Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪತಿ-ಪತ್ನಿ ಸಂಬಂಧ ಗಟ್ಟಿಯಾಗಿಸುವಲ್ಲಿ ಈರುಳ್ಳಿ ತುಂಬಾನೇ ಸಹಕಾರಿ, ಹೇಗೆ?
ಈರುಳ್ಳಿ ಪತಿ-ಪತ್ನಿಯ ಖಾಸಗಿ ಬದುಕಿನಲ್ಲಿ ತುಂಬಾನೇ ಸಹಕಾರಿ ಎಂಬುವುದು ಬಹುತೇಕರಿಗೆ ಗೊತ್ತೇ ಇಲ್ಲ, ನಮ್ಮ ಜೀವನ ಶೈಲಿ ದೈಹಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ, ನಮ್ಮ ಆರೋಗ್ಯ ವೈವಾಹಿಕ ಬದುಕಿನಲ್ಲಿಯೂ ಪರಿಣಾಮ ಬೀರುವುದು.
ಪತಿ-ಪತ್ನಿ ನಡುವಿನ ಬಾಂಧವ್ಯ ಗಟ್ಟಿಯಾಗಿಸುವಲ್ಲಿ ಲೈಂಗಿಕ ತೃಪ್ತಿ ಎಂಬುವುದು ತುಂಬಾನೇ ಮುಖ್ಯ. ಈರುಳ್ಳಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಈರುಳ್ಳಿ ಹೇಗೆ ಸಹಕಾರಿಯಾಗಿದೆ ಎಂದು ನೋಡುವುದಾದರೆ:

ಮೂಡ್ ಬರುವಂತೆ ಮಾಡುವಲ್ಲಿ ಈರುಳ್ಳಿ ಸಹಕಾರಿ
ಮೂಡ್ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸುತ್ತ ಮುತ್ತಲಿನ ಅಂಶ ಎಲ್ಲವೂ ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಅತಿಯಾದ ಕೆಲಸದ ಒತ್ತಡ ದೈಹಿಕ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಈರುಳ್ಳಿ ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ:
ಹಾರ್ಮೋನ್: ಟೆಸ್ಟೋಸ್ಟಿರೋನೆ, ಈಸ್ಟ್ರೋಜಿನ್, ಪ್ರೊಗೆಸ್ಟಿರೋನೆ ಈ ಎಲ್ಲಾ ಹಾರ್ಮೋನ್‌ಗಳು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಈ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಪುರುಷರಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಇನ್ನು ಮಹಿಳೆಯರಲ್ಲಿ ಈಸ್ಟ್ರೋಜಿನ್ ಕಡಿಮೆಯಾದರೆ ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.
ಒಬೆಸಿಟಿ
ಅತ್ಯಧಿಕ ಮೈ ತೂಕ ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಮಹಿಳೆಯಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಪುರುಷರ ಗುಪ್ತಜಾಗಕ್ಕೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಅಲ್ಲದೆ ಅತ್ಯಧಿಕ ಮೈತೂಕ ಕೆಲವರಲ್ಲಿ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತದೆ.ಇವೆಲ್ಲಾ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು.
ಜೀವನಶೈಲಿ
ವೃತ್ತಿ ಜೀವನದಲ್ಲಿ ಬೆಳೆಯಬೇಕೆಂದರೆ ನಡೆಯಬಾರದು ಓಡಬೇಕು ಎಂದು ಟಾರ್ಗೆಟ್ ಹಿಂದೆ ಓಡುತ್ತಿರುತ್ತೇವೆ, ಈ ಓಟದಲ್ಲಿ ಹಲವಾರು ವಿಷಯಗಳನ್ನು ಕಳೆದುಕೊಳ್ಳುತ್ತೇವೆ, ಮಾನಸಿಕ ಒತ್ತಡ ಕುಟುಂಬದ ಮೇಲೆ ಪರಿಣಾಮ ಬೀರುವುದು, ಪತಿ -ಪತ್ನಿ ನಡುವೆ ಆಸಕ್ತಿ ಕಡಿಮೆ ಮಾಡುವುದು, ವಿರಸ ಹೆಚ್ಚಿಸುವುದು.
