲಾ ನೀವು ಹೆಚ್ಚಾಗಿ ಸಮಯ ಕಳೆಯುವ ಜಾಗದಲ್ಲಿ ಇಡಬಹುದು.

ಲೆಪಿಡೋಲೈಟ್
ಇದು ಶುದ್ಧೀಕರಿಸುವ ಗುಣ ಹೊಂದಿರುವ ಪವರ್ ಫುಲ್ ಸ್ಪಟಿಕವಾಗಿದೆ. ಇದು ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುತ್ತದೆ. ಅಲ್ಲದೆ ಒತ್ತಡ, ಖಿನ್ನತೆ, ಮೂಡ್ ಸ್ವಿಂಗ್ ಹೋಗಲಾಡಿಸುತ್ತದೆ. ಇದನ್ನು ದಿಂಬಿನ ಕೆಳಗಡೆ ಇಟ್ಟರೆ ಪ್ರಯೋಜನ ಪಡೆಯಬಹುದು.

ಫ್ಲೂರೈಟ್
ಈ ಶಕ್ತಿಯುತವಾದ ಸ್ಟಟಿಕ ಕಶ್ಮಲಗಳನ್ನು ಹೊರಹಾಕುವಲ್ಲಿ ಪರಿಣಾಮಕಾರಿ. ಇದು ನಿಮ್ಮ ರೋಗನಿರೋಧಕ ಶಕ್ತಿ ಮೇಲೆ ಪ್ರಭಾವ ಬೀರುತ್ತದೆ, ಇದನ್ನು ಪ್ರತಿನಿತ್ಯ ಬಳಸಿದರೆ ನಿಮಗೆ ಧನಾತ್ಮಕ ಶಕ್ತಿ ದೊರೆಯುತ್ತದೆ. ಇದು ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ. ಇದನ್ನು ನಿಮ್ಮ ಮನೆಯ ಹಾಲ್‌ನಲ್ಲಿಡಿ.

ಸೆಲೆನೈಟ್ ಸ್ಪಟಿಕ
ಇದನ್ನು ನಿಮ್ಮ ದೇಹದಲ್ಲಿ ಬಾಧಿಸಿರುವ ಕಡೆ ಇಟ್ಟರೆ ಗುಣಮುಖವಾಗುವುದು. ಇದು ಋಣಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ. ಇದನ್ನು ಬರಿಗಾಲಿನಲ್ಲಿ ಕಾಲಿನ ಕೆಳಗಡೆ ಇಡಿ, ನಂತರ ನಿಧಾನಕ್ಕೆ ಉಸಿರಾಡಿ, ಇದು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಇದನ್ನು ಮನೆಯ ಕಿಟಕಿ ಬಳಿ ಇಟ್ಟರೆ ಅದರಿಂದ ಬರುವ ಗಾಳಿ ನಿಮ್ಮ ಧನಾತ್ಮಕ ಪ್ರಭಾವ ಬೀರುವುದು, ಮನೆಯಲ್ಲಿಯೂ ಧನಾತ್ಮಕ ಶಕ್ತಿ ತುಂಬುವುದು.

ಕಪ್ಪು ಟೂರ್‌ಮ್ಯಾಲೈನ್
ಈ ಸ್ಪಟಿಕ ದೈಹಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ. ಇದು ಮೆದುಳನ್ನು ನಿಯಂತ್ರಣದಲ್ಲಿಡುತ್ತದೆ, ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಬಗೆ ಹರಿಸಲು ಸಹಕಾರಿ. ಇದನ್ನು ನೀವು ಕೆಲಸ ಮಾಡುವ ಟೇಬಲ್ ಬಳಿ ಇಟ್ಟರೆ ಸಾಕು. ಅಲ್ಲದೆ ಇದರ ಚಿಕ್ಕ ನಾಲ್ಕು ಚುರುಗಳನ್ನು ಮನೆಯ ನಾಲ್ಕು ಮೂಲೆಗಳಲ್ಲಿ ಇಡಿ, ಇದು ಋಣಾತ್ಮಕ ಶಕ್ತಿ ಹೋಗಲಾಡಿಸಲು ಸಹಕಾರಿ.



Click it and Unblock the Notifications
