Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ..! ಆರೋಗ್ಯದ ಮೇಲಿರಲಿ ಎಚ್ಚರಿಕೆ..!
ಬೇಸಿಗೆಯ ನಡುವೆ ಬಿಸಿಗಾಳಿ ಕೆಲವು ಕಡೆಗಳು ಅತೀ ಹೆಚ್ಚಿನ ಉಷ್ಣತೆ ಎಂದರೆ 28 ಡಿಗ್ರಿ C ಇರುತ್ತಿತ್ತು, ಇದೀಗ ಅಂಥ ಸ್ಥಳಗಳಲ್ಲಿ 35ಡಿಗ್ರಿ C ದಾಟಿದೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಹೀಟ್‌ವೇವ್ ಇದೆ. ಉತ್ತರ ಭಾರತ ಸೇರಿ ದಕ್ಷಿಣದಲ್ಲೂ ಬಿಸಿಗಾಳಿ ಆರ್ಭಟ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಕರಾವಳಿ ಆಂಧ್ರ ಪ್ರದೇಶಕ್ಕೆ ಹೀಟ್‌ವೇವ್ ಎಚ್ಚರಿಕೆಗಳನ್ನು ನೀಡಿದೆ.
ಒಂದು ಸ್ಥಳದ ಗರಿಷ್ಠ ತಾಪಮಾನವು 40-ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ದಾಖಲಿಸಿದರೆ ಅದನ್ನು ಹೀಟ್ ವೇವ್ ಎಂದು ದಾಖಲಿಸಲಾಗುತ್ತದೆ. ಈ ಸಮಯದಲ್ಲಿ ಹವಾಮಾನವು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಅದರಲ್ಲೂ ಬಿಸಿಲಿಗೆ ಮೈಯೊಡ್ಡಿಕೊಂಡು ಕೆಲಸ ಮಾಡುವ ಮಂದಿಗೆ ಅಪಾಯ ಖಚಿತ.

ಹೀಟ್‌ವೇವ್ ಶರೀರದ ಮೇಲೆ ಪರಿಣಾಮವೇನು?
ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ನಿರ್ಲಕ್ಷ್ಯ ಮಾಡಿದರೆ ಅಪಾಯ ಉಂಟಾಗಬಹುದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ರಕ್ತದೊತ್ತಡ ಕಡಿಮೆಯಾಗಿದೆ. ಅಲ್ಲದೆ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ.
ಕಡಿಮೆ ರಕ್ತದೊತ್ತಡ, ತಲೆಸುತ್ತು, ತಲೆನೋವು, ವಾಂತಿ ಈ ರೀತಿಯ ಸಮಸ್ಯೆ ಹೆಚ್ಚಾಗುವುದು. ಮೈ ತುಂಬಾ ಬೆವರುವುದರಿಂದ ದೇಹದಲ್ಲಿ ಉಪ್ಪಿನಂಶ ಕಡಿಮೆಯಾಗುವುದು, ನೀರಿನಂಶ ಕಡಿಮೆಯಾಗುವುದು. ಇದರಿಂದ ಸ್ನಾಯು ಸೆಳೆತ, ತಲೆಸುತ್ತು ಉಂಟಾಗುವುದು. ಹೃದಯಘಾತದ ಸಾಧ್ಯತೆ ಹೆಚ್ಚು.
ಹೀಟ್ ವೇವ್ ಏನು ಮಾಡಬೇಕು, ಏನು ಮಾಡಬಾರದು?
- ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ಒಳಗಡೆ ವ್ಯಾಯಾಮ ಮಾಡಬೇಡಿ
- ಹೀಟ್‌ವೇವ್ ಇರುವಾಗ ಹೊರಗಡೆ ವ್ಯಾಯಾಮ ಮಾಡಬೇಡಿ
- ವ್ಯಾಯಾಮ ಮಾಡುವಾಗ ಸ್ವಲ್ಪ ನೀರು ಕುಡಿಯಿರಿ
- ತುಂಬಾ ಹೊತ್ತು ವ್ಯಾಯಾಮ ಮಾಡಬೇಡಿ, ಅರ್ಧ ಗಂಟೆಯ ಒಳಗಡೆ ವ್ಯಾಯಾಮ ಮಾಡಿ ಮುಗಿಸಿ
- ಶೀಥಲಿ ಪ್ರಾಣಯಾಮ ಮಾಡಿ, ದೇಹವನ್ನು ತಂಪಾಗಿಸಲು ಸಹಕಾರಿ.
