Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಾಢವಾಗಿ ನಿದ್ದೆ ಮಾಡಿ ಫ್ರೆಶ್ ಆಗಿ ಎದ್ದೇಳುವುದು ಹೇಗೆ?
ನಿದ್ದೆ ಬರದೆ ಹೊರಳಾಡುತ್ತಿದ್ದರೆ ಒಂಥರಾ ಮಾನಸಿಕ ಹಿಂಸೆ ಉಂಟಾಗುತ್ತದೆ, ತುಂಬಾ ಹೊರಳಾಡಿ ಮೈ ಕೈ ನೋವು ಬಂದು ಬಿಡುತ್ತದೆ. ತಲೆ ತುಂಬಾ ಹೊದಿಕೆ ಹೊದ್ದು ಮಲಗಿದರೂ ನಿದ್ದೆ ಬರುತ್ತಿರಲಿಲ್ಲ.
ವರ್ಷಗಟ್ಟಲೆ ಹೆಣಗಾಡಿದ ನಂತರ, ಅಂತಿಮವಾಗಿ ನನಗೆ ಯಾವುದೇ ಬಾಹ್ಯ ಪ್ರೇರಣೆ ಇಲ್ಲದೇ ರಾತ್ರಿ ಚೆನ್ನಾಗಿ ನಿದ್ದೆ ಬರುವ ಮತ್ತು ಬೆಳಿಗ್ಗೆ ಉಲ್ಲಾಸಭರಿತವಾಗಿ ಎಚ್ಚರಗೊಳ್ಳುವ ಸರಳ ಉಪಾಯಗಳು ಸಿಕ್ಕಿವೆ. ಈ ಕೆಳಗಿನವು ಕ್ಷಿಪ್ರವಾಗಿ ನಿದ್ದ್ರೆಗೆ ಜಾರುವ, ಗಾಢವಾಗಿ ನಿದ್ರೆ ಹೋಗುವ ಮತ್ತು ಕಾಂತಿಭರಿತ ರಾತ್ರಿಗಳನ್ನು ಪಡೆಯುವ ನಿಟ್ಟಿನಿಂದ ನನ್ನ ಮೇಲೆ ನಾನೇ ಪ್ರಯೋಗಿಸಿಕೊಂಡು ಕಂಡುಕೊಂಡ ಮಾರ್ಗಗಳಾಗಿವೆ.

1. ದಿನಚರಿಗೆ ಬದ್ಧವಾಗಿರುವುದು
ಸಾಂಕೇತಿಕವಾಗಿ ನೀವು ತಡವಾಗಿ ಹಾಸಿಗೆಗೆ ಹೋದಲ್ಲಿ ತಡವಾಗಿ ಏಳುವಿರಿ ಹಾಗೂ ಮಲಗಲು ಬೇಗ ಹೋದಲ್ಲಿ ಮುಂಜಾನೆ ಬೇಗನೆ ಎಚ್ಚರಗೊಳ್ಳುವಿರಿ. ಆದರೆ ನಿಮ್ಮ ವೇಳಾಪಟ್ಟಿಗೆ ಅನುಗುಣವಾದ ಏಕರೂಪದ ದಿನಚರಿಯನ್ನು ಪಾಲಿಸುವುದೊಳಿತು.

2 ಬೆಳಿಗ್ಗೆ ಎದ್ದು ತಾಲೀಮು ಮಾಡಿರಿ
ಕೇವಲ 20-30 ನಿಮಿಷಗಳ ನಡಿಗೆ, ಓಟ, ಬೈಕಿಂಗ್ ಅಥವಾ ತೂಕ ಎತ್ತುವುದು ಇವು ನಿಮಗೆ ದಿನದಲ್ಲಿ ಉತ್ತಮ ಭಾವನೆ ನೀಡುವುದಲ್ಲದೇ ಸುಸ್ತಾಗಿ ರಾತ್ರಿ ಬೇಗ ನಿದ್ರೆಗೆ ಜಾರಲು ಸಹಾಯ ಮಾಡುತ್ತವೆ.

