Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಆಹಾ! ಮಾರುಕಟ್ಟೆಗೆ ಬರ್ತಿದೆ ಮಾವಿನಹಣ್ಣು: ರಾಸಾಯನಿಕ ಹಾಕಿದ ಹಣ್ಣುಗಳಿರಬಹುದೇ? ಕಂಡು ಹಿಡಿಯುವುದು ಹೇಗೆ?
ಬೇಸಿಗೆ ಬಂತೆಂದರೆ ಮಾವಿನ ಹಣ್ಣಿನ ದರಬಾರು ಶುರುವಾಗುವುದು. ಮಾವಿನ ಹಣ್ಣಿನ ವಾಸನೆ ಮೂಗಿಗೆ ಬಡೆದರೆ ಸಾಕು ಮಾವಿನ ಹಣ್ಣು ತಿನ್ನಬೇಕೆಂದು ಅನಿಸಲಾರಂಭಿಸುತ್ತದೆ.

ಈಗಾಗಲೇ ಮಾರುಕಟ್ಟೆಗೆ ಮಾವಿನಹಣ್ಣು ಬರಲಾರಂಭಿಸಿದೆ, ಆದರೆ ಆಸೆಪಟ್ಟು ತೆಗೆಯುವ ಮುನ್ನ ಹುಷಾರ್, ರಾಸಾಯನಿಕ ಹಾಕಿ ಹಣ್ಣು ಮಾಡಲಾಗಿದೆಯೇ ಎಂದು ಪರೀಕ್ಷಿಸಿ ಸವೆಯುವುದು ಒಳ್ಳೆಯದು.
ಮಾವಿನ ಹಣ್ಣನ್ನು ರಾಸಾಯನಿಕ ಪೌಡರ್ ಹಾಕಿ ಹಣ್ಣು ಮಾಡಲಾಗಿದೆ ಎಂದಾದರೆ ತಿಳಿಯುವುದು ಹೇಗೆ ಎಂದು ನೋಡೋಣ ಬನ್ನಿ:
1. ಬಕೆಟ್ ನೀರಿನಲ್ಲಿ ಪರೀಕ್ಷೆ
ನೀವು ಒಂದು ಬಕೆಟ್ ನೀರಿನಲ್ಲಿ ತಂದ ಮಾವಿನ ಹಣ್ಣುಗಳನ್ನು ಹಾಕಿ. ಆ ಮಾವಿನ ಹಣ್ಣುಗಳು ನೀರಿನಲ್ಲಿ ಮುಳುಗಿದರೆ ರಾಸಾಯನಿಕ ಮುಕ್ತ ಹಣ್ಣು ಎಂದು ಹೇಳಬಹುದು. ಅದೇ ಮಾವಿನ ಹಣ್ಣು ಬಕೆಟ್ ನೀರಿನಲ್ಲಿ ತೇಲುತ್ತಿದ್ದರೆ ಪೌಡರ್ ಹಾಕಿ ತಯಾರಿಸಿದ ಹಣ್ಣಾಗಿದೆ.
2. ಅದರ ತೊಟ್ಟ ನೋಡಿ
ಪೌಡರ್ ಹಾಕಿ ಹಣ್ಣು ಮಾಡಲಾದ ಮಾವಿನ ಹಣ್ಣಿನ ತೊಟ್ಟು ನೋಡಿದರೆ ಆ ಭಾಗ ಹಣ್ಣಾಗಿರುವುದಿಲ್ಲ. ಅಲ್ಲದೆ ಅದರ ಮೇಲೆ ಹಸಿರು, ಹಳದಿ ಬಣ್ಣದಲ್ಲಿದ್ದರೂ, ಹಸಿರು ಹಸಿರು ಬಣ್ಣ ಪ್ಯಾಚ್ ರೀತಿ ಕಂಡು ಬರುವುದು. ಅದೇ ಸ್ವಾಭಾವಿಕವಾಗಿ ಹಣ್ಣಾದ ಮಾವಿನಹಣ್ಣಿನ ಮೇಲ್ಭಾಗದ ಹಳದಿ-ಹಸಿರು ಬಣ್ಣ ಪ್ಯಾಚ್-ಪ್ಯಾಚ್‌ನಂತೆ ಇರದೆ ಒಂದೇ ರೀತಿ ಇರುತ್ತದೆ.
3. ರಸ ಇರುವುದಿಲ್ಲ
ರಾಸಾಯನಿಕ ಪೌಡರ್ ಹಾಕಿ ಹಣ್ಣಾಗಿದ ಮಾವಿನ ಹಣ್ಣಿನಲ್ಲಿ ರಸ ಇರುವುದಿಲ್ಲ, ರಸ ತುಂಬಾ ಕಡಿಮೆ ಇರಲಿದೆ.
4. ರುಚಿಯೂ ಇರುವುದಿಲ್ಲ
ಮಾವಿನ ಕಾಯಿಗೆ ಪುಡಿ ಹಾಕಿ ಹಣ್ಣು ಮಾಡಿದ್ದರೆ ಅಂತ ಮಾವಿನ ಹಣ್ಣು ನೋಡಲು ಮಾತ್ರ ಆಕರ್ಷಕವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಹಣ್ಣಾದಾಗ ನೀಡುವ ರುಚಿ ಇರುವುದಿಲ್ಲ.
ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣು ತಿನ್ನಬಾರದು ಏಕೆ?
* ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಮಕ್ಕಳಿಗೆ ನೀಡುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
* ಇಂಥ ಹಣ್ಣುಗಳು ಹೊಟ್ಟೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
* ಕ್ಯಾನ್ಸರ್‌ನಂಥ ಮಹಾಮಾರಿ ಕಾಯಿಲೆಗೆ ಇಂಥ ರಾಸಾಯನಿಕವಿರುವ ಆಹಾರಗಳು ಕಾರಣವಾಗಿರಬಹುದು.
* ಅಧ್ಯಯನಗಳ ಪ್ರಕಾರ ಮಾವಿನ ಹಣ್ಣು ಹಣ್ಣಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ನರಗಳ ಮೇಲೂ ಕೂಡ ಕೆಟ್ಟ ಪರಿಣಾಮ ಬೀರುವುದು. ಇದರಿಂದಾಗಿ ತಲೆನೋವು, ಸುಸ್ತು, ತುಂಬಾ ನಿದ್ದೆ ಬರುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಸುಸ್ತು, ನರಗಳಲ್ಲಿ ಸಮಸ್ಯೆ ಮುಂತಾದ ತೊಂದರೆ ಉಂಟಾಗುವುದು.
* ರಾಸಾಯನಿಕವಿರುವ ಹಣ್ಣುಗಳ ಸೇವನೆಯಿಂದ ಪಾರ್ಕಿನ್‌ಸನ್ಸ್ ಅಪಾಯ ಹೆಚ್ಚು.
* ಮತ್ತೊಂದು ಅಪಾಯಕಾರಿ ಸಂಗತಿ ಎಂದರೆ ಎದೆಹಾಲುಣಿಸುವ ತಾಯಿ ಇಂಥ ಹಣ್ಣು ತಿಂದರೆ ಅದರಲ್ಲಿರುವ ರಾಸಾಯನಿಕ ಮಕ್ಕಳಿಗೂ ಸ
FSSAI(ಭಾರತದ ಆಹಾರ ಸುರಕ್ಷಿತಾ ಗುಣಮಟ್ಟ ಪ್ರಾಧೀಕಾರ) ಆಹಾರ ವಸ್ತುಗಳಿಗೆ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದನ್ನು ರದ್ದು ಪಡಿಸಿದೆ.
ಆಹಾರ ಮನುಷ್ಯರ ಆರೋಗ್ಯ ಕಾಪಾಡಬೇಕು, ಆದರೆ ಯಾರದೋ ದುರಾಸೆಯಿಂದ ಆಹಾರ ಜೊತೆಗೆ ಕಾಯಿಲೆ ಕೂಡ ದುಡ್ಡು ಕೊಟ್ಟು ಖರೀದಿಸುವಂತಾಗಿದೆ. ಮಾರುಕಟ್ಟೆಯಿಂದ ಹಣ್ಣುಗಳನ್ನು ಬಳಸುವಾಗ ಕೆಮಿಕಲ್ ಇದೆಯೇ ಎಂದು ಪರೀಕ್ಷಿಸಿ ನಂತರ ಬಳಸಿ.
ಆದಷ್ಟು ಸೀಸನಲ್ ಹಣ್ಣುಗಳನ್ನು ಬಳಸಿ ಆಗ ಈ ರೀತಿ ರಾಸಾಯನಿಕಗಳ ಅಪಾಯವಿರುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


