Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯಲ್ಲೇ ಮಿನಿಜಿಮ್ ಮಾಡ್ಕೊಳ್ಳೋದು ಹೇಗೆ? ಅದೂಕೂಡ ಕಡಿಮೆ ಖರ್ಚಿನಲ್ಲಿ?
ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಕ್ರೇಜ್ ಎಲ್ಲಾ ಕಡೆ ಹಬ್ಬಿದೆ. ಮೊದಲೆಲ್ಲಾ ಸೆಲೆಬ್ರಿಟಿಗಳು, ಆಟಗಾರರು ಮಾತ್ರ ಫಿಟ್‌ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸ್ತಿದ್ರು. ಆದ್ರೀಗ ಹೆಚ್ಚಿನ ಯುವಕ-ಯುವತಿಯರು ಫಿಟ್‌ನೆಸ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ಹೆಚ್ಚಿನವರು ಜಿಮ್‌ಗೆ ಜಾಯಿನ್ ಆಗ್ತಾರೆ. ಆದ್ರೆ ಒಂದೆರಡು ದಿನದಲ್ಲೇ ಆಸಕ್ತಿ ಕಳೆದುಕೊಳ್ಳುತ್ತಾರೆ. ಬೆಳ್ಳಂ ಬೆಳಗ್ಗೆ ಎದ್ದು ಜಿಮ್‌ಗೆ ಹೋಗೋದೆ ಅವರಿಗೆ ತಲೆನೋವು ಅನ್ನಿಸಿಬಿಡುತ್ತದೆ.
ಹಾಗಂತ ಫಿಟ್‌ನೆಸ್ ಗೋಲ್ ಮರೆತು ಬಿಡೋದಕ್ಕೆ ಆಗೋದಿಲ್ಲ. ಆರೋಗ್ಯವಾಗಿರ್ಬೇಕಾದ್ರೆ ಇದನ್ನೆಲ್ಲಾ ಮಾಡ್ಲೇಬೇಕು. ಫಿಟ್ ಆಗಿ ಇರ್ಬೇಕು. ಆದ್ರೆ ಹೊರಗಡೆ ಹೋಗೋದಕ್ಕೆ ಬೇಜಾರು ಅನ್ನುವವರು ಮನೆಯಲ್ಲೇ ಜಿಮ್ ಸೆಟ್‌ಅಪ್ ಮಾಡ್ಕೊಳ್ಬಹುದು. ಅದೂ ಕೂಡ ಕಡಿಮೆ ಖರ್ಚಿನಲ್ಲಿ. ಅಷ್ಟಕ್ಕು ಮನೆಯನ್ನೇ ಮಿನಿ ಜಿಮ್ ಮಾಡಿಕೊಳ್ಳೋದು ಹೇಗೆ? ಕಡಿಮೆ ದುಡ್ಡು ವಿನಿಯೋಗಿಸಿ ಯಾವ ರೀತಿ ಜಿಮ್ ಸೆಟ್‌ಅಪ್ ಮಾಡ್ಕೋಬಹುದು? ಅನ್ನೋದನ್ನ ತಿಳಿಸ್ತೀವಿ.

ಮೊದಲು ಯೋಜನೆ ರೂಪಿಸಿಕೊಳ್ಳಿ :
ಮನೆಯಲ್ಲೇ ಮಿನಿ ಜಿಮ್ ಮಾಡ್ಕೊಳ್ಬೇಕು ಅಂತಿರುವವರು ಮೊದಲಿಗೆ ನೀವು ಯಾವ ತರಹದ ವ್ಯಾಯಾಮಗಳನ್ನು ಇಷ್ಟ ಪಡುತ್ತೀರಿ ಎಂದು ಆಲೋಚಿಸಿ. ನೀವು ಇಷ್ಟ ಪಡುವ ವ್ಯಾಯಾಮಗಳು ನಿಮ್ಮ ಫಿಟ್‌ನೆಸ್ ಜರ್ನಿಗೆ ಸಹಾಯ ಮಾಡುತ್ತಾ ಎಂದು ಲೆಕ್ಕಾಚಾರ ಹಾಕಿ. ಮನೆಯೊಳಗಡೆ ಜಿಮ್‌ಗಾಗಿ ಇಷ್ಟೇ ಜಾಗ ಸಾಕು ಎಂದು ಮೊದಲಿಗೆ ನಿರ್ಧರಿಸಿ. ಒಂದು ವೇಳೆ ನೀವು ಬರೀ ಯೋಗ ಇಷ್ಟ ಪಡುವವರಾದರೆ ಯೋಗ ಮ್ಯಾಟ್ ಒಂದಿದ್ದರೆ ಸಾಕಲ್ವಾ? ಇದಕ್ಕಾಗಿ ಒಂದು ಸಣ್ಣ ಜಾಗ ಇದ್ದರಷ್ಟೇ ಸಾಕು.
