Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಸ್ಟ್ರೆಸ್ ಹೆಚ್ಚಿದರೆ ಹೆಚ್ಚುವುದು ಸಕ್ಕರೆಯಂಶ:ನಿಯಂತ್ರಣಕ್ಕೆ ಮಧುಮೇಹಿಗಳಿಗೆ ಟಿಪ್ಸ್
ಮಧುಮೇಹಿಗಳು ಗಮನಿಸಿರಬಹುದು ಸ್ಟ್ರೆಸ್ (ಮಾನಸಿಕ ಒತ್ತಡ) ಹೆಚ್ಚಾದಾಗ ಶುಗರ್ ಲೆವಲ್ ಕೂಡ ಹೆಚ್ಚಾಗಿರುತ್ತದೆ. ಅತ್ಯಧಿಕ ಮಾನಸಿಕ ಒತ್ತಡಕ್ಕೂ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಕ್ಕೂ ಸಂಬಂಧವಿದೆಯೇ? ಮಧುಮೇಹವನ್ನು ನಿಯಂತ್ರಣದಲ್ಲಿಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಕ್ಕೂ ಮಾನಸಿಕ ಒತ್ತಡಕ್ಕೂ ಇರುವ ಸಂಬಂಧವೇನು?
ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾದಾಗ ಕಾರ್ಟಿಸೋಲ್ ಮತ್ತು adrenaline ಎಂಬ ಒತ್ತಡದ ಹಾರ್ಮೋನ್ ಉಂಟಾಗುವುದು. ಈ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾದಾಗ ಇನ್ಸುಲಿನ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ಮಧುಮೇಹಿಗಳು ಬರೀ ಔಷದ, ಆಹಾರಕ್ರಮ ಮಾತ್ರವಲ್ಲ ನಿಮ್ಮ ಮಾನಸಿಕ ಆರೋಗ್ಯದ ಕಡೆಯೂ ಗಮನಹರಿಸಬೇಕಾಗುತ್ತದೆ.
ಕೆಲವರಿಗೆ ಚಿಂತೆ ಹೆಚ್ಚಾದಾಗ ರಕ್ತದಲ್ಲಿ ಸಕ್ಕರೆಯಂಶ ತುಂಬಾನೇ ಕಡಿಮೆಯಾಗುವುದು
ಸಕ್ಕರೆಯಂಶ ಹೆಚ್ಚಾದರು ಕಷ್ಟ, ತುಂಬಾ ಕಡಿಮೆಯಾದರೂ ಕಷ್ಟ. ಕೆಲವರಿಗೆ ಚಿಂತೆ ಕಾಡಿದಾಗ ಸಕ್ಕರೆಯಂಶ
ತಂಬಾನೇ ಕಡಿಮೆಯಾಗಿ ಸಮಸ್ಯೆಗಳು ಉಂಟಾಗುವುದು, ಇದನ್ನು hypo anxiety ಎಂದು ಕರೆಯಲಾಗುವುದು.
ಚಿಂತೆಯಿಂದ ಮಧುಮೇಹ ಬರುವುದೇ?
ಚಿಂತೆಯಿಂದ ಮಧುಮೇಹ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಮಧುಮೇಹಕ್ಕೆ ಅನೇಕ ಅಂಶಗಳು ಕಾರಣವಾಗಿರುತ್ತದೆ. ಆದರೆ ಮಧುಮೇಹಿಗಳು ತುಂಬಾ ಮಾನಸಿಕ ಒತ್ತಡ ತೆಗೆದುಕೊಳ್ಳುವುದರಿಂದ ಅವರ ಆರೋಗ್ಯ ಮತ್ತಷ್ಟ ಹದಗೆಡುವುದು, ಆವಾಗ ಮಾತ್ರೆ, ಇನ್ಸುಲಿನ್ ಏನೇ ತೆಗೆದುಕೊಂಡರು ಸಕ್ಕರೆಯಂಶ ನಿಯಂತ್ರಣಕ್ಕೆ ಬರುವುದು ಕಷ್ಟ.