ಲೈಂಗಿಕ ಬದುಕು ಸರಿಯಾಗಿಸುವಲ್ಲಿ ಈರುಳ್ಳಿ ಹೇಗೆ ಸಹಕಾರಿ?
ಈರುಳ್ಳಿ ದೇಹದ ಭಾಗಗಳಿಗೆ ರ್ಕತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. Iranian Journal of Basic Medical Scienceನಲ್ಲಿ ಹೇಳಿರುವಂತೆ ಇದು ಗುಪ್ತಾಂಗಗಳಿಗೆ ರಕ್ತ ಸಂಚಾರ ಆಗುವಂತೆ ಮಾಡುತ್ತದೆ. ಹೀಗಾಗಿ ಲೈಂಗಿಕ ತೃಪ್ತಿ ಸಿಗಲಿದೆ.
ಪುರುಷರಿಗೆ ತುಂಬಾನೇ ಒಳ್ಳೆಯದು
ಈರುಳ್ಳಿ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಿಸುತ್ತದೆ. ಇದರಿಂದಾಗಿ ಪುರುಷರಲ್ಲಿ ಶೀಘ್ರ ಸ್ಖಲನ ಸಮಸ್ಯೆ ಇರಲ್ಲ, ಅಲ್ಲದೆ ಶಿಶ್ನಗಳಿಗೆ ಹಾನಿಯುಂಟಾಗುವುದನ್ನು ತಡೆಗಟ್ಟುತ್ತದೆ ಎಂದು ಹೇಳಲಾಗಿದೆ.
ಸ್ಟಾಮಿನಾ ಹೆಚ್ಚಿಸುತ್ತದೆ
ಈರುಳ್ಳಿ ತಿನ್ನುವುದರಿಂದ ಲೈಂಗಿಕ ಸಾಮರ್ಥ್ಯ ವೃದ್ಧಿಸುತ್ತದೆ, ಹೀಗಾಗಿ ಲೈಂಗಿಕ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಈರುಳ್ಳಿ ಸಹಕಾರಿಯಾಗಿದೆ. ಸ್ಟಾಮಿನಾ ಹೆಚ್ಚಾದರೆ ಲೈಂಗಿಕ ತೃಪ್ತಿ ಕೂಡ ಇರಲಿದೆ. ಒಂದು ಸಂಬಂಧ ಚೆನ್ನಾಗಿರಲು ಅವರಲ್ಲಿ ವಿರಸ ಕಡಿಮೆಯಾಗಲು ಈ ಅಂಶ ತುಂಬಾನೆ ಮುಖ್ಯವಾಗುತ್ತದೆ. ಕೆಲವರಿಗೆ ಇಂಥ ಸಮಸ್ಯೆ ತಜ್ಞರ ಬಳಿ ಹೆಳಿಕೊಳ್ಳಲು ಕೂಡ ಮುಜುಗರ ಪಡುತ್ತಾರೆ, ಅಂಥವರು ಕೂಡ ಈರುಳ್ಳಿ ತಿನ್ನುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ, ಸೂಕ್ತವಾದ ತಜ್ಞರನ್ನು ಕಂಡು ಸಲಹೆ ಪಡೆಯಿರಿ.
ಹಸಿ ಈರುಳ್ಳಿ ತಿಂದರೆ ಈ ಅಡ್ಡಪರಿಣಾಮಗಳಿವೆ:
ಬಾಯಿ ದುರ್ವಾಸನೆ ಬೀರುವುದು, ಹೀಗಾಗಿ ಮಾತನಾಡುವಾಗ ಹಿಂಜರಿಕೆ ಉಂಟಾಗುವುದು.
ಈರುಳ್ಳಿ ತಿಂದಾಗ ಕೆಲವರಿಗೆ ಹೊಟ್ಟೆ ಉಬ್ಬುವಿಕೆ, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು
ಕೆಲವರಿಗೆ ಎದಯುರಿ ಉಂಟಾಗುವುದು
ಈರುಳ್ಳಿಯನ್ನು ಹಸಿ ತಿನ್ನಲು ಕಷ್ಟವಾದರೆ ನೀವು ಸಾರು ಅಥವಾ ಪಲ್ಯಗೆ ಹೆಚ್ಚು ಹಾಕಿ ಬಳಸಿ, ಇದರಿಂದ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