ಮನೆಯಲ್ಲಿ ಸರಿಯಾದ ಜಾಗ ಹುಡುಕಿ :
ನಿಮ್ಮ ಮನೆಯೊಳಗಡೆ ಒಂದು ಪ್ರಶಾಂತವಾದ ಜಾಗ ಹುಡುಕಿ. ಅದರಲ್ಲಿ ನಿಮ್ಮ ವ್ಯಾಯಾಮಕ್ಕೆ ಬೇಕಾದ ಸಾಮಾಗ್ರಿಗಳು ಹಿಡಯುವಷ್ಟು ಜಾಗದಲ್ಲಿ ಮಾತ್ರ ಜಿಮ್ ಸೆಟ್‌ಅಪ್ ಮಾಡ್ಕೊಳ್ಳಿ. ಸುಖಾ ಸುಮ್ಮ ತುಂಬಾ ಜಾಗವನ್ನು ವ್ಯರ್ಥ ಮಾಡೋದು ಸರಿಯಲ್ಲ. ಮನೆಯವರಿಗೆ ಯಾರಿಗೂ ತೊಂದರೆಯಾಗದ ಜಾಗದಲ್ಲಿ ನೀವು ಜಿಮ್‌ಗಾಗಿ ಸ್ಥಳ ಮೀಸಲಿಟ್ಟರೆ ಸಾಕು.
ಯಾವೆಲ್ಲಾ ಜಿಮ್ ಸಾಮಾಗ್ರಿಗಳನ್ನು ಖರೀದಿಸಬೇಕೆಂಬ ಯೋಜನೆ ಸಿದ್ಧಪಡಿಸಿ :
ಮನೆಯ ಒಳಗಡೆ ಮಿನಿ ಜಿಮ್ ಮಾಡಬೇಕೆಂಬ ಯೋಚನೆ ಬಂದಾಗ ನಾವು ತುಂಬಾನೇ ಜೋಷ್‌ನಿಂದ ಎಲ್ಲಾ ಜಿಮ್ ಸಾಮಾಗ್ರಿಗಳನ್ನು ಖರೀದಿಸೋದಕ್ಕೆ ಮುಂದಾಗ್ತೀವಿ. ಆದರೆವ ದುಡುಕಿ ಒಂದೇ ಬಾರಿಗೆ ಅನೇಕ ಜಿಮ್ ಸಾಮಾಗ್ರಿಗಳನ್ನು ಖರೀದಿಸಬೇಡಿ. ಇದರಿಂದ ನಿಮ್ಮ ಹಣ ವ್ಯರ್ಥವಾಗುತ್ತದೆ. ಮೊದಲಿಗೆ ಎಷ್ಟು ಬೇಕು ಅಷ್ಟು ಸಾಮಾಗ್ರಿಗಳನ್ನು ಮಾತ್ರ ಖರೀದಿಸಿ ಆನಂತರ ಒಂದೊಂದಾಗಿ ಖರೀದಿ ಮಾಡಬಹುದು. ಒಂದೇ ಬಾರಿಗೆ ಎಲ್ಲಾ ಜಿಮ್ ಸಾಮಾಗ್ರಿಗಳನ್ನು ತಂದು ಗುಡ್ಡೆ ಹಾಕಬೇಡಿ.
ಪ್ರಾಥಮಿಕ ಜಿಮ್ ಉಪಕರಣಗಳು :
* ಯೋಗ ಮ್ಯಾಟ್
* ರೆಸಿಸ್ಟಾನ್ಸ್ ಬ್ಯಾಂಡ್‌ಗಳು
* ಸ್ಥಿರತೆ ಚೆಂಡು
* ಬೆಂಚ್, ಸ್ಟೆಪ್ ಬೆಂಚ್ ಅಥವಾ ಬಾಕ್ಸ್
* ಗ್ಲೈಡಿಂಗ್ ಡಿಸ್ಕ್‌ಗಳು
* ಜಂಪಿಂಗ್ ರೋಪ್
ತೂಕಗಳು :
* ಡಂಬೆಲ್ಸ್
* ಮೆಡಿಸಿನ್ ಬಾಲ್
* ಕೆಟಲ್‌ಬಾಲ್
* ಬಾರ್‌ಬೆಲ್ಸ್ ಮತ್ತು ಪ್ಲೇಟ್ ವೈಟ್ಸ್
* ವೈಟೆಡ್ ವೆಸ್ಟ್
ಕಾರ್ಡಿಯೋ :
* ಥ್ರೆಡ್‌ಮಿಲ್
* ಇನ್‌ಡೋರ್ ಸೈಕ್ಲಿಂಗ್ ಬೈಕ್
* ಎಲಿಪ್ಟಿಕಲ್
* ರೋವರ್
* ವರ್ಟಿಕಲ್ ಕ್ಲೈಂಬರ್
* ಸ್ಟೇರ್ ಕ್ಲೈಂಬರ್
* ಅಸಲ್ಟ್ ಬೈಕ್
* ಅಗಿಲಿಟಿ ಲ್ಯಾಡರ್
ಹೆಚ್ಚುವರಿ ಉಪಕರಣಗಳು :
* ಪಂಚಿಂಗ್ ಬ್ಯಾಗ್
* ಬಾಟಲ್ ರೋಪ್ಸ್
* ಪವರ್ ಟವರ್
* ಸ್ಕ್ವಾಟ್ ರಾಕ್
ಪ್ರೇರಣೆ ತೆಗೆದುಕೊಳ್ಳುವುದು ತುಂಬಾ ಮುಖ್ಯ :
ಅನೇಕ ಜನ ಬೇರೆ ಯಾರನ್ನಾದರೂ ನೋಡಿದ ತಕ್ಷಣ ನಮಗೂ ಕೂಡ ಅವರಂತೆಯೇ ದೇಹ ಬೆಳೆಸಿಕೊಳ್ಳಬೇಕೆಂಬ ಆಸೆ ಹುಟ್ಟಿಕೊಳ್ಳೋದು ಸಹಜ. ಇದಕ್ಕಾಗಿ ಎರಡು ದಿನ ನೆಟ್ಟಗೆ ಜಿಮ್‌ಗೆ ಹೋಗ್ತೀವಿ. ದಿನ ಕಳೆದಂತೆ ನಮ್ಮ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಬಾರದು ಪ್ರತಿನಿತ್ಯ ನಮ್ಮ ಎನರ್ಜಿ ಒಂದೇ ರೀತಿ ಇರಬೇಕು. ಮನೆಯಲ್ಲಿ ಮಿನಿ ಜಿಮ್ ಮಾಡಿಕೊಂಡಿದ್ದೀರಾ ಅಂದ ಮೇಲೆ ಪ್ರತಿನಿತ್ಯ ವರ್ಕ್‌ಔಟ್ ಮಾಡಲೇಬೇಕು. ನಿಮಗೆ ಬಿಡುವಿದ್ದ ಸಮಯದಲ್ಲಿ ವರ್ಕ್‌ಔಟ್ ಮಾಡಿ. ಆದ್ರೆ ವ್ಯಾಯಾಮ ಮಾಡೋದನ್ನ ಮಾತ್ರ ತಪ್ಪಿಸಬೇಡಿ. ಆಗ ಮಾತ್ರ ಉತ್ತಮ ಫಲಿತಾಂಶವನ್ನು ನಿರೀಕ್ಷಿಸೋದಕ್ಕೆ ಸಾಧ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



