ಆರೋಗ್ಯದಿಂದ ಮತ್ತು ಸಂತೋಷದಿಂದ ಇರುವುದು ಹೇಗೆ?

ನಾವೆಲ್ಲರು ಆರೋಗ್ಯದಿಂದ ಮತ್ತು ಸಂತೋಷದಿಂದ ಜೀವನ ಸಾಗಿಸಬೇಕೆಂದು ಬಯಸುತ್ತೇವೆ. ಆದರೆ ಕೆಲವೊಮ್ಮೆ ನಿಮಗೆ ಅದು ಹೇಗೆ ಸಾಧ್ಯ ಎಂಬ ಬಗ್ಗೆ ತಿಳಿದಿರುವುದಿಲ್ಲ. ನಾವು ನಮ್ಮದೇ ಜೀವನ ಶೈಲಿ ಮಾಡುತ್ತೇವೆ. ನಮ್ಮ ಜೀವನ ಶೈಲಿ, ನಮ್ಮ ಅಭ್ಯಾಸಗಳ ಪ್ರಭಾವ ನಮ್ಮ ಆರೋಗ್ಯದ ಮೇಲೆ ಬೀಳುತ್ತದೆ.

ಆದ್ದರಿಂದ ಆರೋಗ್ಯಕರವಾದ ಮತ್ತು ಸಂತೋಷದ ಜೀವನ ನಡೆಸುವುದು ಹೇಗೆ ಎಂದು ತಿಳಿಯುವ ಇಚ್ಛೆ ನಿಮಗಿದೆಯೆ?. ಹಾಗಾದರೆ ಈ ಕೆಳಗೆ ನೀಡಲಾಗಿರುವ ಸಲಹೆಗಳು ನಿಮಗೆ ಆ ನಿಟ್ಟಿನಲ್ಲಿ ಅನುಕೂಲವನ್ನು ಮಾಡಿಕೊಡುತ್ತವೆ.

1. ಚೆನ್ನಾಗಿ ನಿದ್ದೆ ಮಾಡಿ

1. ಚೆನ್ನಾಗಿ ನಿದ್ದೆ ಮಾಡಿ

ನಿದ್ದೆ ನಿಮ್ಮನ್ನು ಆರೋಗ್ಯಕರವಾಗಿಯಷ್ಟೆ ಅಲ್ಲದೆ ಸಂತೋಷಕರವಾಗಿ ಸಹ ಇಡುತ್ತದೆ. ಪ್ರತಿರಾತ್ರಿ 8-10 ಗಂಟೆಗಳವರೆಗೆ ಕಡ್ಡಾಯವಾಗಿ ನಿದ್ದೆ ಮಾಡಿ. ನಿದ್ದೆಗೆ ಜಾರುವ ಮೊದಲು ಹಾಸಿಗೆಯ ಮೇಲೆ ಒಂದು ಗಂಟೆ ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ಚಿಂತೆಗಳನ್ನು ತೊಲಗಿಸಿ ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ. ಈ ಸಮಯದಲ್ಲಿ ಮನೆಗೆಲಸ ಅಥವಾ ಚಿಂತೆಯುಂಟುಮಾಡುವ ಯಾವುದೇ ಕೆಲಸಗಳಲ್ಲಿ ಮಗ್ನರಾಗಬೇಡಿ. ಬದಲಿಗೆ ಪುಸ್ತಕವನ್ನು ಓದಿ, ದೂರದರ್ಶನವನ್ನು ನೋಡುತ್ತ ಆರಾಮವಾಗಿರಿ.

2. ಆರೋಗ್ಯಕರವಾಗಿರುವುದನ್ನೆ ತಿನ್ನಿ

2. ಆರೋಗ್ಯಕರವಾಗಿರುವುದನ್ನೆ ತಿನ್ನಿ

ಕುರುಕಲು ತಿಂಡಿಗಳನ್ನು ತಿನ್ನುವುದನ್ನು ತ್ಯಜಿಸಿ ಮತ್ತು ಪ್ರತಿದಿನ ಹಣ್ಣು ಹಾಗು ತರಕಾರಿಗಳನ್ನು ತಿನ್ನಿ. ಇದು ನಿಮ್ಮಲ್ಲಿ ಸಾಮಾನ್ಯವಾಗಿ ಲವಲವಿಕೆಯನ್ನು ಮತ್ತು ಸಂತೋಷದ ಭಾವನೆಯನ್ನು ತುಂಬುತ್ತದೆ. ಅನಾರೋಗ್ಯಕರವಾದ ಉಪಾಹಾರದ ಬದಲಿಗೆ ಒಣ ಹಣ್ಣುಗಳನ್ನೊ ಅಥವಾ ಹಣ್ಣುಗಳನ್ನು ತೆಗೆದುಕೊಳ್ಳಿ.

3. ಹೆಚ್ಚಿನ ನೀರು ಕುಡಿಯಿರಿ

3. ಹೆಚ್ಚಿನ ನೀರು ಕುಡಿಯಿರಿ

ನೀರು ನಿಮಗೆ ಅದ್ಭುತವಾದ ಆರೋಗ್ಯವನ್ನಷ್ಟೆ ಅಲ್ಲದೆ, ಸ್ವಚ್ಛ ಮತ್ತು ಹೊಳೆಯುವ ತ್ವಚೆಯನ್ನು ಒದಗಿಸುತ್ತದೆ. ಅದು ನಿಮ್ಮ ಬಗ್ಗೆ ನೀವೆ ಖುಷಿಪಡುವಂತಹ ಭಾವನೆಯನ್ನು ಒದಗಿಸುತ್ತದೆ ಹಾಗು ನಿಮ್ಮ ನಿಲುವಿನಲ್ಲಿ ಸಂತೋಷದ ಭಾವನೆಯನ್ನು ಒದಗಿಸುತ್ತದೆ. ಹಾಗಾಗಿ ಸದಾ ನಿಮ್ಮ ಬಳಿ ನೀರು ಇರುವಂತೆ ನೋಡಿಕೊಳ್ಳಿ ಮತ್ತು ದಿನಂಪ್ರತಿ 8 ಲೋಟಗಳಷ್ಟು ನೀರು ಕುಡಿಯಿರಿ.

4. ವ್ಯಾಯಾಮ ಮಾಡಿ

4. ವ್ಯಾಯಾಮ ಮಾಡಿ

ಒಂದು ಚುರುಕಾದ ನಡಿಗೆಯಾಗಲಿ, ಒಂದು ಸಣ್ಣ ಓಟವಾಗಲಿ, ನಿಮ್ಮ ಕೋಣೆಯಲ್ಲಿ ನೃತ್ಯ ಮಾಡುವುದಾಗಲಿ,ಏನಾದರು ಸರಿ ನಿಮ್ಮನ್ನು ಖುಷಿಯಾಗಿಡುವ ಮತ್ತು ಸದೃಢವಾಗಿರುವಂತಹದನ್ನು ಏನನ್ನಾದರು ಮಾಡಿ.

5. ನಿಮ್ಮನ್ನು ನೀವೆ ಸತ್ಕರಿಸಿ

5. ನಿಮ್ಮನ್ನು ನೀವೆ ಸತ್ಕರಿಸಿ

ಇದರರ್ಥ ನೀವು ತುಂಬಾ ದಿನಗಳಿಂದ ಬಯಸಿದ್ದ ಶೂಗಳನ್ನು ಕೊಳ್ಳುವುದಾಗಲಿ, ಒಂದು ಫುಟ್ ಬಾಲ್ ಪಂದ್ಯಕ್ಕೆ ಹೋಗುವುದಾಗಲಿ, ಸುಮ್ಮನೆ ಏನಾದರು ಕೊಳ್ಳಲು ಅಥವಾ ಶವರ್ ಮತ್ತು ಸ್ನಾನದ ನಂತರ ನಿಮ್ಮ ದೇಹವನ್ನು ಆರೈಕೆ ಮಾಡುವುದನ್ನಾಗಲಿ( ನಾನು ಸಾಮಾನ್ಯವಾಗಿ ಹೀಗೆ ಮಾಡುತ್ತಿರುತ್ತೇನೆ) ಹೀಗೆ ನಿಮಗೆ ನೀವೆ ಖುಷಿಕೊಡುವ ಉಡುಗೊರೆಗಳನ್ನು ಕೊಟ್ಟುಕೊಳ್ಳಿ.

6. ನಿಜವಾದ ಸ್ನೇಹಿತರನ್ನು ಸಂಪಾದಿಸಿ

6. ನಿಜವಾದ ಸ್ನೇಹಿತರನ್ನು ಸಂಪಾದಿಸಿ

ನಿಜವಾದ ಸ್ನೇಹಿತರ ಜೊತೆ ಬೆರೆಯಿರಿ. ಅವರನ್ನು ಅಭಿನಂದಿಸಿ ಮತ್ತು ಹಾರೈಸಿ. ಅವರನ್ನು ನೀವು ಎಷ್ಟು ಇಷ್ಟಪಡುತ್ತೀರಿ ಎಂಬುದನ್ನು ತೋರ್ಪಡಿಸಿ ಮತ್ತು ಅವರನ್ನು ಸತ್ಕಾರಿಸಿ. ಆ ಮೂಲಕ ಅವರಿಂದ ನೀವು ಹೇಗೆ ಸತ್ಕಾರಿಸಿಕೊಳ್ಳಬೇಕೆಂದು ಬಯಸುವಿರೆಂಬುದನ್ನು ಮನಗಾಣಿಸಿ.

7. ನಗು-ನಗುತ ಇರಿ

7. ನಗು-ನಗುತ ಇರಿ

ಯಾವುದರ ಕುರಿತಾಗಲಿ ದುಃಖಿಸಬೇಡಿ ಮತ್ತು ಜೋಕುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾವಾಗಲು ನಗು-ನಗುತ ಇರಿ, ಅದರಿಂದ ನೀವು ಸಂತೋಷವಾಗಿರುತ್ತೀರಿ.ಅಷ್ಟೇ ಅಲ್ಲದೆ ನಿಮ್ಮ ನಗು ಇನ್ನೊಬ್ಬರ ದಿನವನ್ನು ಬೆಳಗಬಹುದು.

8. ಹವ್ಯಾಸಗಳನ್ನು ಬೆಳೆಸಿಕೊಳ್ಳಿ

8. ಹವ್ಯಾಸಗಳನ್ನು ಬೆಳೆಸಿಕೊಳ್ಳಿ

ಕಲೆಯಾಗಲಿ, ಸಂಗೀತವಾಗಲಿ, ಸಂಗ್ರಹಿಸುವುದಾಗಲಿ ಅಥವಾ ನಿಮಗೆ ಖುಷಿ ಕೊಡುವ ಯಾವುದಾದರು ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಸದಾ ಚಟುವಟಿಕೆಯಿಂದಿರಲು ಪ್ರಯತ್ನಿಸಿ ಮತ್ತು ನಿಮ್ಮ ಸಾಧನೆಗಳಿಗೆ ಸಂಭ್ರಮ ಪಡಿ. ಯಾರಿಗೆ ಆಗಲಿ ಪ್ರತಿಫಲ ಬಯಸದೆ ಉಡುಗೊರೆಗಳನ್ನು ನೀಡಿ. ಏನೇ ಆಗಲಿ ಸದಾ ಕಾರ್ಯ ಮಗ್ನರಾಗಿರಿ ಮತ್ತು ಸಂತೋಷವಾಗಿರಿ.

9. ನಿಮ್ಮ ಕುಟುಂಬದವರಿಗೆ ಸಹಾಯ ಮಾಡಿ

9. ನಿಮ್ಮ ಕುಟುಂಬದವರಿಗೆ ಸಹಾಯ ಮಾಡಿ

ನಿಮ್ಮ ಅಮ್ಮನಿಗೆ ಅಡುಗೆ ಮಾಡಲು ಸಹಕರಿಸಿ. ನಿಮ್ಮ ತಂದೆಗೆ ಅಡುಗೆ ಮಾಡಿಕೊಡಿ. ನಿಮ್ಮ ಕೊಠಡಿಯನ್ನು ಸ್ವಚ್ಛಗೊಳಿಸಿ ಅಥವಾ ನಿಮ್ಮ ಮನೆಯವರಿಗೆ ಹೇಗಾದರು ಸಹಾಯ ಮಾಡಿ. ಇದರಿಂದ ನಿಮ್ಮ ಮನೆಯವರಿಗೆ ಸಂತೋಷವಷ್ಟೇ ಅಲ್ಲದೆ, ನಿಮ್ಮ ಬಗ್ಗೆ ಪ್ರೀತಿ ಸಹ ಹೆಚ್ಚಾಗುತ್ತದೆ. ಇದು ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸಿ ನಿಮ್ಮಲ್ಲಿ ಸಂತೋಷವುಂಟು ಮಾಡುತ್ತದೆ.

10. ನಿಮ್ಮ ಜೀವನದಿಂದ ಒತ್ತಡವನ್ನು ಹೊರದಬ್ಬಿ

10. ನಿಮ್ಮ ಜೀವನದಿಂದ ಒತ್ತಡವನ್ನು ಹೊರದಬ್ಬಿ

ಖಂಡಿತವಾಗಿ ಇದು ನಿಮ್ಮನ್ನು ಆರೋಗ್ಯವನ್ನಾಗಿ ಮತ್ತು ಸಂತೋಷವಾಗಿಡುತ್ತದೆ. ಆಳವಾಗಿ ಉಸಿರಾಡಿ, ಯೋಗ ಮಾಡಿ, ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಒತ್ತಡವನ್ನು ತಂದುಕೊಳ್ಳಬೇಡಿ, ಅದು ನಿಮಗೆ ಸರಿ ಹೊಂದುವುದಿಲ್ಲ. ಓದಿ ಮತ್ತು ಬರೆಯಿರಿ, ಒಂದು ದಿನಚರಿಯನ್ನು ಇಟ್ಟುಕೊಳ್ಳಿ. ಸಂಗೀತ ಕೇಳುತ್ತ ಆರಾಮವಾಗಿ ಕಾಲಕಳೆಯಿರಿ. ಕಿಟಕಿ ಪಕ್ಕ ಕುಳಿತು ನೀಲಿ ಆಕಾಶವನ್ನು ನೋಡುತ್ತ ಕಾಲ ಕಳೆಯಿರಿ. ನಿಮಗೆ ಇಷ್ಟವಾದ ಆಟಗಳನ್ನು ಆಡಿ.

11. ಆತ್ಮವಿಶ್ವಾಸದಿಂದಿರಿ

11. ಆತ್ಮವಿಶ್ವಾಸದಿಂದಿರಿ

ಬಾಹ್ಯವಾಗಿ ಮತ್ತು ಆಂತರಿಕವಾಗಿ ನಿಮ್ಮನ್ನು ನೀವು ತಿದ್ದಿಕೊಳ್ಳಿ. ನಿಮ್ಮ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಮೊಡವೆಗಳಿಂದ ಮುಕ್ತಾರಾಗಲು ದಿನ ಬೆಳಗ್ಗೆ - ರಾತ್ರಿ ಮುಖ ತೊಳೆಯಿರಿ. ನಿಮ್ಮ ದೇಹಕ್ಕೆ ಅವಶ್ಯಕವಾದಷ್ಟು ಮೊಯಿಶ್ಚರೈಜರ್ ಹಚ್ಚಿ. ನಗುತ್ತಿರಿ ಮತ್ತು ಸಂತೋಷವನ್ನು ಇಮ್ಮಡಿಗೊಳಿಸಿ. ಆತ್ಮವಿಶ್ವಾಸದಿಂದಿರಲು ಕಲಿಯಿರಿ, ನೀವು ವಿಸ್ಮಯವಾಗಿ ಉಳಿದು ಹೋಗುವುದನ್ನು ನೋಡಿ.

12. ಕನಸುಗಳನ್ನು ಕಾಣಿರಿ ಮತ್ತು ಗುರಿ ಹೊಂದಿ

12. ಕನಸುಗಳನ್ನು ಕಾಣಿರಿ ಮತ್ತು ಗುರಿ ಹೊಂದಿ

ನೀವು ಸಾಧಿಸುವಿರಿ ಎಂಬುದನ್ನು ಮೊದಲು ಮನಗಾಣಿ. ನೀವು ಕನಸು ಕಂಡರೆ, ಅದೇನಾದರು ಸರಿ, ಅದನ್ನು ಸಾಧಿಸುವಿರಿ ಎಂದು ನಂಬಿ. ಆದರೆ ನಿಮ್ಮ ಗುರಿ ಮತ್ತು ಕನಸುಗಳು ವಾಸ್ತವದಿಂದ ಕೂಡಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

13. ಹೊರಗೆ ಸುತ್ತಾಡಿ ಮತ್ತು ಸ್ವಚ್ಛವಾದ ಗಾಳಿಯನ್ನು ಆಸ್ವದಿಸಿ

13. ಹೊರಗೆ ಸುತ್ತಾಡಿ ಮತ್ತು ಸ್ವಚ್ಛವಾದ ಗಾಳಿಯನ್ನು ಆಸ್ವದಿಸಿ

ನಿಮ್ಮ ಸ್ನೇಹಿತರ ಜೊತೆಗೆ ಹೊರಗೆ ಸುತ್ತಾಡಿ, ಸಮಾರಂಭಕ್ಕೆ ಭೇಟಿಕೊಡಿ, ನಿಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಕಾಲ ಕಳೆಯಿರಿ, ಬೈಕಿನಲ್ಲಿ ಸವಾರಿ ಮಾಡಿ, ನಿಮ್ಮ ಮುದ್ದಿನ ಸಾಕು ಪ್ರಾಣಿಯೊಡನೆ ನಡೆದಾಡಿ ಮತ್ತು ಮೋಜು ಮಾಡಿ.

14. ಸಂಗೀತ ಮತ್ತು ಸುಭಾಷಿತಗಳಿಂದ ಸ್ಫೂರ್ತಿ ಪಡೆಯಿರಿ

14. ಸಂಗೀತ ಮತ್ತು ಸುಭಾಷಿತಗಳಿಂದ ಸ್ಫೂರ್ತಿ ಪಡೆಯಿರಿ

ಸಂಗೀತ ಮತ್ತು ಸುಭಾಷಿತಗಳು ನೀವು ಸಹ ನಂಬಲಾಗದಷ್ಟು ನಿಮ್ಮ ಜೀವನವನ್ನು ಬದಲಿಸುತ್ತವೆ. ಹಾಗಾಗಿ ಸ್ಫೂರ್ತಿ ಪಡೆಯಿರಿ ಮತ್ತು ಅದನ್ನು ಪ್ರೀತಿಸಿ.

15. ಪೊಳ್ಳುತನವನ್ನು ಬಿಟ್ಟು ಬಿಡಿ

15. ಪೊಳ್ಳುತನವನ್ನು ಬಿಟ್ಟು ಬಿಡಿ

ಯಾರಿಗಾದರು ಸಹಾಯ ಮಾಡಿ. ಇನ್ನೊಬ್ಬರ ಮುಂದೆ ಪೊಳ್ಳುತನ ತೋರಿಸುವ ಬದಲು ನಿಮ್ಮತನವನ್ನು ತೋರಿಸಿ. ಇನ್ನೊಬ್ಬರನ್ನು ಉಸಿರುಗಟ್ಟಿಸುವ ಬದಲು ಅವರಿಗೆ ಪ್ರೀತಿ ವ್ಯಕ್ತಪಡಿಸಿ.

X
Desktop Bottom Promotion