Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ತಿಂಗಳಿನಲ್ಲಿ 3-5 ಕೆಜಿ ಕಮ್ಮಿ ಮಾಡುತ್ತೆ ಈ ಟಿಪ್ಸ್: ಇದು ಆರೋಗ್ಯಕರವಾಗಿ ತೂಕ ಇಳಿಸುವ ವಿಧಾನ
ನೀವು ತೂಕ ಕಳೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ಈ ಕ್ರಾಷ್ ಡಯಟ್ ಮಾಡಲೇಬೇಡಿ, ಕ್ರಾಷಿ ಡಯಟ್ ಎಂದರೆ ಒಂದು ಹೊತ್ತು, ಎರಡು ಹೊತ್ತು ಹಸಿವಿನಿಂದ ಇರುವುದು, ಯಾವ ಆಹಾರ ಎಷ್ಟು ತಿನ್ನಬೇಕು ಎಂಬ ಐಡಿಯಾವಿಲ್ಲದೆ ಆರೋಗ್ಯಕರ ಕೊಬ್ಬಿನಂಶ ಕೂಡ ಸೇವಿಸದೆ ಇರುವುದು ಹೀಗೆಲ್ಲಾ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಸ್ನಾಯುಗಳು ದುರ್ಬವಾಗುತ್ತದೆ.
ಅಲ್ಲದೆ ಇನ್ನು ಕೆಲವರು ವಾರದಲ್ಲಿ 3-5 ಕೆಜಿ ಕಡಿಮೆ ಮಡುತ್ತಾರೆ, ಅದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಾಗಾದರೆ ಹೇಗೆ ಮೈ ತೂಕ ಕಡಿಮೆಯಾಗಬೇಕು, ತಿಂಗಳಿಗೆ 3-6 ಕೆಜಿ ಕಡಿಮೆ ಮಾಡುವುದು ಹೇಗೆ ಎಂದು ನ್ಯೂಟ್ರಿಷಿಯನಿಸ್ಟ್ ಟಿಪ್ಸ್ ನೀಡಿದ್ದು ಈ ಟಿಪ್ಸ್ ನಿಮಗೆ ಸಹಕಾರಿಯಾದೀತು ನೋಡಿ:

1. ಕೊಬ್ಬು ಕರಗಿಸುವ ಪಾನೀಯದಿಂದ ನಿಮ್ಮ ದಿನ ಪ್ರಾರಂಭಿಸಿ
ನೀರಿಗೆ, ಸೋಂಪು, ಅಜ್ವೈನ್ ಹಾಕಿ ಕುದಿಸಿದ ನೀರು ಕುಡಿಯಿರಿ, ಇದು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆವಿದ್ದರೆ ಚಕ್ಕೆ , ಶುಂಠಿ ಹಾಕಿ ಕುದಿಸಿದ ನೀರು ಕುಡಿಯುವುದು ಒಳ್ಳೆಯದು, ಈ ನೀರು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
2. ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ
ಪ್ರತಿನಿತ್ಯ ನಮ್ಮ ದೇಹಕ್ಕೆ 80-100ಗ್ರಾಂ ಪ್ರೊಟೀನ್ ಅವಶ್ಯಕ. ಮೊಟ್ಟೆ, ಪನ್ನೀರ್, ಮೊಳಕೆಬರಿಸಿದ ಕಾಳುಗಳು, ಗ್ರೀಕ್ ಯೋಗರ್ಟ್ ಇವುಗಳನ್ನು ಸೇವಿಸಿ. ಕಾರ್ಬ್ಸ್ ಬದಲಿಗೆ ಪ್ರೊಟೀನ್ ಅಧಿಕವಿರುವ ಸ್ಮೂತಿ ಅಥವಾ ಮೊಳಕೆ ಬರಿಸಿದ ಕಾಳುಗಳು ಇವುಗಳಿಂದ ನಿಮ್ಮ ದಿನವನ್ನು ಪ್ರಾರಂಭಿಸಿ.
