Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕಿವಿ ನೋವು ತಕ್ಷಣ ಕಡಿಮೆ ಮಾಡುವ ಮನೆಮದ್ದುಗಳು
ಕಿವಿನೋವು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿಯೇ ಕಾಣಿಸಿಕೊಳ್ಳುವುದು. ಕಿವಿ ನೋವು ಬಂದರೆ ಯಾವಾಗ ಬೆಳಗಾಗುವುದಪ್ಪಾ ಎಂದು ಒದ್ದಾಡಿ ಬಿಡುತ್ತೇವೆ. ಆ ಹೊತ್ತಿನಲ್ಲಿ ENT ಡಾಕ್ಟರ್ ಸಿಗುವುದು ತುಂಬಾನೇ ಅಪರೂಪ.

ಸಾಮಾನ್ಯವಾಗಿ ಶೀತ, ಕೆಮ್ಮು ಇಂಥ ಸಾಮಾನ್ಯ ಕಾಯಿಲೆಗಳಿಗೆ ಇಟ್ಟುಕೊಂಡಿರುತ್ತೇವೆ, ಆದರೆ ಕಿವಿ ನೋವಿಗೆ ಮನೆಯಲ್ಲಿ ಯಾವುದೇ ಔಷಧಿ ಇಟ್ಟುಕೊಂಡಿರುವುದಿಲ್ಲ, ಆದರೆ ಕಿವಿನೋವು ಸಹಿಸುವುದು ತುಂಬಾನೇ ಕಷ್ಟ. ಆವಾಗ ಕೆಲವೊಂದು ಮನೆಮದ್ದು ಟ್ರೈ ಮಾಡಿದರೆ ಕಿವಿನೋವು ಕಡಿಮೆಯಾಗುವುದು:
ವಾರ್ಮ್ ಕಂಪ್ರೆಸ್
ಒಂದು ಚಿಕ್ಕ ಟವಲ್ ಅನ್ನು ಬಿಸಿ ನೀರಿಗೆ ಅದ್ದಿ, ನೀರನ್ನು ಹಿಂಡಿ ಟವಲ್ ಅನ್ನು ನೋವು ಇರುವ ಕಿವಿಯ ಹಿಂಬದಿಗೆ ಒತ್ತಿ ಹಿಡಿಯಿರಿ. ಆದರೆ ತುಂಬಾ ಬಿಸಿ ಇಡಬೇಡಿ, ಮೊದಲು ಕೈಯಲ್ಲಿ ಮುಟ್ಟಿ ನೋಡಿ, ನಂತರ ಒತ್ತಿ ಹಿಡಿಯಿರಿ. ಈ ರೀತಿ 10-15 ನಿಮಿಷ ಒತ್ತಿ ಹಿಡಿದರೆ ನೋವು ಸ್ವಲ್ಪ ಕಡಿಮೆಯಾಗುವುದು.
ತೆಂಗಿನೆಣ್ಣೆ ಎಣ್ಣೆ
ತೆಂಗಿನೆಣ್ಣೆ ಸ್ವಲ್ಪ ಬಿಸಿ ಮಾಡಿ ಒಂದರಿಂದ ಎರಡು ಹನಿ ಕಿವಿಗೆ ಹಾಕಿದರೆ ಗಟ್ಟಿಯಾಗಿರುವ ಕಿವಿಯ ಗುಗ್ಗೆ ಮೃದುವಾಗುವುದು. ಅದನ್ನು ಹೊರ ತೆಗೆದರೆ ನೋವು ಕಡಿಮೆಯಾಗುವುದು. ಆದರೆ ಕಿವಿಗೆ ಎಣ್ಣೆ ಹಾಕುವಾಗ ಎಣ್ಣೆ ತುಂಬಾ ಬಿಸಿ ಇರಬಹುದು. ಸ್ವಲ್ಪವೇ ಬಿಸಿ ಇರಬೇಕು. ತುಂಬಾ ಬಿಸಿ ಎಣ್ಣೆ ಹಾಕಿದರೆ ಕಿವಿಗೆ ಹಾನಿಯಾಗುವುದು, ಜಾಗ್ರತೆ. ಆದ್ದರಿಂದ ಸ್ವಲ್ಪವೇ ಸ್ವಲ್ಪ ಬಿಸಿ ಇರುವಾಗ ಮಾತ್ರ ಕಿವಿಗೆ ಎಣ್ಣೆ ಹಾಕಿ.
ಬೆಳ್ಳುಳ್ಳಿ ಎಣ್ಣೆ
ಎಣ್ಣೆಯನ್ನು ಕಾಯಿಸಿ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ 30 ನಿಮಿಷ ಹಾಗೆಯೇ ಬಿಡಿ, ನಂತರ ಅದನ್ನು ಬಟ್ಟೆ ತುಂಡಿನಿಂದ ಸೋಸಿ ಆ ಎಣ್ಣೆಯನ್ನು ಕಿವಿಗೆ ಎರಡು ಹನಿ ಹಾಕಿ, ಹೀಗೆ ಮಾಡಿದರೆ ಕಿವಿ ನೋವು ಕಡಿಮೆಯಾಗುವುದು. ನೀವು ಎಣ್ಣೆಯನ್ನು ಸೋಸಿಯೇ ಹಾಕಬೇಕು, ಇಲ್ಲದಿದ್ದರೆ ಬೆಳ್ಳುಳ್ಳಿಯ ಚಿಕ್ಕ ಪೀಸ್ ಕಿವಿಯೊಳಗೆ ಹೋದರೆ ಮತ್ತಷ್ಟು ತೊಂದರೆಯಾಗುವುದು.
ಹೈಡ್ರೋಜನ್ ಪೆರಾಕ್ಸೈಡ್
ಶೇ. 3ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಅಷ್ಟೇ ಪ್ರಮಾಣದ ನೀರಿಗೆ ಹಾಕಿ ಮಿಕ್ಸ್ ಮಾಡಿ. ನಂತರ ಅದನ್ನು ಇಯರ್ ಡ್ರಾಪರ್‌ಗೆ ಹಾಕಿ ಅದನ್ನು ಕಿವಿಗೆ ಹಾಕಿ. ಇದನ್ನು ಹಾಕುವುದರಿಂದ ಕಿವಿಯ ಗುಗ್ಗೆ ಹೊರಬರುವುದು.
ಈರುಳ್ಳಿ ಬಳಸಿ
ಈರುಳ್ಳಿಯನ್ನು ಕತ್ತರಿಸಿ ಅದನ್ನು ಪ್ಯಾನ್‌ನಲ್ಲಿ ಹಾಕಿ ಬಿಸಿ ಮಾಡಿ, ನಂತರ ಆ ಬಿಸಿ ಈರುಳ್ಳಿಯನ್ನು ಒಂದು ಕರ್ಚೀಫ್‌ನಲ್ಲಿ ಹಾಕಿ ಕಟ್ಟಿ, ನಂತರ ಅದನ್ನು ನೋವು ಇರುವ ಕಿವಿಯ ಹಿಂಬದಿಗೆ ಹಿಡಿಯಿರಿ. ತುಂಬಾ ಬಿಸಿಯಿದ್ದರೆ ಸ್ವಲ್ಪ ಬಿಸಿ ಕಡಿಮೆಯಾದ ಮೇಲೆ ಇಡಿ. ಹೀಗೆ ಮಾಡುವುದರಿಂದ ಏನಾದರೂ ಶೀತದಿಂದಾಗಿ ಕಿವಿ ನೋವಾಗುತ್ತಿದ್ದರೆ ಅದು ಕಡಿಮೆಯಾಗುವುದು.
ಹಬೆ ತೆಗೆಯಿರಿ
ನೀವು ಕಿವಿ ನೋವು ಇದ್ದಾಗ ಸ್ಟೀಮ್ ತೆಗೆದುಕೊಂಡರೆ ನೋವು ಸ್ವಲ್ಪ ಕಡಿಮೆಯಾಗುವುದು.
ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ
ತುಂಬಾ ನೋವು ಇದ್ದಾಗ ನಿಮ್ಮ ವೈದ್ಯರ ಸಲಹೆ ಮೇರೆಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