3. ಹಾಸಿಗೆಗೆ ಹೋಗುವ ಮೊದಲು 20-30 ನಿಮಿಷ
ಹಾಸಿಗೆಗೆ ಹೋಗುವ ಮೊದಲು 20-30 ನಿಮಿಷ ವಿಶ್ರಾಂತಿದಾಯಕ ಚಟುವಟಿಕೆಗಳನ್ನು ಕೈಗೊಳ್ಳುವುದು ಒಳ್ಳೆಯದು. ಬಿಸಿನೀರಿನ ಸ್ನಾನ ಅಥವಾ ಲೈಂಗಿಕ ಕ್ರಿಯೆಗಳು ನಿಮಗೆ ನಿದ್ರೆಗೆ ಜಾರುವಲ್ಲಿ ಅದ್ಭುತವಾಗಿ ಸಹಾಯ ಮಾಡಬಲ್ಲವು.

4. ತೂಕಡಿಕೆಗಳನ್ನು ತಪ್ಪಿಸಿ.
ಖಂಡಿತ ಅವು ನಿಮಗೆ ಉತ್ತಮ ಭಾವನೆಯನ್ನು ನೀಡಲಾರವೆಂದು ನಾನು ಬಾಜಿ ಕಟ್ಟಬಲ್ಲೆ ಅಲ್ಲದೇ ಅವು ನಿಮ್ಮ ರಾತ್ರಿಯ ನಿದ್ರೆಗೆ ಅಡ್ಡಿ ಉಂಟು ಮಾಡುವುದಂತೂ ಖಚಿತ.

5. ಆರಾಮದಾಯಕವಾದ ದಿಂಬಿನ ಮೇಲೆ ಹಣ ವಿನಿಯೋಗಿಸಿ
ನಾನು ಇತ್ತೀಚೆಗಷ್ಟೇ ಈ ಬದಲಾವಣೆ ಮಾಡಿದೆ ಈ ಮೊದಲೇ ಏಕೆ ಇದನ್ನು ಮಾಡಲಿಲ್ಲ ಎಂದು ನನಗನಿಸಿತು.ನೀವು ನಿಮ್ಮ ಜೀವನದ ಮೂರರಷ್ಟು ಭಾಗವನ್ನು ಹಾಸಿಗೆಯ ಮೇಲೆ ಕಳೆಯುತ್ತೀರಿ ,ನೀವು ಯಾವುದರ ಮೇಲೆ ಮಲಗುವಿರೋ ಅದನ್ನು ಎಂದೂ ಅಗ್ಗವಾಗಿ ಕಾಣಬೇಡಿ.

6. ಗದ್ದಲವನ್ನು ಹೊರ ಹಾಕಿ
ಗದ್ದಲವನ್ನು ಹೊರ ಹಾಕಲು ಫ್ಯಾನ್ ಬಳಸಿ ಮತ್ತು ಬೆಳಕನ್ನು ನಿರ್ಬಂಧಿಸಲು ಬೀಳಲು ಉತ್ತಮ ಕಿಟಕಿ ತೆರೆಗಳನ್ನು ಬಳಸಿರಿ .ಇವು ಸರಳವೆಂದು ಕಂಡು ಬಂದರೂ ಮಧ್ಯರಾತ್ರಿಯ ಅಡೆತಡೆಗಳನ್ನು ತಪ್ಪಿಸಿಕೊಳ್ಳುಿ ಬಹಳ ಪರಿಣಾಮಕಾರಿಯಾಗಿವೆ.

7. ಕಾರ್ಬೋಹೈಡ್ರೇಟ್ ಇರುವ ಲಘು ಆಹಾರ ತೆಗೆದುಕೊಳ್ಳಬೇಕು
ಈ ವಿಧಾನ ಅದ್ಭುತವಾಗಿ ಕೆಲಸ ಮಾಡುತ್ತದೆ. ಕೇವಲ ಒಂದು ಚಿಕ್ಕ ಬಟ್ಟಲು ಏಕದಳ ಧಾನ್ಯಗಳನ್ನು ಹಾಲಿನೊಂದಿಗೆ ಸೇವಿಸುವುದು ನನ್ನ ಕಾರ್ಯ ಸಾಧನೆಗೆ ಚೆನ್ನಾಗಿ ಸಹಕರಿಸಿತು. ಹೆಚ್ಚು ಕೊಬ್ಬಿನ ಆಹಾರಗಳ ಸೇವನೆಯನ್ನು ಬಿಡುವುದೊಳಿತು.



Click it and Unblock the Notifications
