Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಂದಿ ಹೃದಯ ಕಸಿ ಮಾಡಿಸಿ 2 ತಿಂಗಳು ಬದುಕಿದ್ದ ವ್ಯಕ್ತಿ ಇನ್ನಿಲ್ಲ
ವಾಷಿಂಗ್ಟನ್‌ನಲ್ಲಿ ಹಂದಿ ಹೃದಯ ಕಸಿ ಮಾಡಿದ ವಿಶ್ವದ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿ ಮಾಡಿ 2 ತಿಂಗಳ ಬಳಿಕ ರೋಗಿ ನಿಧನರಾಗಿದ್ದಾರೆ ಎಂದು ಈ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಾಣಿಗಳ ಅಂಗಾಂಗ ಮನುಷ್ಯರಿಗೆ ಕಸಿ ಮಾಡಿದವರಲ್ಲಿ ಅತೀ ಹೆಚ್ಚು ಕಾಲ ಬದುಕಿದ ಏಕೈಕ ವ್ಯಕ್ತಿಯಾಗಿದ್ದಾರೆ ಈ ರೋಗಿ.
ಹಂದಿ ಹೃದಯ ಕಸಿ ಮಾಡಿದ ವಿಶ್ವದ ಮೊದಲ ವ್ಯಕ್ತಿ
57 ವರ್ಷದ ಡೇವಿಡ್ ಬೆನೆಟ್ ಅವರಿಗೆ ಎರಡು ತಿಂಗಳ ಹಿಂದೆ ಹಂದಿ ಹೃದಯ ಕಸಿ ಮಾಡಲಾಗಿತ್ತು. ವಿಶ್ವದಲ್ಲಿಯೇ ಮೊದಲ ಬಾರಿಗೆ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಿಸಿರುವ ಮೊದಲ ವ್ಯಕ್ತಿ ಇವರಾಗಿದ್ದಾರೆ. ಡೇವಿಡ್ ಬೆನೆಟ್ ಅವರನ್ನು ಆಸ್ಪತ್ರೆಯಲ್ಲೇ ಇಟ್ಟು ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದರು. ಪ್ರಾರಂಭಲ್ಲಿ ಚೆನ್ನಾಗಿದ್ದ ಅವರ ಆರೋಗ್ಯ ಹದಹಗೆಡಲಾರಂಭಿಸಿತು, ಬುಧವಾರ ನಿಧನವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವೇನೆಂಬುವುದನ್ನು ವೈದ್ಯರು ಹೇಳಿಲ್ಲ.

ವೈದ್ಯರ ಪ್ರಯತ್ನಕ್ಕೆ ಡೇವಿಡ್‌ಅವರ ಮಗನ ಶ್ಲಾಘಿನೆ
ಡೇವಿಡ್ ಬೆನೆಟ್ ಅವರ ಮಗ ತಂದೆಯ ಜೀವ ಉಳಿಸಲು ವೈದ್ಯರು ಮಾಡಿದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರ ಮಗ ಕೊನೆಯ ಕ್ಷಣದವರೆಗೂ ತನ್ನ ತಂದೆಯನ್ನು ಉಳಿಸಲು ಮಾಡುತ್ತಿದ್ದ ವೈದ್ಯರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ವೈದ್ಯರ ಈ ಪ್ರಯೋಗದಿಂದ ಭವಿಷ್ಯದಲ್ಲಿ ಜೀವ ಉಳಿಸಲು ಹೊಸ ಮಾರ್ಗವೊಂದು ಸಿಕ್ಕಾಂತಾಗಿದೆ. ಮನುಷ್ಯರಿಗೆ ಹಂದಿ ಹೃದಯ ಮಾಡಿ ಜೀವ ಉಳಿಸುವುದರ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯಲಿವೆ ಎಂದು ವೈದ್ಯ ಜಗತ್ತು ಆತ್ಮವಿಶ್ವಾಸ ವ್ಯಕ್ತ ಪಡಿಸಿದೆ. ಇದರಿಮದ ಜಗತ್ತಿನಲ್ಲಿ ಅಗ್ಯತವಿರುವವರಿಗೆ ಅಂಗಾಂಗಗಳ ಕೊರತೆ ಉಂಟಾಗುವುದನ್ನು ನೀಗಿಸಬಹುದು ಎಂದಿದ್ದಾರೆ.

ಹಂದಿಯ ಹೃದಯವನ್ನು ಪಡೆದ ವಿಶ್ವದ ಮೊದಲ ರೋಗಿ
ಕಳೆದ ಹಲವು ದಶಕಗಳಿಂದ, ರೋಗಿಗಳ ಜೀವ ಉಳಿಸಲು ಪ್ರಾಣಿಗಳ ಅಂಗಾಂಗಗಳನ್ನು ಬಳಸುವ ಬಗ್ಗೆ ಚಿಂತನೆ ಮಾಡಲಾಗಿತ್ತು. ಡೇವಿಡ್ ಬೆನೆಟ್ ಅವರು ಮೇರಿಲ್ಯಾಂಡ್‌ನ ನಿವಾಸಿಯಾಗಿದ್ದು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು, ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಹಾಸಿಗೆ ಹಿಡಿದಿದ್ದರು. ಅವರನ್ನು ಎಮರ್ಜೆನ್ಸಿ ಲೈಫ್ ಸಪೋರ್ಟ್ ಮೆಷಿನ್‌ನಲ್ಲಿ ಇಡಲಾಗಿತ್ತು.
ಯಶಸ್ವಿಯಾಗಿದ್ದ ಚಿಕಿತ್ಸೆ
ಡೇವಿಡ್ ಬೆನೆಟ್ ಅವರಿಗೆ ಜನವರಿ 7 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಹಂದಿಯ ಹೃದಯ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂಬುವುದು ಸ್ವತಃ ಬೆನೆಟ್ ಅವರಿಗೂ ಗೊತ್ತಿತ್ತು. ಏಕೆಂದರೆ ಹಂದಿಯ ಹೃದಯ ಮನುಷ್ಯನ ದೇಹದಲ್ಲಿ ಕೆಲಸ ಮಾಡಿದ್ದು ತುಂಬಾ ಕಡಿಮೆ. ಈ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದೆವು. ಆದರೆ ಬೆನೆಟ್ ಅವರು 2 ತಿಂಗಳು ಬದುಕುವ ಮೂಲಕ ವೈದ್ಯ ಲೋಕಕ್ಕೆ ರೋಗಿಗಳ ಪ್ರಾಣ ಉಳಿಸಲು ಹೊಸ ಭರವಸೆ ಮೂಡಿಸಿದೆ.

ಹಂದಿಯ ಹೃದಯದೊಂದಿಗೆ ಹೆಚ್ಚು ಕಾಲ ಬದುಕಿದ ಏಕೈಕ ವ್ಯಕ್ತಿ
ಡೇವಿಡ್ ಬೆನೆಟ್ ಅವರು ಹಂದಿಯ ಹೃದಯದೊಂದಿಗೆ ಹೆಚ್ಚು ಕಾಲ ಬದುಕಿದ ವಿಶ್ವದ ಮೊದಲ ರೋಗಿ ಎನಿಸಿಕೊಂಡಿದ್ದಾರೆ. ಇವರು 2 ತಿಂಗಳಿಗೂ ಅಧಿಕ ಕಾಲ ಬದುಕಿದ್ದರು. ಈ ಹಿಂದೆ ಕ್ಯಾಲಿಫೋರ್ನಿಯಾದ ಹುಡುಗಿಯೊಬ್ಬಳು ಹೃದಯ ಕಸಿ ಮಾಡಿದಾಗ ಆಕೆ 21 ದಿನಗಳವರೆಗೆ ಬದುಕಿದ್ದಳು.
ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಅಂಗಾಂಗ ಕಸಿ ಅಗತ್ಯವಿದೆ
ಪ್ರಪಂಚದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಅಂಗಾಂಗ ಕಸಿ ಅಗ್ಯವಿರುತ್ತದೆ. ಅವರಲ್ಲಿ ಕೆಲವರಿಗೆ ಮಾತ್ರ ಮಾನವ ಹರದಯ ಸಿಗುತ್ತೆ, ಹೆಚ್ಚಿನವರು ಹೃದಯ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇದೀಗ ಹಂದಿ ಹೃದಯ ಬಳಸಿರುವುದರಿಂದ ಈ ಪ್ರಯೋಗ ಮುಂದುವರೆಸಿ ಜನರನ್ನು ಬದುಕಿಸಬಹುದು ಎಂಬ ಭರವಸೆ ವೈದ್ಯಲೋಕಕ್ಕೆ ಮೂಡಿದೆ.



Click it and Unblock the Notifications