Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಲು ಇಲ್ಲಿವೆ ಮನೆ ಆಹಾರ..!
ಬಂಜೆತನ ಅನ್ನೋದು ಕೇವಲ ಮಹಿಳೆಯರ ಸಮಸ್ಯೆಯಾಗಿ ಉಳಿದಿಲ್ಲ ಬದಲಿಗೆ ಪುರುಷರ ಸಮಸ್ಯೆಯೂ ಹೌದು. ಮದುವೆಯಾಗಿ ತುಂಬಾ ವರ್ಷಗಳಾಯ್ತು ಮಗುವಾಗಲಿಲ್ಲ ಎಂದಾದರೆ ಮಹಿಳೆಯಲ್ಲೇ ಏನಾದರೂ ಕೊರತೆ ಇರಬಹುದು ಎಂದು ದೂರಲಾಗುತ್ತದೆ. ಆದರೆ ಬಂಜೆತನ ಎಂಬುವುದು ಹೆಣ್ಣಿಗೆ ಮಾತ್ರವಲ್ಲ ಗಂಡಿಗೂ ಇರುತ್ತದೆ. ಗಂಡನಲ್ಲಿರುವ ಬಂಜೆತನ ಸಮಸ್ಯೆಯಿಂದಾಗಿ ಮಕ್ಕಳಾಗುವುದಿಲ್ಲ.
ಪುರುಷರಲ್ಲಿ ಬಂಜೆತನಕ್ಕೆ ವೀರ್ಯದ ಆರೋಗ್ಯವು ಅತೀ ಮುಖ್ಯವಾಗಿರುವುದು. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಉತ್ತಮ ಹಾಗೂ ಆರೋಗ್ಯಪೂರ್ಣವಾಗಿದ್ದರೆ ಮಾತ್ರವೇ ಮಕ್ಕಳಾಗುತ್ತದೆ. ಪುರುಷರಲ್ಲಿ ನಾನಾ ಕಾರಣಗಳಿಂದ ಬಂಜೆತನ ಉಂಟಾಗುತ್ತದೆ. ಹೀಗಾಗಿ ಪುರುಷರು ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಇದಕ್ಕಾಗಿ ಹಲವು ರೀತಿಯ ಚಿಕಿತ್ಸೆ, ಔಷಧಿಗಳ ಪಡೆಯುತ್ತಾರೆ.

ಬಂಜೆತನ ಮಹಿಳೆಯರ ಸಮಸ್ಯೆ ಮಾತ್ರವಲ್ಲ, ಪುರುಷರೂ ಇದರ ಬಲಿಪಶುಗಳಾಗುತ್ತಾರೆ. ಪುರುಷರಲ್ಲಿ ಕಡಿಮೆ ವೀರ್ಯಾಣು ಸಂಖ್ಯೆಯಿಂದಾಗಿ ಫಲವತ್ತತೆ ಪರಿಣಾಮ ಬೀರುತ್ತದೆ. ಆದ್ರೆ ವೀರ್ಯದ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲವೇ ಕೆಲವು ಆಹಾರವನ್ನು ಮನೆಯಲ್ಲೇ ತೆಗೆದುಕೊಂಡರೂ ಸಾಕಾಗುತ್ತದೆ.
ಹಾಗಾದ್ರೆ ಯಾವ ಆಹಾರವೂ ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಹಾಯ ಮಾಡಲಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಾಲ್‌ನಟ್
ವಾಲ್‌ನಟ್ಸ್‌ನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಪುರುಷ ಅಂಗಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯಕವಾಗಿವೆ. ಪ್ರತಿದಿನ ವಾಲ್‌ನಟ್‌ಗಳನ್ನು ತಿನ್ನುವುದು ವೀರ್ಯದ ಪ್ರಮಾಣ ಮತ್ತು ಆಕಾರವನ್ನು ಸುಧಾರಿಸುತ್ತದೆ. ಈ ವಾಲ್‌ನಟ್ ವಾಲ್ನಟ್ ಆಲ್ಫಾ-ಲಿನೋಲೆನಿಕ್ ಆಮ್ಲದ (ALA) ಉತ್ತಮ ಮೂಲವಾಗಿದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಪ್ರಮುಖವಾದ ಒಮೆಗಾ-3 ಕೊಬ್ಬಿನಾಮ್ಲವಾಗಿದೆ.
ಮೊಟ್ಟೆಗಳು
ಪ್ರೋಟೀನ್ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಮೊಟ್ಟೆಗಳು ಉತ್ತಮ ಗುಣಮಟ್ಟದ ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಬೆಳಗಿನ ಉಪಾಹಾರಕ್ಕಾಗಿ ಎರಡು ಮೊಟ್ಟೆಗಳನ್ನು ತಿನ್ನುವುದು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.
ದಾಳಿಂಬೆ
ಸಂಶೋಧನೆಯ ಪ್ರಕಾರ, ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಪುರುಷರಲ್ಲಿ ವೀರ್ಯದ ಗುಣಮಟ್ಟ ಸುಧಾರಿಸುತ್ತದೆ. ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವುದರಿಂದ ಪುರುಷರಲ್ಲಿ ಫಲವತ್ತತೆಯ ಪ್ರಮಾಣ ಹೆಚ್ಚಾಗುವಂತೆ ಮಾಡಲಿದೆ ಎಂದು ತಿಳಿದುಬಂದಿದೆ.
ಬಾಳೆಹಣ್ಣುಗಳು
ಬಾಳೆಹಣ್ಣಿನಲ್ಲಿರುವ ಬ್ರೋಮೆಲಿನ್ ಮತ್ತು ವಿಟಮಿನ್ ಬಿ ಎಂಬ ಕಿಣ್ವವು ತ್ರಾಣ, ಶಕ್ತಿ ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ತನ್ನ ದೈನಂದಿನ ಆಹಾರದಲ್ಲಿ ಒಂದು ಬಾಳೆಹಣ್ಣನ್ನು ಸೇರಿಸಿಕೊಂಡರೆ ಆರೋಗ್ಯಕ್ಕೆ ಬಹಳ ಉತ್ತಮ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದ್ದು ಇದು ಪುರುಷ ಅಂಗದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ 3-4 ಎಸಳು ಬೆಳ್ಳುಳ್ಳಿಯನ್ನು ಅಗಿಯುವುದರಿಂದ ವೀರ್ಯದ ಪ್ರಮಾಣವು ಹೆಚ್ಚಾಗುತ್ತದೆ.
ಕ್ಯಾರೆಟ್
ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ವೀರ್ಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಲಾಡ್ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಪುರುಷರ ಫಲವತ್ತತೆ ಹೆಚ್ಚಾಗುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಬಹಳಷ್ಟು ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ವೀರ್ಯದ ಗುಣಮಟ್ಟ ಮತ್ತು ಆಕಾರವನ್ನು ಸುಧಾರಿಸುತ್ತದೆ. ಪಾಲಕ್ ಸೊಪ್ಪನ್ನು ತಿನ್ನುವುದು ಅಥವಾ ಅದರ ರಸವನ್ನು ಕ್ಯಾರೆಟ್‌ನೊಂದಿಗೆ ಕುಡಿಯುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ ಎಲ್ಲಾ ಸೊಪ್ಪುಗಳು ಸಹ ಫೋಲಿಕ್ ಆಮ್ಲ ಹೊಂದಿರಲಿವೆ. ಹೀಗಾಗಿ ಊಟದಲ್ಲಿ ಸೊಪ್ಪಿನ ಅಂಶ ಹೆಚ್ಚಾಗಿರಲಿ.
ಡಾರ್ಕ್ ಚಾಕೊಲೆಟ್
ಡಾರ್ಕ್ ಚಾಕೊಲೆಟ್ ಯಾವಾಗಲೂ ಲೈಂಗಿಕಾಸಕ್ತಿ ಹೆಚ್ಚು ಮಾಡುವುದು. ಈ ಚಾಕೊಲೆಟ್‌ನಲ್ಲಿ ಅಮಿನೋ ಆಮ್ಲವಾದ ಎಲ್-ಅರ್ಜಿನೈನ್ ಇದೆ. ಎಚ್ ಸಿಎಲ್ ವೀರ್ಯದ ಪ್ರಮಾಣ ಮತ್ತು ಗಣತಿ ಹೆಚ್ಚಿಸುವುದು. ಇದು ಉದ್ರೇಕದ ತೀವ್ರತೆಯನ್ನು ಕೂಡ ಹೆಚ್ಚು ಮಾಡುವುದು ಎನ್ನಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

