Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನೈಸರ್ಗಿಕವಾಗಿ ತೆಳ್ಳಗಾಗುವುದು ಹೇಗೆ?
ನೋಡುವುದಕ್ಕೆ ಸಹಜವಾಗಿ ತೆಳ್ಳಗಿರಬೇಕೆಂಬುದು ಎಲ್ಲರ ಹೆಬ್ಬಯಕೆ. ನೈಸರ್ಗಿಕವಾಗಿ ಸಪೂರವಾಗಿರುವುದೆಂದರೆ, ಯಾವ ಮುಚ್ಚುಮರೆ- ಅಅಪರಾಧಿ ಭಾವನೆಯೂ ಇಲ್ಲದೇ ಸಂತ್ರಪ್ತಿಯಿಂದ ಊಟ,ಕುರುಕಲು ತಿಂಡಿಗಳನ್ನು ತಿಂದು ದೇಹದ ತೂಕವನ್ನು ಹೊರಗಟ್ಟುವುದು ಹೇಗೆ ಎಂಬುದು. ಸಹಜವಾಗಿ ತೆಳ್ಳಗಿನ ದೇಹವನ್ನು ಹೊಂದಲು ಕೆಳಗಿನ ನಿಯಮಗಳನ್ನು ತಪ್ಪಿಲ್ಲದೇ ಪಾಲಿಸಿ.
ಹಂತಗಳು:
1. ನೀವು ಮಾಡುವ ಪಥ್ಯ ಬ್ಯಾಂಕ್ ಖಾತೆಯಿದ್ದಂತೆ. ಇದು ಸಹಜವಾಗಿ ತೆಳ್ಳಗಾಗುವ ನಿಯಮಗಳ ಹಿಂದಿರುವ ಮೂಲತತ್ವ. ನೀವು ಯಾವ ಆಹಾರಗಳನ್ನು ತಿನ್ನಲು ನಿರ್ಧರಿಸುತ್ತೀರಿ ಎಂಬುದು ಮುಖ್ಯವಲ್ಲ. ಬದಲಿಗೆ ಇಡೀ ದಿನ ಸಮತೋಲನ ಆಹಾರವನ್ನು ಸೇವಿಸಬೇಕು.

2. ಎಲ್ಲ ಆಹಾರಗಳನ್ನೂ ಒಂದೇ ಬಾರಿಗೆ ತಿಂದು ಮುಗಿಸಬೇಡಿ. ಬದುಕು ನಿಂತಿರುವುದು ಆಯ್ಕೆಗಳ ಮೇಲೆ. ಪೋಷಕಾಂಶಗಳು ತುಂಬಿದ ವಿವಿಧ ಆಹಾರಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಸೇವಿಸಿ. ಬೇರೆ ಬೇರೇ ಥರದ ಪೋಷಕಾಂಶಗಳು ಹೆಚ್ಚಿರುವ ಸರಳವಾದ ಆಹಾರಗಳನ್ನು ಸೇವಿಸಿ.
3. ಎಲ್ಲ ರೀತಿಯ ಆಹಾರ ಪದಾರ್ಥಗಳ ರುಚಿ ನೋಡಿ. ಆದರೆ ಏನನ್ನೂ ತಿನ್ನಬೇಡಿ. ಚಿಕ್ಕ ಚಿಕ್ಕ ತುತ್ತುಗಳ ಮೂಲಕ ಥರಹೇವಾರಿ ತಿಂಡಿಗಳ ರುಚಿ ನೋಡಿ. ತಿಂಡಿಗಳ ಮೇಲೆ ಅಸಹ್ಯ ಹುಟ್ಟುವಷ್ಟು ಬಾಯಿಯಲ್ಲಿ ಏಕೆ ತುರುಕಿಕೊಳ್ಳಬೇಕು? ಹತ್ತಾರು ತಿಂಡಿಗಳ ಆಯ್ಕೆಯಿದ್ದಾಗ ರುಚಿಯನ್ನು ಗ್ರಹಿಸಿ ತಿಂಡಿಗಳನ್ನು ಆರಿಸಿಕೊಳ್ಳಿ.
4. ನಿಮ್ಮ ಆಹಾರ ಕ್ರಮದ ಮೇಲೆ ಲಕ್ಷ್ಯವಿರಲಿ. ನೀವೇನು ಮಾಡುತ್ತಿದ್ದೀರಿ ಎಂಬುದು ನಿಮಗೆ ಜಾಗೃತವಾಗುವವರೆಗೆ ಯಾವ ತಿನಿಸನ್ನೂ ತಿನ್ನದಿರಿ. ನಿಂತು, ಕೆಲಸ ಮಾಡುತ್ತ, ವಾಹನ ಚಲಾಯಿಸುತ್ತ, ಟಿವಿ ನೋಡುತ್ತ ಅಥವಾ ನಡೆದಾಡುತ್ತ ಯಾವತ್ತೂ ಆಹಾರ ಸೇವಿಸುವುದು ಬೇಡ. ಕುಳಿತುಕೊಂಡು, ತಿನಿಸನ್ನು ಅನುಭವಿಸುತ್ತ ತಿನ್ನಿ. ನಿಮ್ಮ ಆಹಾರದ ಸುಗಂಧ ನಿಮ್ಮ ದೇಹಕ್ಕೂ ತಿಳಿಯಲಿ.
