ಸುಖ ನಿದ್ದೆಯನ್ನು ಮರಳಿ ಪಡೆಯುವುದು ಹೇಗೆ?

ನಿದ್ದೆ ಅನ್ನೋದು ಮನುಷ್ಯನಿಗೆ ತುಂಬಾ ಮುಖ್ಯ. ದಣಿದ ದೇಹವು ಒತ್ತಡದಿಂದ ಮುಕ್ತವಾಗುವುದಕ್ಕೆ ನಿದ್ದೆಯು ರಾಮಬಾಣವಾಗಿದೆ. ರಾತ್ರಿ ಸಮಯದಲ್ಲಿ ಮಲಗುವುದರಿಂದ ಮೆಲಟೊನಿನ್ ಹಾರ್ಮೋನುಗಳು ಸುಲಭವಾಗಿ ಸ್ರವಿಸುತ್ತವೆ. ಇದರಿಂದ ರಕ್ತಪ್ರವಾಹವು ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲ, ದೇಹದ ಉಷ್ಣತೆಯನ್ನು ಸಮಾನವಾಗಿ ಕಾಪಾಡಿಕೊಳ್ಳಲು ಹಾಗೂ ಜಾಗರೂಕತೆಯಿಂದ ಇರಲು ನಿದ್ರೆಯು ಬಹಳಷ್ಟು ಉಪಯುಕ್ತವಾಗಿದೆ.

ಹಗಲಿನ ಸಮಯದಲ್ಲಿ ಸೂರ್ಯನ ಬೆಳಕಿನ ಪ್ರಭಾವದಿಂದಾಗಿ ಮೆಲಟೊನಿನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಬೇರೆ ಟೈಮ್ ಜೋನ್ ಕಡೆಗೆ ಪ್ರಯಾಣ ಮಾಡಿದಾಗ ಅಥವ ಹಗಲಿನ ಬದಲು ರಾತ್ರಿ ಸಮಯದಲ್ಲಿ ಕೆಲಸ ಮಾಡಿದಾಗ ನಿದ್ದೆಗೆ ಭಂಗವಾಗುತ್ತದೆ ಮತ್ತು ಸಹಜ ನಿದ್ರೆಯು ದೂರವಾಗಿ ದೈಹಿಕ ಸ್ಥಿತಿಯು ಹದಗೆಡುವ ಸಂಭವವಿರುತ್ತದೆ. ಹೀಗಾಗಿ ನಿಮ್ಮ ನಿದ್ರೆಯನ್ನು ಉತ್ತಮಗೊಳಿಸಲು ಇಲ್ಲಿ ಕೆಲವು ಹಂತಗಳಿವೆ. ಇದರಿಂದ ನಿಮ್ಮ ನಿದ್ರಾ ಚಕ್ರವು ಎಂದಿನಂತೆ ಸಹಜವಾಗಿರುವುದಲ್ಲದೇ, ನಿಮ್ಮ ದೇಹಕ್ಕೂ ಪರಿಣಾಮಕಾರಿ ಚೈತನ್ಯವನ್ನೂ ನೀಡುತ್ತದೆ.

How To Restore Your Sleep Cycle

ಸಲಹೆಗಳು :

1. ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.. ವಿಟಮಿನ್ ಇರುವಂಥ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಆದರೆ ಸಂಸ್ಕರಿಸಿದ ಆಹಾರಗಳಿಂದ ಆದಷ್ಟು ದೂರವಿರಿ. ನೀವೇನಾದ್ರೂ ಇಂಥಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ, ನಿಮ್ಮ ಆರೋಗ್ಯ, ಬ್ಲಡ್ ಶುಗರ್ ಲೆವೆಲ್ ಅನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ನಿಮ್ಮ ಸಹಜ ನಿದ್ರೆಗೆ ಇದು ಮಾರಕವಾಗುತ್ತದೆ.

ಜೊತೆಗೆ ನೀವು ಎದ್ದೇಳುವುದಕ್ಕಿಂತ ಕನಿಷ್ಟ 12 ಗಂಟೆಗಳ ಮೊದಲು ಊಟ ಮಾಡುವುದನ್ನು ತಡೆಯಿರಿ. ಇಲ್ಲವಾದಲ್ಲಿ, ನಿಮ್ಮ ದೇಹದೊಳಗಿನ ಆಂತರಿಕ ಅಲಾರಂ ಸಮಯ ಹೆಚ್ಚು ಕಡಿಮೆ ಆಗುತ್ತದೆ. ಇದರಿಂದ ಎಲ್ಲವೂ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ದೈಹಿಕ ಅಲಾರಂ ಏರುಪೇರಾದರೆ ಮುಂಜಾನೆಯ ತಿಂಡಿ ಮಧ್ಯಾಹ್ನ ತಿನ್ನಬೇಕಾದೀತು ಮತ್ತು ಮಧ್ಯಾಹ್ನದ ಊಟ ರಾತ್ರಿ ಮಾಡಬೇಕಾಗುತ್ತದೆ. ರಾತ್ರಿ ಮಲಗುವ ವೇಳೆಯಲ್ಲಿ ಸಾಧ್ಯವಾದಷ್ಟು ಮುರುಕಲು ತಿಂಡಿ ತಿನ್ನೋದನ್ನು ಕಡಿಮೆ ಮಾಡಿ. ಏನಾದರೂ ತಿನ್ನಬೇಕು ಎಂದಾದರೇ ನೈಸರ್ಗಿಕವಾದ ಚಹವನ್ನು ಸೇವಿಸಿ.. ಅಥವ ಹಣ್ಣುಗಳನ್ನು ಸೇವಿಸಿ

