Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೊಳ್ಳೆ ಕಡಿತಕ್ಕೆ ತಕ್ಷಣದ ಬಾಳೆ ಹಣ್ಣಿನ ಸಿಪ್ಪೆಯ ಚಿಕಿತ್ಸೆ ಹೇಗೆ?
ಸೊಳ್ಳೆ ಹಾಗೂ ಅದರ ಕಡಿತ ಎಂದರೆ ಯಾರಿಗೆ ಪರಿಚಯವಿಲ್ಲ ಹೇಳಿ? ಸಾಮಾನ್ಯವಾಗಿ ಎಲ್ಲರಿಗೂ ಸೊಳ್ಳೆ ಹಾಗೂ ಅದರ ಕಡಿತದ ಅನುಭವ ಇದ್ದೇ ಇರುತ್ತದೆ. ಕೆಲವರು ಅಧಿಕ ಬಾರಿ ಸೊಳ್ಳೆಯ ಕಡಿತಕ್ಕೆ ಒಳಗಾದರೆ ಇನ್ನೂ ಕೆಲವರು ವಿರಳವಾಗಿ ಸೊಳ್ಳೆಯ ದಾಳಿಗೆ ಒಳಗಾಗಿರುತ್ತಾರೆ ಅಷ್ಟೆ. ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ಆಗಮನ ಪಡೆಯುವ ಸೊಳ್ಳೆಗಳು ಅನೇಕ ಕಾಯಿಲೆಗಳನ್ನು ಹರಡುತ್ತವೆ.
ನಂಜಿನ ಪ್ರಕೃತಿಯವರಾಗಿದ್ದರೆ ಸೊಳ್ಳೆಯ ಕಡಿತವು ದೊಡ್ಡ ಗಾಯವಾಗುವ ಸಾಧ್ಯತೆಗಳು ಇರುತ್ತವೆ. ಸಾಮಾನ್ಯವಾಗಿ ಸೊಳ್ಳೆ ಕಡಿದಾಗ ಚರ್ಮವು ತುರಿಕೆ ಹಾಗೂ ಬೊಬ್ಬೆಗಳಿಂದ ಕೂಡಿರುತ್ತವೆ. ಕೆಲವೊಮ್ಮೆ ಇವು ಕಡಿದ ಸ್ಥಳದಲ್ಲಿ ಕಲೆಗಳು ಅಥವಾ ಗಾಯವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸೊಳ್ಳೆ ಚಿಕ್ಕ ಕೀಟವಾದರೂ ಅದರ ಬಗ್ಗೆ ಒಂದು ರೀತಿಯ ಭಯ ಎಲ್ಲರಲ್ಲೂ ಇರುವುದು.

ಸೊಳ್ಳೆ ಕಡಿತದ ನೋವು ಹಾಗೂ ತುರಿಕೆಗೆ ಬಲು ಸುಲಭವಾದ ಮನೆ ಪರಿಹಾರವೆಂದರೆ ಬಾಳೆ ಹಣ್ಣಿನ ಸಿಪ್ಪೆ. ಬಾಳೆ ಹಣ್ಣಿನ ಸಿಪ್ಪೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳ ನಿವಾರಣೆಗೆ ಸಹಕರಿಸುತ್ತದೆ. ಜೊತೆಗೆ ಉತ್ತಮ ಪೋಷಕಾಂಶಗಳೊಂದಿಗೆ ಚರ್ಮವನ್ನು ರಕ್ಷಿಸುವುದು. ಹಾಗಾಗಿ ಉಳಿದ ಹಣ್ಣು ಹಾಗೂ ತರಕಾರಿಯ ಸಿಪ್ಪೆಗಳಿಗೆ ಹೋಲಿಸಿದರೆ ಬಾಳೆಹಣ್ಣಿನ ಸಿಪ್ಪೆ ಉತ್ತಮ ಔಷಧೀಯ ಗುಣವನ್ನು ಒಳಗೊಂಡಿದೆ.
ಸೊಳ್ಳೆ ಕಡಿತಕ್ಕೆ ಒಳಗಾದಾಗ ಬಾಳೆ ಹಣ್ಣಿನ ಸಿಪ್ಪೆಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳುವುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ಬಹಳ ವಿವರವಾಗಿ ವಿವರಿಸಿದೆ.
ವಿಧಾನ-1:
* ಒಂದು ಬಾಳೆಹಣ್ಣು ಮತ್ತು ಚಾಕುವನ್ನು ತೆಗೆದುಕೊಳ್ಳಿ.
* ಬಾಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ಪಕ್ಕಕ್ಕೆ ಇಡಿ.
* ಸುಲಿದ ಭಾಗವನ್ನು ಒಂದು ಬೌಲ್‍ನಲ್ಲಿ ಹಾಕಿ, ಅದಕ್ಕೆ ಕೆಲವು ಹನಿ ಗ್ಲಿಸರಿನ್ ಅನ್ನು ಸೇರಿಸಿ.
* ಸಿಪ್ಪೆಯ ಸಾರ ಮತ್ತು ಗ್ಲಿಸರಿನ್ ಅನ್ನು ಚೆನ್ನಾಗಿ ರುಬ್ಬಿ ಮಿಶ್ರಗೊಳಿಸಿ.
* ಕೆಲವು ನಿಮಿಷಗಳ ಕಾಲ ಮಿಶ್ರಣವನ್ನು ವಿಶ್ರಾಂತಿಸಲು ಬಿಡಿ.
* ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಅನ್ವಯಿಸಿ.
* ಒಂದು ಗಂಟೆಗಳ ಕಾಲ ಆರಲು ಬಿಡಿ.
* ಬಳಿಕ ವೃತ್ತಾಕಾರದ ಚಲನೆಯಲ್ಲಿ ಮುಖವನ್ನು ಮಸಾಜ್ ಮಾಡಿ, ತಂಪಾದ ನೀರಿನಿಂದ ಸ್ವಚ್ಛಗೊಳಿಸಿ.
* ಟವೆಲ್ ಸಹಾಯದಿಂದ ಮುಖವನ್ನು ಒಣಗಿಸಿ.
* ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಎರಡು ಬಾರಿ ಈ ಪ್ರಕ್ರಿಯೆಯನ್ನು ಅನ್ವಯಿಸಬಹುದು. ಸಿಪ್ಪೆ ತೆಗೆದಿಟ್ಟ ಬಾಳೆಹಣ್ಣನ್ನು ಸೇವಿಸಬಹುದು.
ಪ್ರಯೋಜನಗಳು:
* ಬಾಳೆ ಹಣ್ಣಿನ ಸಿಪ್ಪೆಯು ಉರಿಯೂತ ನಿವಾರಣೆಯ ಶಕ್ತಿಯನ್ನು ಒಳಗೊಂಡಿದೆ. ಇದು ಸೊಳ್ಳೆ ಕಡಿತದಿಂದ ಉಂಟಾದ ಗುಳ್ಳೆಯ ಗಾತ್ರವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಾಲಕ್ರಮೇಣ ಅಳಿಸಿ ಹೋಗುವಂತೆ ಮಾಡುವುದು.
* ಸೊಳ್ಳೆ ಕಡಿದಾಗ ಉಂಟಾಗುವ ತುರಿಕೆಯನ್ನು ಇದು ಕಡಿಮೆ ಮಾಡುವುದು.
* ಇದು ನೋವನ್ನು ಕಡಿಮೆ ಮಾಡಿ, ತಂಪಾದ ಅನುಭವವನ್ನು ನೀಡುವುದು.
* ಇದರೊಟ್ಟಿಗೆ ಗ್ಲಿಸರಿನ್ ಬಳಸುವುದರಿಂದ ಪೀಡಿತ ಪ್ರದೇಶವು ಮೃದುವಾಗಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಕಲೆ ಗಾಢವಾಗಿ ಉಳಿಯದಂತೆ ನೋಡುವುದು.
ವಿಧಾನ-2:
* ಒಂದು ಬೌಲ್ ಅಲ್ಲಿ ಬಾಳೆ ಹಣ್ಣಿನ ಸಿಪ್ಪೆಯನ್ನು ಹಾಕಿ.
* ಸಿಪ್ಪೆಯೊಂದಿಗೆ ಗುಲಾಬಿ ನೀರನ್ನು ಸೇರಿಸಿ, ಚೆನ್ನಾಗಿ ಪೇಸ್ಟ್ ಮಾಡಿ.
* ಕೆಲವು ನಿಮಿಷಗಳ ಕಾಲ ಮಿಶ್ರಣವನ್ನು ವಿಶ್ರಮಿಸಲು ಬಿಡಿ. ಬಳಿಕ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
* ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್ ಅನ್ನು ತುಂಡರಿಸಿ ಹಾಕಿ. ಬಳಿಕ ಬಟ್ಟೆಯನ್ನು ಬಿಗಿಯಾಗಿ ಗಂಟು ಕಟ್ಟಿ.
* ಮಿಶ್ರಣವನ್ನು ಅನ್ವಯಿಸಿದ ಪ್ರದೇಶಗಳ ಮೇಲೆ ಐಸ್ ಗಂಟನ್ನು ಇಡಿ.
* ಕಡಿಮೆ ಎಂದರೂ ಅರ್ಧ ಗಂಟೆಗಳ ಕಾಲ ಪೀಡಿತ ಪ್ರದೇಶದ ಮೇಲೆ ಐಸ್ ಗಂಟನ್ನು ಇಡಿ.
* ಬಳಿಕ ನೀರಿನಿಂದ ಪೀಡಿತ ಪ್ರದೇಶವನ್ನು ಸ್ವಚ್ಛಗೊಳಿಸಿ. ಟವೆಲ್ ನಿಂದ ಒಣಗಿಸಿ.
* ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಎರಡು ಬಾರಿ ಈ ಪ್ರಕ್ರಿಯೆಯನ್ನು ಅನ್ವಯಿಸಿ.
ಪ್ರಯೋಜನಗಳು:
* ಬಾಳೆ ಹಣ್ಣಿನ ಸಿಪ್ಪೆಯು ಉರಿಯೂತ ನಿವಾರಣೆಯ ಶಕ್ತಿಯನ್ನು ಒಳಗೊಂಡಿದೆ. ಇದು ಸೊಳ್ಳೆ ಕಡಿತದಿಂದ ಉಂಟಾದ ಗುಳ್ಳೆಯ ಗಾತ್ರವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಾಲಕ್ರಮೇಣ ಅಳಿಸಿ ಹೋಗುವಂತೆ ಮಾಡುವುದು.
* ಐಸ್ ಕ್ಯೂಬ್ ಸೊಳ್ಳೆ ಕಡಿದಾಗ ಉಂಟಾಗುವ ತುರಿಕೆ ಮತ್ತು ನೋವನ್ನು ಶಮನಗೊಳಿಸುವುದು.
* ಗುಲಾಬಿ ನೀರು ಹಿತವಾದ ಸಂವೇದನೆ ನೀಡುವುದರ ಮೂಲಕ ಚರ್ಮದ ಆರೈಕೆ ಮಾಡುತ್ತದೆ.
ವಿಧಾನ-3:
* ಒಂದು ಬೌಲ್ ಅಲ್ಲಿ ಬಾಳೆ ಹಣ್ಣಿನ ಸಿಪ್ಪೆಯನ್ನು ಸೇರಿಸಿ.
* ಮಧ್ಯಮ ಗಾತ್ರದ ಸೌತೆಕಾಯಿಯನ್ನು ತುಂಡರಿಸಿಕೊಳ್ಳಿ.
* ಎರಡು ಸಾಮಾಗ್ರಿಯನ್ನು ರುಬ್ಬಿ, ಮೃದುವಾದ ಮಿಶ್ರಣವನ್ನು ತಯಾರಿಸಿ.
* ಪೀಡಿತ ಪ್ರದೇಶಕ್ಕೆ ಮಿಶ್ರಣವನ್ನು ಅನ್ವಯಿಸಿ, ಒಂದು ಗಂಟೆಗಳ ಕಾಲ ಆರಲು ಬಿಡಿ.
* ಬಳಿಕ ಐಸ್ ನೀರಿನಿಂದ ಸ್ವಚ್ಛಗೊಳಿಸಿ, ಟವೆಲ್ ನಿಂದ ಒಣಗಿಸಿ.
ಪ್ರಯೋಜನಗಳು:
* ಬಾಳೆ ಹಣ್ಣಿನ ಸಿಪ್ಪೆಯು ಉರಿಯೂತ ನಿವಾರಣೆಯ ಶಕ್ತಿಯನ್ನು ಒಳಗೊಂಡಿದೆ. ಇದು ಸೊಳ್ಳೆ ಕಡಿತದಿಂದ ಉಂಟಾದ ಗುಳ್ಳೆಯ ಗಾತ್ರವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಾಲಕ್ರಮೇಣ ಅಳಿಸಿ ಹೋಗುವಂತೆ ಮಾಡುವುದು.
* ಐಸ್ ನೀರು ಸೊಳ್ಳೆ ಕಡಿದಾಗ ಉಂಟಾಗುವ ನೋವನ್ನು ಶಮನಗೊಳಿಸುವುದು.
* ಸೌತೆಕಾಯಿ ಚರ್ಮಕ್ಕೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುವುದರ ಮೂಲಕ ಹಿತವಾದ ಸಂವೇದನೆ ನೀಡುವುದು.
* ಈ ವಿಧಾನವನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಅನ್ವಯಿಸಬಹುದು. ಇದರಿಂದ ಯಾವುದೇ ಬಗೆಯ ಅಡ್ಡ ಪರಿಣಾಮ ಉಂಟಾಗದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