3.ಸಕ್ಕರೆಯಂಶ ಸಂಫೂರ್ಣ ಬಿಡಿ, ಸಂಸ್ಕರಿಸಿದ ಕಾರ್ಬ್ಸ್ ಸೇವಿಸಲೇಬೇಡಿ
ಬಸ್ಕೆಟ್, ಪ್ಯಾಕ್ ಮಾಡಿದ ಜ್ಯೂಸ್, ಕೃತಕ ಸಿಹಿ ಪಾನೀಯಗಳು ಇವುಗಳನ್ನು ಸೇವಿಸಲೇಬೇಡಿ. ಇವುಗಳ ಬದಲಿಗೆ ರಾಗಿ, ಜೋಳ, ನವಣೆ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
4. ರಾತ್ರಿ ಬೇಗನೆ ಊಟ ಮಾಡಿ: ತಡರಾತ್ರಿ ಆಹಾರ ಸೇವಿಸುವುದರಿಂದ ಮೈ ತೂಕ ಹೆಚ್ಚಾಗುವುದು, ಆದ್ದರಿಂದ ಸಂಜೆ ಹೊತ್ತಿಗೆ ಊಟ ಮುಗಿಸಿ, ನಂತರ ನೀರು ಕುಡಿಯಬಹುದು ಆದರ ಆಹಾರವೇನೂ ತಿನ್ನಬೇಡಿ.
ಇನ್ನು ಡಿನ್ನರ್ ಕೂಡ ಲೈಟ್ ಆಗಿ ತೆಗೆದುಕೊಳ್ಳಬೇಕು. ಸೂಪ್, ಪನ್ನೀರ್, ತರಕಾರಿ ಇವುಗಳು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ. ಮಿತ ಆಹಾರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಎಣ್ಣೆಯಲ್ಲಿ ಕರಿದ ಆಹಾರ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
5. ಆಹಾರ ತಿಂದ ಬಳಿಕ ಸ್ವಲ್ಪ ಹೊತ್ತು ನಡೆಯುವುದು ಒಳ್ಳೆಯದು
ಆಹಾರ ಸೇವಿಸಿದ ಬಳಿಕ 10 ನಿಮಿಷ ನಡೆಯುವುದು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಒಂದೇ ಕಡೆ ತುಂಬಾ ಹೊತ್ತು ಕೂರಬೇಡಿ. ಹೀಗೆ ನಡೆಯುವುದರಿಂದ ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು.
6.ನಿದ್ದೆ ಚೆನ್ನಾಗಿ ಮಾಡಿ
ಕಡಿಮೆ ನಿದ್ದೆ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ, ರಾತ್ರಿ 10:30 ಕ್ಕೆ ಮಗುವುದು, ಬೆಳಗ್ಗೆ 6.30ಗೆ ಏಳುವುದು ಒಳ್ಳೆಯದು. ಮಲಗುವ ಒಂದು ಗಂಟೆ ಮೊದಲು ಮೊಬೈಲ್ ನೋಡಬೇಡಿ. ನಿದ್ದೆ ತುಂಬಾನೇ ಮುಖ್ಯ, ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು. ಮಲಗುವ ಹೊತ್ತಿನಲ್ಲಿ ಮೊಬೈಲ್ ನೋಡಲೇಬೇಡಿ.ದಿನಾ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಕೊಳ್ಳಿ.
ಈ ಸರಳ ಟಿಪ್ಸ್ ಅನುಸರಿಸಿ ನೋಡಿ, ನಿಮ್ಮ ಮೈ ತೂಕದಲ್ಲಿ ತುಂಬಾನೇ ಬದಲಾವಣೆ ಕಂಡು ಬರುವುದು. ಅಲ್ಲದೆ ಈ ಟಿಪ್ಸ್ ಅನುಸರಿಸಿದರೆ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮ ಇರಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