2. ಸಾಧ್ಯವಾದಷ್ಟು ಯೋಗವನ್ನು ಮೈಗೂಡಿಸಿಕೊಳ್ಳಿ, ಉಸಿರಾಟದ ಯೋಗ, ಅಥವಾ ಪ್ರಾರ್ಥನೆ ಮತ್ತು ಧ್ಯಾನವನ್ನು ಮಾಡಿ. ಯೋಗವು ಉಸಿರಾಟದ ಅಭ್ಯಾಸ ಮತ್ತು ಧ್ಯಾಹ್ನವನ್ನು ಒಳಗೊಂಡಿರುತ್ತದೆ. ಈ ಯೋಗದಿಂದ ಒತ್ತಡವು ಕಡಿಮೆಯಾಗುತ್ತದೆ ಹಾಗೂ ಆರೋಗ್ಯಕರವಾದ ಶಾಂತ ನಿದ್ರೆಗೆ ಸಹಾಯಕವಾಗುತ್ತದೆ,ಅಷ್ಟೇ ಅಲ್ಲ, ನೀವು ಹೆಚ್ಚು ಸಮಯ ಮಲಗುವುದನ್ನೂ ತಪ್ಪಿಸುತ್ತದೆ ಮತ್ತು ಬೇಗನೆ ನೀವು ಏಳುವಂತೆ ಮಾಡುತ್ತದೆ.

3. ಪ್ರತಿ ದಿನವೂ ಏಳರಿಂದ ಎಂಟುಗಂಟೆಗಳ ಕಾಲ ನಿದ್ರೆ ಮಾಡಿ. ವೀಕೆಂಡ್ ಸಮಯದಲ್ಲಿ ಅಥವ ನಿಮಗೆ ರಜೆ ಇರುವ ವೇಳೆಯಲ್ಲಿ ಒಂದು ಅಥವ ಎರಡು ಗಂಟೆಗಳ ಕಾಲ ಹೆಚ್ಚು ನಿದ್ರೆ ಮಾಡಬೇಡಿ. ಯಾಕಂದ್ರೆ ನಿಮ್ಮ ನಿದ್ರೆಯಲ್ಲಿ ಬದಲಾವಣೆಯಾದರೆ ಮರುದಿನ ಮುಂಜಾನೆ ಏಳುವ ಸಮಯದಲ್ಲಿ ವ್ಯತ್ಯಯವಾಗುತ್ತದೆ. ಕೆಲಸಕ್ಕೆ ಹೋಗುವ ದಿನದಲ್ಲಿ ಬೇಗ ಏಳಲು ದೇಹ ನಿರಾಕರಿಸುತ್ತದೆ

4. ಕತ್ತಲೆಯ ಕೋಣೆಯಲ್ಲಿ ಮಲಗಿ. ಅಕಸ್ಮಾತ್ ನೀವು ರಾತ್ರಿ ಸಮಯ ಕೆಲಸ ಮಾಡಿ ಹಗಲು ಮಲಗಬೇಕಾದ ಅನಿವಾರ್ಯತೆ ಬಂದರೆ, ಕರ್ಟನ್ ಗಳ ಮೂಲಕ ಬೆಳಕನ್ನು ನಿರ್ಭಂದಿಸಿ ಮಲಗಿ. ನೀವು ಎದ್ದ ನಂತರ ಕಿಟಕಿಯ ಕರ್ಟನ್ ಗಳನ್ನು ತೆರೆಯಿರಿ. ಆಗ ಸೂರ್ಯನ ಬೆಳಕು ಒಳಗೆ ಬರಲಿ, ಅಥವ ನಿಮ್ಮ ಕೋಣೆಯ ದೀಪವನ್ನು ಹಾಕಿರಿ. ಇದರಿಂದ ನಿಮ್ಮ ದೇಹದೊಳಗಿನ ಜೈವಿಕ ಗಡಿಯಾರವು ಮರು ದಿನದ ಕಾರ್ಯಕ್ಕೆ ಎಂದಿನಂತೆ ಪ್ರಚೋದಿಸುತ್ತದೆ

5. ನೈಸರ್ಗಿಕ ಉತ್ಪನ್ನಗಳನ್ನು ಖರೀದಿಸಿ ಮತ್ತು ಅವುಗಳನ್ನೇ ಬಳಸಿ. ಇದರಿಂದ ನಿಮ್ಮ ದೈಹಿಕ ಗಡಿಯಾರವು ಎಂದಿನಂತೆ ಕಾರ್ಯ ನಿರ್ವಹಿಸಲು ಚೈತನ್ಯ ನೀಡುತ್ತದೆ ಹಾಗೂ ನಿಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಬೇರೆ ಯಾವುದೇ ರೀತಿಯ ಚುಚ್ಚು ಮದ್ದುಗಳಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕ ಮಾಡಿ ಮತ್ತು ಪರ್ಯಾಯ ಔಷಧಿಗಳನ್ನು ಸೇವಿಸುವುದರ ಮೂಲಕ ಅಥವ ಚುಚ್ಚು ಮದ್ದನ್ನು ಪಡೆಯುವುದರ ಮೂಲಕ ದೈಹಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.. ಚುಚ್ಚು ಮದ್ದು ರಾತ್ರಿಯ ನಿದ್ದೆಗೆ ಉತ್ತಮವಾಗಿದ್ದು ಮೆಲಟೋನ್ ಗಳಿಗಾಗಿ ಸೂಕ್ತವಾಗಿದೆ ಹಾಗೂ ಉದ್ವೇಗಗಳನ್ನು ಕಡಿಮೆ ಮಾಡಿ ಶಾಂತ ರೀತಿಯ ನಿದ್ರೆಗೆ ಪೂರಕವಾಗುತ್ತದೆ. ಮತ್ತು ಉತ್ತಮ ನಿದ್ರೆಗೆ ಸಹಾಯಕವಾಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion