Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಈ ಮನೆಮದ್ದುಗಳಿಂದ ನರಹುಲಿ(ಕೆಡು) ಸಮಸ್ಯೆಗೆ ಹೇಳಿ ಬೈಬೈ!
ಸಾಮಾನ್ಯವಾಗಿ ನಿಮ್ಮ ಕೈ, ಕತ್ತು, ಕಾಲಿನ ಮೇಲೆ ಸಣ್ಣ ಗಂಟಿನ ರೀತಿಯ ಗುಳ್ಳೆಗಳು ಕಂಡುಬರುತ್ತವೆ. ಇದನ್ನ ಆಡುಭಾಷೆಯಲ್ಲಿ ಕೆಡು ಅಂತ ಕರೆಯಲಾಗುತ್ತಿದ್ದು, ವೈಜ್ಞಾನಿಕವಾಗಿ ನರಹುಲಿ ಎಂದು ಹೇಳಲಾಗುತ್ತದೆ. ಇವು ನಿಮ್ಮ ಬ್ಯಾಕ್ಟೀರಿಯಾಗಳ ಸಂಗ್ರಹಣೆಯಿಂದ ಉಂಟಾಗುತ್ತಿದ್ದು, ಇದರಿಂದ ಯಾವುದೇ ಗಂಭೀರ ಸಮಸ್ಯೆಗಳು ಆಗದೇ ಇದ್ದರೂ, ನಿಮ್ಮ ಸೌಂದರ್ಯವನ್ನು ಹಾಳುಮಾಡುವ ಕೆಲಸ ಮಾಡುತ್ತವೆ.

ಆದ್ದರಿಂದ ಇದನ್ನು ಕೀಳುವ, ಸುಡುವ, ಕತ್ತರಿಸುವ ಕೆಲಸ ಮಾಡುತ್ತಾರೆ. ಇದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಇದಕ್ಕೆ ನೀವು ವೈದ್ಯರನ್ನು ಸಂಪರ್ಕಿಸಬಹುದು ಅಥವಾ ಈ ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ನರಹುಲಿ ಸಮಸ್ಯೆಗೆ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಗಮ್ ಟೇಪ್ ಬಳಕೆ:
ಈ ವಿಧಾನವು ಸರಳವಾಗಿದ್ದು, ಸಾಮಾನ್ಯವಾಗಿ ಹೆಚ್ಚಿನವರು ಅನುಸರಿಸುವ ವಿಧಾನವಾಗಿದೆ. ನರಹುಲಿಗಳ ಮೇಲೆ ಸಣ್ಣ ಡಕ್ಟ್ ಟೇಪ್ ಬಿಗಿಯಾಗಿ ಹಚ್ಚಿ, ಸುಮಾರು ಆರು ದಿನಗಳವರೆಗೆ ಬಿಡಿ. ಆರನೇ ದಿನದಂದು ಟೇಪ್ ತೆಗೆದು, ಸುಮಾರು 20 ನಿಮಿಷಗಳ ಕಾಲ ನೀರಿನಲ್ಲಿ ಆ ಕೆಡು ಅಥವಾ ನರಹುಲಿಯನ್ನು ನೆನೆಯುವಂತರ ಮಾಡಿ. ತದನಂತರ, ಮೃದುವಾದ ಪ್ಯೂಮಿಸ್ ಸ್ಟೋನ್ ಅಥವಾ ಹೊಸ ನೇಲ್ ಶೇಪರ್ ನ ಮೇಲೆ ನಿಧಾನವಾಗಿ ಉಜ್ಜಿ. ಅದರೆ ನೆನಪಿಡಿ, ಈ ನೇಲ್ ಶೇಪರ್ ಅಥವಾ ಸ್ಟೋನನ್ನು ಮರುಬಳಕೆ ಮಾಡಬೇಡಿ.

ಟೀ ಟ್ರೀ ಆಯಿಲ್:
ಟೀ ಟ್ರೀ ಆಯಿಲ್ ಬಹುಪಯೋಗವನ್ನು ಹೊಂದಿದ್ದು, ಅದೇ ರೀತಿ ನರಹುಲಿ ಸಮಸ್ಯೆ ನಿವಾರಣೆಗೂ ಸಹಕಾರಿ. ನೀವು ಟೀ ಟ್ರೀ ಆಯಿಲ್‌ನ್ನು ಮೂರು ಹನಿ ಹರಳೆಣ್ಣೆ ಜೊತೆ ಸೇರಿಸಿ, ಮಿಕ್ಸ್ ಮಾಡಿ, ಅದನ್ನು ಹತ್ತಿ ಉಂಡೆ ಬಳಸಿ, ನಿಮ್ಮ ನರಹುಲಿಗಳ ಮೇಲೆ ಹಚ್ಚಿ. ದಿನಕ್ಕೆ ಎರಡು ಮೂರು ಬಾರಿ ಪುನರಾವರ್ತಿಸಿ. ನಿಧಾನವಾಗಿ ನಿಮ್ಮ ನರಹುಲಿ ಸಮಸ್ಯೆ ಮಾಯವಾಗುವುದು.

ನೇಲ್ ಪಾಲಿಷ್:
ಆಶ್ಚರ್ಯವಾಗ್ತಿದ್ಯಾ? ಹೌದು, ನೇಲ್ ಪಾಲಿಶ್ ಸಹ ನರಹುಲಿ ಸಮಸ್ಯೆ ನಿವಾರಿಸಬಹುದು. ನಿಮಗೆ ನರಹುಲಿ ಆಗಿರುವ ಜಾಗದ ಮೇಲೆ ಎರಡರಿಂದ ಮೂರು ಪದರಗಳ ನೇಲ್ ಪಾಲಿಶ್ ಹಚ್ಚಿ. ಇದನ್ನು ದಿನಕ್ಕೆ 2 ರಿಂದ 3 ಬಾರಿ ಮಾಡಿ. ಇದು ನರಹುಲಿಗಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ಈ ಮೂಲಕ ಅದು ತಾನಾಗಿಯೇ ಉದುರುತ್ತದೆ.

ಆಸ್ಪಿರಿನ್:
ಆಸ್ಪಿರಿನ್ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿದ್ದು, ಇವು ನರಹುಲಿಗಳಿಗೆ ಬಳಕೆ ಮಾಡುವ ಸಾಮಾನ್ಯ ಚಿಕಿತ್ಸೆಯಾಗಿದೆ. ಆದ್ದರಿಂದ ಪುಡಿಮಾಡಿದ ಆಸ್ಪಿರಿನ್ ಟ್ಯಾಬ್ಲೆಟ್ ಅನ್ನು ನೀರಿನೊಂದಿಗೆ ಬೆರೆಸಿ, ಅದನ್ನು ನರಹುಲಿಗಳ ಮೇಲೆ ಹಚ್ಚಿ ರಾತ್ರಿಯಿಡೀ ಬಿಡಿ. ಹೀಗೆ ಆಗಾಗ ಮಾಡುವುದರಿಂದ ನಿಮ್ಮ ನರಹುಲಿ ಸಮಸ್ಯೆ ನಿವಾರಣೆಯಾಗುವುದು.

ವಿಟಮಿನ್ ಇ ಮಾತ್ರೆ:
ವಿಟಮಿನ್ ಇ ಮಾತ್ರೆ ಸಹ ನರಹುಲಿ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ವಿಟಮಿನ್ ಇ ಕ್ಯಾಪ್ಸುಲ್ ಚುಚ್ಚಿ, ಅದರಲ್ಲಿರುವ ಎಣ್ಣೆಯನ್ನು ನರಹುಲಿಗಳಿಗೆ ಹಚ್ಚಿ, ಬ್ಯಾಂಡೇಜ್ನೊಂದಿಗೆ ಕವರ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ನೀವು ಇದನ್ನು ಎರಡು ವಾರಗಳವರೆಗೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಧಾನವಾಗಿ ನಿಮ್ಮ ನರಹುಲಿ ಸಮಸ್ಯೆ ಮಾಯವಾಗುವುದು.

ವಿಟಮಿನ್ ಸಿ ಟ್ಯಾಬ್ಲೆಟ್:
ಹೌದು, ವಿಟಮಿನ್ ಸಿ ನಿಮ್ಮ ರೋಗ ನಿರೋಧಕ ಶಕ್ತಿ ಮಾತ್ರ ಹೆಚ್ಚಿಸುವುದಲ್ಲದೇ ನಿಮ್ ನರಹುಲಿಯ ಸಮಸ್ಯೆಗೆ ಉತ್ತಮ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೀವು ಆಸ್ಪಿರಿನ್‌ನಂತೆ, ಆ ಮಾತ್ರೆಗಳನ್ನು ಪುಡಿ ಮಾಡಿ, ನೀರಿನೊಂದಿಗೆ ಬೆರೆಸಿ, ನರಹುಲಿ ಆಗಿರುವ ಜಾಗಕ್ಕೆ ಹಚ್ಚಿ, ರಾತ್ರಿಯಿಡಿ ಬಿಡಿ. ಇದನ್ನು ಸುಮಾರು ಎರಡು ವಾರಗಳವರೆಗೆ ಮುಂದುವರಿಸಬೇಕಾಗುತ್ತದೆ.

ಅಲೋವೆರಾ:
ಅಲೋವೆರಾ ಉಪಯೋಗಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ಒಂದು ಈ ನರಹುಲಿಗೂ ಸೇರಿಕೊಂಡಿದೆ. ಇದಕ್ಕಾಗಿ ನೀವು ತಾಜಾ ಅಲೋವೆರಾ ಎಲೆಯನ್ನು ಬಳಸಬೇಕಾಗುತ್ತದೆ. ಅದರ ಜೆಲ್ ತೆಗೆದು, ನೇರವಾಗಿ ನರಹುಲಿಗಳಿಗೆ ಅನ್ವಯಿಸಿ. ನರಹುಲಿಗಳು ನಿವಾರಣೆಯಾಗುವ ತನಕ ಇದನ್ನು ಪ್ರತಿದಿನ ಪುನರಾವರ್ತಿಸಬೇಕಾಗುತ್ತದೆ.

ಹರಳೆಣ್ಣೆ:
ಹರಳೆಣ್ಣೆಯನ್ನು ಪ್ರತಿದಿನ ಸುಮಾರು ಮೂರು ವಾರಗಳವರೆಗೆ ಅಥವಾ ನರಹುಲಿ ಬೀಳುವವರೆಗೆ ನರಹುಲಿಗಳ ಮೇಲೆ ಹಚ್ಚುತ್ತಾ ಇರಿ. ಇದು ಸಹ ಮ್ಯಾಜಿಕ್ ರೀತಿ ಕಾರ್ಯನಿರ್ವಹಿಸುತ್ತದೆ.



Click it and Unblock the Notifications