ಆರೋಗ್ಯಕ್ಕಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು
ಎಲ್ಲರಿಗೂ ಒಂದೆಲ್ಲಾ ಒಂದು ಚಿಂತೆ ಇರುತ್ತದೆ, ಕೆಲವೊಂದು ಸಂದರ್ಭಗಳು ಅತಿಯಾದ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಆದರೆ ಅದನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕು. ನಮಗೆ ತುಂಬಾನೇ ನೋವುಂಟು ಮಾಡುವ ವಿಷಯದ ಬಗ್ಗೆ ಚಿಂತೆ ಕಡಿಮೆ ಮಾಡಬೇಕು. ಬೇರೆ ವಿಷಯಗಳ ಕಡೆಗೆ ಗಮನರಹರಿಸಬೇಕು.
ತುಂಬಾ ಬ್ಯುಸಿಯಾಗಿ: ಒಂದು ಕಡೆ ಸುಮ್ಮನೆ ಕೂತಾಗ ಈ ಚಿಂತೆಗಳು ಬಂದಪ್ಪಳಿಸುತ್ತದೆ, ಅದೇ ನೀವು ತುಂಬಾ ಬ್ಯುಸಿಯಾಗಬೇಕು, ನಿಮ್ಮ ಬಗ್ಗೆ ನೀವು ಯೋಚಿಸಲು ಸಾಧ್ಯವಾಗದಷ್ಟು ಬ್ಯುಸಿಯಾದರೆ ಈ ಬಗೆಯ ಚಿಂತೆ ಕಡಿಮೆಯಾಗುವುದು.
ನಿಮ್ಮ ಮನಸ್ಸಿಗೆ ಖುಷಿ ನೀಡುವ ಕಾರ್ಯ ಮಾಡಿ
ಹೌದು ನೀವು ದುಃಖದ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಿದ್ದರೆ ಇದರಿಂದ ಆರೋಗ್ಯ ಮತ್ತಷ್ಟು ಹದಗೆಡುವುದು, ಹಾಗಾಗಿ ಮನಸ್ಸಿಗೆ ಖುಷಿ ಕೊಡುವ ಕಾರ್ಯದತ್ತ ಗಮನಹರಿಸಿ, ಇದು ಮಧುಮೇಹ ನಿಯಂತ್ರಣಕ್ಕೆ ಮಾತ್ರವಲ್ಲ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ಯೋಗ, ಧ್ಯಾನ, ವ್ಯಾಯಾಮ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ
ಇನ್ನು ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ, ವ್ಯಾಯಾಮ ಸಹಕಾರಿ, ಇವೆಲ್ಲಾ ಮಾನಸಿಕ ಒತ್ತಡ ಹೆಚ್ಚಿಸುವ ಹಾರ್ಮೋನ್‌ಗಳ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.
ಮಧುಮೇಹಿಗಳು ತಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ದಿನದಲ್ಲಿ 45 ನಿಮಿಷ ಇದರತ್ತ ಗಮನಹರಿಸುವುದು ಒಳ್ಳೆಯದು
ಮಧುಮೇಹಿಗಳು ಸಕ್ಕರೆಯಂಶ ನಿಯಂತ್ರಣದಲ್ಲಿಡಲು ನೀವು ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಬೇಕು. ಇದರಿಂದ ನೀವು ತೆಗೆದುಕೊಲ್ಳುವ ಮಾತ್ರೆಯಾಗಲಿ ಅಥವಾ ಇನ್ಸುಲಿನ್‌ಯಾಗಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.
ಮಧುಮೇಹಿಗಳು ಆಹಾರಕ್ರಮದ ಕಡೆಗೆ ಗಮನಹರಿಸಿ
ಮಧುಮೇಹಿಗಳು ಆಹಾರಕ್ರಮದ ಕಡೆಗೆ ಕೂಡ ತುಂಬಾನೇ ಗಮನಹರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications