Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಆ ಭಾಗದಲ್ಲಿ ತುಂಬಾ ತುರಿಕೆಯಾದಾಗ ಈ ಮನೆಮದ್ದುಗಳು ಪರಿಣಾಮಕಾರಿ
ಆ ಭಾಗದಲ್ಲಿ ತುರಿಕೆ ಉಂಟಾದಾಗ ಹಿಂಸೆ ಜೊತೆಗೆ ಮುಜುಗರದ ಪರಿಸ್ಥಿತಿ. ತುಂಬಾ ತುರಿಕೆ ಉಂಟಾದಾಗ ತುರಿಸಲು ಸಾಧ್ಯವಾಗದೆ, ತುರಿಸದೆ ಇರುವುದಕ್ಕೂ ಸಾಧ್ಯವಾಗದೆ ತುಂಬಾನೇ ಹಿಂಸೆ ಅನಿಸುವುದು. ಇನ್ನು ಕೆಲವರು ಈ ರೀತಿ ತುರಿಕೆ ಉಂಟಾದಾಗ ವೈದ್ಯರ ಬಳಿ ಹೇಳಲು ಕೂಡ ಹಿಂಜರಿಯುತ್ತಾರೆ.

ಏನಾದರೂ ಬ್ಯಾಕ್ಟಿರಿಯಾ, ಯೀಸ್ಟ್ ಸೋಂಕು ತಗಲಿದಾಗ ಈ ರೀತಿ ತುರಿಕೆ ಉಂಟಾಗುವುದು. ಕೆಲವರಿಗೆ ಈ ಸಮಯದಲ್ಲಿ ಗಟ್ಟಿ ಗಟ್ಟಿಯಾಗಿ ಬಿಳುಪು ಕೂಡ ಹೋಗುವುದು.
ಜನನೇಂದ್ರೀಯ ತುರಿಕೆಗೆ ಕಾರಣವೇನಿರಬಹುದು, ಯಾವ ಮನೆಮದ್ದು ಪರಿಣಾಮಕಾರಿ ಎಂದು ನೋಡೋಣ ಬನ್ನಿ:
ಯೀಸ್ಟ್ ಸೋಂಕು
ಯೀಸ್ಟ್ ಸೋಂಕು ಉಂಟಾದಾಗ ತುರಿಗೆ ಮಾತ್ರವಲ್ಲ ಬಿಳುಪು ಕೂಡ ಅಧಿಕ ಹೋಗುವುದು, ಅಲ್ಲದೆ ಬಿಳುಪು ದುರ್ವಾಸನೆ ಬೀರುವುದು.
ಬ್ಯಾಕ್ಟಿರಿಯಾ
ಜನನೇಂದ್ರೀಯ ಭಾಗದಲ್ಲಿ ಬ್ಯಾಕ್ಟಿರಿಯಾ ಉತ್ಪತ್ತಿಯಾದರೆ ಈ ರೀತಿ ತುರಿಕೆ ಉಂಟಾಗುವುದು. ಈ ರೀತಿಯಾದಾಗ ಮೂತ್ರ ವಿಸರ್ಜನೆ ಮಾಡುವಾಗ ಉರಿ ಅನಿಸುವುದು ಜೊತೆಗೆ ಬಿಳುಪು ತುಂಬಾನೇ ದುರ್ವಾಸನೆ ಬೀರುತ್ತದೆ.
ಜನನೇಂದ್ರೀಯ ಡ್ರೈಯಾಗಿದ್ದರೆ
ಲೈಂಗಿಕ ಕ್ರಿಯೆ ನಡೆಸಿದಾಗ ತುಂಬಾ ಡ್ರೈಯಾಗಿದ್ದರೆ ಈ ರೀತಿ ಉಂಟಾಗುವುದು.
