ಒತ್ತಡದಿಂದ ಹೊರಬರಲು ಕೋಪಿಂಗ್ ಮೆಕ್ಯಾನಿಸಂ ಹೇಗೆ ಸಹಕಾರಿ! ಜೀವ ಉಳಿಸುವ ವಿಧಾನ ಕುರಿತು ತಿಳಿದುಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ಜನರು ಒಂದಲ್ಲಾ ಒಂದು ರೀತಿಯ ಒತ್ತಡವನ್ನು ಎದುರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಒತ್ತಡಕ್ಕೆ ನಿಗದಿತ ಕಾಲಮಿತಿ ಅಥವಾ ವಯಸ್ಸಿನ ಮಿತಿ ಇಲ್ಲದೆ ಈಗ ಹರಿಡಿದೆ. ಮಕ್ಕಳಲ್ಲಿ ಶಾಲಾ ಕಾಲೇಜಿನ ಒತ್ತಡದಿಂದ ಹಿಡಿದು ಇಳಿ ವಯಸ್ಸಿನಲ್ಲಿ ಕಾಡುವ ಒಂಟಿತನ ಅಥವಾ ಅವಲಂಬನೆಯಂತಹ ಒತ್ತಡಗಳು ಜನರ ಮಾನಸಿಕ ಆರೋಗ್ಯದ ಮೇಲೆ ತಮ್ಮ ದೊಡ್ಡ ಪರಿಣಾಮ ಉಂಟು ಮಾಡಿವೆ.

ಒತ್ತಡ ನಿಭಾಯಿಸುವ ಬದಲಾಗಿ ಈಗ ಜನರು ತಮ್ಮ ಜೀವನ ಅಂತ್ಯಗೊಳಿಸುವಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಬಹಳ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಒತ್ತಡದಿಂದ ಹೊರಬರಲಾಗದ ಮಂದಿ ಅದರ ಮುಂದಿನ ಹಂತವಾದ ಖಿನ್ನತೆಗೆ ಒಳಗಾಗುವುದು ಸಹ ಇದೆ. ಇನ್ನು ಒತ್ತಡ ಜೀವಕ್ಕೆ ಹಾನಿ ಮಾಡುವಂತಹ ಸಮಸ್ಯೆ ಎಂಬುದು ಇತ್ತೀಚಿಗೆ ಅದರ ಪರಿಣಾಮಕಾರಿ ಹರಡುವಿಕೆಯಿಂದ ಅರಿಯಬಹುದಾಗಿದೆ.

How Coping Mechanisms Help You Overcome Stress

ದೈನಂದಿನ ಜೀವನ ಮುಂಬರುವ ಚಟುವಟಿಕೆಯ ಬಗ್ಗೆ ಆತಂಕ ಅಥವಾ ಅಪಾಯಕಾರಿ ಅಥವಾ ಮಾರಣಾಂತಿಕ ಪರಿಸ್ಥಿತಿಯಿಂದಾಗಿ ಒತ್ತಡವು ಅನಿವಾರ್ಯವಾಗಿದೆ. ಯಾವುದೇ ಸಂದರ್ಭವಿರಲಿ, ನೀವು ನಿಭಾಯಿಸುವ ಕಾರ್ಯವಿಧಾನಗಳನ್ನು ಅವಲಂಬಿಸಿರುತ್ತೀರಿ. ಆದ್ರೆ ನಮ್ಮ ಜೀವನದಲ್ಲಿ ಮುಂದೆ ನಡೆಯುವ ಹಾಗೆ ಹಿಂದೆ ಸಂಭವಿಸಿದ ಘಟನೆಗಳ ಆಧಾರದಲ್ಲಿ ಈ ಖಿನ್ನತೆ ಹಾಗೂ ಒತ್ತಡವು ನಮ್ಮನ್ನು ಕಾಡಬಹುದು.

ಒತ್ತಡ ನಿವಾರಣೆಗೆ ಹಲವು ರೀತಿಯ ಅಂಶಗಳಿದ್ದರೂ ಕೂಡ ಅದನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಇತ್ತೀಚಿಗೆ ಜನರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ಎದುರಿಸುವ ಧೈರ್ಯ ಮಾಡದೆ ಪ್ರಾಣ ಕಳೆದುಕೊಳ್ಳುವಂತಹ ನಿರ್ಧಾರ ಮಾಡುತ್ತಿರುವುದು ದೊಡ್ಡ ಉದಾಹರಣೆಯಾಗಿದೆ. ಅದರಲ್ಲೂ ಮಕ್ಕಳು, ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು ಸೇರಿ ಹಲವರು ಈಗ ಒತ್ತಡ ಹಾಗೂ ಖಿನ್ನತೆಯ ಎದುರಿಸಲಾಗದೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕೈ ಹಾಕುತ್ತಾರೆ.

ಆತಂಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ 2023 ರಲ್ಲಿ ಸುಮಾರು 171,000 ಕ್ಕೂ ಹೆಚ್ಚು ಸಾವುಗಳು ಭಾರತದಲ್ಲಿ ವರದಿಯಾಗಿದೆ ಎಂದು ತಿಳಿದುಬರುತ್ತದೆ. ಇದು 15ರಿಂದ 29 ವರ್ಷದೊಳಗಿನ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಡುತ್ತಿದೆ ಎಂಬುದು ಕೂಡ ದೊಡ್ಡ ಆತಂಕ ಹುಟ್ಟಿಸುವ ವಿಷಯವಾಗಿದೆ.

ಆದ್ರೆ ಈ ರೀತಿಯ ಒತ್ತದಿಂದ ಹೊರಬರಲು ಒಂದಿಷ್ಟು ವಿಧಾನಗಳಿದ್ದರೂ ಅತ್ಯಂತ ಪ್ರಬಲವಾದ ಮಾಧ್ಯಮವಾದ ಕೋಪಿಂಗ್ ಮೆಕ್ಯಾನಿಸಂ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಈ ಕೋಪಿಂಗ್ ಮೆಕ್ಯಾನಿಸಂ ಅಂದರೆ ಏನು? ಇದು ಒತ್ತಡ ನಿವಾರಣೆಗೆ ಹೇಗೆ ಸಹಕಾರಿ ಎಂಬುದನ್ನು ಇಲ್ಲಿ ತಿಳಿಯೋಣ.

ಕೋಪಿಂಗ್ ಮೆಕ್ಯಾನಿಸಂ ಎಂದರೇನು?

ಕೋಪಿಂಗ್ ಮೆಕ್ಯಾನಿಸಂ ಒತ್ತಡ, ಆತಂಕ, ದುಃಖ ಅಥವಾ ಸವಾಲಿನ ಸಂದರ್ಭಗಳನ್ನು ಎದುರಿಸಲು ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಗುಂಪು ಬಳಸುವ ಮಾನಸಿಕ ಮತ್ತು ನಡುವಳಿಕೆಯ ಒಂದು ತಂತ್ರವಾಗಿದೆ. ಇದು ಒತ್ತಡ ನಿಭಾಯಿಸಲು ಸಹಾಯ ಮಾಡಲಿದೆ. ಕೋಪಿಂಗ್ ಮೆಖ್ಯಾನಿಸಂ ಅನ್ನು ಅನುಸರಿಸುವುದು ವ್ಯಕ್ತಿಯ ಜೀವನದಲ್ಲಿ ವಿವರಿಸಲಾಗದ ಬದಲಾವಣೆಗಳ ತರಲಿದೆ.

ಕೋಪಿಂಗ್ ಮೆಕ್ಯಾನಿಸಂ ಯಾವ ಸಮಯದಲ್ಲಿ ಸಹಾಯಕ್ಕೆ ಬರಲಿದೆ?

ಸಕಾರಾತ್ಮಕ ಅಥವಾ ನಕಾರಾತ್ಮಕ ಜೀವನದ ಮಹತ್ವದ ಘಟನೆಗಳು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ವಿಚ್ಛೇದನ, ಗರ್ಭಪಾತ, ಪ್ರೀತಿಪಾತ್ರರ ಮರಣ ಅಥವಾ ಉದ್ಯೋಗ ನಷ್ಟದಂತಹ ಕಷ್ಟಕರ ಘಟನೆಗಳು ಹೆಚ್ಚಿನ ಜನರು ದುಃಖ ಅಥವಾ ಸಂಕಟವನ್ನು ಅನುಭವಿಸುವಂತೆ ಮಾಡಬಹುದು. ಆದರೆ ಅನೇಕರು ಸಕಾರಾತ್ಮಕವೆಂದು ಪರಿಗಣಿಸುವ ಘಟನೆಗಳು - ಮದುವೆಯಾಗುವುದು, ಮಗುವನ್ನು ಹೊಂದುವುದು ಮತ್ತು ಮನೆ ಖರೀದಿಸುವುದು - ಸಹ ಗಮನಾರ್ಹ ಪ್ರಮಾಣದ ಒತ್ತಡಕ್ಕೆ ಕಾರಣವಾಗಬಹುದು. ಒತ್ತಡ ನಿರ್ವಹಣೆಗಾಗಿ ಅಥವಾ ಕೋಪ, ಒಂಟಿತನ, ಆತಂಕ ಅಥವಾ ಖಿನ್ನತೆಯನ್ನು ನಿಭಾಯಿಸಲು ಈ ಕೋಪಿಂಗ್ ಮೆಕ್ಯಾನಿಸಂ ಬಳಸಬಹುದು.


ಕೋಪಿಂಗ್ ಮೆಕ್ಯಾನಿಸಂ ವಿಧಾನವೇನು?

ಹಾಗಾದ್ರೆ ಕೋಪಿಂಗ್ ಮೆಕ್ಯಾನಿಸಂನಲ್ಲಿ ಯಾವುದು ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ ಎಂಬುದನ್ನು ನಾವು ಮೊದಲು ತಿಳಿದಿರಬೇಕು. ಯಾವ ವ್ಯಕ್ತಿ ಒತ್ತಡ, ಖಿನ್ನತೆಗೆ ಒಳಗಾಗಿರುತ್ತಾರೋ ಅವರು ಧ್ಯಾನ, ಯೋಗದಂತಹ ಕ್ರಿಯೆಗಳಲ್ಲಿ ಹೆಚ್ಚು ತೊಡಗಬೇಕು. ಇದೇ ಕೋಪಿಂಗ್ ಮೆಕ್ಯಾನಿಸಂನ ಮೊದಲ ಹಂತ ಎನ್ನಬಹುದು.

ಪ್ರೋತ್ಸಾಹ ಇಲ್ಲವೆ ಬೆಂಬಲ: ವ್ಯಕ್ತಿಯೊಬ್ಬರು ಖಿನ್ನತೆ ಅಥವಾ ಒತ್ತಡದಲ್ಲಿದ್ದಾಗ ಅವರು ಯಾರ ಬಳಿಯಾದರು ಈ ಘಟನೆ ವಿವರಿಸುವುದು ಅವರ ಮನದಲ್ಲಿನ ಒತ್ತಡ ಅಥವಾ ಚಿಂತೆ ಕಡಿಮೆಯಾಗಲು ಸಹಕಾರಿ ಅದ್ರಲ್ಲೂ ಅವರಿಗೆ ಬೆಂಬಲವಾಗಿ ನಿಲ್ಲುವುದು ಬಹಳ ಮುಖ್ಯ.

ವಿಶ್ರಾಂತಿ: ವ್ಯಕ್ತಿಯೊಬ್ಬರು ಒತ್ತಡದಲ್ಲಿದಾಗ ಅವರಿಗೆ ವಿಶ್ರಾಂತಿ ಅತೀ ಅಗತ್ಯವಾಗಿರಲಿದೆ. ಒತ್ತಡದ ಜೊತೆಗೆ ಕೆಲಸ ಮಾಡುವುದು ಅವರ ಮನಸ್ಥಿತಿ ಹದಗೆಡಲು ಕಾರಣವಾಗುತ್ತದೆ. ಹೀಗಾಗಿ ವಿಶ್ರಾಂತಿಯು ಧ್ಯಾನ, ಯೋಗದಂತೆ ಪ್ರಬಲ ವಿಚಾರವಾಗಿದೆ.

ಸಮಸ್ಯೆ ಪರಿಹಾರ: ಈ ಕೋಪಿಂಗ್ ಮೆಕ್ಯಾನಿಸಂ ಒತ್ತಡವನ್ನು ಉಂಟುಮಾಡುವ ಸಮಸ್ಯೆಯನ್ನು ಗುರುತಿಸುವುದು ಮತ್ತು ನಂತರ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೆಲವು ಸಂಭಾವ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯರೂಪಕ್ಕೆ ತರುವುದನ್ನು ಒಳಗೊಂಡಿರುತ್ತದೆ.

ದೈಹಿಕ ಚಟುವಟಿಕೆ: ವ್ಯಾಯಾಮವು ನೈಸರ್ಗಿಕ ಮತ್ತು ಆರೋಗ್ಯಕರ ರೀತಿಯ ಒತ್ತಡ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಓಟ, ಯೋಗ, ಈಜು, ನಡಿಗೆ, ನೃತ್ಯ, ತಂಡದ ಕ್ರೀಡೆಗಳು ಮತ್ತು ಇತರ ಹಲವು ರೀತಿಯ ದೈಹಿಕ ಚಟುವಟಿಕೆಗಳು ಜನರು ಒತ್ತಡ ಮತ್ತು ಆಘಾತಕಾರಿ ಘಟನೆಗಳ ಪರಿಣಾಮಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.


ಶಿವಮೊಗ್ಗ ತಾಯಿ ಮಗ ಆತ್ಮಹತ್ಯೆಯಲ್ಲೂ ಕೇಳಿಬಂತು ಕೋಪಿಂಗ್ ಮೆಕ್ಯಾನಿಸಂ

ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ ಅವರು ಶುಕ್ರವಾರ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಮಯದಲ್ಲೂ ಅವರಲ್ಲಿದ್ದ ಒತ್ತಡ ಕುರಿತಾದ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಮಕ್ಕಳ ತಜ್ಞರಾಗಿದ್ದ ಡಾ.ನಾಗರಾಜ ಹೊಮ್ಮರಡಿ ಸಹ 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರ ಆಕಾಶ್ ಅವರ ಪತ್ನಿ ನವ್ಯಶ್ರೀ ಕೂಡ ಒಂದೂವರೆ ವರ್ಷದ ಹಿಂದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಇತ್ತೀಚಿಗೆ 2ನೇ ವಿವಾಹವಾಗಿದ್ದ ಅವರು ಈಗ ನೇಣಿಗೆ ಶರಣಾಗಿದ್ದಾರೆ. ಈ ಘಟನೆಗಳು ಈಗ ವೈದ್ಯರಲ್ಲಿ ಕಾಡುತ್ತಿರುವ ಒತ್ತಡ ಕುರಿತಾದ ಪ್ರಶ್ನೆಗಳಿಗೆ ದೊಡ್ಡ ಸಾಕ್ಷಿ ನೀಡುತ್ತಿವೆ.

ಸಾಮಾನ್ಯ ಜನರಿಗಿಂತ ವೈದ್ಯರು ಒತ್ತಡ ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಕೆಲಸದ ಒತ್ತಡ, ಭಸ್ಮವಾಗಿಸುವಿಕೆಯ ಅನುಭವಗಳು, ಸಾಮಾಜಿಕ ನಿರೀಕ್ಷೆಗಳು, ಸಾಮಾಜಿಕೀಕರಣದ ಕೊರತೆ ಮತ್ತು ವೈದ್ಯಕೀಯ ಕಾನೂನು ಸಮಸ್ಯೆಗಳು ವೈದ್ಯರಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿ ಕಂಡುಬರುವ ಕೆಲವು ಸಮಸ್ಯೆಗಳು, ಆದರೆ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವ ವಿಷಯ, ವೃತ್ತಿಪರ ಮನೋವೈದ್ಯರ ಸಹಾಯವನ್ನು ಪಡೆಯಲು ನಾಚಿಕೆ ಮತ್ತು ಅಪರಾಧಿ ಭಾವನೆ, ಮಾನಸಿಕ ಆರೋಗ್ಯದ ಬಗ್ಗೆ ಕಳಂಕವು ಭಾವನಾತ್ಮಕ ಆಘಾತವನ್ನು ಎದುರಿಸಲು ಕೋಪಿಂಗ್ ಮೆಕ್ಯಾನಿಸಂ ಹೆಚ್ಚು ಆಳ ಕಾರಣ ಎಂದು ತೋರುತ್ತಿದೆ ಎಂದು ಶಿವಮೊಗ್ಗ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಡಾ.ಅರವಿಂದ್.ಎಸ್.ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

English summary

How Coping Mechanisms Help You Overcome Stress! Learn This Life Saving Techniques

Although there are many ways to relieve stress, it is becoming difficult to find it. Recently, people have become so desperate to face even the smallest problems that they end up making life-threatening decisions.
Story first published: Monday, December 8, 2025, 8:36 [IST]
X
Desktop Bottom Promotion