Latest Updates
-
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು?
ಈ ಫುಡ್ ಸೇವಿಸಿದ್ರೆ ಡಿಹೈಡ್ರೇಷನ್‌ಗೆ ಒಳಗಾಗೋದು ಖಚಿತ: ಬೇಸಿಗೆಯಲ್ಲಿ ಆದಷ್ಟು ದೂರವೇ ಇರಿ!
ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶ ಅಗತ್ಯವಾಗಿ ಬೇಕಾಗುತ್ತೆ. ಹಾಗೆ ಡಿ ಹೈಡ್ರೇಷನ್‌ನಿಂದ ಪಾರಾಗಲು ಹೆಚ್ಚು ದ್ರಾವಣ ಇರುವ ಆಹಾರ ಸೇವಿಸುವುದು ಮುಖ್ಯ. ನಿರ್ಜಲೀಕರಣ ಬೇಸಿಗೆಯಲ್ಲಿ ದೊಡ್ಡ ಸಮಸ್ಯೆಯಾಗಿರುತ್ತದೆ. ದೇಹ ಸರಿಯಾಗಿ ಕೆಲಸ ಮಾಡಬೇಕಾದರೆ ಹೈಡ್ರೇಟ್ ಆಗಿರಬೇಕು. ಇದರಿಂದ ದೇಹವು ಸಂಪೂರ್ಣ ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ.
ಆದ್ರೆ ನೀವು ನೀರು ಅಥವಾ ದ್ರಾವಣ ಅಂಶ ಕಡಿಮೆ ಇರುವ ಆಹಾರ ಸೇವಿಸಿದಾಗ ಇಲ್ಲವೆ ದೇಹಕ್ಕೆ ಅಗತ್ಯವಾಗಿ ಬೇಕಾದ ನೀರಿನ ಪ್ರಮಾಣವನ್ನು ನೀಡದೆ ಇದ್ದಾಗ ಏರುಪೇರಾಗಲಿದೆ. ದೇಹವು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವುದು ನಿಮ್ಮ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಬೇಕು ಎಂಬುದನ್ನು ವಿವರಿಸುತ್ತದೆ. ಬೇಸಿಗೆಯಲ್ಲಿ ನಿಮ್ಮ ದೇಹ ಡಿ ಹೈಡ್ರೇಷನ್‌ಗೆ ಒಳಗಾದರೆ ಕೆಲಸ ಮಾಡುವಾಗ ಸಮಸ್ಯೆಗಳು ಎದುರಾಗುತ್ತವೆ. ದೇಹದ ಪ್ರತಿಯೊಂದು ಅಂಗದ ಮೇಲೆಯೂ ಪರಿಣಾಮ ಬೀರಲಿದೆ.

ನಿಮ್ಮ ದೇಹವು ಡಿಹೈಡ್ರೇಷನ್‌ಗೆ ಒಳಗಾದರೆ ನೀವು ಕುಸಿದು ಬೀಳಬಹುದು. ಹಾಗೆ ದೇಹದ ಚಟುವಟಿಕೆಯಲ್ಲಿ ಏರುಪೇರಾಗಬಹುದು. ಹಾಗಾದ್ರೆ ನೀವು ಸೇವಿಸುವ ಯಾವ ಆಗಾರ ಅಥವಾ ಪಾನಿಯ ನಿಮ್ಮಲ್ಲಿ ಡಿ ಹೈಡ್ರೇಷನ್‌ಗೆ ಒಳಗಾಗುವಂತೆ ಮಾಡಬಹುದು. ಇದಕ್ಕೆ ಕಾರಣವಾಗುವ ಆಹಾರ ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಪ್ಪು ಹೆಚ್ಚಾಗಿರುವ ತಿಂಡಿಗಳು
ನೀವು ಬೇಸಿಗೆಯ ಸಮಯದಲ್ಲಿ ಉಪ್ಪು ಹೆಚ್ಚಾಗಿರುವ ಆಹಾರಗಳ ಸೇವಿಸಿದರೆ ನೀರು ಹೆಚ್ಚಾಗಿ ಕುಡಿಯಬೇಕಾಗುತ್ತದೆ. ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಬೇಕಾದರೆ ನೀರಿನ ಅಂಶ ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಹೀಗಾಗಿ ನೀರಿನ ಅಂಶ ಹೆಚ್ಚಾಗಿರುವ ಅಂಶ ಸೇವಿಸುವುದು ಉತ್ತಮ. ಹಣ್ಣುಗಳು, ಸೌತೆಕಾಯಿ, ಸೇರಿದಂತೆ ಸೋಡಿಯಂ ಅಂಶ ಕಡಿಮೆ ಇರುವ ಆಹಾರ ಸೇವಿಸುವುದು ನೀವು ಡಿಹೈಡ್ರೇಷನ್‌ಗೆ ಒಳಗಾಗುವುದನ್ನು ತಪ್ಪಿಸಲಿದೆ.
ಕೆಫೀನ್ ಅಂಶ ಹೊಂದಿರುವ ಪಾನೀಯ
ಕೆಫೀನ್ ನಿಮ್ಮ ವಿಸರ್ಜನೆ ಹೆಚ್ಚು ಮಾಡುವ ಒಂದು ಅಂಶವಾಗಿದೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರ ಬದಲಾಗಿ ಹರ್ಬಲ್ ಟೀ, ನಿಂಬೆ ರಸ, ಗಿಡಮೂಲಿಕೆ ಚಹಾಗಳು, ಶರಬತ್, ಮಜ್ಜಿಗೆ ಮತ್ತು ಹಣ್ಣುಗಳು ಮತ್ತು ಲೆಮನ್ ಟೀ ಅಂತಹ ಪಾನಿಯ ಸವಿಯುವುದು ನಿಮಗೆ ಚೈತನ್ಯ ನೀಡಲಿದೆ.
ಸಕ್ಕರೆಯುಕ್ತ ಆಹಾರಗಳು
ನಿಮ್ಮ ದೇಹಕ್ಕೆ ಸಕ್ಕರೆಯನ್ನು ಸಂಸ್ಕರಿಸಲು ಹೆಚ್ಚಿನ ನೀರು ಬೇಕಾಗುತ್ತದೆ. ಹೆಚ್ಚಿನ ಸಕ್ಕರೆಯನ್ನು ಸೇವಿಸುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಬೇಸಿಗೆ ಕಾಲದಲ್ಲಿ ಸಕ್ಕರೆಯು ನಿಮಗೆ ಹಾನಿಕಾರಕವಾಗಿ ಬದಲಾಗಬಹುದು. ಸಕ್ಕರೆ ಅಂಶ ಪೂರೈಸುವ ಪರ್ಯಾಯ ವಸ್ತುಗಳು ಅಥವಾ ಹಣ್ಣಗಳ ಸೇವಿಸಬಹುದು.
ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಉಪ್ಪಿನ ಅಂಶ ಹೊಂದಿರುತ್ತವೆ. ಇದರಿಂದ ನಿಮ್ಮ ದೇಹಕ್ಕೆ ನಿರ್ಜಲೀಕರಣ ಉಂಟಾಗಬಹುದು. ಇದರಲ್ಲೂ ಚಿಪ್ಸ್, ಕರಿದ ತಿಂಡಿಗಳ ಸೇವನೆಯನ್ನು ತಡೆಯುವುದು ಮುಖ್ಯ.
ಆಲ್ಕೋಹಾಲ್
ಬೇಸಿಗೆಯಲ್ಲಿ ಆಲ್ಕೋಹಾಲ್ ಸೇವನೆಯು ನಿಮ್ಮ ದೇಹವು ನಿರ್ಜಲೀಕರಣಕ್ಕೆ ತುತ್ತಾಗಲು ಕಾರಣವಾಗುತ್ತದೆ. ಆಲ್ಕೋಹಾಲ್ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ನಿರ್ಜಲೀಕರಣಗೊಳಿಸಬಹುದು. ಹೀಗಾಗಿ ಆಲ್ಕೋಹಾಲ್ ಸೇವನೆ ತಡೆಯುವುದು ಮುಖ್ಯ, ಇಲ್ಲವೆ ನೀರು ಹೆಚ್ಚಾಗಿ ಕುಡಿಯುವುದು ಮುಖ್ಯವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾಗಿರುವ ಸಲಹೆ ಸೇರಿದಂತೆ ಈ ವಿಷಯವು ಅಂತರ್ಜಾಲದಲ್ಲಿ ಲಭ್ಯವಿರುವ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಈ ಸಲಹೆಗಳ ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications