Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಅಬ್ಬಾ! ಹೊಕ್ಕಳಿಗೆ ತುಪ್ಪ ಹಚ್ಚಿದರೆ ಇಷ್ಟೆಲ್ಲಾ ಪ್ರಯೋಜನವಿದೆಯೇ?
ತುಪ್ಪವನ್ನು ಆಯುರ್ವೇದದಲ್ಲಿ ಅನೇಕ ಬಗೆಯ ಚಿಕಿತ್ಸೆಯಲ್ಲಿ ಬಳಸಲಾಗುವುದು. ಆಯುರ್ವೇದದಲ್ಲಿ ಅನೇಕ ಔಷಧಗಳಲ್ಲಿ ತುಪ್ಪವನ್ನು ಬಳಸಲಾಗುವುದು. ಇದನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ತುಪ್ಪ ತಿನ್ನುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

ಇನ್ನು ಅನೇಕ ಥೆರಪಿಯಲ್ಲಿ ತುಪ್ಪವನ್ನು ಬಳಸಲಾಗುವುದು. ಆಯುರ್ವೇದ ಮಸಾಜ್‌ಗಳಲ್ಲಿ ತುಪ್ಪ ಬಳಸಲಾಗುತ್ತದೆ. ತುಪ್ಪವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು, ಅದರಿಂದ ಮಸಾಜ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು, ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು. ಒಟ್ಟಿನಲ್ಲಿ ತುಪ್ಪ ಆರೋಗ್ಯವರ್ಧನೆ, ಸೌಂದರ್ಯವರ್ಧನೆ ಮಾಡುತ್ತದೆ.
ಇನ್ನು ತುಪ್ಪವನ್ನು ಹೊಕ್ಕಳಿನ ಭಾಗಕ್ಕೆ ಹಚ್ಚುವುದರಿಂದ ಹಲವು ಆರೋಗ್ಯಕರ ಗುಣಗಳನ್ನು ಪಡೆಯಬಹುದು ಗೊತ್ತಾ? ಅದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ತುಪ್ಪವನ್ನು ಹೊಕ್ಕಳಿನ ಭಾಗಕ್ಕೆ ಹಚ್ಚುವುದರ ಹಿಂದಿರುವ ಲಾಜಿಕ್
ಮೊದಲಿಗೆ ತುಪ್ಪವನ್ನು ಹೊಕ್ಕಳಿನ ಭಾಗಕ್ಕೆ ಹಚ್ಚುವುದರ ಹಿಂದಿರುವ ಲಾಜಿಕ್ ಏನು ನೋಡೋಣ:
ಗರ್ಭದಲ್ಲಿರುವ ಮಗುವಿಗೆ ಎಲ್ಲಾ ಪೋಷಕಾಂಶಗಳು ತಾಯಿಯ ಜರಾಯುವಿನ ಮೂಲಕ ದೊರೆಯುತ್ತದೆ, ಜರಾಯು ಹೊಕ್ಕಳಿನೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ಮಗುವಿಗೆ ಪೋಷಕಾಂಶ ದೊರೆಯುತ್ತದೆ. ಅದೇ ರೀತಿ ನಿಮ್ಮ ಹೊಕ್ಕಳಿಗೆ ತುಪ್ಪ ಹಚ್ಚಿದರೆ ಅದರ ಗುಣ ಇಡೀ ದೇಹಕ್ಕೆ ದೊರೆಯುತ್ತದೆ. ಹೊಕ್ಕಳಿಗೆ ತುಪ್ಪ ಹಚ್ಚುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:

ತ್ವಚೆ ಕಾಂತಿ ಹೆಚ್ಚಿಸುತ್ತೆ
ಹೊಕ್ಕಳಿಗೆ ತುಪ್ಪ ಹಚ್ಚುವುದರಿಂದ ತ್ವಚೆ ಕಾಂತಿ ಹೆಚ್ಚುತ್ತೆ, ರಾತ್ರಿ ಹೊತ್ತಿನಲ್ಇ ಹೊಕ್ಕಳಿಗೆ ತುಪ್ಪ ಹಚ್ಚಿದರೆ ಇದರಿಂದ ಮೊಡವೆ ಕಡಿಮೆಯಾಗುವುದು, ಮುಖದ ಆಂತಿ ಹೆಚ್ಚುವುದು, ಬೇಗನೆ ಮುಪ್ಪಾಗಲ್ಲ.

ಕೂದಲಿನ ಬೆಳವಣಿಗೆಗೆ ಒಳ್ಳೆಯದು
ಕೂದಲು ತುಂಬಾ ಡ್ರೈಯಾಗಿದ್ದರೆ ತುಪ್ಪ ಮಸಾಜ್ ಮಾಡಿದರೆ ಕೂದಲಿನ ಕಾಂತಿ ಹೆಚ್ಚುವುದು, ಅಲ್ಲದೆ ಕೂದಲು ಕೂಡ ಸೊಂಪಾಗಿ ಬೆಳೆಯುವುದು, ಕೂದಲು ಉದುರುವುದು ಕಡಿಮೆಯಾಗುವುದು.

ಮಂಡಿ ನೋವು ಕಡಿಮೆಯಾಗುವುದು
ಮಂಡಿ ನೋವಿಗೆ ಅತ್ಯುತ್ತಮವಾದ ಮನೆಮದ್ದಾಗಿದೆ. ರಾತ್ರಿ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಲಗುವುದರಿಂದ ಮಂಡಿನೋವು ಕಡಿಮೆಯಾಗುವುದು. ಮಂಡಿನೋವು ಇದ್ದರೆ ಇದನ್ನು ಟ್ರೈ ಮಾಡಿ ನೋಡಿ.

ಹೊಟ್ಟೆ ನೋವು ಕಡಿಮೆಯಾಗುತ್ತೆ ಹಾಗೂ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತೆ
ಆಗಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆಯೇ? ಈ ರೀತಿಯ ಸಮಸ್ಯೆ ಇದ್ದರೆ ಹೊಕ್ಕಳಿಗೆ ತುಪ್ಪವನ್ನು ಹಚ್ಚಿ, ಈ ರೀತಿ ಮಾಡಿದರೆ ವಾರದೊಳಗೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುವುದು.

ಮುಟ್ಟಿನ ನೋವು ಕಡಿಮೆಯಾಗುವುದು
ಕೆಲವರಿಗೆ ಮುಟ್ಟಿನ ಸಮಯದಲ್ಲಿ ಅಸಾಧ್ಯ ಹೊಟ್ಟೆ ನೋವು ಇರುತ್ತದೆ. ಹೊಕ್ಕಳಿಗೆ ತುಪ್ಪವನ್ನು ಹಚ್ಚುವುದರಿಂದ ಮುಟ್ಟಿನ ನೋವು ಕಡಿಮೆಯಾಗುವುದು. ಪ್ರತಿ ತಿಂಗಳು ನೋವು ನಿವಾರಕ ಔಷಧಗಳನ್ನು ಸೇವಿಸಿದರೆ ಅದರ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅದರ ಬದಲಿಗೆ ಈ ವಿಧಾನ ಟ್ರೈ ಮಾಡಿ. ಇದರಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲ. ಹೊಕ್ಕಳಿಗೆ ತುಪ್ಪ ಹಚ್ಚುವುದರಿಂದ ಪ್ರಯೋಜನವಿದೆ ಹೊರತು ಯಾವುದೇ ಹಾನಿಯಿಲ್ಲ.
ಇಷ್ಟೆಲ್ಲಾ ಪ್ರಯೋಜನ ಇರುವುದರಿಂದ ಹೊಕ್ಕಳಿಗೆ ಸ್ವಲ್ಪ ತುಪ್ಪ ಹಚ್ಚಿ ಮಸಾಜ್ ಮಾಡಿ, ಪರಿಣಾಮ ನೀವೇ ನೋಡುವಿರಿ.



Click it and Unblock the Notifications