ವಿಪರೀತ ಶಾಖದಿಂದ ರಕ್ಷಿಸಿಕೊಳ್ಳುವುದು ಹೇಗೆ?
ಹವಾಮಾನ ಇಲಾಖೆ ನೀಡುವ ಮಾಹಿತಿಯನ್ನು ತಿಳಿದುಕೊಳ್ಳಿ
ನಿಮಗೆ ಉಷ್ಣಾಂಶದ ಬಗ್ಗೆ ಮಾಹಿತಿ ಇದ್ದರೆ ಮಕ್ಕಳನ್ನು ಕರೆದುಕೊಂಡು ಹೊರಗಡೆ ಹೋಗುವುದನ್ನು ತಪ್ಪಿಸಬಹುದು. ವಿನಾಕಾರಣ ಮಕ್ಕಳ ಜೊತೆ ಮನೆಯಿಂದ ಹೊರಗಡೆ ಹೋಗಬೇಡಿ. ಮಕ್ಕಳನ್ನು ಬಿಸಿಲಿನಲ್ಲಿ ಆಡಲು ಬಿಡಬೇಡಿ. ಮನೆಯ ಒಳಗಡೆಯೇ ಆಡಲು ಬಿಡಿ.
ಮನೆಯನ್ನು ತಂಪಾಗಿ ಇಡಿ
ಮನೆಯನ್ನು ತಂಪಾಗಿಡಲು ಮಂದವಾದ ಕರ್ಟನ್ ಬಳಸಿ, ಫ್ಯಾನ್ ಅಥವಾ ಎಸಿ ಬಳಸಿ. ಚಿಕ್ಕ ಮಕ್ಕಳಾದರೆ ಬಟ್ಟೆ ಇಲ್ಲದಿದ್ದರೂ ಆಗುತ್ತೆ, ಸ್ವಲ್ಪ ದೊಡ್ಡ ಮಕ್ಕಳಿಗೆ ತುಂಬಾ ತೆಳುವಾದ ಕಾಟನ್ ಬಟ್ಟೆ ಧರಿಸಿ.
ಮಕ್ಕಳಿಗೆ ಸನ್‌ಸ್ಕ್ರೀನ್ ಬಳಸಿ
ಮಕ್ಕಳು ಮನೆಯೊಳಗಡೆ ಇದ್ದರೂ ಸನ್‌ಸ್ಕ್ರೀನ್ ಬಳಸಿ. 12-3 ಗಂಟೆಯವರೆಗೆ ಬಿಸಿಲಿನಲ್ಲಿ ಎಲ್ಲಿಯೂ ಕರೆದುಕೊಂಡು ಹೋಗಬೇಡಿ.
ಸಾಕಷ್ಟು ನೀರು ಕುಡಿಸಿ
ಮಕ್ಕಳು ನೀರು ಕುಡಿಯದಿದ್ದರೆ ಜ್ಯೂಸ್ ಕುಡಿಸಿ. ಒಟ್ಟಿನಲ್ಲಿ ಸಾಕಷ್ಟು ನೀರು ಕುಡಿಸಬೇಕು. ಮಕ್ಕಳು ಕುಡಿಯುತ್ತಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ನೀವು ಸಹ ಸಾಕಷ್ಟು ನೀರು ಕುಡಿಯುತ್ತಿರಿ, ಏಕೆಂದರೆ ಹೀಟ್‌ವೇವ್‌ನಲ್ಲಿ ನೀವು ಬೇಗನೇ ನಿಶಕ್ತರಾಗುತ್ತೀರಿ. ದಿನವಿಡೀ, ನಮ್ಮನ್ನು ನಾವು ಹೈಡ್ರೇಟ್ ಆಗಿರಿಸಲು ನೀರನ್ನು ಕುಡಿಯುತ್ತಲೇ ಇರಬೇಕು. ವಿಪರೀತ ಶಾಖದಲ್ಲಿ ಅಥವಾ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯ ಸಮಯದಲ್ಲಿ ಹೊರಗೆ ಕೆಲಸ ಮಾಡುವಾಗ, ನಮಗೆ ಬಾಯಾರಿಕೆಯಾಗುವ ಮೊದಲು ನಾವು ನೀರನ್ನು ಕುಡಿಯಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