ಸೋಪು, ಪ್ಯಾಡ್
ಕೆಲವೊಂದು ಪ್ಯಾಡ್ ಕೆಲವರಿಗೆ ಸೂಟ್ ಆಗಲ್ಲ ಅಲ್ಲದೆ ಆ ಭಾಗವನ್ನು ಸೋಪು ಹಚ್ಚಿ ತೊಳೆಯಬೇಡಿ, ಬರೀ ನೀರು ಬಳಸಿ ಮಾತ್ರ ತೊಳೆಯಿರಿ ಇಲ್ಲದಿದ್ದರೆ ತುರಿಕೆ ಉಂಟಾಗುವುದು.
ತ್ವಚೆ ಸಮಸ್ಯೆ
ಕೆಲವೊಂದು ತ್ವಚೆ ಸಮಸ್ಯೆ ಇದ್ದಾಗ ಕೂಡ ಈ ರೀತಿ ತುರಿಕೆ ಕಂಡು ಬರಬಹುದು.
ಮೂತ್ರ ಸೋಂಕು
ಮೂತ್ರ ಸೋಂಕು ಉಂಟಾದಾಗ ಕೂಡ ಜನನೇಂದ್ರೀಯದಲ್ಲಿ ಸೋಂಕು ಉಂಟಾಗಬಹುದು.
ಮನೆಮದ್ದು
ಅಡುಗೆ ಸೋಡಾ
ಯೀಸ್ಟ್ ಸೋಂಕು ಆದಾಗ ಅಡುಗೆ ಸೋಡಾ ಬಳಸಿ ಇದನ್ನು ಹೋಗಲಾಡಿಸಬಹುದು.
ಟಬ್‌ಗೆ ಉಗುರು ಬೆಚ್ಚಗಿನ ನೀರು ಹಾಕಿ ಅದರಲ್ಲಿ 1/4 ಕಪ್ ಅಡುಗೆ ಸೋಡಾ ಹಾಕಿ ಅದರಲ್ಲಿ 10 ನಿಮಿಷ ಕೂರಿ. ಈ ರೀತಿ ಮಾಡುವುದರಿಂದ ತುರಿಕೆ ಕಡಿಮೆಯಾಗುವುದು.
ಮೊಸರು
ಮೊಸರನ್ನು ಜೇನು ಜೊತೆ ಮಿಕ್ಸ್ ಮಾಡಿ ಕ್ರೀಮ್ ರೀತಿಯಲ್ಲಿ ಹಚ್ಚಿ. ಇದರಿಂದ ಒಳ್ಳೆಯ ಬ್ಯಾಕ್ಟಿರಿಯಾ ಉತ್ಪತ್ತಿಗೆ ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ತುರಿಕೆ ಉಂಟಾಗುತ್ತದೆ, ಆಗ ಇದು ಅತ್ಯುತ್ತಮವಾದ ಮನೆಮದ್ದಾಗಿದೆ.
ಆ್ಯಪಲ್ ಸಿಡರ್ ವಿನೆಗರ್
ಒಂದು ದೊಡ್ಡ ಬಕೆಟ್‌ಗೆ ನೀರು ಉಗುರು ಬೆಚ್ಚಗಿನ ನೀರು ತುಂಬಿ ಅದರಲ್ಲಿ 1/4 ಕಪ್ ಆ್ಯಪಲ್ ಸಿಡರ್ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ ಆ ನೀರಿನಲ್ಲಿ 10 ನಿಮಿಷ ಕೂರುವುದರಿಂದ ತುರಿಕೆ ಕಡಿಮೆಯಾಗುವುದು. ದಿನದಲ್ಲಿ ಎರಡು ಬಾರಿ ಮಾಡಿದರೆ ತುಂಬಾನೇ ರಿಲೀಫ್ ಸಿಗುವುದು.
ಪ್ರೊಬಯೋಟಿಕ್ ಸಪ್ಲಿಮೆಂಟ್'
ಪ್ರೊಬಯೋಟಿಕ್ ಸಪ್ಲಿಮೆಂಟ್ ಆರೋಗ್ಯಕರ ಬ್ಯಾಕ್ಟಿರಿಯಾ ಉತ್ಪತ್ತಿಗೆ ಸಹಾಯ ಮಾಡುತ್ತದೆ. ನೀವೇ ಸ್ವಂತ ತಗೋಬೇಡಿ, ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ.
ತೆಂಗಿನೆಣ್ಣೆ
ಯೀಸ್ಟ್, ಬ್ಯಾಕ್ಟಿರಿಯಾ ಸೋಂಕಿಗೆ ತೆಂಗಿನೆಣ್ಣೆ ಹಚ್ಚುವುದು ಕೂಡ ತುಂಬಾ ಒಳ್ಳೆಯದು.
ಆ್ಯಂಟಿಫಂಗಲ್ ಕ್ರೀಮ್
ತುಂಬಾ ತುರಿಕೆ ಇದ್ದಾಗ ಆ್ಯಂಟಿಫಂಗಲ್‌ಕ್ರೀಮ್ ಬಳಸುವುದರಿಂದ ಕಡಿಮೆಯಾಗುವುದು. ಇದು ಕೂಡ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಬಳಸಿ.
ಪ್ರೊಬಯೋಟಿಕ್ ಆಹಾರ ಸೇವಿಸಿ
ಮೊಸರು ಸೇವಿಸಿ.
ಶುದ್ಧತೆ ಕಾಪಾಡಿ
ಪ್ಯಾಡ್ ಅನ್ನು ತುಂಬಾ ಹೊತ್ತು ಬಳಸಬೇಡಿ. ಅದೇ ರೀತಿ ಮಾರ್ಕೆಟ್‌ನಲ್ಲಿ ಸಿಗುವ ಫೆಮಿನೆ ಹೈಜೆನಿ ಪ್ರಾಡೆಕ್ಟ್ ಬಳಸಬೇಡಿ. ನಿಮ್ಮ ವೈದ್ಯರು ಸೂಚಿಸಿದ್ದರೆ ಮಾತ್ರ ಬಳಸಿ.
ಯಾವಾಗ ವೈದ್ಯರಿಗೆ ತೋರಿಸಬೇಕು?
* ಮೂತ್ರ ಮಾಡುವಾಗ, ಸೆಕ್ಸ್ ಮಾಡುವಾಗ ತುಂಬಾ ನೋವು ಉಂಟಾಗುವುದು
* ಪೆಲ್ವಿಕ್ ಭಾಗದಲ್ಲಿ ನೋವು
* ಆ ಭಾಗದಲ್ಲಿ ಊತ
* ಅತಿಯಾದ ಬಿಳುಪು ಹೋಗುವುದು ಅದರಲ್ಲೂ ಬಿಳುಪು ಹಸಿರು, ಹಳದಿ ಅಥವಾ ಬೂದು ಬಣ್ಣದಲ್ಲಿದ್ದರೆ
* ಬಿಳುಪು ಚೀಸ್ ರೀತಿ ಹೋಗುತ್ತಿದ್ದರೆ
ಈ ಲಕ್ಷಣಗಳು ಕಂಡು ಬಂದರೆ ನೀವು ವೈದ್ಯರಿಗೆ ತೋರಿಸಿ ಸಲಹೆ ಪಡೆಯಿರಿ.
ಆ ಭಾಗಕ್ಕೆ ತುರಿಕೆಯ ಕ್ರೀಮ್ ಬಳಸಬಹುದೇ?
ನೀವು ತುರಿಕೆ ಕ್ರೀಮ್ ಬಳಸಬಾರದು. ವೈದ್ಯರು ಸೂಚಿಸಿದ ಕ್ರೀಮ್ ಹೊರತು ಪಡಿಸಿ ಬೇರೇನೋ ಬಳಸಬೇಡಿ.
ವ್ಯಾಸಲೈನ್ ಬಳಸಬಹುದೇ?
ಡ್ರೈಯಾಗುವುದು ತಡೆಗಟ್ಟಲು ವ್ಯಾಸಲೈನ್ ಬಳಸಬೇಡಿ, ಬದಲಿಗೆ ತೆಂಗಿನೆಣ್ಣೆ ಬೇಕಿದ್ದರೆ ಬಳಸಬಹುದು.
ಆ ಭಾಗದಲ್ಲಿ ತುರಿಕೆ ಉಂಟಾದಾಗ ಹಿಂಜರಿಕೆ ಬೇಡ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