5. ನಿಮ್ಮ ಆಹಾರವನ್ನು ಹೆಚ್ಚಿಸುತ್ತಾ ಸಾಗಬೇಡಿ. ಇದೀಗ ಇಳಿಸುತ್ತಾ ಬರುವ ಸಮಯ. ಕಡಿಮೆಗೊಳಿಸುತ್ತಾ ಬರುವುದು ನಿಮ್ಮ ಬದುಕಿನ ಹೊಸ ಪದ್ದತಿಯಾಗಲಿ. ಚಿಕ್ಕ ತಟ್ಟೆಗಳಲ್ಲಿ,ಚಿಕ್ಕ ಬೌಲ್ ಗಳಲ್ಲಿ,ಪುಟಾಣಿ ಲೋಟಗಳಲ್ಲಿ ಆಹಾರ ತಿನ್ನತೊಡಗಿ.ಪುಟ್ಟ ಪುಟ್ಟ ಭಾಗಗಳಾಗಿ ಆಹಾರ ಸೇವಿಸುವುದನ್ನು ಬೆಳೆಸಿಕೊಳ್ಳಿ.
6. ಕ್ಲೀನ್ ಪ್ಲೇಟ್ ಕ್ಲಬ್ ಸದಸ್ಯತ್ವದಿಂದ ಹೊರಬನ್ನಿ. ನಿಮ್ಮ ತಟ್ಟೆಯಲ್ಲಿರುವ ಎಲ್ಲ ತಿಂಡಿಗಳನ್ನು ಖಾಲಿ ಮಾಡುವ ಖಯಾಲಿ ಬಿಟ್ಟುಬಿಡಿ. ಇದರರ್ಥ ನೀವೆನು ತಿನ್ನಬೇಡಿ ಎಂದಲ್ಲ. ಬದಲಿಗೆ, ನಿಮ್ಮ ತಟ್ಟೆಯಲ್ಲಿರುವ ಆಹಾರಗಳನ್ನು ಇತರರಿಗೂ ಹಂಚಿ. ಮತ್ತೊಬ್ಬರ ಪಾಲಿನ ಊಟವನ್ನು ಉಳಿಸುವುದು ಒಳ್ಳೆಯ ಗುಣದ ಲಕ್ಷಣ.
7. ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುವ ಮುಂಚೆ ನಿಮ್ಮತ್ತ ಗಮನಿಸಿ. ಕಂಠಪೂರ್ತಿ ತಿಂದು ಕುಡಿದು ಮಾಡುವುದನ್ನು ನಿಲ್ಲಿಸುವುದೇ ನಿಮಗೆ ನೀವು ಮಾಡಿಕೊಳ್ಳಬಹುದಾದ ಮಹದುಪಕಾರ. ಯಾವತ್ತೂ ಕಂಠಪೂರ್ತಿ ತಿನ್ನಲೇಬೇಡಿ. ನಿಮ್ಮ ಬದುಕಿನ ಏಳ್ಗೆಗೆ ನೀವೇ ಮಾಸ್ಟರ್ಸ್.
8. ನಿಮ್ಮನ್ನು ನೀವು ಅರಿತುಕೊಳ್ಳಿ. ನಿಮ್ಮ ಫಿಟ್ ನೆಸ್ ಗೆ ನೀವೇಷ್ಟು ಆಹಾರ ತಿನ್ನಬಹುದು ಎಂಬುದನ್ನು ಅರಿತುಕೊಂಡು ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಿ.
9. ನೈಸರ್ಗಿಕ ಪದಾರ್ಥಗಳನ್ನೇ ತೆಗೆದುಕೊಳ್ಳಿ. ನಿಮಗೆ ಆಯ್ಕೆಗಳಿದ್ದಾಗ, ಕಂಡದ್ದನ್ನೆಲ್ಲ ಬಯಸಿ ಹಾಳು ಮೂಳು ಪದಾರ್ಥಗಳನ್ನು ತಿನ್ನುವ ಬದಲು ನೈಸರ್ಗಿಕವಾದ, ಸಾವಯವ, ಆಯಾ ಋತುಮಾನಕ್ಕೆ ತಕ್ಕ ಆಹಾರಗಳನ್ನು ಸೇವಿಸಿ.
10. ನಿಮ್ಮ ಪಾಲಿಗೆ ನೀವೇ ಒಳ್ಳೆಯವರಾಗಿ. ನಿಮ್ಮ ಹವ್ಯಾಸಗಳು ನಿಮ್ಮನ್ನು ಪ್ರಿತಿಸುವಂತಿರಲಿ. ನಿಮ್ಮ ಆಹಾರ ಪದಾರ್ಥಗಳನ್ನು ಹೇಗೇ ನಿರ್ಧರಿಸುತ್ತೀರಿ ಮತ್ತು ಏನನ್ನು ನಿರ್ಧರಿಸುತ್ತೀರಿ ಎಂಬುದು ಮುಖ್ಯವಲ್ಲ. ಬದಲಿಗೆ, ನಿಮ್ಮ ಆಹಾರ ನಿಮಗೆಷ್ಟು ಒಳ್ಳೆಯದು ಎಂಬುದನ್ನು ನಿರ್ಧರಿಸಿ ಮುಂದೆ ಸಾಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









