Latest Updates
-
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ?
ಈ ಸ್ಟ್ರಾಬೆರಿ ಪಾನೀಯ ನಿಮ್ಮ ಜೀರ್ಣಾಂಗವ್ಯೂಹಕ್ಕೆ ಬಹಳ ಒಳ್ಳೆಯದು!
ಹುದುಗಿಸಿದ ಉಪ್ಪಿನಕಾಯಿ, ನೆಲ್ಲಿಕಾಯಿ ರುಚಿ ಯಾರಿಗೆ ಇಷ್ಟ ಇಲ್ಲ ಹೇಳಿ??? ಎಲ್ಲರಿಗೂ ಪ್ರಿಯ ಇಂತಹ ಆಹಾರಗಳು. ನಮ್ಮ ಪೂರ್ವಜರು ಹೆಚ್ಚಾಗಿ ಈ ಹುದುಗಿಸಿದ ಆಹಾರವನ್ನು ಹೆಚ್ಚು ಬಳಕೆ ಮಾಡುತ್ತಿದ್ದರು. ಅದರಿಂದಲೇ ಅವರ ಆರೋಗ್ಯವಾಗಿ ಬಹುಕಾಲ ಜೀವನ ಸಾಗಿಸಿದ್ದರು. ಆದರೆ, ಈಗಿನವರಿಗೆ ಈ ಆಹಾರದ ಮಹತ್ವ, ಜೊತೆಗೆ ಅಂತಹ ಆಹಾರ ತಯಾರಿಸುವ ಕಲೆ ಅಷ್ಟಾಗಿ ತಿಳಿದಿಲ್ಲ. ಅದಕ್ಕಾಗಿ ನಾವಿಂದು ನಿಮ್ಮ ಜೀರ್ಣಾಂಗವ್ಯೂಹಕ್ಕೆ ಉತ್ತಮವಾಗಿರುವ ಸ್ಟ್ರಾಬೆರಿ ಪಾನೀಯವನ್ನು ತಿಳಿಸಿಕೊಡಲಿದ್ದೇವೆ. ಇದನ್ನು ಹುದುಗಿಸುವಿಕೆಯ ಹೇಗೆ ಸುಲಭವಾಗಿ ತಯಾರಿಸಬಹುದು? ಇದರಿಂದ ಎಂತಹ ಲಾಭವಿದೆ ಎಂಬುದನ್ನು ನೋಡೋಣ.


ಹುದುಗಿಸುವಿಕೆಯಿಂದ ತಯಾರಾದ ಆಹಾರಗಳ ಪ್ರಯೋಜನವೇನು?:
ಹುದುಗಿಸುವಿಕೆಯ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಉತ್ತಮ ಬ್ಯಾಕ್ಟೀರಿಯಾಗಳು ವಿಟಮಿನ್ ಮತ್ತು ಖನಿಜಗಳನ್ನು ಉತ್ಪಾದಿಸುತ್ತವೆ. ಜೊತೆಗೆ ಪ್ರೊಟೀನೇಸ್ ಮತ್ತು ಪೆಪ್ಟಿಡೇಸ್‌ನಂತಹ ಕಿಣ್ವಗಳೊಂದಿಗೆ ಜೈವಿಕವಾಗಿ ಸಕ್ರಿಯವಾಗಿರುವ ಪೆಪ್ಟೈಡ್‌ಗಳನ್ನು ಉತ್ಪಾದಿಸಿ, ಕೆಲವು ಅನುಪಯುಕ್ತ ಅಂಶಗಳನ್ನು ತೆಗೆದುಹಾಕುತ್ತವೆ. ಈ ಪೆಪ್ಟೈಡ್ ಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿ, ದೀರ್ಘಾವಧಿಯಲ್ಲಿ ಆರೋಗ್ಯಕರವಾಗಿ ಬದುಕಲು ಸಹಾಯ ಮಾಡುತ್ತದೆ.
ಆದರೆ, ಇಂತಹ ಆಹಾರ ಸೇವಿಸಲು ಬಹಳಷ್ಟು ಜನ ಹಿಂದೆ ಸರಿಯುತ್ತಾರೆ. ಏಕೆಂದರೆ ಅಂತಹ ಜನರಿಗೆ ಹುದುಗುವಿಕೆಯ ಪ್ರಕ್ರಿಯೆಯ ಸರಿಯಾದ ಅರಿವಿರುವುದಿಲ್ಲ. ಅದಕ್ಕಾಗಿ ನಾವಿಂದು, ಸ್ಟ್ರಾಬೆರಿ ಬಳಸಿಕೊಂಡು, ಹುದುಗಿಸುವಿಕೆಯ ಮೂಲಕ ಬಹಳ ಆರೋಗ್ಯಕರವಾರ ಪಾನೀಯ ಹೇಗೆ ತಯಾರಿಸುವುದು ಎಂಬುದನ್ನು ಹಂತಹಂತವಾಗಿ ತಿಳಿಸಲಿದ್ದೇವೆ.
ಹುದುಗಿಸುವಿಕೆ ಪ್ರಕ್ರಿಯೆಯಲ್ಲಿ ನೀವು ಕಲಿಯಬೇಕಾದ ಪ್ರಮುಖ ತಂತ್ರವೆಂದರೆ, ಆರಂಭಿಕ ಹುದುಗುವಿಕೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಬಾಟಲಿಗಳನ್ನು ಬರ್ಪ್ ಮಾಡುವುದು. ಅಂದಹಾಗೇ ಈ ಬರ್ಫೀಂಗ್ ಅಂದರೆ, ನೀವು ಪಾನೀಯ ಸಂಗ್ರಹಿಸಿಟ್ಟ ಬಾಟಲಿಯ ಹೆಚ್ಚುವರಿ ಒತ್ತಡವನ್ನು ತೆಗೆಯಲು, ಆಗಾಗ ಬಾಟಲಿಯ ಮುಚ್ಚಳವನ್ನು ಪ್ರತಿ 2-3 ದಿನಗಳಿಗೊಮ್ಮೆ ತೆರೆಯಿರಿ. ಇಲ್ಲವಾದಲ್ಲಿ ಅದರಲ್ಲಿ ಇಂಗಾಲದ ಡೈಆಕ್ಸೈಡ್ ಸಂಗ್ರಹಗೊಳ್ಳಲು ಪ್ರಾರಂಭವಾಗಿ, ಸ್ಫೋಟಕ ಸನ್ನಿವೇಶಗಳಿಗೆ ಕಾರಣವಾಗುತ್ತದೆ.

ಆರೋಗ್ಯಕರ ಸ್ಟ್ರಾಬೆರಿ ಪಾನೀಯ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ:
ಬೇಕಾಗುವ ಪದಾರ್ಥಗಳು:
3 ಕಪ್ ಸಿಹಿ ಸ್ಟ್ರಾಬೆರಿ
3 ಕಪ್ ಸಕ್ಕರೆ
12 ಕಪ್ ನೀರು
3 ನಿಂಬೆ

ತಯಾರಿಸುವ ವಿಧಾನ:
- ಒಂದು ಜಾರ್‌ಗೆ ಸಕ್ಕರೆ ಹಾಕಿ, ಅದು ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಬೆರೆಸಿ.
- ತದನಂತರ, ಸ್ಟ್ರಾಬೆರಿಗಳನ್ನು ಕಟ್ ಮಾಡಿ, ಅದೇ ಜಾರ್‌ಗೆ ಸೇರಿಸಿ, ಮುಚ್ಚಿಡಿ.
- ಇದನ್ನು ಒಂದು ತಂಪಾದ ಜಾಗದಲ್ಲಿಟ್ಟು, ಪ್ರತಿದಿನ ಮುಚ್ಚಳ ತೆಗೆದು, ಒಮ್ಮೆ ಚೆನ್ನಾಗಿ ಬೆರೆಸಿ.
- 5 ದಿನಗಳ ನಂತರ, ಈ ಮಿಶ್ರಣದಲ್ಲಿ ಗುಳ್ಳೆಗಳು ಬರಲು ಪ್ರಾರಂಭವಾಗುತ್ತದೆ.
- ಹಾಗೆಯೇ ಮುಂದುವರಿಯಲಿ, ಸಂದರ್ಭಕ್ಕೆ ತಕ್ಕಂತೆ ರುಚಿ ನೋಡುತ್ತಿರಿ. ಹವಾಮಾನವನ್ನು ಅವಲಂಬಿಸಿ ಈ ಹುದುಗುವಿಕೆ ಪ್ರಕ್ರಿಯೆ 8-12 ದಿನಗಳನ್ನು ತೆಗೆದುಕೊಳ್ಳಬಹುದು.
- ತದನಂತರ, ಅದರಿಂದ ನಿಮಗೆ ಹಿತಕರವಾದ ಸುವಾಸನೆ ಬರಲಾರಂಭಿಸಿದರೆ, ಆ ಪಾನೀಯವನ್ನು ಸೋಸಿ.
- ಈ ಮಿಶ್ರಣಕ್ಕೆ ನಿಂಬೆ ರಸ ಸೇರಿಸಿ, ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿಡಿ.
- ಕುಡಿಯುವ ಮುನ್ನ ಅದನ್ನು ಫ್ರಿಜ್‌ನಲ್ಲಿಡುವುದರಿಂದ, ಉಲ್ಲಾಸದಾಯಕ ಅನುಭವ ಸಿಗುವುದು.



Click it and Unblock the Notifications