Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪ್ಲೇಟ್‌ಲೆಟ್ ಕೌಂಟ್ ಹೆಚ್ಚಿಸುವ 11 ನೈಸರ್ಗಿಕವಾದ ವಿಧಾನಗಳು
ಡೆಂಗ್ಯೂ, ಜ್ವರ ಮುಂತಾದ ಆರೋಗ್ಯ ಸಮಸ್ಯೆ ಉಂಟಾದಾಗ ಪ್ಲೇಟ್‌ಲೆಟ್ ಕಡಿಮೆಯಾಗುವುದು. ಅದರಲ್ಲೂ ಡೆಂಗ್ಯೂ ಜ್ವರ ಬಂದರಂತೂ ಪ್ಲೇಟ್‌ಲೆಟ್ ತುಂಬಾನೇ ಕಡಿಮೆಯಾಗುವುದು. ಕೆಲವರಿಗೆ ಪ್ಲೇಟ್‌ತುಂಬಾ ಕಡಿಮೆಯಾಗಿ ಪ್ರಾಣಕ್ಕೆ ಕೂಡ ಅಪಾಯ ಉಂಟಾಗುವುದು. ಈ ಕಾರಣದಿಂದ ದೇಹದಲ್ಲಿ ಪ್ಲೇಟ್‌ಲೆಟ್ ಕೌಂಟ್ ಕಡಿಮೆಯಾದರೆ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಈ ಬಗೆಯ ನೈಸರ್ಗಿಕ ಮನೆಮದ್ದು ಕೂಡ ಮಾಡುವುದರಿಂದ ನಿಮ್ಮ ಆರೋಗ್ಯ ಸ್ಥಿತಿ ಬೇಗನೆ ಚೇತರಿಸಿಕೊಳ್ಳಬಹುದು.

1. ಪಪ್ಪಾಯಿ ಎಲೆ
ಇದು ತುಂಬಾನೇ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಪ್ಲೇಟ್‌ಲೆಟ್ ತುಂಬಾ ಕಡಿಮೆಯಾದಾಗ ನೀವು ಸ್ವಲ್ಪ ಪಪ್ಪಾಯಿ ಎಲೆಯ ರಸ ಕುಡಿಯಬೇಕು. ಎರಡು ಹೊತ್ತು 2 ಚಮಚ ಕುಡಿದರೆ ಸಾಕು ಈ ರೀತಿ 2-3 ದಿನ ಕುಡಿಯುವಷ್ಟರಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗಿರುತ್ತದೆ. ಆದರೆ ತುಂಬಾ ಕುಡಿಯಬೇಡಿ ಬೇಧಿ ಉಂಟಾಗಬಹುದು.
ಇದರ ಜೊತೆ ಪಪ್ಪಾಯಿ ಹಣ್ಣನ್ನು ಸೇವಿಸಿ: ನೀವು ಪಪ್ಪಾಯಿ ಹಣ್ಣನ್ನು ಸೇವಿಸಿ, ಪಪ್ಪಾಯಿ ಹಣ್ಣು ನಿಮಗೆ ಎಷ್ಟು ಬೇಕು ಅಷ್ಟು ಸೇವಿಸಿ.
2. ಲೋಳೆಸರ
ಲೋಳೆಸರ ಕೂಡ ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನೀವು ಹಣ್ಣಿನ ಜ್ಯೂಸ್ ಅಥವಾ ನಿಂಬು ಪಾನೀಯ ಜೊತೆಗೆ 2 ಚಮಚ ಲೋಳೆಸರ ಹಾಕಿ ಜ್ಯೂಸ್ ಮಾಡಿ ಕುಡಿಯಿರಿ. ಇದು ಪ್ಲೇಟ್‌ಲೆಟ್ ಹೆಚ್ಚಿಸಲು ಸಹಕಾರಿ.
3. ವಿಟಮಿನ್ ಸಿ
ವಿಟಮಿನ್ ಸಿ ಪ್ಲೇಟ್‌ಲೆಟ್ ಹೆಚ್ಚಿಸಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಸಹಕಾರಿ. ಕಿತ್ತಳೆ, ನಿಂಬೆಹಣ್ಣು, ಗ್ರೇಪ್‌ಫ್ರೂಟ್ಸ್, ಕಿವಿ, ಬೆರ್ರಿ ಈ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
4. ಬೀಟ್‌ರೂಟ್
ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶ, ಫಾಲಿಕ್ ಆಮ್ಲ, ವಿಟಮಿನ್ ಸಿ ಇರುವುದರಿಂದ ಪ್ಲೇಟ್‌ಲೆಟ್ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ. ಬೀಟ್‌ರೂಟ್ ಜ್ಯೂಸ್ ದಿನದಲ್ಲಿ 2 ಲೋಟ ಕುಡಿಯಿರಿ.
5. ನೆಲ್ಲಿಕಾಯಿ
ನೆಲ್ಲಿಕಾಯಿ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ.
6. ಗೋಧಿಹುಲ್ಲು
ಗೋಧಿಹುಲ್ಲಿನ ಜ್ಯೂಸ್ ಕುಡಿಯುವುದರಿಂದ ಕೂಡ ಪ್ಲೇಟ್‌ಲೆಟ್ ಹೆಚ್ಚಾಗುವುದು. ಇದನ್ನು ದಿನದಲ್ಲಿ ಎರಡು ಬಾರಿ ಕುಡಿದರೆ ಒಳ್ಳೆಯದು.
7. ಸಿಹಿ ಕುಂಬಳಕಾಯಿ
ಸಿಹಿ ಕುಂಬಳಕಾಯಿಯಲ್ಲಿ ವಿಟಮಿನ್ ಎ ಇದ್ದು ಪ್ಲೇಟ್‌ಲೆಟ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ಕಬ್ಬಿಣದಂಶ ಇದ್ದು ಕೆಂಪು ರಕ್ತ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
8. ವಿಟಮಿನ್ ಕೆ ಅಧಿಕವಿರುವ ಆಹಾರ
ಸೊಪ್ಪು, ಪಾಲಾಕ್, ಬ್ರೊಕೋಲಿ ಈ ಬಗೆಯ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
9. ಸತು ಅಧಿಕವಿರುವ ಆಹಾರ
ಮೃದ್ವಂಗಿಗಳು, ಏಡಿ, ನಟ್ಸ್, ಬೀಜಗಳು ಇವುಗಳಲ್ಲಿ ಸತುವಿನಂಶ ಇರುವುದರಿಂದ ಪ್ಲೇಟ್‌ಲೆಟ್ ಹೆಚ್ಚಿಸುವಲ್ಲಿ ಸಹಕಾರಿ.
10. ದಾಳಿಂಬೆ
ದಾಳಿಂಬೆಯನ್ನು ಹಾಗೇ ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.
11. ಫೋಲೆಟ್
ಕಿತ್ತಳೆ, ಕಿಡ್ನಿ ಬೀನ್ಸ್, ಧಾನ್ಯಗಳು, ನೆಲಗಡಲೆ ಈ ಬಗೆಯ ಆಹಾರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
